ಮಹಾ ಸಮರ
ವಿಷ್ವದ ಇಂದಿನ ಕೋಲಾಹಲದ ಪ್ರಕ್ಷುಭ್ದ ಪರಿಸರದಲ್ಲಿ ಎರಡು ರೀತಿಯ ಯುಧ್ದಗಳು ನಡೆಯುತ್ತಿವೆ.
ಒಂದನೆಯದು- ನ್ಯಾಯಸಮ್ಮತವಾದ ಎಲ್ಲಾಜೀವಿಗಳ ನಡುವಿನ ಸಮರ.
ಜೀವಿಗಳ ಉಗಮದಿಂದ ವಿಕಾಸದ ಹಾದಿಯಲ್ಲಿ ಸಮತೋಲನವನ್ನು ಕಾಪಾಡಿಕೊಂಡು ಬಂದ ಆಹಾರಕ್ಕಾಗಿ ಪ್ರಾಣಿಗಳ ನಡುವೆ ಮತ್ತು ಸಸ್ಯಾಹಾರಿ ಪ್ರಾಣಿಗಳು ಮತ್ತು ಸಸ್ಯರಾಶಿಗಳ ನಡುವೆ ನಡೆಯುತ್ತಿರುವ ಅಗೋಚರ ಯುದ್ಧ......ಇದು ಜೀವಜಾಲದ ಇರುವಿಕೆ, ಮತ್ತು ಮುಂದುವರಿಕೆಗೆ ಅನಿವಾರ್ಯ. ಈ ಪರಿಸರ ವ್ಯೂಹದ ಸಮತೋಲನದ ಯುದ್ಧ ೮ ಸಾವಿರ ವರ್ಷಗಳಿಂದೀಚೆಗೆ, ತನ್ನ ಗತಿಯನ್ನು, ಪ್ರಾಮುಖ್ಯತೆಯನ್ನೇ ನಮ್ಮಿಂದಾಗಿ ಕಳೆದು ಕೊಂಡಿದೆ.
ಆದರೆ ಈ ಸ್ವಾಭಾವಿಕ ಜೈವಿಕನಿಯಂತ್ರಣದ ಪ್ರಕ್ರಿಯೆಯ ಯುದ್ಧವನ್ನು, ನಮ್ಮ ಗ್ರಹಿಕೆಗೆ ಅನುಗುಣವಾಗಿ ಗ್ರಹಿಸಿ, ಇರುವಿಕೆಯ ಅವಲಂಬನೆಯನ್ನು ನಾವು ಕ್ರೌರ್ಯ ಎಂದು ಅರ್ಥೈಸಿ.....ಕ್ರೂರ ಪ್ರಾಣಿಗಳು......ಅನುಪಯೋಗ ಸಸ್ಯಗಳನ್ನು ಕಳೆಗಳು ಎಂದು ನಾಮಕರಣಮಾಡಿ ಅವುಗಳನ್ನು ಎಗ್ಗಾ ಮುಗ್ಗಾ ಕೊಚ್ಚಿಹಾಕುತ್ತಿದ್ದೇವೆ.
ಎರಡನೆಯದು- ಜೀವಜಾಲದ ಆತ್ಮಹತ್ಯಾ ಸಮರ
ದುರಾಸೆಗಾಗಿ ತನ್ನ ಪ್ರಭೇದವನ್ನೇ ಬೇಟೆಯಾಡುವ ಅತಿಕ್ರೂರ ಜೀವಿ ಮಾನವ ಎಗ್ಗಿಲ್ಲದೆ ಈಚೆಗೆ ಆರಂಬಿಸಿರುವ ಅನ್ಯಾಯದ, ಅಪಾಯಕಾರಿ, ಸಂಪೂರ್ಣ ಪರಿಸರ ವಿನಾಷದ ಅಂತಿಮ ಸಮರ...
ಈ ಯುಧ್ದದ ಪರಿಣಾಮ ಅನೂಹ್ಯ.....
Comments