ಪಾಚಿಕಟ್ಟಿದ ಮಿದುಳು.
ನಿಂತ ನೀರಲ್ಲಿ, ಕೊರೆದ ಬಾವಿಗಳಲ್ಲಿ,
ಕಟ್ಟಿದ ಅಣೆಕಟ್ಟು ಕೆರೆ, ಕೋಡಿಗಳಲ್ಲಿ
ಆವಿರ್ಭವಿಸಿದ ರೂಪ, ಪಡೆವ ಜೊಂಡು ರಚನೆ
ಹಳ್ಳಗಳ ಹರಿವಲ್ಲಿ, ಕೊಳ್ಳಗಳ ಕೊಲ್ಲಿಯಲಿ
ಭೋರ್ಗರೆದು ಧುಮುಕುವ ಜಲಪಾತ ಜಾರುಬಂಡೆಗೆ ಅಂಟಿ
ಪ್ರವಾಹಕ್ಕೆ ಕೊಚ್ಚಿಹೋಗದೇ ತಳಕಚ್ಚಿ ಗಟ್ಟಿ ಹಸಿರು
ರೇಶಿಮೆಯ ನಯದ ನಾರಿನ ಕುಚ್ಚು
ಆವಾಸಕ್ಕೆ ಬಿಗಿ ಹೆಣಿಕೆಯೆ ಕುಣಿಕೆಯಲಿ ಕೆಚ್ಚಿನ ಸ್ಥಿತಪ್ರಜ್ಞ
ಪಾಚಿಯೇ. ಚಿರಂಜೀವಿ ನೀನು,
ಕಟ್ಟಿದ ಅಣೆಕಟ್ಟು ಕೆರೆ, ಕೋಡಿಗಳಲ್ಲಿ
ಆವಿರ್ಭವಿಸಿದ ರೂಪ, ಪಡೆವ ಜೊಂಡು ರಚನೆ
ಹಳ್ಳಗಳ ಹರಿವಲ್ಲಿ, ಕೊಳ್ಳಗಳ ಕೊಲ್ಲಿಯಲಿ
ಭೋರ್ಗರೆದು ಧುಮುಕುವ ಜಲಪಾತ ಜಾರುಬಂಡೆಗೆ ಅಂಟಿ
ಪ್ರವಾಹಕ್ಕೆ ಕೊಚ್ಚಿಹೋಗದೇ ತಳಕಚ್ಚಿ ಗಟ್ಟಿ ಹಸಿರು
ರೇಶಿಮೆಯ ನಯದ ನಾರಿನ ಕುಚ್ಚು
ಆವಾಸಕ್ಕೆ ಬಿಗಿ ಹೆಣಿಕೆಯೆ ಕುಣಿಕೆಯಲಿ ಕೆಚ್ಚಿನ ಸ್ಥಿತಪ್ರಜ್ಞ
ಪಾಚಿಯೇ. ಚಿರಂಜೀವಿ ನೀನು,
ಗಗನಚುಂಬಿ ಕಟ್ಟಡಗಳ ಎತ್ತರಕೆ ಎದೆಗುಂದದೆ
ಗೋಡೆಗಳಿಗೆ ಹಸಿರು ಬಣ್ಣಬಳೆಯುವ
ಕಲಾವಿದ ಕೂಲಿ, ಅಪಾಯಲೆಕ್ಕಿಸದ ಗಂಡೆದೆಯ ಗುಂಡಿಗೆ
ಮಳೆಗಾಲದ ಅಗೋಚರ ನಿರ್ಲಿಪ್ತ ಗುತ್ತಿಗೆದಾರ
ಪಾರುಪತ್ಯದಲಿ, ಹುಲುಸು ಹಾಸಿನ ಹಸಿರ ಹೊದಿಸುವ
ಮಳೆಗಾಗಿ ಕಾಯುವ ಹಾವಸೆಯೇ
ಹಸಿರುಲೋಕದ ಶೈವಲ ಧೃವತಾರೆ ನೀನು
ಆದರೂ ನೀನಿಂದು ಆವಾಸವಂಚಿತ ಆಗಂತುಕ
ಪಾರದರ್ಶಕ ಗಾಜುಗಳ ತಡಿಕೆಯ ಕೃತಕ ಗೋಡೆ
ನಯವಾದ ನಾಗರೀಕತೆಯಲ್ಲಿ ಬುಡ ವಿಲ್ಲದೆ ಅಭದ್ರ.
