8/1/17

ಈ ಗ್ರಹದ ಇಂಚು,ಇಂಚಿನ ಬಗ್ಗೆ, ಗೋಚರ ಹಾಗೂ ಅಗೋಚರ ಜೀವಿಗಳ ಪ್ರತಿಕ್ಷಣದ ಬದುಕಿನ ಸಂಘರ್ಷ, ಸಹ ಅಸ್ತಿತ್ವ ಮತ್ತು ನಿರ್ಜೀವಿಗಳ ಅವಲಂಬನೆಯ ಸಂಪೂರ್ಣ ವಿವರಣೆ ಕೊಡುವವರು ಇನ್ನು ಹುಟ್ಟಿಲ್ಲ....ಎತ್ತರ, ಆಳದ ಅರಿವಿನಿಂದ ದೂರವಿರುವ ಬಾವಿಯಲ್ಲಿನ ಕಪ್ಪೆಗಳು ನಾವು....ಅಜ್ಞಾನವೇ ನಮ್ಮ ಜ್ಞಾನದ ಸ್ವತ್ತು ಮತ್ತು ಆದರ್ಷ, ಮೌಲ್ಯಗಳ ಆಧಾರ.... ಅಂತೆ, ಕಂತೆಗಳ ವಿಶ್ವಾಸವೇ ನಮ್ಮ ವ್ಯಕ್ತಿತ್ವ ಹಾಗು ಅಸ್ತಿತ್ವ.....ಹಾಗಾಗಿ ಇಲ್ಲಿ ಯಾರು ಯಾವುದಕ್ಕೂ ಹೊರತಲ್ಲ...ತಮ್ಮ,ತಮ್ಮ ಮೂಗಿನ ನೇರಕ್ಕೆ ಅವರವರ ಸಮಾಜದ ಸರಳೀಕೃತ ವಿವರಣೆ....ನಡೆಯುತ್ತಲೇ ಇರುತ್ತದೆ...ಸತತವಾಗಿ ಈ ನಿಲ್ಲದ ಕಾಲದಲ್ಲಿ...


9/1/17
ನಾವು ಎಷ್ಟು ಸ್ವಾರ್ಥಿಗಳಾಗುತ್ತಿದ್ದೇವೆಂದರೆ ನಮ್ಮ ಬದುಕು ನಮಗೆ ದುಸ್ತರವಾದಾಗ ಅಥವಾ ನಮ್ಮ ಅನಿಸಿಕೆಯಂತೆ ನೆರೆಹೊರೆಯ ಸಮಾಜ ಇಲ್ಲದಾಗ ನಮ್ಮ ನೆಲದ ಕುಲವನ್ನೇ ಪ್ರಶ್ನಿಸುತ್ತೇವೆ......ಇದೊಂದು ವಿಚಿತ್ರ ಮನಸ್ಥಿತಿ, ಕೋಪ ಮತ್ತು ಹತಾಷೆಯ ಪರಮಾವಧಿ...ತಾನು ಅಂದುಕೊಂಡಂತೆ ಎಲ್ಲವೂ ಇರಬೇಕು....ಅದು....ಪ್ರಕೃತಿಯ ನಿಯಮಗಳಿಗೆ ವಿರುಧ್ದ....ಇತಿಮಿತಿಗಳಿಂದಲೇ ವಿಕಸಿಸಿದ ಈ ಪರಿಸರದಲ್ಲಿ ಏರು,ಪೇರು, ವ್ಯಪರೀತ್ಯ, ಹೋರಾಟ, ಉಳಿವು, ಅಳಿವು ಎಲ್ಲವೂ...ಸಾಮಾನ್ಯ.....ಸ್ವಾಭಾವಿಕ....ಹಾಗೆ ಈ ಪರಿಸರದ ಅವಿಭಾಜ್ಯ ಅಂಗವಾದ ನಮ್ಮ ಬದುಕಿನ ಸಾಂಸ್ಕೃತಿಕ ವಿಕಾಸದಲ್ಲಿ ಸತತ ಬದಲಾವಣೆಗಳು ಆಗುತ್ತಲೇ ಇರುತ್ತವೆ.....ನಮ್ಮ ಎಲ್ಲಾ ಸೋ ಕಾಲ್ಡ್ ಭಾವನೆಗಳು ಕೇವಲ ಸಾಮಾಜಿಕ ತುಲನಾತ್ಮಕ ಆಧಾರದ ಮೇಲೆ ನಿಂತಿವೆ.....ಯಾವಾಗ ಮನುಷ್ಯ ತನ್ನ ತಾತ್ವಿಕ ಅಸ್ತಿತ್ವವನ್ನು ಜೈವಿಕ ಅಸ್ತಿತ್ವದಿಂದ ಬೇರ್ಪಡಿಸಿ ಪರಿಸರದ ಒಂದು ಅಂಶ ಎಂದು ಅರಿತುಕೊಳ್ಳುತ್ತಾನೋ ಅಥವಾ ಬದುಕುತ್ತಾನೋ....ಆಗ ಅವನು ಮುಕ್ತನಾಗುತ್ತಾನೆ....ಆದರೆ ನಾವೆಲ್ಲಾ....ಸಾದಾರಣ ಮಾನವರು, ಮುಕ್ತರಾಗುವ ಪ್ರಮೇಯವಿಲ್ಲ....ನಮ್ಮ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ, ಇಡಿ ವಿಶ್ವದ ಆಗುಹೋಗುಗಳನ್ನು ನಮ್ಮ ಬೇಕು, ಬೇಡದರ ಮೇಲೆ ನಾವೇ ನಮ್ಮ ಅಹಃ ನಂತೆ ನಿರ್ಧರಿಸಿ ತೀರ್ಪು ಕೊಡುವುದು ದುರಂತ......

Comments

Popular posts from this blog

Reunited...at last..

ಕಾಗೆ....

The Crow.