ಅರಿವು 

ಎಂದಿನಂತೆ ಫೇಸ್ ಬುಕ್ ನಲ್ಲಿ ಎದುರಾಗುವ ಪ್ರಶ್ನೆಗೆ ಏನಾದರೂ ಉತ್ತರ ಕೊಡೋಣ ಎಂದುಯೋಚಿಸಿ ಲ್ಯಾಪ್ ಟಾಪ್ ತೆರೆದು...ಕಿಟಕಿಯಹೊರಗೆ ನೋಡಿದೆ...ಕ್ಷಣಕಾಲ ಕಣ್ಣು ಕತ್ತಲಾಯಿತು.... ಬಿಸಿಲುರಾಚುತ್ತಿದೆ..ಬಿಸಿಲಧಗೆ ಒಳಗೆ ವಿಸರಿಸುತ್ತಿದೆ..ಹೌದು..ಇದು ಬೆಂಗಳೂರು ಮೊದಲು ಹೀಗಾಗುತ್ತಿರಲಿಲ್ಲ.... ನನಗಂತೂ....ನೆನಪಿಲ್ಲ ಈ ೪೫ ವರ್ಶಗಳ ಇಲ್ಲಿನ ಬದುಕಿನಲ್ಲಿ...
ಇದಕ್ಕೆ ಕಾರಣ....ಗೊತ್ತು ಎಲ್ಲರಿಗೂ, ನನಗೂ ಸಹಾ...
ಆದರೆ.... ಇದು ನನ್ನ ಬಲವಾದ ಅನಿಸಿಕೆ......
ದೇವರು, ಧರ್ಮ, ಮಾನವೀಯತೆ, ಪ್ರಗತಿ, ಸಾಧನೆ,ಸಮಾನತೆ, ಹೋರಾಟ, ನ್ಯಾಯ....ಎಷ್ಟೊಂದು ಪದಗಳು ಮಾನವ ಕುಲದ ಏಳಿಗೆಯ, ಸಮರ್ಥನೆಗೆ??
ಇತಿಹಾಸ....ಅಮಾನವೀಯ.....!!. ಬರ್ಬರತೆಯ ನಮ್ಮನಾಗರೀಕತೆ ಹುಟ್ಟಿ, ಸಾಂಸ್ಕೃತಿಕ ವಿಕಾಸ ಆರಂಭಗೊಂಡದಿನದಿಂದ...ವಿಶ್ವದಲ್ಲಿ ಮಾನವನ ಇರುವು ಸದಾ ರಕ್ತಸಿತವಾಗಿದೆ....ಕ್ರೌರ್ಯದ ತಾಂಡವ ನೃತ್ಯ....ಮುಂದುವರಿದಿದೆ ಇಂದಿಗೂ...ಮೂರು ಪ್ರಮುಖ ಧರ್ಮಗಳು, ನೂರಾರು ಸಹಧರ್ಮಗಳು ಚಿಗುರಿಹೆಮ್ಮರವಾದರೂ, ನಮ್ಮಲ್ಲಿ ಒಬ್ಬರೊನ್ನೊಬ್ಬರು ಕೊಲ್ಲುವುದನ್ನು, ದ್ವೇಷಿಸುವುದನ್ನು ಬಿಟ್ಟಿಲ್ಲ...ಕಾರಣ ಏನೇ ಇರಬಹುದು...ಮಾನವ ಇನ್ನೂ ನಾಗರೀಕನಾಗಿಲ್ಲ.... ಆಗುವುದಿಲ್ಲ....ಕಾರಣ...ನಮ್ಮ ಸ್ವಭಾವವೇ ಹಾಗೆ....ಆಳುವ ಸರ್ವಾಧಿಕಾರಿ ಮನೋಭಾವ.... ಎಲ್ಲರದೂ....ಸಾಮಾಜಿಕ ಪರಿಸರ ಎಂದಿಗೂ ಪ್ರಕ್ಷುಬ್ಧ...ಕದಡಿದನೀರಿನಂತೆ....ಮಾನವಕುರಿತ, ಮಾನವ ಆಧಾರಿತ ಹೊಸ,ಹೊಸ ಸಿದ್ಧಾಂತಗಳು, ಮೌಲ್ಯಗಳು ಹುಟ್ಟುತ್ತಲೇ ಇವೆ. ಆ ಸಿದ್ಧಾಂತಗಳ ಪರ, ವಿರೋಧವೇ ಅಶಾಂತಿಗೆ ಮತ್ತೊಂದು ಕಾರಣವಾಗುವುದು ಇತಿಹಾಸದಿಂದ ಸ್ಪಷ್ಟವಾಗಿದೆ.....

