ಪರೀಕ್ಷೆ...
ಸೂರಿಲ್ಲದ ಸಾಹಸ ಚಾರಣ
ಅಸಂಗತಗಳ ಅನಿವಾರ್ಯ ಆಲಿಂಗನ
ಎಲ್ಲವೂ ಪ್ರಶ್ನಾತೀತ ಪದಗಳೇ ಜೀವಿಗಳ ಉಸಿರು
ಎಲ್ಲಿ,ಹೇಗೆ,ಏಕೆ,ಯಾರು, ಏನು, ಯಾವಾಗ
ಅಮೂರ್ತವಾದರೂ, ಸಹಜ ಪ್ರಶ್ನೆಗಳು
ಆದರೆ, ಪರೀಕ್ಷಾ ಕೇಂದ್ರಪರಿಸರ
ಏನೋ ಒಂದು ಕಾತುರ,
ಆತಂಕ ಅವಸರ
ಪರೀಕ್ಷೆ ಬರೆಯುವ ವಿದ್ಯಾರ್ಥಿ
ಉತ್ತರ ಪತ್ರಿಕೆ ಖಾಲಿ ಕೊಟ್ಟುಹೋದಹಾಗೆ
ಅದನ್ನು ತಿದ್ದಿ ಅಂದದ್ದು ಮಾತ್ರ, ಪಾಲಿಸದ ಆಜ್ಞೆ
ಸತ್ಯ, ಪರಿಪೂರ್ಣ...
ಉತ್ತರ, ಮೌಲ್ಯಮಾಪಕ ಬರೆಯುವುದಿಲ್ಲ...
ಅವನಿಗೂ ಗೊತ್ತಿಲ್ಲದ ನಿರ್ಧಿಷ್ಟ ಉತ್ತರ
ಪರೀಕ್ಷಾ ನಿರೀಕ್ಷನೂ ಸಹಕರಿಸುವುದಿಲ್ಲ
ನಕಲು ಮಾಡುವುದು ಅಸಾಧ್ಯ....
ಉತ್ತರ ಪತ್ರಿಕೆಯ ಎಲ್ಲಾ ಪುಟಗಳಲ್ಲಿ ಗೆರೆಗಳು
ಪುಟದ ಅಂಚಿನವರೆಗೂ ತಲುಪುವ ರೇಖೆಗಳು
ಸಂಧಿಸದ ಉದ್ದುದ್ದ ಗೆರೆಗಳು
ನಡುವೆ ನಿರ್ವಾತ ಖಾಲಿ,ಖಾಲಿ
ಬಹುಆಯ್ಕೆ ಉತ್ತರಗಳ ವಸ್ತುನಿಷ್ಟ ಪುಟ್ಟ,ಪುಟ್ಟ ಪ್ರಶ್ನೆಗಳು
ಉತ್ತರ ಸುಲಭವಲ್ಲ,
ಸುಲಭವೆನಿಸಿದರೂ ತಪ್ಪಾಗುವ ಸಾದ್ಯತೆ
ಸರಿಚಿನ್ಹೆಯೂ ತಪ್ಪಾಗುವ ಪವಾಡದ ಪರಿಷೆ.
ಅಜ್ಞಾನದ ಮುಗ್ದತೆ, ಕೀಳರಿಮೆಯ ಅಚಲ ದೈವ ನಂಬಿಕೆ,
ದಿಕ್ಕು ದೆಸೆಯಿಲ್ಲದ ಆತ್ಮ ವಿಶ್ವಾಸ ತಂತ್ರಜ್ಞಾನ,ಅಹಂಕಾರ
ಸುಖದ ಸೋಪಾನ ಇಲ್ಲಿಯವರೆಗೂ,
ಕೇವಲ ಸಮೀಪ ದೃಷ್ಟಿ,
ದೂರದೃಷ್ಟಿಯ ವಯಸ್ಸಾಗಿಲ್ಲ, ಪಾಪ!
ಉತ್ತರ ಸಿಕ್ಕಷ್ಟು...ಪ್ರಶ್ನೆಗಳು ಮೊಳಕೆಯೊಡೆದು ಹೆಮ್ಮರವಾಗಿ
ವಿಸ್ತಾರ.ಬಯಲ ಆವರಿಸುವ ಕರಿನೆರಳಲ್ಲಿ
ಅಸಂಭದ್ದ ಕನಸುಗಳು, ಕಡುಬೇಸಿಗೆಯ ಅರೆನಿದ್ರೆಯ ಚಾದರದಲ್ಲಿ
Like
Comment

Comments

Popular posts from this blog

ಕಾಗೆ....

Reunited...at last..