ಕೊರಗಜ್ಜ, ದೈವ, ಪರಿಸರ ಇತ್ಯಾದಿ...
ಕೊರಗಜ್ಜ, ದೈವ, ಪರಿಸರ ಇತ್ಯಾದಿ... ಕೊರಗಜ್ಜ, ದೈವ, ಪರಿಸರ ಇತ್ಯಾದಿ... ಮೊದಲು ಕೇಳಿರಲಿಲ್ಲ ಈ ದೈವದ ಹೆಸರು, ಹರಕೆ ಹೊರುವ ಮಂದಿ ಕಂಡಿರಲಿಲ್ಲ ಇಲ್ಲಿ....ಸುಮಾರು ಸಮಯದ ಮುಂಚೆ ಅಂದರೆ ನಾಲ್ಕು ದಶಕಗಳಹಿಂದೆ ನಾನಿಲ್ಲಿಗೆ ಬಂದಾಗ. ಈಗಿನ ಮನೆ,ಮನೆಯ ಮಾತಾಗಿರುವಈ ತಾತನ ಬಗ್ಗೆ ಕೇಳಿರಲಿಲ್ಲ.ಅತಿ ಜನಪ್ರಿಯ ಪ್ರೀತಿಯ ದೈವಶಕ್ತಿ ಆಗಿರಲಿಲ್ಲ...ಘಟ್ಟದ ತಳದ ಕಡಲ ಗಡಿಯ ಒಳನಾಡಿನಲ್ಲಿ. ಕಡಲತಡಿಯ ಸಾಮಾನ್ಯರಿಗೆ ಅರಾಧ್ಯ ಪೂಜ್ಯ ಇಂದು. ದೇವರಷ್ಟೇ ಭಕ್ತಿ,ಜನಪ್ರಿಯತೆ ಹೊಂದಿರುವ ದೈವಾಂಶ ಇರುವಿಕೆ ಈ ಪ್ರದೇಶದಲ್ಲಿ ಈಗ...ಎಲ್ಲಾ ಬಸ್, ಆಟೋಗಳ ಹಿಂದೆ....ಸ್ವಾಮಿ ಕೊರಗಜ್ಜ ಅನ್ನುವ ಸಾಲು ತೀರಾ ಸಾಮಾನ್ಯ ವಾಗಿದೆ. ಈ ಅಜ್ಜ ಆಗ ಎಲ್ಲಿದ್ದ. ಈಗ ಬಂದ ಎಲ್ಲಿಂದ?, ಇದ್ದಕ್ಕಿದ್ದಹಾಗೆ ಎಲ್ಲರಬಾಯಲ್ಲೂ ನೆಲಸಿ, ನೆಚ್ಚಿನ ಕಿಚ್ಚನ್ನು ಹಚ್ಚಿರುವ ತಪಸ್ವಿಯಾರು? ಆಶ್ಚರ್ಯ ಪಡಬೇಕಿಲ್ಲ...ನಿಖರಾವಾಗಿ ಈ ದೈವದ ಇತಿಹಾಸ ಗೊತ್ತಿಲ್ಲ ನನಗೆ. ಪ್ರಯತ್ನಿಸಿದೆ. ಒಂದು ಮೂಲದ ಪ್ರಕಾರ ಈ ಕೊರಗಜ್ಜ ರೈತರ ಹಟ್ಟಿಯಲ್ಲಿನ ಜಾನುವಾರುಗಳ ರಕ್ಷಣೆ ಮಾಡುವ ಆಪದ್ಭಾಂದವ ಎಂಬ ಜಾನಪದ ಕಥೆಯಲ್ಲಿ ಬರುವ ದೈವಾಂಶ. ಹೀಗಾಗಿ ಹಸುಗಳಿಗೆ, ಎಮ್ಮೆ ಅಥವ ಎತ್ತುಗಳಿಗೆ, ಕೋಳಿ ಇತ್ಯಾದಿ ಸಾಕುಪ್ರಾಣಿಗಳಿಗೆ ಯಾವುದೇ ರೋಗಬಂದರೂ ಕೊರಗಜ್ಜನಿಗೆ ಮೊರೆಹೋಗುತ್ತಾರೆ. ಕೆಲವರು ಭೂತಾರಾಧನೆಯ ಕಲ್ಪನೆಯ ರೂಢಿಯಲ್ಲಿತ್ತೇನೋ ಗೊತ್ತಿಲ್ಲ. ಗ್ರಾಮೀಣ ನಂಬಿಕೆ, ಸಂಪ್ರದಾಯ, ಪದ್ದತಿ ಆಚರಣೆ ಕೊರಗಜ್ಜನ ...