ಬಂತು...ವರ್ಷ-2017.....
ಶುರುವಾಗಿದೆ ಹಿಂದಾಗಲು ಗತ ವರುಷ
ಈ ಕ್ಷಣ ಹಾಕು ದೇಶಾವರಿ ನಗೆಯ ವೇಷ
ಬದುಕಿನ ಪ್ರದರ್ಶನ ಮುಗಿಯದ ಆರಂಭ
ಎಣಿಸಬೇಡ ನೀ ಮೀನಾಮೇಷ
ನಾಯಕ, ವಿದೂಷಕ, ಖಳನಾಯಕ,
ಪಾತ್ರಗಳು ಬಹಳ, ಆಟಮಾತ್ರ ಸರಳ
ದೊರೆಯಬಹುದು ಯಾವುದೋ ಒಂದು ಪಾತ್ರ
ಅಥಿತಿನಟ ಆಗ ಬೇಡ, ಸಹ ನಟ ನೀನಲ್ಲ,
ನೀನೇ ಎಲ್ಲಾ.....ಪ್ರೇಕ್ಷಕನ ಬಿಟ್ಟು
ಇದು ಏಕಪಾತ್ರಾಭಿನಯ
ಕ್ಷಣಗಣನೆಯಲಿ ತೋರಿಸಬೇಕಿದೆ ಪೌರುಷ
ಮುಂದಿರುವ ಪೂರ್ತಿ ವರುಷ ಉಳಿಯುವಿಕೆಯ ಸಂಘರ್ಷ
ಆತ್ಮವಿಶ್ವಾಸದಲಿರಲಿ ಸದಾ ಹೋರಾಟದ ಹರುಷ....

Comments

Popular posts from this blog

Reunited...at last..

ಕಾಗೆ....

The Crow.