ವರ್ತಮಾನ

ಎಲ್ಲವನ್ನು ಒಳಗೊಂಡ ಸರ್ವತೋಮುಖ ಸಾಮಾಜಿಕ ಹಾಗು ವೈಜ್ಞಾನಿಕ ಹಾಗೂ ಸಂಪೂರ್ಣ ಯೋಚಾನ ಕೊರತೆಯೇ ಇಂದಿನ ಸಾಮಾಜಿಕ ಸಮಸ್ಯೆಯ ಮೂಲ. ಸಮಾಜದ ಜವಾಬ್ದಾರಿಯುತ ಪ್ರಜೆಗಳಾದ ಸೃಜನಶೀಲ, ಬುದ್ದಿವಂತ, ಮಧ್ಯಮವರ್ಗದ ಯೋಚಿಸಬಲ್ಲ ಜನಗಳು ಸಹಾ, ಎಲ್ಲಕ್ಕೂ ಒಂದೇ ಸೂತ್ರ ಅನ್ನುವಂತೆ ತಮ್ಮ ಸೀಮಿತ ಕ್ಲೀಷೆಯ, ಯಾವುದೋ ಸಮಯದ, ಯಾರ ಪರಿಸರಜನಕವೋ ಆದ ಆದರ್ಷಗಳ ಪರಿಮಿತಿಯಲ್ಲೇ ಗಸ್ತು ಹೊಡೆಯುತ್ತಿದ್ದಾರೆ. ಸಹಜತೆ ಮತ್ತು ಮೂಲಭೂತ ಮಾನವ ಸಮಾಜದ ಜೈವಿಕ,  ಸಾಮಾಜಿಕ ಹಾಗೂ ಸಾಂಸ್ಕೃತಿಕ ವಿಕಾಸದ ಕ್ರಮೇಣ ಉಂಟಾಗುತ್ತಿರುವ ಸಂಕೀರ್ಣ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳದೆ ಅಥವಾ ಅರ್ಥವಾಗಿದ್ದರೂ, ಸ್ಥಿತಪಜ್ಞರಂತೆ ವಿಶಿಷ್ಟ ಅಸಮಾನ್ಯ ಅತಿಮಾನವರಂತೆ ವಾದಿಸುತ್ತಾರೆ. ಎಂಥವರನ್ನು ವಿಚಲಿತ ಗೊಳಿಸಬಲ್ಲ ಇಂದಿನ ಈ ಅಯಸ್ಕಾಂತದಂತಹ ಅತ್ಯಾಕರ್ಷಕ,  ವಸ್ತುಗಳ ಮಾಯಲೋಕದ ಮೋಹಕ್ಕೆ ಒಳಗಾಗಿ ಅದನ್ನು ಗಳಿಸಿ ಅದನ್ನು ಉಳಿಸಿಕೊಳ್ಳುವುದರಲ್ಲೇ ತಮ್ಮ ವಿವೇಚನಾ ಶಕ್ತಿಯನ್ನು ಕಳೆದು ಕೊಂಡು ಯಾರದೋ ಹಂಗಿಗೆ, ಯಾವುದೋ ಸಾಮಾಜಿಕ ಸ್ಥಾನ ಮಾನ ಆಮಿಷಕ್ಕೆ ಒಳಗಾಗಿ ಮನಸ್ಸನ್ನು ಮುಚ್ಚಿಕೊಂಡು ಇನ್ನಾವ ಯೋಚನೆಗಳನ್ನು ತಮ್ಮ ಬಳಿಸುಳಿಯದಂತೆ, ಎಚ್ಚರಿಕೆಯಿಂದ ತಮ್ಮ ಸುತ್ತಲು ಬಲವಾದ ತಮ್ಮದೆ ಸ್ವಾರ್ಥ ಸೀಮಿತ ತರ್ಕದ ಕೋಟೆಯಲ್ಲಿ ತಮ್ಮ ನೀತಿ, ಆದರ್ಶ ಇತ್ಯಾದಿ ಸಾಮಾಜಿಕ ಮೌಲ್ಯಗಳನ್ನು ಯಶಸ್ವಿಯಾಗಿ ಸಮರ್ಥಿಸಿಕೊಳ್ಳುತ್ತಾರೆ. ಅಲ್ಲಿ ಅವರು ಸುರಕ್ಷಿತರಾಗಿದ್ದಾರೆ.

