ದ್ರಾವಣ
ಬೆರಗಾಗಬೇಕು, ಕರಗಿ ದ್ರವವಾಗಬೇಕು. ನೀರಿನ ಹಾಗೆ ಎಲ್ಲರಲಿ ಬೆರೆತು, ತನ್ನನೇ ಮರೆತು ಹೊಸ ಪ್ರಭೇದವಾಗ ಬೇಕು ದ್ರಾವಣದಹಾಗೆ...
ಹದವಾಗ ಬೇಕು, ಹುರಿವ, ಉರಿವ ಬಾಣಲೆಯಲಿ
ಹದಕೆ ಹದವಾಗಿ, ಚಿಮ್ಮುವ ಅರಳಿನಂತೆ
ಬವಣೆಯಲಿ ಸೊರಗಿ, ಮರುಗಿ,ಮುದುಡದಿರಲಿ
ಮನಸು ಪಾಕದಲ್ಲಿ
ಮರೆತು, ಬೆರೆತು, ಬೆವೆತು ಬೆರಗಾಗಲಿ ನೋಟ,
ಹದಕೆ ಹದವಾಗಿ, ಚಿಮ್ಮುವ ಅರಳಿನಂತೆ
ಬವಣೆಯಲಿ ಸೊರಗಿ, ಮರುಗಿ,ಮುದುಡದಿರಲಿ
ಮನಸು ಪಾಕದಲ್ಲಿ
ಮರೆತು, ಬೆರೆತು, ಬೆವೆತು ಬೆರಗಾಗಲಿ ನೋಟ,
ಸೋಜಿಗದ ಈ ಜಗಕೆ ಬಾಡದಿರು ಬಿದಿರಿನಂತೆ
ಒಣಗಿ ಬೇಸರಬೇಡ ಮಧ್ಯಾನ್ಝ ದ ಧಗೆಗೆ
ನೀರಿರಲಿ, ಬೇರಿರಲಿ ಸುತ್ತೆಲ್ಲ ನಿನ್ನವರೆ, ನಿನ್ನದೆ ಧರೆ
ಎಲ್ಲರೂ ನಿರ್ಜೀವಿಗಳೇ, ರಸ್ತೆ ಮಾತ್ರ ಜೀವಂತ
ವಾಹನಚಲಿಸುವಾಗ
ಭಯಹುಟ್ಟಿಸುವ ಬೊಂಬುಗಳು!
ಒಣಗಿ ಬೇಸರಬೇಡ ಮಧ್ಯಾನ್ಝ ದ ಧಗೆಗೆ
ನೀರಿರಲಿ, ಬೇರಿರಲಿ ಸುತ್ತೆಲ್ಲ ನಿನ್ನವರೆ, ನಿನ್ನದೆ ಧರೆ
ಎಲ್ಲರೂ ನಿರ್ಜೀವಿಗಳೇ, ರಸ್ತೆ ಮಾತ್ರ ಜೀವಂತ
ವಾಹನಚಲಿಸುವಾಗ
ಭಯಹುಟ್ಟಿಸುವ ಬೊಂಬುಗಳು!
ಕುದಿಯುತಿದೆ ಭೂಮಿ, ಅಜ್ಞಾನ ಅತಂತ್ರದ ತಾಪ,
ಕಾಮಿ...ಪಾಪಿ..., ಶಾಪಯಾರಿಗೆ? ಪಾಪ,
ಹುರುಳಿಲ್ಲದ ಕೋಪ ಅಸ್ವಸ್ಥ
ಇಲ್ಲದ ನಾಳೆಗೆ, ಜರುಗಲಿರುವ ಆಗುಹೋಗುಗಳು
ಅಕಾಲ್ಪನಿಕ ಅಸ್ತಿತ್ವ,
ಇರುವಿಕೆಗೇಕೆ ಭಯ?
ಭ್ರಮೆ!
ಇಲ್ಲದಿರುವಿಕೆಯ ಪರಮಸತ್ಯದಲ್ಲೇಕೆ
ಗೈರುಹಾಜರಿ ಶಾಶ್ವತವಾಗಿ?
ಕಾಮಿ...ಪಾಪಿ..., ಶಾಪಯಾರಿಗೆ? ಪಾಪ,
ಹುರುಳಿಲ್ಲದ ಕೋಪ ಅಸ್ವಸ್ಥ
ಇಲ್ಲದ ನಾಳೆಗೆ, ಜರುಗಲಿರುವ ಆಗುಹೋಗುಗಳು
ಅಕಾಲ್ಪನಿಕ ಅಸ್ತಿತ್ವ,
ಇರುವಿಕೆಗೇಕೆ ಭಯ?
ಭ್ರಮೆ!
ಇಲ್ಲದಿರುವಿಕೆಯ ಪರಮಸತ್ಯದಲ್ಲೇಕೆ
ಗೈರುಹಾಜರಿ ಶಾಶ್ವತವಾಗಿ?
Comments