ಇಂದಿಗೂ ಸಹಾ, ಮಾನವಪ್ರೇಮಿಗಳು, ಆದರ್ಶವಾದಿಗಳು, ಬುದ್ಧಿಜೀವಿಗಳು, ಕವಿಗಳು, ಕಲಾವಿಧರು, ಅಧಿಕಾರಿಗಳು, ವಿಜ್ಞಾನಿಗಳು, ಶಾಂತಿದೂತರು, ರಾಜಕೀಯ ಮುತ್ಸದ್ದಿಗಳು ಯಾರೂ ಸಹಾ ತಮ್ಮನ್ನು ಈ ಕೆಟ್ಟಹುಳು ಮಾನವನನ್ನು ಬಿಟ್ಟು ತಮ್ಮನ್ನು ಆವರಿಸಿರುವ ಜೀವಸಂಕುಲದ ಬಗ್ಗೆ....ಯೋಚಿಸಿಲ್ಲ..... ಇನ್ನೂ ಸಹಾ....ತುಕ್ಕು ಹಿಡಿದ, ಅರ್ಥಕಳೆದುಕೊಂಡ ಸಂವೇದನೆಯ ಅಭಿವ್ಯಕ್ತಿಯಲ್ಲೆ ಇದ್ದಾರೆ... ಖುಷಿಯಾಗಿದ್ದಾರೆ ತಮ್ಮದೇ ಪ್ರಪಂಚದಲ್ಲಿ......ಪಾಪ...ಹೊಳೆದಿಲ್ಲ... ಇರುವುದೆಲ್ಲಾ ನಮಗೆ, ನಮ್ಮದೇ, ನಮಗಾಗಿ ಎನ್ನುವ ಧೋರಣೆ..ದೇವರ ಮೆಚ್ಚಿನ ಜೀವಿ..ಸ್ವರ್ಗ, ನರಕ..ಇದರಲ್ಲೇ ಗಿರಿಗಿಟ್ಲೆ ಆಡುತ್ತಿದ್ದಾರೆ.....
ಮಾನವಕೇಂದ್ರಿತ ಧೋರಣೆ, ಸಿದ್ಧಾಂತಗಳು ಸಾಕಿನ್ನು....ಸಕಲ ಜೀವಿಗಳ ಇರುವಿಕೆಯ ಬುಡಕ್ಕೆ ಪೆಟ್ಟುಬಿದ್ದಿದೆ....ಭೂತಾಪ ಏರುತ್ತಿದೆ, ಜಲಮೂಲ ಖಾಲಿಯಾಗಿದೆ, ಹಸಿರುಬೋಳಾಗುತ್ತಿದೆ....... ಭೂಮಿಯ ಒಳಪದರ ಬಗೆದು,ಬಗೆದು ಎಲ್ಲವನ್ನು ಹೊರತೆಗೆದು ಸಹಸ್ರಾರು ಹೊಸ ಸಂಯುಕ್ತ ವಸ್ತುಗಳನ್ನು ಸೃಷ್ಟಿಸಿದ್ದೇವೆ....