ಹೊಸ ಧರ್ಮದ ಬೇಡಿಕೆ 

ಧರ್ಮ,ದೇವರು, ಜಾತಿ ಇತ್ಯಾದಿಗಳಿಂದ ಮುಕ್ತವಾಗುವ ನಿಜವಾದ ಸಮಬಾಳ್ವೆಯ, ಸಮಬದುಕಿನ ಕನಸನ್ನು ಕಂಡ ಹಗಲು ಕನಸುಗಾರ ನಾನು.....

ಇವೆಲ್ಲವೂ ಅಪ್ರಸ್ತುತ ಹಾಗೂ ಅನುವಶ್ಯಕ ಅಂತ ನನ್ನ ಬಲವಾದ ನಂಬಿಕೆ ಇಂದಿಗೂ. ಹಾಗೆ ನಡೆದುಕೊಳ್ಳಲು ಪ್ರಯತ್ನಸುತ್ತಿದ್ದೇನೆ ಅಂತ ಅಂದುಕೊಂಡಿದ್ದೇನೆ.
ಮನುಷ್ಯನಾಗಿ ಬದುಕಲು. ಅತಿಸಹಜವಾದ ಹುಟ್ಟು,ಸಾವಿನ ಹಾಗೂ ಇರುವಿಗಾಗಿ ಹುಡುಕಾಟ (ಆಹಾರ ಮತ್ತು ನೀರು) ಹೋರಾಟದ ( ವ್ಯವಸ್ತಿತವಾದ ಕಷ್ಟ,ಕಾರ್ಪಣ್ಯ ಚಟುವಟಿಕೆಗಳು, ಬಾಳ ಕ್ರಿಯೆಗಳು) ಬದುಕಿಗೆ ಯಾವ ದೇವರ ಕೃಪೆಯ ಹಂಗು ಬೇಕಿಲ್ಲ.

ಈಗ ಇನ್ನೊಂದು ಧರ್ಮಕ್ಕೆ ಬೇಡಿಕೆ, ಹೋರಾಟ....!!!!
ನನ್ನ ಸುತ್ತಲಿನ ಸಹಜೀವಿಗಳ ಮನೋಧರ್ಮ ನನಗೆ ಅರ್ಥವಾಗುತ್ತಿಲ್ಲ.
ನಮಗೆ ಏನು? ಯಾಕೆ? ಯಾವಾಗ ಬೇಕು? ಎಂಬುದು ತಿಳಿಯುತ್ತಿಲ್ಲ. ಇನ್ನು ಆದರ್ಶ, ಉದ್ಯೇಶ, ಸಿದ್ದಾಂತ....ಕೇವಲ ಪದಗಳಾಗಿರುವ ಕಾಲದಲ್ಲಿ ಬದುಕಿನಲ್ಲಿ ಅಳವಡಿಸಿಕೊಳ್ಳುವುದು ತೀರಾ ಪ್ರಯಾಸದ ಕೆಲಸ ಅಷ್ಟೇ ಅಲ್ಲ...ಅಸಾಧ್ಯ ಅನಿಸುತ್ತದೆ.

