ಒಂದು ಸಣ್ಣ ಕಥೆ...
ವಾಯುವಿಹಾರಕ್ಕಾಗಿ ನಿರ್ಮಿಸಿದ ಯಾವುದೋ ಊರಿನ, ವ್ಯವಿದ್ಯಮಯ ಸಸ್ಯಗಳ ಸುಂದರ ಯಾವುದೋ ಉದ್ಯಾನವನಕ್ಕೆ ನುಗ್ಗಿ ಮೇಯುತ್ತಿದ್ದ ದನಗಳನ್ನು ಸಿಟ್ಟಿಗೆದ್ದ ಕಾಳಜಿಯುಕ್ತ ಜನಗಳು, ದನಗಳನ್ನು ಎಗ್ಗಾ ಮುಗ್ಗಾ ಹೊಡೆದು ಹೊರಗೆ ಓಡಿಸಿ.....
ಕಾಪಾಡಿದರು.....ಗ್ರೇಟ್....!!!!
ಎಲೆ, ಮಣ್ಣಿನ ಗರಿಕೆಯನ್ನು ಜಗಿಯುತ್ತಾ,ನೊರೆಯ ಜೊಲ್ಲು ಸುರಿಸುತ್ತಾ ನಿಧಾನವಾಗಿ, ಆಗಾಗ ಬಾಸುಂಡೆಗಳನ್ನು ಬಾಲದಿಂದರಮಿಸಿ, ನಿರ್ಭಾವದಿಂದ ಹೊರಬಂದ ದನಕರುಗಳು ಸಂಚಾರಿ ದಟ್ಟಣೆಯನ್ನು ಗಮನಿಸಿದವು......
ಧೀರ್ಘಕಾಲ ನಡೆಯುವ, ಮೂರನೆ ಮತ್ತು ಅಂತಿಮ ವಿಶ್ವ ಮಹಾಸಮರ ಆರಂಭ.............
Comments