Posts

Showing posts from February, 2018
ವಿಶಿಷ್ಟ.. ವಾಕರಿಸಿ, ಕ್ಯಾಕರಿಸಿ, ಧಿಕ್ಕರಿಸು, ಉಗುಳಿ, ಹಾಕು ಹಿಡಿ ಶಾಪ, ಛೀಮಾರಿ ಹಾಕಿ, ಹೇರು ಬಹಿಶ್ಕಾರ ಪ್ರತಿಕ್ರಿಯಸದ ನಿರ್ಲಿಪ್ತ, ಈ ನಿರ್ಲಜ್ಜ ಸ್ನೇಹಿತನೋ, ಶತ್ರುವೋ, ಸಂಭಂದಿಯೋ? ಅದೇಕೋ ಸಹಿಸಲಾರ ಎಂದಿಗೂ ಯಾರ ಸಹವಾಸ ನಿಯಂತ್ರಣದ ಗುಲಾಮಿಗಡಿಯಲ್ಲಿ ಬಂದಿಯಾಗದ ಭಕ್ತ ಅವಿಧೇಯ ಪ್ರಾಣಿ, ಗುಡಿಯಿಂದ ಮುಕ್ತ ನ್ಯೂಟನ್ ನ ಗುರುತ್ವ, ಐನ್ಶ್ಟಿನ್ ಕಾಲಪ್ರಜ್ಞೆ ಫತ್ವಾ ಪರಿಗಣಿಸದ ಪ್ರಭೇದ ಚಡಪಡಿಕೆಯೇ ಅಸ್ತಿತ್ವ ಆಕಾಶದ ವಿಸ್ತಾರದಲ್ಲಿ ಹಗುರತೇಲುವ ಮನಸು ಕಾಯದ ಕಾಯಕದ ಹಂಗಿಲ್ಲದ ವಿರಕ್ತ ಕಲ್ಪನಾತೀತ ಹಿಡಿತಕ್ಕೆ ಸಿಗದ ಅನೂಹ್ಯ ವಿಕಾಸ ಇತಿಹಾಸಕಾರ ವಿಷಯಾಸಕ್ತ ಕುಗ್ಗದ ಹಿಗ್ಗು ಸ್ಥಿತಿಸ್ಥಾಪಕತ್ವದಲ್ಲಿ ವಿಸ್ತೀರ್ಣ ಅಳೆಯುವ ಹಂಬಲ, ಖಾಲಿತನದ ನಿಹಾರಿಕೆಯಲಿ ಕಲ್ಪನಾವಿಹಾರಿ, ಎಲ್ಲರ, ಎಲ್ಲದರ ಬೆಸುಗೆ ಅನಿವಾರ್ಯ, ಸಹಜ ಬದುಕಿನ ಬೆಲೆ, ವಾಸ್ತವದ ಬಲೆ ಆಹಾರ ಜಾಲದಲಿ ಜೀವಸಂಕುಲ ಬೆಸದ ಮಾಯಾಜಾಲ ಜೀವಿ ಸಂತುಲನದಲ್ಲಿ ನಿರ್ಜೀವಿ ಪರಕೀಯನಲ್ಲ ವಿಶೇಷನೂ ಅಲ್ಲ, ವಿಶಿಷ್ಟನೂ ಅಲ್ಲ, ಆದರೆ ಬಲ್ಲ ನಿಶ್ಯೇಷವಾಗುವ ಈತನೂ ಸಹಾ ನಿಮ್ಮೊಂದಿಗೆ ಇರಬೇಕು, ಇರುವು ರಹಸ್ಯ, ಒಗಟಿನಂತೆ ಪ್ರವಾದಿಯೂ ಇವನೇ, ಧರ್ಮಪರಿಪಾಲಕ ಭಕ್ತನೂ ತಾನೇ, ಪ್ರಚಾರಕರಿಲ್ಲ,ಹಿಂಬಾಲಕ ತಾನೊಬ್ಬಮಾತ್ರ ಯಾರರನ್ನೂ ತಲುಪಲಾರದ ಸಂತ, ಸಮಾಧಿಯಲಿ ಏಕಾಂತ, ಮಹಾ ಭ್ರಾಂತ ತನ್ನೊಂದಿಗೆ ತಾನು, ತನ್ನದೇ ನಿಶ್ಯಭ್ದ ಸಿದ್ಧಾಂತ ಬೆರಗಾಗಿ, ನೋಡಿ ಚಕಿತಗೊಳ್ಳುವ ಮಗುವಿನ ರಾದ್ಧಾಂತ ...
