ನಾಳೆ.
ಗಣಿತದ ಆರೋಹಣ ಲೆಕ್ಖದಲಿ ಹದಿನೆಂಟು ಬರುವುದು ಹದಿನೇಳರ ನಂತರೆವೇ. ಗೊತ್ತು
ಮೂರು ನೂರಕ್ಕಿಂತಲೂ ಹೆಚ್ಚು ದಿನಗಳ ಲೆಕ್ಕ ಹಾಕಿ ಕ್ಷಣಗಳ ಎಣಿಕೆಯಲ್ಲಿ ಬದುಕಿ,
ಅದೇ ಸ್ಥಿರ ಭೂ ಭ್ರಮಣ, ಸೂರ್ಯನ ಸುತ್ತಲೂ, ವೇಗ ಅದೇ ಸರಾಗ ಗತಿಯಲ್ಲಿ ಗತಿಸಿ

ಮೂಡಲಿದ್ದಾನೆ ಮತ್ತೆ ಮತ್ತೆ ಅದೇ ಸೂರ್ಯ, ಅದೇ ಪ್ರಭಾವಳಿಯೊಂದಿಗೆ ನೀಲಿ ಬಾನಿನಲ್ಲಿ


ತಿಂಗಳುಗಳ ಹಿಂದೆ ನೂಕಿ ಬರುವ ಹೊಸ ದಿನ, ಕಲ್ಪನೆ ನಶೆ, ಮತ್ತೊಂದು ವರುಷದ ಹರುಷ
ಅಂಕಿಬದಲಾಗುವ ಲೆಕ್ಖದ ಕಳೆದ ವರ್ಷದಲ್ಲಿ ಅಷ್ಟೇ ದಿನಗಳು, ಕ್ಷಣ,ಗಂಟೆಗಳೂ ಅಷ್ಟೇ, 
ಉರುಳಲೆಂದೇ ಆಗಮಿಸುವ ನಾಳಿನ ಮತ್ತೊಂದು ಹೊಸವರುಷದಲ್ಲಿ ಅದೇ ನಿರಾಸೆಗಳ ಸಮೀಕ್ಷೆ, 
ಅದೇ ಕಾಡು, ಮರಳುಗಾಡು, ಅಭೇದ್ಯ ಕಾಂಕ್ರೀಟ್ ಸುಡುಗಾಡು,ಅದೇ ಮರಿಚೀಕೆಯ ಪರೀಕ್ಷೆ.


ಛಲಬಿಡದ ತ್ರಿವಿಕ್ರಮರ ವಿಕೃತ ಪ್ರಭೇದ ಆಳ್ವಿಕೆಯಲ್ಲಿ, ಕನಸುಕಾಣಲು ಯಾರ ಅಪ್ಪಣೆ ಏಕೆ?
ಬರಲೇ ಬೇಕು, ಮತ್ತೊಂದು ಹೊಸವರ್ಷ, ಹಳಸಿ ಯಾಂತ್ರಿಕವಾಗಿ ಜಡವಾಗಿ ಹುದುಗಲು
ಕನಸು ಕರಗುವುದಿಲ್ಲ, ಬೆವರು ಬತ್ತುವುದಿಲ್ಲ, ಉಸಿರಾಟದ ಪೈಪೋಟಿಯ ಹೋರಾಟದಲ್ಲಿ 
ನಿರ್ಲಕ್ಷ್ಯ, ಸ್ವಾರ್ಥ ಮೆರೆಯುವ ವಿಕೃತ ಕ್ರೂರ ಡೊಂಬರಾಟದ ಇನ್ನೊಂದು ಹೊಸದಿನ, ನಾಳೆ.


ಯಾರಿಗೆ ಹೊಸವರುಷದ ಹಸಿದ ಮೊದಲದಿನ? ಯಾವ ಮದಿರಾಲಯದಲ್ಲಿ? ಅರ್ಧರಾತ್ರಿಯ ಬೆಳಗು! 
ಹೆಂಡ ಹೊಡೆದು, ಶೀಶೆ ಒಡೆದು ಗಾಜು ಚೆಲ್ಲಿ, ಬೀದಿ,ಬೀದಿಗಳಲ್ಲಿ ವಾಂತಿಯ ಸಂಭ್ರಮದ ಮೋಜು.....

Comments

Popular posts from this blog

ಕಾಗೆ....

Reunited...at last..