ಗೋಡೆಗಳಿಗೆ ಹಸಿರು ಬಣ್ಣಬಳೆಯುವ
ಕಲಾವಿದ ಕೂಲಿ, ಅಪಾಯಲೆಕ್ಕಿಸದ ಗಂಡೆದೆಯ ಗುಂಡಿಗೆ
ಮಳೆಗಾಲದ ಅಗೋಚರ ನಿರ್ಲಿಪ್ತ ಗುತ್ತಿಗೆದಾರ
ಪಾರುಪತ್ಯದಲಿ, ಹುಲುಸು ಹಾಸಿನ ಹಸಿರ ಹೊದಿಸುವ
ಮಳೆಗಾಗಿ ಕಾಯುವ ಹಾವಸೆಯೇ
ಹಸಿರುಲೋಕದ ಶೈವಲ ಧೃವತಾರೆ ನೀನು
ಆದರೂ ನೀನಿಂದು ಆವಾಸವಂಚಿತ ಆಗಂತುಕ
ಪಾರದರ್ಶಕ ಗಾಜುಗಳ ತಡಿಕೆಯ ಕೃತಕ ಗೋಡೆ
ನಯವಾದ ನಾಗರೀಕತೆಯಲ್ಲಿ ಬುಡ ವಿಲ್ಲದೆ ಅಭದ್ರ.
ಕಾಡುಬಂಡೆಯ ಚರ್ಮ ಕಪ್ಪಿಟ್ಟ ಹಸಿರು, ಒರಟು,
ಹೊರಪದರವೇ ತಬ್ಬಿ, ಬಿಗಿಯಾಲಿಂಗನದಲಿ
ತನ್ನನ್ನೇ ಮರೆತ ಶಿಲಾಕಲೆಗಳ ಹೆಕ್ಕಳ ದಲ್ಲೇ ಲೀನ,
ಬಿದ್ದು,ಕೊಳೆತು ಕೊರಡು ದಿಮ್ಮಿಗಳ ಆಶ್ರಯ ಪಡೆದು,
ಕೀಟ, ಕ್ರಿಮಿಗಳಿಗಾವಾಸವಾಗಿ, ಯಾರ ಹಂಗಿಲ್ಲದೆ
ಮಳೆಗಾಲದಲಿ ಬಂದು, ಬಿಸಿಲಗೆ ಕಾಲುಕಿತ್ತುವ
ಕಲ್ಲು ಹೂ ಶಿಲಾವಲ್ಕಗಳೇ,
ಧಿಡಿರನೇ ಅವತರಿಸುವ ಗಂಧರ್ವರ ಜೋಡಿ ನೀವು
ಹೊರಪದರವೇ ತಬ್ಬಿ, ಬಿಗಿಯಾಲಿಂಗನದಲಿ
ತನ್ನನ್ನೇ ಮರೆತ ಶಿಲಾಕಲೆಗಳ ಹೆಕ್ಕಳ ದಲ್ಲೇ ಲೀನ,
ಬಿದ್ದು,ಕೊಳೆತು ಕೊರಡು ದಿಮ್ಮಿಗಳ ಆಶ್ರಯ ಪಡೆದು,
ಕೀಟ, ಕ್ರಿಮಿಗಳಿಗಾವಾಸವಾಗಿ, ಯಾರ ಹಂಗಿಲ್ಲದೆ
ಮಳೆಗಾಲದಲಿ ಬಂದು, ಬಿಸಿಲಗೆ ಕಾಲುಕಿತ್ತುವ
ಕಲ್ಲು ಹೂ ಶಿಲಾವಲ್ಕಗಳೇ,
ಧಿಡಿರನೇ ಅವತರಿಸುವ ಗಂಧರ್ವರ ಜೋಡಿ ನೀವು
ಜಲಧಾರೆಯ ವಯ್ಯಾರ ನರ್ತನದಲಿ,
ಬಳುಕಿ ಓಡುವ, ಉನ್ಮಾದಕ ಚಕ್ರವ್ಯೂಹ ಸುಳಿ ಅಂಚಲ್ಲಿ
ಬಂಡೆಯಲೇ ಬೇರು ಬಿಟ್ಟು, ಹೊಯ್ದಾಡುವ ನಿಶ್ಚಲ