ಅದರ ಪೂರ್ಣ ಪರಿಣಾಮ ಗೊತ್ತಿಲ್ಲ...ಆದರೆ ಅದರ ಬಳಕೆ ನೀಡಿದೆ ಅಪಾರ ಆರಾಮದಾಯಕ, ಸುಖಮಯ, ಸೋಮಾರಿ ಬದುಕು....ದುರಾಸೆಯ ಪರಕಾಷ್ಟೆಯಲ್ಲಿ ಬೀಗುತ್ತಿದ್ದೇವೆ. ಈಗ ಸಾಕು...ಅವುಗಳ ದುಷ್ಪರಿಣಾಮಗಳನ್ನು ಯಾಕೆ ಯೋಚಿಸಬೇಕು?
ವಾವ್.....
ಏನು ಅದ್ಭುತ ಮಾನವನ ಸಾಧನೆ! ಅನೂಹ್ಯ....ಕುಳಿತಲ್ಲಿಂದಲೇ ಎಲ್ಲವನ್ನು ಕ್ಷಣದಲ್ಲಿ ಪಡೆಯಬಲ್ಲ ತಂತ್ರಜ್ಞಾನದ ಅನ್ವಯ, ಅಳವಡಿಕೆ.ಹೊಸ ಭೋಗ ವಸ್ತುವಿನ ಅನ್ವೇಷಣೆ....ಅವಿಶ್ಕಾರ.ಬಳಸುವುದು ಹೇಗೆ..ನಮ್ಮ ಬದುಕಿಗೆ ಏನನ್ನಾದರೂ ಅಳವಡಿಸಿಕೊಳ್ಳುವ ದೈತ್ಯಶಕ್ತಿ ಇದೆ. ಆದರೆ..ಈ ಮಾನವನ ಅವಿಶ್ಕಾರಕಗಳು ಉಪಯೋಗ ಉಂಟುಮಾಡಬಹುದಾದ ವಿನಾಶಕಾರಿಪರಿಣಾಮದ ಬಗ್ಗೆ ಯೋಚಿಸಿಲ್ಲ...ಯೋಚಿಸಿದರೂ....ಹಿಂದೆ ಸರಿಯುವಂತಿಲ್ಲ..ಈ ಅಂತರಾಷ್ಟ್ಟೀಯ ಮಾರುಕಟ್ಟೆಯ ಪೈಪೋಟಿಯಲ್ಲಿ.....ಮೇಲ್ಗೈ ಸಾಧಿಸಬೇಕೆಂದರೆ.....

