ಪ್ರವಾಹ. ನೆಲ ನೆನೆಯುವ ತುಂತುರು, ಬೆಳಕಿಗೆ ಹಿಡಿದಿದೆ ಮಂಪರು, ಬಿಸಿಲಿಗೆ ಬೆಂಡಾಗುವ ಬಯಲು,ಬಿರುಕು ಬಸಿರು ಯಾವುದೋ,ಎಲ್ಲಿಯದೋ ಊಹೆಗೆ ನಿಲುಕದ ಒಂದು ಕಾಲ..... ಆದರೆ ಅಕಾಲ... ಕಂಡಿಲ್ಲ ಕೇಳಿಲ್ಲದ ಋತು, ನಿರಂತರ ನಿಸರ್ಗ ಜಾಲ, ಸಕಾಲ ಮೌನ ಕವಾಯತು ನಡೆಸಿರುವ ಮೋಡದ ದಂಡು ನಡೆಸಿದೆ ಪಥಸಂಚಲನ ಆಕಾಶದಲ್ಲಿ ಅನಿರೀಕ್ಷಿತ ಧಾಳಿ ಸಂದೇಶ ಹರಡಿತು ಸಾವಕಾಶದಲ್ಲಿ, ಅಲ್ಲೇ ಆ ಆಕಾಶದಲ್ಲಿ, ಬೆದರಿದ ಮರಗಿಡಗಳು ಹೊಯ್ದಾಡಿವೆ ಹೂಂಕರಿಸಿ, ಮುದುರಿ ತಬ್ಬಿಬ್ಬು ಮಂಗಗಳು, ನೆಗೆಯುತಿವೆ ಪೈಪೋಟಿಯಲ್ಲಿ ತಾಯಿತಬ್ಬಿದ ಮರಿ ಕೋತಿ ನಿಶ್ಚಿಂತ...... ತನ್ನಮ್ಮನ ಅಪ್ಪುಗೆಯಲ್ಲಿ, ಕಾಡೆಲ್ಲಾ ಪ್ರಕ್ಷುಬ್ದ, ಮಾಯವಾದವು ಹಕ್ಕಿ ಗೂಡಿನಲ್ಲಿ, ನಿರ್ಭಯ ಮೌನ ರಾಗ ಸೆಟೆದ ಬಾಲಗಳಲ್ಲಿ, ಹಾವು ಹಾರಿವೆ ಹೊಲಗಳಲ್ಲಿ,ಕಾವು ತಗ್ಗಿತು ಬಿಲಗಳಲ್ಲಿ, ಮಂಡೂಕಾಲಾಪನೆ ಕೆರೆಗಂಟಿದ ಕಳೆಗಳಲ್ಲಿ ರಣಕಹಳೆ ಗುಡುಗಿದೆ ಮಿಂಚಿನ ಬಲೆಯಲ್ಲಿ ಪುಟಿದೇಳುವ ಸಿಡಿಗುಂಡಿನ ಹನಿಗಳು ಧೂಳೆಬ್ಬಿಸಿ ಇಳಿದಾಗ, ತುಂಬಿ ತುಳುಕಿತು ಕೊರಕಲು ಕಣಿವೆ, ತೋಯ್ದ ಬಣಿವೆ. ಮಳೆಯಾಯಿತು ಗಾಳಿ, ಸುಳಿಯಾಯಿತು ರಸ್ತೆ. ಹಳ್ಳವಾಯಿತು ...
Posts
ಬೆಳಗು....
- Get link
- X
- Other Apps
ಬೆಳಗು.... ೧. ಕನಸ ಘನಿಸುವ ಆಗಸಕೆ ಮೇಘದ ಮೆರಗು, ಈ ಸುಂದರೆ ಬೆಳಗು..... ೨. ಅವಿತುಕೊಂಡ ಆಗಸಕೆ ಮುನಿಸಿಕೊಂಡ ಬೆಳಗು... ೩. ಮಾಮೂಲು ಸಂದೇಶ, ಏನಿಲ್ಲ ವಿಶೇಷ. ಘಾಸಿಗೊಂಡ ಗಗನ ಭೂಪ ಸವರಿಕೊಂಡಿದ್ದಾನೆ ಮೋಡದ ಮುಲಾಮಿನ ಲೇಪ... ಪಾಪ.. ೪. ಮುಸುಕಿದ ಮೋಡದ ಮುಂಜಾವು, ದೇಹಕೆ ಬೇಕು ಬಿಸಿಕಾಫಿಯ ಕಾವು, ಬೇಡ..ಬೇಡ ಯಾವ ಜಂಜಾಟದ ನೋವು, ಬಿಲದಲ್ಲಿ ಬೆಚ್ಚಗೆ ಮಲಗಿರುವ ಹಾವು...
