ಈ ಭೂಮಿ ಕೇವಲ  ಸ್ವತ್ತಲ್ಲ ಆಸ್ತಿಯಲ್ಲ ... 


ಆಹಾರ, ಆವಾಸ, ನಿರು, ಗಾಳಿ ಇತ್ಯಾದಿ ಜೀವಿಗಳಿಗೆ ಬೇಕಾದ ಮೂಲಭೂತ ಅವಶ್ಯಕತೆಗಳ ಕೊರತೆ( ಹಸಿವು,ಬಡತನ ಮತ್ತು ಆವಾಸ ) ಕೇವಲ ಮನುಷ್ಯನಿಗೆ ಮಾತ್ರ ಸೀಮಿತವಾಗಿಲ್ಲ. ಈತ ಬದುಕುವ ಸುತ್ತ ಮುತ್ತಲಿನ ಎಲ್ಲಾ ಜೀವಿಗಳಿಗೂ ಅನ್ವಯಿಸುತ್ತದೆ (ಸಸ್ಯಗಳನ್ನು ಸೇರಿ-ಅವು ನಿಶ್ಚಲ ಮೌನಿಗಳು..ಅಷ್ಟೇ). ಅಧಿಕಾರಶಾಹಿಗಳು, ಶ್ರೀಮಂತರ ಇತ್ಯಾದಿ ಸಾಮಾಜಿಕ ಆಗುಹೋಗುಗಳನ್ನು ನಿಯಂತ್ರಿಸುವ ವ್ಯಕ್ತಿಗಳ ಕಪಿಮುಷ್ಟಿಯಲ್ಲಿಸಿಕ್ಕಿರುವ ಅಸಹಾಯಕ, ಅಶಕ್ತ ಬಡಮಾನವನಂತೆ ಪ್ರಾಣಿ, ಸಸ್ಯಗಳು ಸಹಾ ಮಾನವನ ರಕ್ಕಸತನಕ್ಕೆ ಹೆದರಿ ಮೌನವಾಗಿವೆ. ಅವು ನಮ್ಮೊಡನೆ ಹೋರಾಡಲಾರವು....ಯಾರ ಅರಿವುಗೂ ಬರದಂತೆ ಪರಿಸರದಿಂದಲೇ ನಿಶ್ಯಭ್ದವಾಗಿ ಅಳಿದುಹೋಗುತ್ತಿವೆ.
ಇವುಗಳ ಅನಿವಾರ್ಯ ಇರುವಿಕೆಯ ಬಗ್ಗೆ ಪ್ರಜ್ಞೆಯೇ ಇಲ್ಲದೆ ನರಪ್ರಾಣಿ ಶೋಷಿಸುತ್ತಿದ್ದಾನೆ ಮಾನವಕುಲ ದ ಏಳಿಗೆ ಎಂಬ ನಾಮಕರಣ ಮಾಡಿ. ಹಸಿವು, ಬಡತನ, ಕಷ್ಟಕಾರ್ಪಣ್ಯ ಗಳನ್ನು ನಿರ್ಮೂಲನ ಮಾಡಿ ಎಲ್ಲಾ ಮಾನವರಿಗೂ ಸಮಾನ ಮೂಲಭೂತ ಅವಶ್ಯಕತೆ, ಕಲ್ಪಿಸುವ,ನಾಗರೀಕತೆ ವೇಷದಲ್ಲಿ ಸಮಾಜದ ಕ್ರೂರ ಅನ್ಯಾಯ ಮುಂದುವರಿಯುತ್ತಿದೆ. ಈವಿಧದ ಪ್ರಗತಿಗೆ ದೇವರು, ಧರ್ಮ,ಜಾತಿ, ಭಾಷೆ ಇತ್ಯಾದಿಗಳನ್ನು ಸೃಷ್ಟಿಸಿ ತನ್ನ ವಿನಾಶಕಾರಿ ಚಟುವಟಿಕೆಗಳನ್ನು ಮುಂದುವರಿಸಿದ್ದಾನೆ....