ಕಂಬವಿಲ್ಲದ, ಬಂಬಿಲ್ಲದ, ಪಾರದರ್ಶಕ ಬೃಹತ್ ಚಪ್ಪರದಲ್ಲಿ ನೋಟ ಹರಿಯುವವರೆಗೂ ಜೇನುಹುಳುಗಳಂತೆ ಗುಯ್ ಗುಡುವ ಜನಸ್ತೋಮ, ನೆರೆದಿದೆ ಯಾವುದೋ ಸಮಾವೇಶಕ್ಕೆ ನಿಲ್ಲದ ಚಲನೆ, ಚಿಟುವಟಿಕೆ , ನಿರ್ಗಮನದ ಶಾಶ್ವತ ಚಲನೆ. ಎಂದಿನಿಂದ ಆರಂಭಗೊಂಡಿದೆ ಸಮಾರಂಭ? ಯಾವಾಗ ಮುಕ್ತಾಯ ಈ ಸಬೆ? ಕಾರ್ಯಕ್ರಮ ಸ್ವರೂಪ? ಇತ್ಯಾದಿ ವಿವರಗಳು ಯಾರಿಗೂ ಗೊತ್ತಿಲ್ಲ. ಯಾರು ಅದರ ಬಗ್ಗೆ ತಲೆ ಕೆಡಿಸಿಕೊಂಡಂತೆ ಕಾಣುವುದಿಲ್ಲ. ಗೌರವಾನ್ವಿತ, ಅತಿಥಿ , ಅಧ್ಯಕ್ಷರರ ಸುಳಿವಿಲ್ಲದ ಅತಿ ಮುಖ್ಯ ಸಭೆ ಚಾಲ್ತಿಯಲ್ಲಿದೆ ಯಾವ ಅಡೆತಡೆಗಳಿಲ್ಲದೆ. ನಿರ್ವಿಘ್ನ ಸಾಗುತಿದೆ ಒಂದಾದ ಮೇಲೊಂದು ಕಾರ್ಯಕ್ರಮಗಳು, ಪ್ರಕಟನೆಗಳು ಕೇಳುತ್ತಿವೆ...ಆದರೆ ವೇದಿಕೆ ಕಾಣುತ್ತಿಲ್ಲ, ಯಾವುದೇ ಘೋಷಣೆಗಳಿಲ್ಲ. ಇನ್ನೂ ಸಬಾಪತಿಗಳ ಸುಳಿವಿಲ್ಲ, ಸ್ವಯಂಸೇವಕರು ಕಾಣುತ್ತಿಲ್ಲ. ತಿಳಿದಿಲ್ಲ ಕಿಕ್ಕಿರಿದ ಪ್ರೇಕ್ಶಕರು ತುಳುಕುತ್ತಿದ್ದಾರೆ ಅಲೆಗಳಂತೆ... ತಲೆಗಳು, ದೇಹಗಳು ಕರಗಿ ಒಂದರಲ್ಲಿ ಬೆರೆತು, ಮುಖಗಳೇ ನಾಪತ್ತೆಯಾಗಿ ಹೊಸ ಕೀಟ ಪ್ರಭೇಧ ಸಮೂಹದಂತೆ ಗೋಚರಿಸಿದೆ. . ಕಲ್ಪನೆಗೆ ಬಾರದಷ್ಟು ವಿಸ್ತಾರ ಗೂಡು, ವಿಶಾಲ ಬಟಾ ಬಯಲು, ಅಲ್ಲಲ್ಲಿ ಅಲಂಕಿರಿಸಿದ್ದಾರೆ ಕೃತಕ ಹಸಿರನ್ನು, ಕಟ್ಟಿದ್ದಾರೆ ಕಾರ್ಡ್ ಬೋರ್ಡಿನಿಂದ ಬೆಟ್ಟ ತಮ್ಮ ಅಳತೆಗೆ ತಕ್ಕಂತೆ, ನದಿ ಹರಿಯುತಿದೆ ಫ್ಲೆಕ್ಸ್ ನ ಹಾಳೆಯಲ್ಲಿ. ಬೃಹತ್ ಕ್ಯಾನ್ ವಾಸ್ ಚಿತ್ರ ಯಾಕೋ ಮಬ್ಬಾಗಿದೆ, ಬಣ್ಣ ಮಾಸಿದೆ. ಬೃಹತ್ ಬಯಲ ಛಾವಣಿ ಕೆಳಗೆ ನೆರೆದವರು,ಎಲ್ಲರೂ ಪರದೇಶಿಗಳು, ಸ್ನೇಹ, ಪರಿಚಯದಿಂದ ದೂರ, ಎಲ್ಲರೂ ಆಗಂತುಕರು, ಆಚೀಚೆಯ ಜನಪರಿಚಯ ಅನಿವಾರ್ಯವೇನಲ್ಲ,ಮುಖಗಳು ಕಾಣದಿರುವಾಗ, ಜೈವಿಕ ವಹಿವಾಟು ಮಾಮೂಲು, ದೈತ್ಯ ಮಾನಿಟರ್ನಲ್ಲಿ ಎಲ್ಲವೂ ಸರಾಗ ಕಾಣುತಿದೆ... ಜೀವಂತ ಪ್ರಸಾರ, ಗುಂಪು ಘರ್ಷಣೆಗಳ ಸುದ್ದಿ ಕೇಳಬಹುದು. ಕಂಡ,ಕಂಡಲ್ಲಿ ಕಿಕ್ಕಿರದ ಜನ, ಭಯವಿಲ್ಲ, ಪರಸ್ಠಳವಾದರೂ, ಅಪರಿಚಿತ ಹಿಂಜರಿಕೆ ಲೇಶಮಾತ್ರವಿಲ್ಲ ಯಾರಿಗೂ. ಬಾಷಣ ಸಂಭಾಷಣೆ ನಡೆದಿದೆ, ಆದರೆ ಕೇಳಲಾರದಷ್ಟು ಗೋಜು, ಕಿವಿತಮಟೆ ಹರಿಯುವಷ್ಟು ಬೊಬ್ಬೆ, ಸಡಗರದ ಸಾಗರ ಉಕ್ಕಿ ನುಂಗಿದೆ ಶಾಂತ ತೀರವನ್ನು....

Comments

Popular posts from this blog

Reunited...at last..

ಕಾಗೆ....

The Crow.