Posts

Showing posts from December, 2016
ಸಿರಿ ಗನ್ನಡಂ ಗೆಲ್ಗೆ.... ಪರಿಚಯದ ಮುಲಾಜಿನ ಇಷ್ಟದ ಮೊಹರನ್ನು ಎಣಿಸಿ, ಅಭಿಪ್ರಾಯಗಳ ಖಾಲಿ ಡಬ್ಬತಡಕಿ, ನಮ್ಮ ಬೇಜವಾಬ್ದಾರಿ ಓದಿನ ಸೀಲನ್ನುಒತ್ತುವ ಮೊದಲು ಗೊಂದಲದ ಗ್ರಹಿಕೆಗೆ ನಿರ್ಲಕ್ಷ, ನೈಜ ಸಹೃದಯದ ಸಾಹಿತ್ಯ ಋಣದಿಂದ ನಾವು ಬಹುದೂರ... ಅರ್ಥವಾದದ್ದರೂ ಏನು? ಯಾಕೆ? ಯಾರಿಗೆ....? ನಾನು ವಿಮರ್ಷಕನಲ್ಲ, ನನಗ್ಯಾಕೆ ಉಸಾಬರಿ ಒತ್ತು ನಿನ್ನ ಪರಿಚಯಸ್ತನಿಗೆ ನಿನ್ನಿಷ್ಟದ ಕೀಲಿ ನನ್ನ ಅಭಿವ್ಯಕ್ತಿ.... ಎಲ್ಲಓದಲಿ ಎಂದು ನಾನು ಬರೆಯುವುದಿಲ್ಲ.... ಗೀಚುವುದು ನನಗಾಗಿ ನನ್ನ ಭಾವದ ಬಣ್ಣಗಳಿಗಾಗಿ.... ಅದರೂ ಅನಿವಾರ್ಯ ಅಗೋಚರ ಅಭಿಮಾನ, ಪ್ರೀತಿ,ಕಾಳಜಿ,ಹೊಗಳಿಕೆಯ ನಿರೀಕ್ಷೆಯಲಿ ಇಲ್ಲದ ನನ್ನ ಅಭಿಮಾನಿಗಳಿಂದ ಕಾತುರದ ಹಂಬಲ ನನ್ನಿಷ್ಟದ ಸೋಜಿಗದ ವಾವ್ ಗಳಿಗಾಗಿ. ಈ ಪುಸ್ತಕದ ಮುಖದ ಪುಟ,ಪುಟದಲ್ಲಿ ಹರಿದಾಡುವ ವಿವಿಧತೆಯ ಆಗುಂತಕ ಮುಖಗಳ ಆತ್ಮೀಯತೆ ನಿಜಕ್ಕೂ ನಮ್ಮದೇ ನಿಜಚಹರೆಯೇ, ಉತ್ತರ ಧನವೋ, ಋಣವೋ? ನನಗೆ ಬೇಕಿಲ್ಲ... ಬಿಡುವಿರದ ಈ ಕೃಪಣ ಕಾಲದಲಿ, ಪ್ರಭೇದಜೀವಿಗಳ ನೆನಪಿನ ಕಿಂಡಿಯಲ್ಲಿ ಇಣುಕುವ ಖುಷಿ.. ಒಮ್ಮೆಯಾದರೂ ಹಾದುಹೋಗುವ ರೋಮಾಂಚನ ಕಾಣದ ಓದುಗರ ಬದುಕಲ್ಲಿ ಆದರೂ .... ಈ ಅಮಾಯಕ, ಪ್ರತಿಭೆ . ಪ್ರತಿಷ್ಟಿತ, ಪ್ರಸಿದ್ಧ ವಿವೇಕಿ, ಆಲೋಚನಾ ಜೀವಿಗಳಿಂದ ಪಡೆಯಬೇಕಿದೆ ಮನ್ನಣೆ, ಆದರೆ ಹಾಕಲೇ ಬೇಕು ಮಣೆ ಪುಕ್ಕಟೆ ದೊರೆಯದು ಈ ಸಾಹಿತ್ಯಾಲಯದಲ್ಲಿ ನೀವು ಬಯಸಿದ ಹಾಗೆ, ಅಗ್ಗದ ಸಾಹಿತ್ಯದ ಅಸ್ಪರ್ಶತೆ ಮುಗ್ಗರಿಸದಿರಲು...
