ಒಳ್ಳೆಯ ಸಾವು.... 



ನಮ್ಮ ಜನಗಳ ಮತ್ತು ದೇವರ ನಡುವಿನ ಸಂಭಂದ ವಿಚಿತ್ರ. ಪ್ರಪಂಚದ ಸಕಲ ಇರುವು, ಅಸ್ತಿತ್ವ,ಬದುಕು ಎಲ್ಲವೂ ಭಗವಂತನ ಇಛ್ಚೆ ಎಂದು ನಂಬುವ ಭಕ್ತರ ಬಗ್ಗೆ ನನಗೆ ನಿಜಕ್ಕು ಸೋಜಿಗ. ಅವರ ಮನಸ್ಥಿತಿಯ ಬಗ್ಗೆ. ನಿಜವಾದ ಭಕ್ತರು, ಪ್ರಪಂಚವನ್ನೇ ಮರೆತು ತಮ್ಮ ಇಷ್ಟದೇವರಲ್ಲಿ ಐಕ್ಯವಾಗುತ್ತಾರೆ. ಅವರಿಗೆ ಪ್ರಪಂಚದ ಯಾವುದೇ ಅರಿವಿಲ್ಲ, ಗ್ರಾಹಕಗಳ ತೆವಲಿನ ಹಂಗಿಲ್ಲ. ಸುಖದ ಆಕರ್ಷಣೆಇಲ್ಲ. ಸಾವಿನ ಹೆದರಿಕೆಇಲ್ಲ. ಎಲ್ಲವೂ ತನ್ನ ಸ್ವಾಮಿಯದೇ, ಎಂದು ನಂಬುವ ಈ ಭಕ್ತರು ನಿಸ್ವಾರ್ಥಿಗಳು, ಅಲೌಕಿಕರು. ಸ್ಥಿತಪ್ರಜ್ಞರು. ಅವರ ಬಗ್ಗೆ ನನಗೆ ಅಪಾರ ಗೌರವ.

ಆದರೆ, ಸಾಮಾನ್ಯರಾದ ನಾವು, ಅದೆಷ್ಟು ಡಿಪೆಂಡ್ ಅಗೀದಿವಿ ದೇವರ ಮೇಲೆ ಅಂದ್ರೆ; ನಮ್ಮ ಅಜ್ಞಾನಕ್ಕೆ  ನಮ್ಮ ಮೇಲೆ ನಮಗೆ ಕನಿಕರ ಮೂಡುತ್ತದೆ. ಎಲ್ಲವೂ ದೇವರೇ ಕೊಡಬೇಕು. ಹಿರಿಯರು ನಮ್ಮ ಎಳೆಯವಯಸ್ಸಿನಲ್ಲಿ ದೇವರ ಬಗ್ಗೆ ಹೆದರಿಕೆ ಹುಟ್ಟಿಸಿ, ನಮ್ಮನ್ನು ದಾರಿಗೆ ತರಲು ಪ್ರಯತ್ನಿಸುತ್ತಾರೆ. ಪ್ರಾರ್ಥನೆಯಲ್ಲೂ ಸಹಾ ದೇವರನ್ನು ಭಕ್ತಿಯಿಂದ ಬೇಡಿಕೊಂಡರೆ ಏನು ಬೇಕಾದರೂ ಕರುಣಿಸುತ್ತಾನೆ ಎಂದು ನಂಬಿಸುತ್ತಾರೆ. ಪ್ರಾಯಶಃ ಈ ಬಾಲ್ಯದ ಪಾಠದಿಂದಲೋ ಏನೋ. ದೇವರಲ್ಲಿ ಎಲ್ಲವನ್ನು ಕೇಳಿಕೊಳ್ಳುತ್ತೇವೆ. ಭಕ್ತರಿಗೆ ಈ ರೀತಿಯ ಮೌಢ್ಯ ಮಾನಸಿಕ ಸ್ಥೈರ್ಯ ಕೊಡಬಹುದೇನೋ ತಾತ್ಕಾಲಿಕಾವಾಗಿ.