ಈ ಪ್ರಕ್ಷುಬ್ಧ, ಗೊಂದಲಮಯ, ಕೋಲಾಹಲದ ಸ್ಥಿತಿ ಹೆಚ್ಚುಕಾಲ ಇರುವುದಿಲ್ಲ.....ನಿಮ್ಮ ತಂತ್ರಜ್ಞಾನವೇ ನಿಮಗೆ ವಿನಾಶದ ದಾರಿಯನ್ನು ತೋರಿಸುತ್ತಿದೆ ಸ್ಪಷ್ಟವಾಗಿ.....ಆದರೂ ನೀವು ಕುರುಡರು, ಅಥವಾ ಕುರುಡರಂತೆ ನಟಿಸುವ ಮಹಾನ್ ನಟರು....ನಾಳಿನ ಬಗ್ಗೆ ಯೋಚಿಸಿವುದಿಲ್ಲ...ಯೋಚಿಸಿದರೂ ಅದಕ್ಕೆ ಕಾರಣ ತಾವಲ್ಲ ಎನ್ನುವ ವಾದ..ಕೋತಿ ಮೊಸರನ್ನ ತಿಂದು ಮೇಕೆ ಬಾಯಿಗೆಒರೆಸಿದಹಾಗೆ..ಬೇರೆಯವ ಮೇಲೆ ಗೂಬೆ ಕೂರಿಸುವ ಪ್ರಪಂಚದ ಪ್ರಮುಖ ಭಲಾಡ್ಯರಾಷ್ಟ್ರಗಳು...ಈ ಎಲ್ಲ ಗೊಂದಲದಲ್ಲಿ ಪರಿಸರದ ಆರಂಭಗೊಂಡ ಕ್ಷಿಪ್ರ ಪ್ರತಿಕ್ರಿಯೆ ಯಾರಿಗೂ ಕಾಣಿಸುತ್ತಿರುವಂತೆ ತೋರುವುದಿಲ್ಲ..ಕಂಡರೂ... ಸಹಾ....
ಗೊತ್ತಿದೆ ಅವರಿಗೆ, ಅಷ್ಟೇ ಏಕೆ? ನಮಗೂ ಮತ್ತೆಲ್ಲರಿಗೂ ಸಹಾ.....ಆದರೆ ತಪ್ಪುದಾರಿಯಲ್ಲಿ ದಿಕ್ಕುತಪ್ಪಿ ಬಹುದೂರ ಬಂದಿದ್ದೇವೆ....ವಾಪಸ್ ಹೋಗುವುದು ಅಸಾಧ್ಯ....ಹಾಗಾಗಿ..ನೋಡೋಣ....ಎಲ್ಲಿಯವರೆಗೆ ಇದು ಹೀಗೆ ನಡೆಯುತ್ತದೆಯೋ ನಡೆಯಲಿ....
ನಾವು ನಮ್ಮ ಈ ಕೇವಲ ಮಾನವ ಕೇಂದ್ರಿಕೃತ ಮನೋಭಾವನೆಯನ್ನು ಸುಧಾರಿಸಿಕೊಂಡು.....ಇತರ ಎಲ್ಲಾ ಜೀವಿಗಳ ಪ್ರಾಮುಖ್ಯತೆಯನ್ನು ಕಂಡುಕೊಂಡು ಅದನ್ನು ಆದರಿಸಬೇಕು. ತನಗೆ ಅನುಪಯೋಗ ಅಂದ ತಕ್ಷಣ ಅದರ ನಿರ್ಮೂಲನ ಮಾಡುವ ಪ್ರವೃತ್ತಿ ತಡೆಯಬೇಕು.....ಎಲ್ಲಾ ಗೋಚರ, ಅಗೋಚರ ಜೀವಿಗಳಿಗೂ ಈ ಪ್ರಕೃತಿಯ ಸಮತೋಲನ ಕಾಪಾಡುವುದರಲ್ಲಿ ಮಹತ್ತರ ಪಾತ್ರ ಇರುತ್ತದೆ....ಅದರ ಅರಿವು ಮೂಡಬೇಕು....ಮನುಷ್ಯಮಾತ್ರ ಶ್ರೇಷ್ಟ ಎನ್ನುವ ಪ್ರವೃತ್ತಿ ತೊಲಗಲಿ ಇನ್ನಾದರೂ...
ಇನ್ನಾದರೂ ಮಾನವ ತನ್ನನ್ನು ಬಿಟ್ಟು ಇತರ ಜೀವಿಗಳ ಬಗ್ಗೆಯೂ ಯೋಚಿಸಿ ಅವುಗಳ ಮಹತ್ವ ಮತ್ತು ಪ್ರಾಮುಖ್ಯತೆಯನ್ನು ಅರಿತರೆ, ತನ್ನ ಬದುಕನ್ನು ಸರಳತೆಯತ್ತ ಕೊಂಡೈಯುವ ಪ್ರಯತ್ನ ಆರಂಬಿಸಿದರೆ....ಉಳಿಯಬಹುದೇನೋ ಚೂರಾದರೂ...ನಮ್ಮ ಮುಂದಿನ ಪೀಳಿಗೆಗಳಿಗೆ.....

Comments

Popular posts from this blog

Reunited...at last..

ಕಾಗೆ....

The Crow.