ಆಕಾಶ
ಆಯಾಮರಹಿತ ಆಕಾಶದಲ್ಲಿ ಶೂನ್ಯ
ಅಸಂಗತ, ಅನಂತ ವಿಶ್ವ ಅಮೂರ್ತ
ದಿಕ್ಕುಗಳಿಗೆ ಅನೂಹ್ಯವಾದ ವಿಸ್ತಾರ ಅವಕಾಶ
ಕಾಣದ,ನಿಲ್ಲದ ಪಂಚಭೂತಗಳ ಅರ್ಥವಾಗದ ಚಲನೆ
ಅಗೋಚರದಲ್ಲಿ ಅಂತ್ಯವಾಗುವ ಅನಿಲ,
ದ್ರವ,ಘನದಲ್ಲೇ ರೂಪಪರಿವರ್ತನೆ
ಪುನರ್ಜನ್ಮ ಪಡೆದು ಪ್ರತ್ಯಕ್ಷ ಮತ್ತೆ,ಮತ್ತೆ,
ನಿರ್ಮಾಣ, ನಿರ್ವಾಣಕ್ಕೆ ಸದಾ ಸಿದ್ಧ,
ಆದಿಯೇ ಇಲ್ಲದ ಅಂತ್ಯಕ್ಕೆ ಲೆಕ್ಖಕ್ಕೆ ಸಿಕ್ಕೀತೆ ಸಮಯ
ಕಾಲವೇ ವೇಗದಲಿ ಶೂನ್ಯವಾಗುವ ಪರಿ
ಭೂತ ಬವಿಷ್ಯಗಳ ನಡುವಿನ ಸಿಕ್ಕಿಕೊಂಡ
ವರ್ತಮಾನದಲಿ ನಮ್ಮ ಗತಿಸದ ಗೊಂದಲ
ಪೀಕಾಲಾಟದ ತುರುಸುವಿಕೆಯ ಚಟ
ಋಣ ತೀರಿಸುವ ಶ್ವಾಸದ ಚಪಲ,ಚಲನೆ,
ಜೀವಾನುಭವ ನಿಧಾನ ಬಹು ತೊಡಕು
ಆದರೂ ಒಮ್ಮೊಮ್ಮೆ ಬಹು ಚುರುಕು
ಅನೂಹ್ಯದ ಮೆಲಕು, ಒಂಟಿತನದ ಸರಕು.
ಜೈವಿಕ ಪ್ರತಿಫಲನಕೆ ಪ್ರಖರ ಬೆಳಕು
Comments