ಒಳ್ಳೇ ಬುದ್ದಿ, ಆರೋಗ್ಯ, ಅಶ್ವರ್ಯ, ಕೀರ್ತಿ, ಮನ್ನಣೆ, ಅಂತಸ್ತು, ಸಂತಾನ, ಸುಖ, ಸಂತೋಷ, ನೆಮ್ಮದಿ, ಒಳ್ಳೆಯ ಸುಂದರ ಹೆಂಡತಿ,  ಕುಡುಕನಲ್ಲದ, ಒಳ್ಳೆಯ, ತನ್ನ ಮಾತು ಕೇಳುವ  ಶ್ರೀಮಂತ  ಗಂಡ, ಕಾರ್, ಬೈಕು, ಮನೆ, ಎಲ್ಲಾ. ಪ್ರಾಕ್ಟಿಕಲಿ ಪ್ರಪಂಚದ ಸರ್ವಸ್ವನ್ನೂ ದೇವರೇ ಕೊಡಬೇಕು. ಪರೀಕ್ಷೆಯಲ್ಲಿಆತನೆ ಪಾರುಮಾಡಬೇಕು. ನೌಕರಿಯನ್ನು ಹುಡುಕಬೇಕು ದೇವರು. ಮಕ್ಕಳನ್ನು ಆತನೇ ಕೊಡಬೇಕು. ತೃಪ್ತಿಯನ್ನು ಬಿಟ್ಟು, ಇನ್ನೆಲ್ಲವನ್ನೂ ಕೇಳಿಕೊಳ್ಳುತ್ತೇವೆ.

ಓ.ಕೆ...ಏನಾದ್ರೂ ಕೇಳ್ಕೊಳ್ಲಿ, ಆದರೆ,

ಸಾವನ್ನು ಯಾರು ಸಹಾ ಸಂತೋಷದಿಂದ ಬರಲಿ ಎಂದು ಬೇಡುವುದಿಲ್ಲ. ತೀರಾ ಕಷ್ಟ, ಕಾರ್ಪಣ್ಯಗಳಿಂದ ಹತಾಶರಾದಾಗ, ಜಿಗುಪ್ಸೆ, ಕೋಪ ಮತ್ತು ನಿಸ್ಸಾಹಯಕತೆಯ ವಿಚಿತ್ರ ಮನಸ್ಥಿತಿಯಲ್ಲಿ ಮಾತ್ರ ಸಾವಿನ ಬೇಡಿಕೆ. ಇಲ್ಲದಿದ್ದರೆ...No problem and god is conveniently forgotten.

ನನಗೆ ನಗುಬರುವ ಮಾನವನ ಬೇಡಿಕೆಯಂದರೆ, ಸಾವಿನ ಬಗ್ಗೆ ಇವರು ಚೌಕಾಸಿ ಮಾಡೋದು. "ಒಳ್ಳೆಯ ಸಾವು ಬರ್ಲಪ್ಪ ದೇವ್ರೇ." ಅಂದ್ರೆ ಯಾವ ಸುಳಿವು ಇಲ್ಲದೆ,ತುಂಬಾ ಸಂತೋಷದಲ್ಲಿರುವಾಗ ಇದ್ದಕ್ಕಿದ್ದಂತೆ ಇಲ್ಲದಾಗ ಬೇಕು, ಎನ್ನುವ ಬಾಲಿಶ ಕಲ್ಪನೆ..

