ಸಿರಿ ಗನ್ನಡಂ ಗೆಲ್ಗೆ....
ಪರಿಚಯದ ಮುಲಾಜಿನ ಇಷ್ಟದ ಮೊಹರನ್ನು
ಎಣಿಸಿ, ಅಭಿಪ್ರಾಯಗಳ ಖಾಲಿ ಡಬ್ಬತಡಕಿ,
ನಮ್ಮ ಬೇಜವಾಬ್ದಾರಿ ಓದಿನ ಸೀಲನ್ನುಒತ್ತುವ ಮೊದಲು
ಗೊಂದಲದ ಗ್ರಹಿಕೆಗೆ ನಿರ್ಲಕ್ಷ,
ನೈಜ ಸಹೃದಯದ ಸಾಹಿತ್ಯ ಋಣದಿಂದ ನಾವು ಬಹುದೂರ...
ಅರ್ಥವಾದದ್ದರೂ ಏನು? ಯಾಕೆ? ಯಾರಿಗೆ....?
ನಾನು ವಿಮರ್ಷಕನಲ್ಲ, ನನಗ್ಯಾಕೆ ಉಸಾಬರಿ
ಒತ್ತು ನಿನ್ನ ಪರಿಚಯಸ್ತನಿಗೆ ನಿನ್ನಿಷ್ಟದ ಕೀಲಿ

ನನ್ನ ಅಭಿವ್ಯಕ್ತಿ....
ಎಲ್ಲಓದಲಿ ಎಂದು ನಾನು ಬರೆಯುವುದಿಲ್ಲ....
ಗೀಚುವುದು ನನಗಾಗಿ ನನ್ನ ಭಾವದ ಬಣ್ಣಗಳಿಗಾಗಿ....
ಅದರೂ ಅನಿವಾರ್ಯ ಅಗೋಚರ ಅಭಿಮಾನ,
ಪ್ರೀತಿ,ಕಾಳಜಿ,ಹೊಗಳಿಕೆಯ ನಿರೀಕ್ಷೆಯಲಿ
ಇಲ್ಲದ ನನ್ನ ಅಭಿಮಾನಿಗಳಿಂದ ಕಾತುರದ ಹಂಬಲ
ನನ್ನಿಷ್ಟದ ಸೋಜಿಗದ ವಾವ್ ಗಳಿಗಾಗಿ.

ಈ ಪುಸ್ತಕದ ಮುಖದ ಪುಟ,ಪುಟದಲ್ಲಿ ಹರಿದಾಡುವ
ವಿವಿಧತೆಯ ಆಗುಂತಕ ಮುಖಗಳ ಆತ್ಮೀಯತೆ
ನಿಜಕ್ಕೂ ನಮ್ಮದೇ ನಿಜಚಹರೆಯೇ,
ಉತ್ತರ ಧನವೋ, ಋಣವೋ? ನನಗೆ ಬೇಕಿಲ್ಲ...
ಬಿಡುವಿರದ ಈ ಕೃಪಣ ಕಾಲದಲಿ,
ಪ್ರಭೇದಜೀವಿಗಳ ನೆನಪಿನ ಕಿಂಡಿಯಲ್ಲಿ ಇಣುಕುವ ಖುಷಿ..
ಒಮ್ಮೆಯಾದರೂ ಹಾದುಹೋಗುವ ರೋಮಾಂಚನ
ಕಾಣದ ಓದುಗರ ಬದುಕಲ್ಲಿ

ಆದರೂ ....
ಈ ಅಮಾಯಕ, ಪ್ರತಿಭೆ .
ಪ್ರತಿಷ್ಟಿತ, ಪ್ರಸಿದ್ಧ ವಿವೇಕಿ, ಆಲೋಚನಾ ಜೀವಿಗಳಿಂದ
ಪಡೆಯಬೇಕಿದೆ ಮನ್ನಣೆ, ಆದರೆ ಹಾಕಲೇ ಬೇಕು ಮಣೆ
ಪುಕ್ಕಟೆ ದೊರೆಯದು ಈ ಸಾಹಿತ್ಯಾಲಯದಲ್ಲಿ
ನೀವು ಬಯಸಿದ ಹಾಗೆ, ಅಗ್ಗದ ಸಾಹಿತ್ಯದ ಅಸ್ಪರ್ಶತೆ
ಮುಗ್ಗರಿಸದಿರಲು ಮುನ್ನುಡಿಬೇಕು, ಪ್ರಸಿದ್ಧ ಸಾಹಿತಿಗಳಿಂದ
ಕವಿಗಳಿಗೆ, ಲೇಖಕಕನ ಬರಹಗಳಿಗೆ ಒತ್ತಬೇಕಿದೆ ಮೊಹರು ಪ್ರಕಾಶಕ
ಸಹಿಹಾಕುವ ವಿಮರ್ಶಕ, ವಿತರಣೆಯ ಮಾಳಿಗೆ ಮಾಲಿಕ
ಮುಲಾಜಿಗೆ ಕೊಂಡು, ಹಾಳೆಯಾಡಿಸಿ
ಶಾಶ್ವತ ಮುಚ್ಚಿಡುವ ನಾವೆಲ್ಲಾ ಓದುಗರು?

ಸಿರಿ ಗನ್ನಡಂ ಗೆಲ್ಗೆ!!!

Comments

Popular posts from this blog

Reunited...at last..

ಕಾಗೆ....

The Crow.