ಗಾಂಧಿಬಜಾರ್. ನಾಲ್ಕು ದಶಕಗಳ ದಿನನಿತ್ಯ ಆತ್ಮೀಯ ಒಡನಾಟ ಕದಲಿಲ್ಲ ಇಲ್ಲಿಂದ ವಲಸೆ ಬಂದ ದಿನದಿಂದ,  ಆವಾಸ ದಾನಕ್ಕೆ  ತೀರಿಸಲಾಗದ ಋಣದಹೊರೆ ಹೊತ್ತು ಮುಲಾಜಿಗೆ ಇರಬೇಕು, ಬಿಡಲಾರದ ಈ ಅಪರೂಪದ ಸಂಭಂದ  ಈ ಗಾಂಧಿಬಜಾರ್ ರಸ್ತೆಯ ಜೊತೆಯ ಅನುಭಂದ,  ಗಾಂಭೀರ್ಯದ ಈದಾರಿ ಕಾಯ್ಕುಕೊಂಡಿದೆ ವ್ಯವಹಾರಿಕ ದೂರ ತನ್ನವನಾಗಿ ಮಾಡಿಕೊಳ್ಳದೆ ಇಂದಿಗೂ,  ಭೂರಿ ಬೋಜನ ಬಡಿಸದಿದ್ದರೂ  ಖಾಲಿಹೊಟ್ಟೆಗೆ ಎಂದೂ ಹಾಡಿಲ್ಲ ಒಂದು ಲಾಲಿ  ತನ್ನರಸ್ತೆಯ ಸಾಮಾನ್ಯ ಪಂಕ್ತಿಯಲ್ಲೇ ಇಡ್ಲಿಕೊಟ್ಟು ತಲೆ ತಟ್ಟಿ ಜೋಗುಳದಲ್ಲಿ, ಬಸವನಗುಡಿ ಬಂಡೆಗಳ ಮೇಲೆ ಕನಸು ಕೆತ್ತಿಸಿದೆ. ಅನ್ನವೇ ಕನಸಾದ ಕಾಲ, ಚಿತ್ರಾನ್ನದಲೇ ತಣ್ಣಗಾಗುತ್ತಿದ್ದ ಹಸಿವು ಕೃತಜ್ಞನಾಗಿರಬೇಕೇ ಹೊರತು, ಸಮಾನರಾಗುವುದಿಲ್ಲ ಧೀರ್ಘ ಸ್ನೇಹದ ಸಲಿಗೆಗೆ ಅವಕಾಶವಿಲ್ಲ.  ಯಾರಿಗೂ, ಎಂದೂ, ತನ್ನ ಪರಕೀಯತೆ ಬಿಟ್ಟುಕೊಟ್ಟಿಲ್ಲ.  ದೂರ ತಳ್ಳುವುದಿಲ್ಲ, ಹತ್ತಿರ ಸೇರಿಸುವುದಿಲ್ಲ ಯಾರನ್ನೂ ಸಹಾ, ಆಗರ್ಭ ಶ್ರೀಮಂತರಹಾಗೆ,  ಗೌರವಾನ್ವಿತ ಗಾಂಭೀರ್ಯದ ಅಂತರ ಅನಿವಾರ್ಯ.  ಇರಬಹುದು ಇದರ ಘನತೆ  ಅನ್ಯತೆಯ ಧನ್ಯತೆಯಲ್ಲಿ   ಬರುವವರೆಲ್ಲಾ ಇಲ್ಲೇ ನಿಲ್ಲುವರಲ್ಲ ಎಂಬ ಕಟುಸತ್ಯ  ಅರಿವಾಗಿ ಇಳಿದಿದೆ ಆಳದಲಿ ಅನುಭವದ ಪಾಠ, ತನ್ನಿರುವಿನಿಂದಲೇ ಹರಸಿ, ಆಶೀರ್ವದಿಸುವ ಸಂತ, ಮಠಾದೀಶ  ಸಾಮಾನ್ಯ ಯಾತ್ರ...