ಹುಸ್ಸೇನ್ ಮತ್ತು ಕುದುರೆ.
- Get link
- X
- Other Apps
ಹುಸ್ಸೇನ್ ಮತ್ತು ಕುದುರೆ ಮುಂದಿರುವ ಪುಟ್ಟ ವನ ಹಿಂದೆ ಚಿತ್ರ ಕಲಾ ಭವನ, ಚಿತ್ರ ವಿಚಿತ್ರ ಪ್ರವೇಶ ದ್ವಾರ, ಸ್ವಾಗತ ಬಯಸುವ ಹಿತಬೆಳಕಿನ ಮೌನ ಪುಷ್ಪಾಹಾರ. ವಿಶಾಲ ಹಜಾರ, ಪಡಸಾಲೆಯ ಆಚೆ ಪ್ರತ್ಯಕ್ಷವಾಗುವ, ಅಪರೂಪದ ಅಲಂಕಾರ, ನೆಲ, ವಿಗ್ರಹ, ಗೋಡೆ, ದೀಪ ಅಸಹಜ, ಆದರೂ ಅಸಮಾನ್ಯ ಅಯಸ್ಕಾಂತ, ಅಪರೂಪಕ್ಕೆ ಬರುತ್ತಾರೆ ಅಥಿತಿ, ಜೊತೆಗೆ ತಂದೇ ತರುತ್ತಾರೆ ಕಿತಾಪತಿ. ಪಾದರಕ್ಷೆಯ ಮಹಾ ಬ್ರಾಂತಿ. ಬಳಕುವ ಬಿಳಿ ತೊಗಲು ಕಾಲು, ಬೆತ್ತಲೆ ಅಂಗಾಲು, ತಬ್ಬಿದ ಕನ್ನಡಿ ಗ್ರಾನೈಟ್ ಹಾಸು ವಿಕಾರ ಮೌನ, ಸ್ತಬ್ದಚಿತ್ರಗಳಂತೆ ಕಾಣುವ ವೀಕ್ಷಕರು, ಮೂಕ ವಿಮರ್ಶಕರು , ಚಾವಣಿಯಲಿ ಹುದುಗಿರುವ ಹೊನಲು ದೀಪಗಳು, ಪ್ರತಿಧ್ವನಿಸುವ ನಿಶ್ಯಬ್ಧ. ಅಸಾಹಾಯಕ ವಿಗ್ರಹಗಳು, ಬಿಟ್ಟಿವೆ ಪಿಳಿ,ಪಿಳಿ ಕಣ್ಣು, ದಿಟ್ಟಿಸುತ್ತವೆ ವಿಶಾಲ ಗೋಡೆಯನ್ನು, ಏನನ್ನೋ ಅನುಭವಿಸಲು . ವರ್ಣಮಯ ಕಲಾ ಕೃತಿಯ ಬೆಚ್ಚಗಿನ ಗೋಡೆಯ ಆಲಿಂಗನ, ಕೊಬ್ಬಿದ ಕುದುರೆಗಳ ದಷ್ಟ ಪುಷ್ಟ, ಪೃಷ್ಟ, ಬೋಳು ಬೆಟ್ಟಗಳ ನಡುವೆ ಜಡೆಯ ಬಾಲ ಬಲು ಸ್ಪಷ್ಟ ಕಂದು, ಬೂದು, ಕಪ್ಪಿನೋಕುಳಿ ಬಣ್ಣ, ಕಾಲುಗಳು ಕೊಂಚ ಸಣ್ಣ, ಹಿನ್ನೋಟದ ತಲೆ, ನಿಮಿರಿದ ಕಿವಿ, ವಾವ್ ಅದ್ಭುತ ಕವಿ!! ಎರ್ರಾ ಬೇರ್ರೀ ಬಾರಿಸಿದ ಕುಂಚ. ಸೃಷ್ಟಿಸಿದೆ ಅದ್ಭತ ಪ್ರಪಂಚ ಹೆದರಿ ಮುದುಡಿದ ಹಾಳೆಯಮೇಲೆ ಓಡುತ್ತವೆ ನಾಗಾಲೋಟ, ಬಿಟ್ಟುಹೊಗುತ್ತವೆ, ಭಾರವಾದ ಹೆಜ್ಜೆಯನ್ನು, ಬೆಳ್ಳಿ ಗಡ್ಡದ...
ಕಾಗೆ....
