ಅನ್ವೇಷಣೆ.
ತೂಗುತಿದೆ ಮನಸು ಲೋಕದ ಲೋಲಕ
ಗೌರಿಶಂಕರ ಶಿಖರದ ತುಟ್ಟತುದಿಯಿಂದ
ಪೆಸಿಫಿಕ್ ಸಾಗರದ ಆಳದಲ್ಲಡಗಿರುವ ತಳರಹಿತ ಪ್ರಪಾತ
ಮಾರಿಯಾನ ಕತ್ತಲ ಕಂದಕದ ವರೆಗೆ,
ನಿರಂತರ ಆವರ್ತನದಲ್ಲಿ ಜೋತುಬಿದ್ದಿವೆ ಅಪಾಯದಲ್ಲಿ
ಉಯ್ಯಾಲೆಯ ತೂಗಾಟದಲ್ಲೇ ಭ್ರಮೆ, ತಲೆತಿರುಗಿ ಮಂಪರು
ಎತ್ತರ, ಆಳಗಳ ವ್ಯತ್ಯಾಸವಿಲ್ಲ, ದಿಕ್ಕಿಲ್ಲದ ನೋಟ ದಿಗಂತ ಬಯಲಲ್ಲಿ
ಗಾಳಿಯನು ಹಿಡಿಯದ ಗುರುತ್ವ ಅಲ್ಲಿ ಎಲ್ಲವೂ ನಿರ್ವಾತ...
ಕಗ್ಗತ್ತೆಲೆಯ ಕಂದರದಲಿ ಅತಿ ಸಾಂದ್ರ ಒತ್ತಡ,ಬಾಳಿನ ವಿಸ್ಪೋಟ
ಬದುಕೆಲ್ಲ ಛಿಧ್ರ,ಛಿಧ್ರ ಹರಡಿದೆ ಎಲ್ಲೆಲ್ಲೂ
ಬೆಸೆದ ಕೊಂಡಿ ಲೋಹದ ಗುಂಡಿಗೆ ಬಿಗಿದು,
ಸಿಡಿಗಂಬಕೆ ಕಟ್ಟಿ,ತೂಗುಬಿಟ್ಟ ದಾರದ ತುದಿ
ತಿರುಗುತ್ತಲೇ ಇದ್ದಾನೆ ಜೋಗಿ ನುಂಕಪ್ಪ
ತನ್ನದೇ ಬಂಡೆ ಗುಡ್ದಗಳ ಸಾಮ್ರಾಜ್ಯದಲ್ಲಿ
ಹುಡುಕಿ,ಹೆಕ್ಕಲು ಹೊರಡಬೇಕಿದೆ ತ್ವರಿತದಲ್ಲಿ
ಆರಂಭವಾಗಬೇಕಿದೆ ಮತ್ತೊಮ್ಮೆ ಮಹಾ ಅನ್ವೇಷಣೆ

Comments