Is it my ageing or indifferent fading body to my voluntary and involuntary cranial commands has made me sceptical about the present chaotic situations of violent and volatile hatred environment in the world in general and our country in particular...? the carelessness of the youthful optimistic romanticism of self-entered indulgence is .....depressing....




Throwing the countless wild lives to the verge of extinction and talk about and celebrate only on one day....the world wild life day...!! what a paradox and selfish egocentric hypocrisy of human...forget their existence for other 364 days...then make them extinct and announce its preservation and conservation schemes.......Really Sad.....






ಉಸಿರ ಬಿನ್ನಹ ಹಸಿರು
ಬಿತ್ತಿದಾಕ್ಷಣ ಮಣ್ಣಿನಲಿ ಬೀಜ 
 ಮೊಳೆತು, 
ಕವಲಾಗಿ ಟಿಸಿಲುಗಳ ಹಸಿರ ಛಾವಣಿ
ಚಪ್ಪರ ವಾದೀತೇ?
ಅದಕೆ ಬೇಕೆ ಬೇಕು ತಾಯಿ ಆಶ್ರಯ ಭೂಗರ್ಭ 
ಅಸಂಖ್ಯ ಶಾಖೆಗಳ ಕರುಳಬಳ್ಳಿ, ಬೇರುಹೊತ್ತಿರುವ 
ಮಮತೆಯ ಮಮಕಾರದ ಮಣ್ಣಹಾಸು 
ಭೂತಾಯಿ ಮಣ್ಣ ಗರ್ಭ ಸಾರ ಅಭಿಸರಣ, 
ಭ್ರೂಣಕ್ಕೆ ಅಂತಃಕರಣ ಧಾರೆ ಸೂಕ್ಷ್ಮ ಕವಲು
ಲವಣ ಜಲ ಸಿಂಚನ ಪ್ರಚೋದಕ
ಎಚ್ಚರತಪ್ಪಿದ ಭ್ರೂಣದ ಬಸಿರು ಹೆರಿಗೆಯ ತನಕ
ಭೂತಾಯ ಎಚ್ಚರಿಕೆ ಆಗಿ ಮನವರಿಕೆ? 
 ದೀಕ್ಷೆಯ ತ್ಯಾಗದ ಮಂತ್ರ ಉಪದೇಶ

ಸಮಯವಾಯಿತು ಹೊರಡು ಮೇಲಕ್ಕೆ ಏರು
ಹೊರಗೆ, ಎತ್ತರಕ್ಕೆ ಬೆಳಕಿಗೆ, 
ತೆರೆದುಕೊ ನಿನ್ನನ್ನು ನೀನೇ
ಋಣತೀರಿಸಿ ಮುಕ್ತನಾಗಲು
ನೆರಳಾಗಲು ಹರಡು ಹೆಮ್ಮರವಾಗಿ, 
ಛಾವಣಿಯಾಗು ಎಲ್ಲ ಸುಡು ಬೆಳಕಿಗೆ
ಅಸಾಹಾಯಕ ಅಸಂಖ್ಯಾತ ಅಜ್ಞಾನಿ 
ನಿನ್ನ ಭಾಜಕರು,ಅಮಾಯಕರು
ಪರೋಪಜೀವಿ ಭಸ್ಮಾಸುರರ ಬದುಕಿಗೂ 
ಬೇಕು ನೀನು, ಹಸಿದ ಹೊಟ್ಟೆಗೆ 
ಹಾಕಬೇಕಿದೆ ನೀನೇ ಕವಳ.
ನನಗೆ ತಿಳಿದಿದೆ ನಿನ್ನ ಸರ್ವವ್ಯಾಪಿ ಇರುವು
ಅಗೋಚರನಾಗಿ ಅಡಗಿದ್ದೀಯಾ ಎಲ್ಲೆಲ್ಲೂ

ನೀನಿಲ್ಲದೆ ಅವರಿಲ್ಲ. ಅವರಿಲ್ಲದೆ!
ಅರಿವಿಲ್ಲ ಅವರಿಗೆ,ಅವರೇ ಇಲ್ಲದ ಇತ್ತೊಂದು ಕಾಲ 
ಆದರೂ, ಭೂ ಪಾಲಕ ಬದುಕಿನ ಮೂಲ
ಬಿರಿದು, ಒಡೆದು, ವಿಭಜಿಸಿ, ವಿಸ್ತರಿಸಿ, 
ಹರಡುತ್ತೀಯಾ ವಾಮನನಂತೆ
ವ್ಯಾಪಿಸುತ್ತೀಯಾ ನೆಲ, ಜಲ, ಆಕಾಶ
ಬಣ್ಣ ಬದಲಿಸಿದರೂ ಹಸಿರಾಗಿ 
ತಿದಿ ಒತ್ತುತ್ತೀಯಾ ಎಲ್ಲರ ಉಸಿರಚೀಲಕೆ
ನಿನ್ನ ಆಥಿತ್ಯದಲಿ ನಾನೊಬ್ಬ ಸ್ವಾರ್ಥ ಅಥಿತಿ
ವನರಾಶಿ ಕುಲವೇ, ಸೊರಗಿದ ಭೂರಮೆಯೆ
ಮರಳಿಬಾ ದಯಮಾಡಿ ಮತ್ತೊಮ್ಮೆ ಎಂದಿನಂತೆ
ನಿನ್ನ ಕುಲಭಾಂದವ ಎಲ್ಲಾ ಸದಸ್ಯರೊಂದಿಗೆ

Comments

Popular posts from this blog

ಕಾಗೆ....

Reunited...at last..