ಪ್ರಸ್ತುತ.
ಈ ಕಾಲದಲ್ಲಿ ತೀರಾ ಅನಿರೀಕ್ಷಿತ,
ದಾಖಲೆ ಮೀರಿ ಬೀಸುತ್ತಿರುವ ಈ ರಭಸದ ಗಾಳಿ!
ಆಶಾಡ ಮುಗಿದಿದೆ, ವಸಂತದ ಭರವಸೆ ಚಿಗುರಿದೆ!
ಚಳಿಗಾಲದಲ್ಲಿ ಹಿತವಾದ ಬೆಚ್ಚನೆಯ ತಾಪ
ಮೂಲ ಎಲ್ಲಿಂದಲೋ? ಹಾಗಾಗಿ ಆತಂಕ,
ಅಪೇಕ್ಷಿತ ಹಿತಕರ ಮುಂಗಾರು ಕುಳಿರ್ಗಾಳಿಯೋ?
ಪಶ್ಚಿಮ ಕರಾವಳಿಯ ಅಪ್ಪಳಿಸುವ ವಾಣಿಜ್ಯ ಮಾರುತವೋ
ಬದಲಾಗ ಬಹುದೇನೋ ಕಾಲ? ಋತು?
ಪೂರಕವೋ ? ಮಾರಕವೋ ? ಕನಿಷ್ಟ ಇರುವಿಕೆಗೆ.
ಧೃವ ಕರಗಿ ಹಿಮನದಿ, ಜಾರುತಲಿದೆ ದಿಕ್ಕುತಪ್ಪಿ
ವಾಯಭಾರಕುಸಿತ ಯಾವುದೋ ಕೊಲ್ಲಿಯಲ್ಲಿ,
ಮಂದಮಾರುತವೋ? ಚಕ್ರವಾತ ಭೀಕರ ಸುಳಿಯೋ?
ಸುಂಟರಗಾಳಿಯೋ? ಚಂಡಮಾರುತವೋ?
ಹೊತ್ತು ತರಬಹುದೇನೋ ಮೋಡಗಳ ರಾಶಿಯನ್ನು?
ಜಲರಾಶಿ ಘನಿಸಿ, ತೇವಾಂಶ ಹನಿಯಾಗಬಲ್ಲದೇ ಇಲ್ಲಿ?
ಸಮಯಕ್ಕೆ ಹದವಾಗಿ ಸುರಿಯಬಹುದೇ ಮಳೆ?
ಬೆಳೆಯಬಹುದೇ ಪೈರು ಸಮೃಧ್ದ, ಹೊಲ ಗದ್ದೆಗಳಲ್ಲಿ?
ತುಂಬಬಹುದೇ ಫಸಲು ಎಲ್ಲರ ಮನೆಯ ವಾಡೆ, ಕಣಜ?
ಖಾಸಗಿ ಹವಾಮಾನದ ಒಂದು ಮುನ್ಸೂಚನೆಯಂತೆ
ವೇಗದಲಿ ಓಡುವಗಾಳಿ, ದಿಕ್ಕುಬದಲಿಸಬಹುದು
ವಿನಾಶಕಾರಿ ಚಕ್ರವಾತ ಅಪ್ಪಳಿಸಬಹುದು
ಉಂಟುಮಾಡಬಹುದು ಭೀಕರ ಪ್ರವಾಹ
ಕೋಡಿಯೊಡೆಯಬಹುದು ಕೆರೆ,ಕುಂಟೆಗಳು ಉಕ್ಕಿ
ದಿನನಿತ್ಯದಲ್ಲಿನ ಜಂಜಾಟದಲಿ ಏರು,ಪೇರು,
ಪ್ರವಾಹದಭೀತಿ, ಸಂಭವನೀಯ ಅಪಾರ ಹಾನಿ.
ಆದರೂ...ತಂಪೆರೆಯುವ ವಾಯು ದೇಹಕ್ಕೆ ಹಿತ
ಕೊರೆತೆಯಲ್ಲೇ ಬೆಂದಿರುವ ಈ ಕಾಯಕೆ
ಮಳೆಯ ನಿರೀಕ್ಷತ ಸಿಂಚನ ರೋಮಾಂಚನಕೆ ಸ್ವಪ್ನ ಸ್ವಾಗತ
ಹಸಿರ ಉಸರಿನ ಬಯಕೆ ಭಾವನಾತ್ಮಕ, ಎಲ್ಲಕೂ ಸಿದ್ದ.
ಹೊಂದಾಣಿಕೆ ಆಗಿದೆ ವಾಸ್ತವಕೆ, ನಿರ್ಜೀವ ಮಾರ್ಪಾಡುಗಳು
ತಯಾರಿ ನಡೆದಿದೆ ಪ್ರತಿಕೂಲ ಪರಿಸರಕೆ ತಕ್ಕಂತೆ
ಬರ ಬಹುದೇ ಮತ್ತೊಂದು ದಿಕ್ಕೆಟ್ಟ ಪ್ರಕ್ಷುಭ್ದ ಕಾಲ?
ಪ್ರಚಲಿತ ವಾಸ್ತವದ ಬದುಕ ಮೀರಿ.....?