ಕಾಡ ಕಾರ್ಗಲ್ಲುಗಳ ಕೊರಕಲುಗಳಲ್ಲಿ
ಬೀಳು, ಏಳುವ ತೊರೆಗಳ ಬದಿಗೆ ಗಡಿಯಾಗಿ ನಿಂತ
ಹಸಿರು ಗುಚ್ಛದ ಪೊದರುಗಳೇ
ಕಳಚಿಬೀಳದ ಸರಳ ನಿಷ್ಕಾಮ ಜರಿ ಪೊದೆಗಳೇ,
ನಿಷ್ಕಪಟ ಸಂತರು ನೀವು. ಪಾಚಿಕಟ್ಟಿದ ಮಿದುಳು
ಹರಿತ್ತಿನ ಹರಿವಿಗೆ ವಿಷ ಬೆರೆಸಿ
ಮೆರೆಯುವ, ಹೃದಯವಂತರು ನಾವು
ಬಳುಕಿ ಓಡುವ, ಉನ್ಮಾದಕ ಚಕ್ರವ್ಯೂಹ ಸುಳಿ ಅಂಚಲ್ಲಿ
ಬಂಡೆಯಲೇ ಬೇರು ಬಿಟ್ಟು, ಹೊಯ್ದಾಡುವ ನಿಶ್ಚಲ
ಕಾಡ ಕಾರ್ಗಲ್ಲುಗಳ ಕೊರಕಲುಗಳಲ್ಲಿ
ಬೀಳು, ಏಳುವ ತೊರೆಗಳ ಬದಿಗೆ ಗಡಿಯಾಗಿ ನಿಂತ
ಹಸಿರು ಗುಚ್ಛದ ಪೊದರುಗಳೇ
ಕಳಚಿಬೀಳದ ಸರಳ ನಿಷ್ಕಾಮ ಜರಿ ಪೊದೆಗಳೇ,
ನಿಷ್ಕಪಟ ಸಂತರು ನೀವು. ಪಾಚಿಕಟ್ಟಿದ ಮಿದುಳು
ಹರಿತ್ತಿನ ಹರಿವಿಗೆ ವಿಷ ಬೆರೆಸಿ
ಮೆರೆಯುವ, ಹೃದಯವಂತರು ನಾವು
ಕ್ಷಮಿಸಿ, ಪಾಚಿ ಭಾಂದವರೆ, ಜೀವಪೋಷಕರೆ!
ಗತಕಾಲದ ಪಾರಂಪರಿಕ, ನಿಮ್ಮದೇ ಹೋರಾಟ
ಅದರಲ್ಲೀಗ ಉಳಿಯುವ ನಮ್ಮದೇ ಉಸಿರಾಟ,
ನಿಮಗೆಲ್ಲಾ ಪರದಾಟ, ಅರ್ಥವಾಗದ ಪಾಠ.
ಕಾವ್ಯಾಂಜಲಿಯಲಿ ಕಾಣಿಕೆ ಮಾತ್ರ ನಿಮಗೆ
ಮೌನವೇ ಸಮ್ಮತಿ, ತಟಸ್ಥ ಸಮರ್ಥನೆ ನಿಮ್ಮಿಂದ,
ಭಾವಾಕ್ಷರ ಮಾಲೆ ಸ್ವೀಕರಿಸಿ ಕೀರ್ತನೆ
ನನ್ನ ತಿಳುವಳಿಕೆಯಂತೆ ಅಭಿವ್ಯಕ್ತಿಗೆ ಅಪ್ಪಣೆ ಅನಗತ್ಯ
ಅರಣ್ಯ ಇಲಾಖೆಯ ಅನುಮತಿಗೆ ತಕರಾರು ಇರಲಿಕ್ಕಿಲ್ಲ
(ಸಾಹಿತ್ಯ ಇಲಾಖೆ ಪರವಾನಿಗೆ ನಿರೀಕ್ಷಿಸಬಹುದು)
ಹಸಿರ ಪ್ರಿಯರಿಗಾಗಿ, ಸಂಭವನೀಯ ಟೀಕೆ,
ಖಂಡನೆ ಎದುರಿಸಲು ನಾನು ಸದಾ ಸಿದ್ಧ.