- Get link
- X
- Other Apps
ಕಾಗೆ ನಾನು ಶಾ ಲೆ ಗೆ ಎಲ್ಲರಗಿಂತ ಮುಂಚೆ ಎಂಟು ವರೆಗೆ ತಲುಪಿದೆ. ಯಾರು ಬಂದಿರಲಿಲ್ಲ. ಬರುವುದು ಇಲ್ಲ. ಕಾರಣ ಅಕ್ಟೋಬರ್ ರಜೆ, ಇನ್ನು ನಮ್ಮ ಆಫೀಸ್ ನ ಸಹೋದ್ಯೋಗಿಗಳು ಬರುವುದಕ್ಕೆ ಕನಿಷ್ಠ ಇನ್ನೊಂದುಗಂಟೆಯಾದರೂ ಬೇಕು. ಮೇಷ್ಟ್ರುಗಳು ಹಾಗು ಹುಡುಗರು ಬರುವ ಪ್ರಶ್ನೆ ಇಲ್ಲ. ಹಿಂದಿನ ರಾತ್ರಿ ಮಳೆಜೋರಾಗಿ ಬಂದುದರಿಂದ ಚಾವಣಿಯಿಂದ ಇನ್ನು ನೀರು ಹನಿ ಹನಿ ಯಾಗಿ ತೊಟ್ಟಿಕ್ಕುತ್ತಿತ್ತು. ಪಕ್ಕದ ಹಾಲ್ ನಲ್ಲಿ ಮರಿಯಪ್ಪನವರು ತಮ್ಮ ಕಾಲೇಜ್ ಹುಡುಗರಿಗೆ ಕಾಮರ್ಸ್ ಟ್ಯುಶನ್ ಮಾಡುತ್ತಿದ್ದರು. ರೈನ್ ಕೊಟ್ ಬಿಚ್ಚಿ ಕುರ್ಚಿಗೆ ನೇತುಹಾಕಿ ಕುಳಿತು, ನನ್ನ ಪ್ರತಿನಿತ್ಯದ ಅಭ್ಯಾಸದಂತೆ ಸಾಮಾನ್ಯವಾಗಿ ಕಳಿಸುವ ಸ್ನೇಹಿತರಿಗೆಲ್ಲಾಮೆಸೇಜ್ ಕಳಿಸಿ, ಬೇರೇನೂ ಕೆಲಸ ತೋಚದೆ, ಟ್ಯೂಬ್ ಲೈಟ್ ಆನ್ ಮಾಡಿ, ಹತ್ತನೆಯ ತರಗತಿಯ ಜೀವವಿಜ್ಞಾನದ ಪುಸ್ತಕ ತಿರುವಿಹಾಕಲು ಶುರು ಮಾಡಿದೆ. ಯಾವುದು ಹೊಸ ವಿಷಯ ಇಲ್ಲ, ಕ್ಲಾಸ್ ಗೆ ತಯಾರಿ ಮಾಡಿಕೊಳ್ಳುವಷ್ಟು ಅಗತ್ಯವೂ ಇರಲಿಲ್ಲ. ಏನುತೋಚದೆ ಸ್ಟಾಫ್ ರೆಜಿಸ್ಟರ್ ತೆಗೆದು ಸಹಿ ಹಾಕಿದೆ. ಹೊರಗಡೆ ಮೋಡ ಕವಿದ ವಾತಾವರಣ. ಇವೊತ್ತು ಸಹಾ ಮಳೆ ಬರಬಹುದುಎನಿಸಿತು. ಮೂರನೇ ಮಹಡಿಯಿಂದ ಮಬ್ಬಾದ ಎದುರಿಗಿನ ಆಕಾಶ ನೋಡುವುದು ಒಂದು ಅನುಭವ. ಇದ್ದಕ್ಕಿದ್ದ ಹಾಗೆ ತೆರೆದ ಬಾಗಿಲಿನಿಂದ ಕಾಗೆ ಹಾರಿ ಬಂದು ನನ್ನ ತಲೆಯ ಮೇಲಿದ್ದ ಕಿಟಕಿಯ ಮೇಲೆ ಕುಳಿತು ಒಂದು ಪಕ್ಕದಿಂದ ಇನ್ನೊಂದು ಪಕ್ಕಕ್ಕೆ ಹದರಿ ಹ...
Self portrait....
- Get link
- X
- Other Apps
Self Portrait... Some times our mind plays tricks with our deeper consciousness. For no reason at all it goes crazy. Constantly changes its moods as if you have absolutely no hold on it. For example one day suddenly out of the blue it ordered me to make self portrait…the urge was so much, that, there was a smile on my face. Really it is something which had never flashed me so far, even after reading and viewing critically at Michel Angelo, Vincent Van go or Leonardovinchi and other famous artists of recent centuries and their famous portraits…But now all of a sudden after many years I don’t know where this hell of an idea was hiding in my consciousness. But now it is demanding to paint one of myself... Or is it a way of my inner consciousness craving to analyse my own real self? I really don’t know. But certainly it is uncontrollable urge. Strange! I am not an artist by profession. Only it is my hobby to imitate the work which I like. It may be even simple cartoon drawings or...