ಮಾನವನ ಸಹಜ, ಸರಳಬಾಳಿಗೆ, ನೆಮ್ಮದಿಗೆ, ತೃಪ್ತಿಗೆ, ಮನಶ್ಯಾಂತಿ ಇತ್ಯಾದಿ ಮೂಲಭೂತ ಅವಶ್ಯಕತೆಗಳನ್ನು ಯಾವ ಧರ್ಮ ಅಥವಾ ದೇವರು ಕೊಟ್ಟಿದ್ದರೆ.....ವರ್ತಮಾನದ, ನಾವು ನಮ್ಮಕಣ್ಣೆದುರಿಗೆ ಕಾಣುತ್ತಿರುವ ಈ ಪ್ರಪಂಚ... ಈಪಾಟಿಯ ವಿರೋಧಾಭಾಸಗಳಲ್ಲಿ,ಹಿಂಸೆ ಮತ್ತು ಅಮಾನವೀಯ ಕ್ರೌರ್ಯದ ಅತಿರೇಕಗಳಲ್ಲಿ. ವಿರೂಪಗೊಳ್ಳುತ್ತಿರಲ್ಲಿಲ್ಲ.
ಎಲ್ಲಾ ಧರ್ಮಗಳು ಅತ್ಯುನ್ನತ ಆದರ್ಶ, ಮೌಲ್ಯಗಳನ್ನು ಹೊತ್ತು ಮಾನವನಿಗಾಗಿ ಹುಟ್ಟಿದವು. ಆದರೆ ಯಾವುದೂ ಶಾಶ್ವತ ಪರಿಹಾರ ಕೊಡಲಿಲ್ಲ. ಕೊಡಲಾಗುವುದಿಲ್ಲ....ಕಾರಣ..ಧರ್ಮದ ತಪ್ಪಲ್ಲ...ಮನುಷ್ಯನ ಮನೋಧರ್ಮವೇ ಎಡವಟ್ಟು. ತನ್ನಂತೆಯೇ ಪ್ರಪಂಚ ಇರಬೇಕು ಎಂಬ ಮನೋಭಾವನೆ ಎಲ್ಲರದು. ಅವನಿಂದಾಗಿ ಆ ಧರ್ಮ ಶೇಷ್ಟ! ಹೀಗಾಗಿ ಹಿಂದಿನ ಅಥವಾ ಚಾಲ್ತಿಯಲ್ಲಿರುವ ಸವೆದುಹೋಗಿರುವ ಧರ್ಮಗಳ ನ್ಯೂನತೆಗಳನ್ನು ಎತ್ತಿ ಹಿಡಿದು ಖಂಡಿಸಿ ತಮ್ಮ ತತ್ವಗಳನ್ನು ಪ್ಪತಿಪಾದಿಸಲು ಅದನ್ನು ಮತ್ತು ಸ್ಥಾಪಿಸಲು, ರಾಜಕೀಯ, ಕೊಲೆ, ಸುಲಿಗೆ, ವಂಚನೆ, ಸಂಚು...ಇತ್ಯಾದಿಗಳು ಆ ಧರ್ಮದೊಟ್ಟಿಗೆ ಹುಟ್ಟಿಕೊಳ್ಳುತ್ತವೆ....ಇದು ಅನಿವಾರ್ಯ ಕೂಡ ಆದರ ಇರುವಿಕೆ, ಮುಂದುವರಿಕೆಗೆ ಮತ್ತು ಸಾರ್ವಭೌಮತ್ವಕ್ಕೆ. ಅನೇಕ ಧರ್ಮಗಳು ಹುಟ್ಟಿದವು...ಆದರೆ ಜಗತ್ತು ಹೆಚ್ಚು ಕೆಂಪಾಗುತ್ತಲೇ ಬಂದಿದೆ. ಯಾವ ಧರ್ಮವೂ ವಿಶ್ವವ್ಯಾಪಿಯಾಗಲಿ, ಸರ್ವಕಾಲಿಕ ಪರಿಪೂರ್ಣತೆಯನ್ನು ಕೊಡಲಾರದು.
ಅಹಂ ಇಲ್ಲದವನಿಗೆ ಯಾವ ಧರ್ಮವಾದರೇನು? ಪ್ರೀತಿಗೊತ್ತಿರುವವನಿಗೆ ಯಾವ ದೇವರಾದರೇನು? ಪ್ರೀತಿ...ಕೇವಲ ಮಾನವಸೀಮಿತವಾದುದರಿಂದ ಈ ಅವ್ಯವಸ್ಥೆ. ಇಡೀ ಈ ಸೃಷ್ಟಿಯ, ಈ ಅಧ್ಬುತ ವಿವಿಧತೆಯನ್ನು ಪ್ರೀತಿಸುವ ಯೋಗ್ಯತೆ ಇದ್ದರೆ, ನಮ್ಮ ಇತಿಮಿತಿಗಳ ಅರಿವಿನಿಂದ ಭಕ್ತಿಯಲ್ಲಿ ಪರಿಸರದ ಸೋಜಿಗಕೆ ಶರಣಾಗಿ....ಅವುಗಳನ್ನು, ಅವುಗಳಾಗಿಯೇ ಗೌರವಿಸಿದರೆ ಯಾವ ಧರ್ಮದ ಅನಿವಾರ್ಯತೆ ಅಥವಾ ದೇವರು ಯಾರಿಗೆ ಬೇಕು ಈ ಬದುಕಿನಲ್ಲಿ?

Comments

Popular posts from this blog

ಕಾಗೆ....

Reunited...at last..