ಅತಂತ್ರರು...


ನಾನು ನಾನಾಗಿ ಬದುಕುವುದು ತುಂಬಾ ಕಷ್ಟ....
ಬದುಕು ಸಾಧ್ಯವಾಗದಿದ್ದರೂ ಸಾವಲ್ಲಿ ಅಸ್ತಿತ್ವ ಅಸಾಧ್ಯ
ಹುಟ್ಟಿನಂದಲೇ ಆರಂಭವಾಗುವ ಗೊಂದಲ 
ಸತ್ತಮೇಲೂ ಸ್ಮಶಾನದವರೆಗೆ ಹಿಂಬಾಲಿಸುವ ದೇವರು,
ಬಿಡುವುದಿಲ್ಲ ನಿನ್ನನ್ನು ನೀನಾಗಿ, ಉಳಿದು ಅಳಿಯಲು.
ಸ್ಮಶಾನವೇ ಕೇಳುತ್ತದೆ ನಿನ್ನ ನಿಶ್ಚಲತೆಯನ್ನು
ಶಾಶ್ವತ ಮೌನಿ ನೀನಾದರೂ.........
ಹೇಳದಿದ್ದರೂ, ಉಯಿಲು ಬರೆದಿಟ್ಟರೂ
ನಿನ್ನ ಸಹಿ, ಹೆಸರಿನಿಂದಲೇ ಕುಲ ಕರುಣಿಸಿ
ಪರಲೋಕದ ಸ್ವರ್ಗಕ್ಕೆ ಪಾರ್ಸೆಲ್ ಮಾಡುವ ಜನ......
ಬದುಕು, ಸಾವು ಎರಡರಲ್ಲೂ ಪರತಂತ್ರರು...

Comments

Popular posts from this blog

6-7 poems

The Crow.

ಕಾಗೆ....