ಪ್ರಗತಿಯ ಹೆಸರಲ್ಲಿ. ಸಮಾನತೆಯ ಸೋಗಿನಲ್ಲಿ.ಎಗ್ಗಿಲ್ಲದೆ ಪರಿಸರದ ಕಗ್ಗೊಲೆ, ನಡೆಯುತ್ತಿದೆ.ದಿನ,ದಿನಕ್ಕೆ ಈ ಕೊಳ್ಳೆಹೊಡೆಯುವಿಕೆಯ ಸಾಧನಗಳಾದ ವರ್ಗ, ಅಧಿಕಾರ ಇತ್ಯಾದಿ ಸಮಾಜದ ಕುರೂಪ ಮುಖಗಳೆಲ್ಲವೂ ದೇವರು, ಧರ್ಮ, ಜಾತಿಯ ಪರವಾನಿಗೆ ಪಡೆದು ಅವುಗಳ ಹೆಸರಲ್ಲೇ ಯಾರ ಹಂಗಿಲ್ಲದೇ ಅಮಾನವಿಯವಾಗಿ ತೀರಾ ಸಹಜರೀತಿಯಂತೆ ದಬ್ಬಾಳಿಕೆ ಮುಂದುವರಿಯುತ್ತಿದೆ.ಲೆಕ್ಖವಿಲ್ಲದಷ್ಟು ಸಿದ್ಧಾಂತಳು ಬಂದು ಹೋದವು. ಆನೇಕ ಧರ್ಮಗಳು ಬಂದು ಆದರೆ ಸಾವಿರಾರು ವರ್ಷಗಳಿಂದ ಇರುವ,ಸ್ಥಿತಿ,ಕಿಂಚಿತ್ತುಬದಲಾಗಿಲ್ಲ.ಬದಲಾಗುವ ಲಕ್ಷಣಗಳೂ ಕಾಣುತ್ತಿಲ್ಲ.
ಮನುಕುಲ, ಮಾನವಜಾತಿ, ಮಾನವಕಲ್ಯಾಣ, ಮಾನವೀಯತೆ ಇತ್ಯಾದಿ ಕೇವಲ ಮಾನವಾಧಾರಿತ ಘೋಷಣೆಗಳಿಂದಎಲ್ಲರನ್ನೂ,ಉದ್ದಾರಮಾಡಿ ಎಲ್ಲವನ್ನೂ ಲೂಟಿಮಾಡಿದ್ದಾಯಿತು.ಇನ್ನಾದರೂ ನಮ್ಮ ಗಮನಹರಿಸೋಣ ನಮ್ಮ ಸುತ್ತಮುತ್ತ ಇರುವ ಮರ, ಗಿಡಗಳು, ಪ್ರಾಣಿ ಪಕ್ಷಿಗಳು, ಅವುಗಳ ಆಹಾರ, ಅವಾಸಗಳ ಶೋಚನೀಯ ಸ್ಠಿತಿಗಳಬಗ್ಗೆ. ಅವುಗಳಿಲ್ಲದೆ ಯಾವ ಸಿರಿವಂತನಾಗಲಿ, ಅಧಿಕಾರಶಾಹಿ ಯಾಗಲಿ, ಸಾಮಾಜಿಕ ಚಿಂತಕರಾಗಲಿ ಅಥವಾ ಸಾಮಾನ್ಯ ಮಾನವರ ಉಳಿವು ಕಷ್ಟವಾಗುತ್ತದೆ.