ಈ ಕಾಲದಲ್ಲಿ ತೀರಾ ಅನಿರೀಕ್ಷಿತ,
ದಾಖಲೆ ಮೀರಿ ಬೀಸುತ್ತಿರುವ ಈ ರಭಸದ ಗಾಳಿ!
ಆಶಾಡ ಮುಗಿದಿದೆ, ವಸಂತದ ಭರವಸೆ ಚಿಗುರಿದೆ!
ಚಳಿಗಾಲದಲ್ಲಿ ಹಿತವಾದ ಬೆಚ್ಚನೆಯ ತಾಪ
ಮೂಲ ಎಲ್ಲಿಂದಲೋ? ಹಾಗಾಗಿ ಆತಂಕ,
ಅಪೇಕ್ಷಿತ ಹಿತಕರ ಮುಂಗಾರು ಕುಳಿರ್ಗಾಳಿಯೋ?
ಪಶ್ಚಿಮ ಕರಾವಳಿಯ ಅಪ್ಪಳಿಸುವ ವಾಣಿಜ್ಯ ಮಾರುತವೋ
ಬದಲಾಗ ಬಹುದೇನೋ ಕಾಲ? ಋತು?
ಪೂರಕವೋ ? ಮಾರಕವೋ ? ಕನಿಷ್ಟ ಇರುವಿಕೆಗೆ.
ಧೃವ ಕರಗಿ ಹಿಮನದಿ, ಜಾರುತಲಿದೆ ದಿಕ್ಕುತಪ್ಪಿ
ವಾಯಭಾರಕುಸಿತ ಯಾವುದೋ ಕೊಲ್ಲಿಯಲ್ಲಿ,
ಮಂದಮಾರುತವೋ? ಚಕ್ರವಾತ ಭೀಕರ ಸುಳಿಯೋ?
ಸುಂಟರಗಾಳಿಯೋ? ಚಂಡಮಾರುತವೋ?
ಹೊತ್ತು ತರಬಹುದೇನೋ ಮೋಡಗಳ ರಾಶಿಯನ್ನು?
ಜಲರಾಶಿ ಘನಿಸಿ, ತೇವಾಂಶ ಹನಿಯಾಗಬಲ್ಲದೇ ಇಲ್ಲಿ?
ಸಮಯಕ್ಕೆ ಹದವಾಗಿ ಸುರಿಯಬಹುದೇ ಮಳೆ?
ಬೆಳೆಯಬಹುದೇ ಪೈರು ಸಮೃಧ್ದ, ಹೊಲ ಗದ್ದೆಗಳಲ್ಲಿ?
ತುಂಬಬಹುದೇ ಫಸಲು ಎಲ್ಲರ ಮನೆಯ ವಾಡೆ, ಕಣಜ?
ಖಾಸಗಿ ಹವಾಮಾನದ ಒಂದು ಮುನ್ಸೂಚನೆಯಂತೆ
ವೇಗದಲಿ ಓಡುವಗಾಳಿ, ದಿಕ್ಕುಬದಲಿಸಬಹುದು
ವಿನಾಶಕಾರಿ ಚಕ್ರವಾತ ಅಪ್ಪಳಿಸಬಹುದು
ಉಂಟುಮಾಡಬಹುದು ಭೀಕರ ಪ್ರವಾಹ
ಕೋಡಿಯೊಡೆಯಬಹುದು ಕೆರೆ,ಕುಂಟೆಗಳು ಉಕ್ಕಿ
ದಿನನಿತ್ಯದಲ್ಲಿನ ಜಂಜಾಟದಲಿ ಏರು,ಪೇರು,
ಪ್ರವಾಹದಭೀತಿ, ಸಂಭವನೀಯ ಅಪಾರ ಹಾನಿ.
ಆದರೂ...ತಂಪೆರೆಯುವ ವಾಯು ದೇಹಕ್ಕೆ ಹಿತ
ಕೊರೆತೆಯಲ್ಲೇ ಬೆಂದಿರುವ ಈ ಕಾಯಕೆ
ಮಳೆಯ ನಿರೀಕ್ಷತ ಸಿಂಚನ ರೋಮಾಂಚನಕೆ ಸ್ವಪ್ನ ಸ್ವಾಗತ
ಹಸಿರ ಉಸರಿನ ಬಯಕೆ ಭಾವನಾತ್ಮಕ, ಎಲ್ಲಕೂ ಸಿದ್ದ.
ಹೊಂದಾಣಿಕೆ ಆಗಿದೆ ವಾಸ್ತವಕೆ, ನಿರ್ಜೀವ ಮಾರ್ಪಾಡುಗಳು
ತಯಾರಿ ನಡೆದಿದೆ ಪ್ರತಿಕೂಲ ಪರಿಸರಕೆ ತಕ್ಕಂತೆ
ಬರ ಬಹುದೇ ಮತ್ತೊಂದು ದಿಕ್ಕೆಟ್ಟ ಪ್ರಕ್ಷುಭ್ದ ಕಾಲ?
ಪ್ರಚಲಿತ ವಾಸ್ತವದ ಬದುಕ ಮೀರಿ.....?
Comments