ಪಾಚಿಕಟ್ಟಿದ ಮಿದುಳು. ನಿಂತ ನೀರಲ್ಲಿ, ಕೊರೆದ ಬಾವಿಗಳಲ್ಲಿ, ಕಟ್ಟಿದ ಅಣೆಕಟ್ಟು ಕೆರೆ, ಕೋಡಿಗಳಲ್ಲಿ ಆವಿರ್ಭವಿಸಿದ ರೂಪ, ಪಡೆವ ಜೊಂಡು ರಚನೆ ಹಳ್ಳಗಳ ಹರಿವಲ್ಲಿ, ಕೊಳ್ಳಗಳ ಕೊಲ್ಲಿಯಲಿ ಭೋರ್ಗರೆದು ಧುಮುಕುವ ಜಲಪಾತ ಜಾರುಬಂಡೆಗೆ ಅಂಟಿ ಪ್ರವಾಹಕ್ಕೆ ಕೊಚ್ಚಿಹೋಗದೇ ತಳಕಚ್ಚಿ ಗಟ್ಟಿ ಹಸಿರು ರೇಶಿಮೆಯ ನಯದ ನಾರಿನ ಕುಚ್ಚು ಆವಾಸಕ್ಕೆ ಬಿಗಿ ಹೆಣಿಕೆಯೆ ಕುಣಿಕೆಯಲಿ ಕೆಚ್ಚಿನ ಸ್ಥಿತಪ್ರಜ್ಞ ಪಾಚಿಯೇ. ಚಿರಂಜೀವಿ ನೀನು, ಗಗನಚುಂಬಿ ಕಟ್ಟಡಗಳ ಎತ್ತರಕೆ ಎದೆಗುಂದದೆ ಗೋಡೆಗಳಿಗೆ ಹಸಿರು ಬಣ್ಣಬಳೆಯುವ ಕಲಾವಿದ ಕೂಲಿ, ಅಪಾಯಲೆಕ್ಕಿಸದ ಗಂಡೆದೆಯ ಗುಂಡಿಗೆ ಮಳೆಗಾಲದ ಅಗೋಚರ ನಿರ್ಲಿಪ್ತ ಗುತ್ತಿಗೆದಾರ ಪಾರುಪತ್ಯದಲಿ, ಹುಲುಸು ಹಾಸಿನ ಹಸಿರ ಹೊದಿಸುವ ಮಳೆಗಾಗಿ ಕಾಯುವ ಹಾವಸೆಯೇ ಹಸಿರುಲೋಕದ ಶೈವಲ ಧೃವತಾರೆ ನೀನು ಆದರೂ ನೀನಿಂದು ಆವಾಸವಂಚಿತ ಆಗಂತುಕ ಪಾರದರ್ಶಕ ಗಾಜುಗಳ ತಡಿಕೆಯ ಕೃತಕ ಗೋಡೆ ನಯವಾದ ನಾಗರೀಕತೆಯಲ್ಲಿ ಬುಡ ವಿಲ್ಲದೆ ಅಭದ್ರ. ಕಾಡುಬಂಡೆಯ ಚರ್ಮ ಕಪ್ಪಿಟ್ಟ ಹಸಿರು, ಒರಟು, ಹೊರಪದರವೇ ತಬ್ಬಿ, ಬಿಗಿಯಾಲಿಂಗನದಲಿ ತನ್ನನ್ನೇ ಮರೆತ ಶಿಲಾಕಲೆಗಳ ಹೆಕ್ಕಳ ದಲ್ಲೇ ಲೀನ, ಬಿದ್ದು,ಕೊಳೆತು ಕೊರಡು ದಿಮ್ಮಿಗಳ ಆಶ್ರಯ ಪಡೆದು, ಕೀಟ, ಕ್ರಿಮಿಗಳಿಗಾವಾಸವಾಗಿ, ಯಾರ ಹಂಗಿಲ್ಲದೆ ಮಳೆಗಾಲದಲಿ ಬಂದು, ಬಿಸಿಲಗೆ ಕಾಲುಕಿತ್ತುವ ಕಲ್ಲು ಹೂ ಶಿಲಾವಲ್ಕಗಳೇ, ಧಿಡಿರನೇ ಅವತರಿಸುವ ಗಂಧರ್ವರ ಜೋಡಿ ನೀವು ಜಲಧಾರೆಯ ವಯ್ಯಾರ ನರ್ತನದಲಿ, ಬಳುಕಿ ...