ನಾಯಿಗೇಕೇ ಚಿತ್ರಾನ್ನ, ತಂಗಳು ಬಿರಿಯಾನಿ?


ಇತರ ಜೀವಿಗಳು ವಿಶೇಷವಾಗಿ ಪ್ರಾಣಿಪ್ರಭೇದಗಳು ಮತ್ತು ನನ್ನಂತಹ ಮಾನವರ ನಡುವೆ ಇರುವ ಮುಖ್ಯವಾದ ವ್ಯತ್ಯಾಸವೆಂದರೆ;
ಪ್ರಾಣಿಗಳು ಬದುಕುವುದಕ್ಕಾಗಿ ಅಥವಾ ಈ ಪ್ರಕೃತಿಯಲ್ಲಿ ತಮ್ಮ ಜೈವಿಕ ಉಳುವಿಗಾಗಿ ತಿನ್ನುತ್ತವೆ, ಮೇಯುತ್ತವೆ ಅಥವಾ ಹುಡುಕಿ ಬೇಟೆಯಾಡುತ್ತವೆ.
ನಾವು ತಿಂದು, ತೇಗಿ, ಆರಾಮಾಗಿ, ಮಜಾ ಮಾಡುವುದಕ್ಕಾಗಿಯೇ ಬದುಕುತ್ತೇವೆ.
ಪ್ರಾಣಿಗಳ ಎಲ್ಲಾ ಕ್ರಿಯಗಳು, ಚಟುವಟಿಕೆಗಳಿಗೆ ಅತ್ಯಗತ್ಯವಾದ ಜೈವಿಕ ಅವಶ್ಯಕ ಪೂರೈಕೆ ತೀರಾ ಸೀಮಿತ, ಹಾಗೂ ನಗಣ್ಯ. ಪ್ರಾಣಿಗಳು ಆಹಾರ ನಿರ್ಧಿಷ್ಟ. ತಮ್ಮ ಆ ಆಹಾರಕ್ಕಾಗಿ ಪ್ರಯಾಸ ಪಡಬೇಕಾಗುತ್ತದೆ. ಹಾಗಾಗಿ ಅವುಗಳು ಹಸಿವು, ಉಪವಾಸ ನಮ್ಮ ಕಣ್ಣಿಗೆ ಬೀಳುವುದಿಲ್ಲ.ದೇವರ ಸೃಷ್ಟಿ ಎಂಬ ತತ್ವಜ್ಞಾನ ಬೇರೆ! ನಮ್ಮ ಯೋಗ್ಯತೆಗೆ.
ಮನುಷ್ಯನ ಹಸಿವಿನ ಹೆಸರಲ್ಲಿ ಯುದ್ಧಗಳು ನಡೆದು ರಕ್ತಪಾತವಾಗಿರುವ ಘಟನೆಗಳು ಮಾನವನ ಕ್ರೂರ ಇತಿಹಾಸದ ತುಂಬಾ ಇವೆ....ಇಂದಿಗೂ ನಡೆಯುತ್ತಿದೆ ರಾಜಕೀಯ ಅಮಾನವೀಯ ಯುದ್ಧ ನಮ್ಮ ನಾಗರೀಕತೆಯಲ್ಲಿ, ಸಾಮಾಜಿಕ ಸುಧಾರಣೆಯಲ್ಲಿ, ಆದರ್ಶ ಸಿದ್ಧಾಂತಗಳಲ್ಲಿ. ಎಲ್ಲರೂ ಪ್ರಶ್ನಾತೀತ ಪರಿಸರದ ಸಂಪೂರ್ಣ ಸ್ವಾಮ್ಯ ಪಡೆಯುತ್ತಾರೆ.
ಕತ್ತೆ, ಕುದುರೆ, ನಾಯಿಗಳ ಕುಲವನ್ನೇ ಬದಲಿಸಿ ವಂಶ ಪಾರಂಪರ್ಯ ಗುಲಾಮಗಿರಿಗೆ ತಳ್ಳಿ ಸಾಕು ಪ್ರಾಣಿಗಳೆಂದು ಹೆಸರಿಟ್ಟು, ಬೋನುಗಳು ಅಥವಾ ನಮ್ನ ಯೋಗ್ಯತೆಗೆ ಅನುಗುಣವಾದ ಗೂಡುಗಳಲ್ಲಿ ಬಂದಿಸಿ ಅವುಗಳ ಸಹಜಲಕ್ಷಣಗಳನ್ನೇ ಬದಲಿಸುವ ಪ್ರಾಣಿ ದಯಾಮಯಿಗಳು ಇವರೂ, ನಾವೂ ಸಹಾ. ನಾವು ಪ್ರಕೃತಿ ಸಂರಕ್ಷಕರು ನಾವು ಪರಿಸರ ಪ್ರೇಮಿಗಳು.
ಹಸು ಹುಲ್ಲುಬಿಟ್ಟು ಬೇರನ್ನು ತಿನ್ನುತ್ತದೆಯೇ? ಎಂಬ ಆದ್ಯಾತ್ಮದ ಮಾತು ಒಂದು ಕಡೆ. ಈ ಮಹಾ ತತ್ವಜ್ಞಾನಿಗಳು ಪ್ರಶ್ನಾತೀತರು,
ಮರೆತು ಬಿಡುತ್ತಾರೆ ನಮ್ಮ ನಾಯಿಗೇಕೇ ಚಿತ್ರಾನ್ನ, ತಂಗಳು ಬಿರಿಯಾನಿ?

Comments

Popular posts from this blog

Reunited...at last..

ಕಾಗೆ....

The Crow.