ಕಾರಣ ಅವರ ಅದೃಷ್ಟ ಅವರ ಸುತ್ತ ಇರುವ ಪರಿಸರದ ಮಂದಿ. ಅಂದರೆ ಸಾಮಾನ್ಯ ನಾಗರೀಕರಿಗೆ ಅವರು ತೀರಾ ವಿಶೇಷ ಜೀವಿಗಳಂತೆ ಸನ್ಮಾನ್ಯರಾಗಿ ತೋರುತ್ತಾರೆ. ಸರಳ ವಂಚಿತ ಜನಗಳನ್ನು ನಂಬಿಸುವುದು, ಒಪ್ಪಿಸುವುದು ಸುಲಭ. ಜ್ಞಾನದಕೊರತೆಯಿಂದ ಜಗಳ ಅಥವಾ ತರ್ಕದಿಂದ ದೂರ ಕ್ಷೇಮವಾಗಿದ್ದೇವೆಂದು ಕೊಂಡ ಅಮಾಯಕ ಪ್ರಜೆಗಳು. ಯಾವ ಜನರು ಯಾವ ಅನುಮಾನವೂ ಇಲ್ಲದಂತೆ, ಏನನ್ನು ಪ್ರಶ್ನಿಸದೇ ತಾವು ನಂಬಿರುವ ದೇವರು, ಧರ್ಮ ಇತ್ಯಾದಿ ಕಾಣದ, ಅನುಭವಿಸದ ಅಸಂಗತಗಳನ್ನು ತಮ್ಮ ಹುಟ್ಟಿನಲ್ಲಿ ಪಡೆದ ಅಸ್ತಿತ್ವ ಮಾತ್ರ ಜಗತ್ತಿನ ಸರ್ವಕಾಲಿಕ, ಸಾರ್ವತ್ರಿಕ ಸತ್ಯ ಮತ್ತು ಶ್ರೇಷ್ಟ ಎಂದು ನಂಬಿರುವ ಜನ. ಯಾರಿಗೂ ಹಿಂದಿನ ಇತಿಹಾಸವಾಗಲಿ, ಅಥವಾ ಸಂಭವನೀಯ ಅಸಮತೋಲನ ಪರಿಸರದ ಮುಂದಾಲೋಚನೆಯಾಗಲಿ ಇಲ್ಲದವರು. ಅವರವರ ಅನುಕೂಲಕ್ಕೆ,ಯಾರು ಏನನ್ನು ಹೇಳಿದರೂ ನಂಬುವ ಸಮಯಸಾಧಕ ಭಾಜಕ ಮಂದಿ. ಆರಂಬಿಸುತ್ತಾರೆ ಯಾರದೋ ಭಜನಾ ಮಂಡಳಿಯನ್ನು ಯಾರದೋ ಕೃಪಾ ಪೋಷಣೆಯಲ್ಲಿ.......ಹಿಂಬಾಲಕಾರಾಗಿಯೋ, ಅಭಿಮಾನಿಗಳಾಗಿಯೋ ಆಗಿ ಕೊನೆಗೆ ತಮ್ಮನ್ನು ತಾವೇ ಶಾಶ್ವತವಾಗಿ ಮರೆತು ಹೋಗುತ್ತಾರೆ.ಇಂಥಹ ಗೊಂದಲಮಯ ಕಾಲಘಟ್ಟದಲ್ಲಿ.....ಹುಚ್ಚು ಮುಂಡೆ ಮದುವೇಲಿ ಉಂಡವೆನೇ ಜಾಣ. ನಾನು ದಡ್ಡನಾಗೆ ಇರುತ್ತೇನೆ.....ಪರವಾಗಿಲ್ಲ.Everyone wants instant name,fame and of course reasonable money according to their status!!!!!!.

Comments

Popular posts from this blog

Reunited...at last..

ಕಾಗೆ....

The Crow.