ಗತಕಾಲದ ಪಾರಂಪರಿಕ, ನಿಮ್ಮದೇ ಹೋರಾಟ
ಅದರಲ್ಲೀಗ ಉಳಿಯುವ ನಮ್ಮದೇ ಉಸಿರಾಟ,
ನಿಮಗೆಲ್ಲಾ ಪರದಾಟ, ಅರ್ಥವಾಗದ ಪಾಠ.
ಕಾವ್ಯಾಂಜಲಿಯಲಿ ಕಾಣಿಕೆ ಮಾತ್ರ ನಿಮಗೆ
ಮೌನವೇ ಸಮ್ಮತಿ, ತಟಸ್ಥ ಸಮರ್ಥನೆ ನಿಮ್ಮಿಂದ,
ಭಾವಾಕ್ಷರ ಮಾಲೆ ಸ್ವೀಕರಿಸಿ ಕೀರ್ತನೆ
ನನ್ನ ತಿಳುವಳಿಕೆಯಂತೆ ಅಭಿವ್ಯಕ್ತಿಗೆ ಅಪ್ಪಣೆ ಅನಗತ್ಯ
ಅರಣ್ಯ ಇಲಾಖೆಯ ಅನುಮತಿಗೆ ತಕರಾರು ಇರಲಿಕ್ಕಿಲ್ಲ
(ಸಾಹಿತ್ಯ ಇಲಾಖೆ ಪರವಾನಿಗೆ ನಿರೀಕ್ಷಿಸಬಹುದು)
ಹಸಿರ ಪ್ರಿಯರಿಗಾಗಿ, ಸಂಭವನೀಯ ಟೀಕೆ,
ಖಂಡನೆ ಎದುರಿಸಲು ನಾನು ಸದಾ ಸಿದ್ಧ.
ಉಸಿರ ಬಡಿಸುವ ಪಾಚಿ, ಶೈವಲಗಳೇ,
ಬಂದಲ್ಲಿಗೇ ಎಲ್ಲರನು ಕೊಳೆಸಿ, ಮರಳಿಸಿ
ಭೂ ವಲಯದಲಿ ಸ್ಥಿರಗೊಳಿಸಿ, ಕಲ್ಲಕರಗಿಸಿ
ಮಣ್ಣ ಕರುಣಿಸುವ ಸೂಕ್ಷ ಶಿಲೀಂದ್ರ, ಶಿಲಾವಲ್ಕಗಳೇ
ಈ ಗ್ರಹದ ಮಣ್ಣವಾಸನೆಯ ಮೇಲಾಣೆ,
ನಾನು ನಿಮಗೆಲ್ಲ ಎಂದೆಂದಿಗೂ ಆಭಾರಿ....
ಬಂದಲ್ಲಿಗೇ ಎಲ್ಲರನು ಕೊಳೆಸಿ, ಮರಳಿಸಿ
ಭೂ ವಲಯದಲಿ ಸ್ಥಿರಗೊಳಿಸಿ, ಕಲ್ಲಕರಗಿಸಿ
ಮಣ್ಣ ಕರುಣಿಸುವ ಸೂಕ್ಷ ಶಿಲೀಂದ್ರ, ಶಿಲಾವಲ್ಕಗಳೇ
ಈ ಗ್ರಹದ ಮಣ್ಣವಾಸನೆಯ ಮೇಲಾಣೆ,
ನಾನು ನಿಮಗೆಲ್ಲ ಎಂದೆಂದಿಗೂ ಆಭಾರಿ....
Comments