ಈ ಬಗೆಯ ಸಾವು ಅಸ್ವಾಭಾವಿಕ ಮತ್ತು ಅಸಾಧ್ಯ. ವೈದ್ಯಕೀಯ ಭಾಷೆಯಲ್ಲಿ ಹೇಳುವುದಾದರೆ. ಇಷ್ಟೊಂದು ವರ್ಷಗಳು ಎಲ್ಲವನ್ನು ಅನುಭವಿಸಿ ಉಂಡು ಮೆರೆದ ದೇಹಕ್ಕೆ ಮುಪ್ಪಿನಲ್ಲಿ ತಮ್ಮದೇ ದೇಹದ, ಅಂಗಾಂಗಳ, ಇತಿಮಿತಿಗಳ ಅರಿವಾಗಬಾರದೇ? ಎಲ್ಲಾ ಗ್ರಾಹಕಗಳು ಕ್ರಿಯಾಹೀನವಾದಾಗ ಮನಸ್ಥಿತಿಯನ್ನು ಅನುಭವಿಸಿ ತೀರೀಯೇ ಬೇಕು. ಹೃದಯಾಘಾತವಾದರೂ ಕನಿಷ್ಟ ಸಮಯ ನೋವು ಅನುಭವಿಸಬೇಕು. ಪ್ರಾಣಭಯದ ಅರಿವಾಗಬೇಕು. ಆಗುತ್ತದೆ. ಆದರೆ ಅದನ್ನು ಯಾರು ಸಹಾ ವಿಶ್ಲೇಷಿಸಲು ಹೋಗುವುದಿಲ್ಲ. "ಪುಣ್ಯವಂತ ಸಾವಿನ ಅರಿವು ಅವನಿಗೆ ಆಗಲೇ ಇಲ್ಲ" ಅಂತಾ ಜನ ಹೃದಯಾಘಾತದ ಬಗ್ಗೆ ಅಂತೆ,  ಕಂತೆಗಳ ಭ್ರಮೆ ಹುಟ್ಟಿಸುತ್ತಾರೆ. ಸಾವು ಸುಮ್ಮನೆ ಬರುವುದಿಲ್ಲ. ನಿಮಗೆ ನಿಮ್ಮ ಬದುಕಿನ ಎಲ್ಲಾ ಪಾಠಗಳನ್ನು ಮನದಟ್ಟು ಮಾಡಿಸುತ್ತದೆ. ಮನದಟ್ಟಾಗಲೇ ಬೇಕು. 

ದೇವರಿಗೆ ಸಾವಿಗೇ ಯಾವುದೇ ಸಂಭಂದವಿಲ್ಲ. ಸಾವಿಲ್ಲದ ಬದುಕಿನ ವರವನ್ನು ಆ ವಿಧಾತ ತನ್ನ ಯಾವ ಭಕ್ತರಿಗೂ ಕೊಡಲಾರ.ಇದು ಪರಿಸರದ ಮೂಲ ತತ್ವ. ಸೃಷ್ಟಿಯ ಹಿಂದೆ ಲಯ ವಿರಲೇ ಬೇಕು. ವಿಭಜನೆ, ಬೆಳವಣಿಗೆ, ವಿಘಟನೆ (ಸಂಸ್ಲೇಷಣೆ-ಹುಟ್ಟು----ಸಾವು-ವಿಘಟನೆ). ಈ ನೈಸರ್ಗಿಕ ಪ್ರಕ್ರಿಯಗಳೆಲ್ಲಾ, ಜೀವಸಂಕುಲ ಮುಂದುವರೆಯುವ ಒಂದು ಕಾರ್ಯತ್ಮಕ ತಂತ್ರ. ಮುಗಿಯದೇ, ಸದಾ ಪ್ರವಹಿಸುವ ಮಹಾಚಕ್ರೀಯ ಚಲನೆ. ಇದು ವೈಜ್ಞಾನಿಕ ಆದ್ಯಾತ್ಮ.

ಆದ್ಯಾತ್ಮಕ್ಕೆ ಮತ್ತು ದೇವರಿಗೆ ಸಂಭಂದವಿಲ್ಲ ಎಂದು ನಂಬುವ ನಾಸ್ತಿಕ ನಾನು.

Comments

Popular posts from this blog

ಕಾಗೆ....

Reunited...at last..