ವರ್ತಮಾನ  ಯಾಕೋ..ಯಾವುದು ಸರಿ ಇಲ್ಲ ಅನ್ಸುತ್ತೆ.ವಿಚಿತ್ರ ಸ್ಥಿತಿ... ಏನು ಇಲ್ಲ..ಜಗತ್ತಿನ ನಿಲ್ಲದ ಸತತ ಸುದ್ದಿಗಳು ಬೇಡವೆಂದರೂ ಪ್ರತಿ ಕ್ಷಣ ಕಂಡು....ನಮ್ಮ ಕ್ರಿಯಾವಾಹಕ ನರಗಳು ನಿಷ್ಕ್ರಿಯವಾಗಿವೆ.ಪ್ರಚೋದನೆಗಳು ಸಹಾ ತುಂಬಾ ಯಾಂತ್ರಿಕವಾಗಿ ಗ್ರಾಹಕಗಳನ್ನು ಸೇರಿ ಗೊಂದಲ ಉಂಟುಮಾಡುತ್ತಿವೆ...ಭಾವನೆಗಳು ತೀರಾ ಕ್ಷಣಿಕವಾಗುತ್ತಿವೆ...ಈಗ ಈ ಕ್ಷಣ ಅಳು..ಅದನ್ನು ಮರೆಸಿ, ಒರೆಸಿ.....ಇನ್ನೊಂದು ಘಳಿಗೆಯ ಪ್ರತಿಕ್ರಿಯೆಗೆ ಸಿದ್ದವಾಗುತ್ತವೆ ಸ್ಥಿತಪ್ರಜ್ಞರಂತೆ ಇದ್ದು..ಇನ್ನೊಂದು ಕ್ಷಣದಲ್ಲಿ ಮಂದಹಾಸ.ಆಮುಗುಳುನಗೆ ಖಳನಾಯಕನಂತೆ ನಗುತ್ತಿರುತ್ತದೆ.....ಯಾವ ಘಟನೆಗಳಿಗೂ ಅಂಟಿಕೊಳ್ಳುವಷ್ಟು ಸಮಯ ನಮ್ಮಲ್ಲಿಲ್ಲ  . ಈಗ...ನಾವು ವಿಶ್ವನಾಗರೀಕರು.....!!! ನಾವು ಮನುಷ್ಯರೇ.?.ಅಥವಾ ಈ ಸ್ಥಿತಿಗೆ ತಂದಿರುವ ಇಷ್ಟೊಂದು ಮಾಹಿತಿಗಳು,ಅದಕ್ಕೆಪ್ರತಿಕ್ರಿಯೆಗಳು ಅವಶ್ಯವೇ....? ಎಲ್ಲದರಿಂದ ಓಡುತ್ತೇವೆ ತಪ್ಪಿಸಿಕೊಂಡವರ ಹಾಗೆ.....ಯಾವುದನ್ನೂ ಗಂಭೀರವಾಗಿ, ಕೆಲಸಮಯ ವೀಕ್ಷಿಸಿ, ಗ್ರಹಿಸಿ ಅನುಭವಿಸುವುದನ್ನು ಮರೆತಿದೆ ನಮ್ಮ ಮಿದುಳು....ತಟಸ್ಥ, ಸಮತೋಲನ ಮಾನವ ಮನಸ್ಠಿತಿ...ಸಮಾಧಾನ, ತಾಳ್ಮೆ...ಕಡಿಮೆಯಾಗುತ್ತಿದೆಯೇ? ತೀರಾ ಅತಿರೇಕದ ಉನ್ಮಾದದಲ್ಲಿದೆ ನಮ್ಮ ಮನಸ್ಸು...ಒಂದು...ದ್ವೇಶ ಇಲ್ಲವೇ ತೀರಾ ಬಾಲಬಡುಕತನ ಚಮಚಾಗಿರಿ. ಮಾನವೀಯ ಪ್ರೀತಿ, ಅನುಕಂಪ, ಆತ್ಮೀಯತೆ, ಎಲ್ಲಾಪದಗಳು ಅರ್ಥಕಳೆದುಕೊಂಡಿವೆ.... ಆದರ್ಶವಾದಿ...
ಅಮ್ಮನ ದಿನ...  ನಾನು, ವಾಡಿಕೆಯಂತೆ ನನ್ನ ಹಣೆ ಇಡುವ ಆ ಪಾದಗಳು  ಸಿಗಲಿಲ್ಲ ಇಂದು, ಹಿಂದಿನ ವರ್ಷಗಳಂತೆ... ಮಾಡುವುದಾದರೂ ಯಾರಿಗೆ ಸಾಸ್ಟಾಂಗ ನಮನ? ನನ್ನನ್ನು ಈ ಗ್ರಹಕ್ಕೆ ಡೆಲಿವರಿ ಮಾಡಿದ ನಿನ್ನ ಆ ದಿನ....  ಇಂದು ನನ್ನ ಅಮ್ಮನ ಋಣ ನೆನಸಿಕೊಳ್ಳುವ ದಿನ ಹಾಗಂತ ದಯಮಾಡಿ ವಿಶ್ವ ಮದರ್ಸ್ ಡೇ, ಅಂತ ಅನ್ಕೊಬೇಡಿ ನಿಜ....ನನಗಿಂದು ಹುಟ್ಟಿದ ದಿನ, ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ನನ್ನ ಅಧಿಕೃತ ಹುಟ್ಟಿನ ದಾಖಲಾತಿ ಇಂದು ಅಮ್ಮನ ಪಂಚಾಂಗದ ಪ್ರಕಾರ ಹುಟ್ಟಿದದಿನ ಎಂದೋ ಕಳೆದಿರಬೇಕು, ಸಿದ್ದವಾಗಬೇಕು ಎಲ್ಲಕೂ ಅದರೂ..... ಆತಂಕದಲ್ಲಿದ್ದಾಗ "ಹುಚ್ಚ ಹುಡುಗ" ಅಂತ ತಲೆಸವರುವ ಅಮ್ಮನ ಆ ಭರವಸೆಯ ಸ್ಪರ್ಷದ ನೆನಪು ಕಾಡುತಿದೆ ಈಗ ಖಂಡಿತಾ ಯಾರಿಗೂ ನಾನು ಹುಡುಗ ಅಲ್ಲ ಅಮ್ಮ, ನೀ ಹೋದ ಮೇಲೆ ಈ ಬಾರಿ ಗೊತ್ತಾಯಿತು.... ೬೭ ನಿಜಕ್ಕೂ ಹಿರಿಯ ವಯಸು.