ಪ್ರತಿ ಕೃತಿ...
- Get link
- X
- Other Apps
ಪ್ರತಿಕೃತಿ ಒಮ್ಮೊಮ್ಮೆ ಹುಚ್ಚು ಮನಸ್ಸು ಏನನ್ನೋ ಮಾಡಲು ಪರಿತಪಿಸುತ್ತದೆ. ಕೆಲಸವಿಲ್ಲದಾಗ ಮನಸ್ಸು ಏನೆಲ್ಲಾ ಮಾಡಲು ಅಜ್ಞಾಪಿಸುತ್ತದೆ. ಅಂತಹದೇ ಒಂದು ದಿನ ಅಂತಾ ಕಾಣುತ್ತೆ. ನನ್ನ ಭಾವ ಚಿತ್ರ ನಾನೇ ಬಿಡಿಸಿಕೊಂಡು ನೋಡಬೇಕೆಂಬ ವಿಚಿತ್ರ ತೆವಲು ಪ್ರಾರಂಭ ವಾಯಿತು. ಹಾಗೆಂದು ನಾನೊಬ್ಬ ವೃತ್ತಿ ಪರ ಕಲಾವಿದನಲ್ಲ. ಹವ್ಯಾಸಕ್ಕಾಗಿ ಯಾವುದಾದರೂ ಪತ್ರಿಕೆಗಳ ಚಿತ್ರ ಗಳನ್ನೂ ಕಾಪಿ ಮಾದಬಲ್ಲಷ್ಟು ರೇಖೆಗಳನ್ನುಎಳೆಯಬಲ್ಲೆ . ಇಷ್ಟ ಬಂದ ರೇಖಾಚಿತ್ರಗಳನ್ನು ಬಿಡಿಸುತ್ತಿದ್ದೆ. ಮತ್ತೆ ಶಾಲೆಯಲ್ಲಿ ಬೋರ್ಡ್ ಮೇಲೆ ನನ್ನ ಕ್ಲಾಸ್ನಲ್ಲಿ ಚಿತ್ರಗಳನ್ನು ಬಿಡಿಸದೆ ವಿಧಿ ಇರಲಿಲ್ಲ. ಹಾಗಾಗಿ ಯಾಕೆ ಪ್ರಯತ್ನ ಪಡಬಾರದು ಅನಿಸಿ ಸಾದಾರಣ ಹಾಳೆಯ ಮೇಲೆ ಪೆನ್ಸಿಲ್ ನಿಂದ ಶುರು ಮಾಡಿದೆ.ನಾನು ಹೇಗಿದ್ದೇನೆ? ನನ್ನ ತಲೆ ಅಥವಾ ಮುಖ ಸೌತೆಕಾಯೋ? ಕುಂಬಳ ಕಾಯಿಯೂ ? ಮೊದಲು ಮುಖದ ವಿನ್ಯಾಸ ನೆನಪಿಸಿಕೊಂಡೆ. ಕನ್ನಡಿಯಲ್ಲಿ ಒಮ್ಮೆ ನನ್ನ ಮುಖ ನೋಡಿಕೊಂಡೆ. ಯಾಕೋ ಏನೋ ನನ್ನ ಮುಖ ನನ್ನ ತಮ್ಮಂದಿರಂತೆ ವ್ರುತ್ತಾಕಾರದಲ್ಲಿಲ್ಲ ಎನಿಸಿತು. ಹಾಗೆಂದು ಮೂಳೆಯ ಕೋಲು ಮುಖವು ಅಲ್ಲ. ಒಂದು ರೀತಿ ಅಂಡಾಕಾರ ಅಥವಾ ಚೌಕಾಕಾರ ಎರಡು ಅಲ್ಲದ ಒಂದು ಮುಖ. ಹಾಗಾದರೆ ನಾನು ನನ್ನ ರೂಪ ರೇಖೆ ಯನ್ನು ಎಲ್ಲಿಂದ ಆರಂಭಿಸಲಿ. ಸ್ವಲ್ಪ ಯೋಚಿಸಿ ಹೊರಗೆರೆಗಳನ್ನು ಎಳೆದೆ. ಉದ್ದನೆಯ ಕೂದಲು, ಎದುರು ಸುಳಿಯ ಎಡಕ್ಕೆ ವಾಲಿರುವ ಬೈತಲೆ, ವಯಸ್ಸಿಗೆ ಮೀರಿ ಕಾಣುವ ದಪ್ಪ ದಪ್ಪ ಸುಕ್ಕುಗಳು...
ಆಭಾರಿ...
- Get link
- X
- Other Apps
ಅಭಾರಿ ಆಗಿರಬೇಕು ಅಭಾರಿ ಸದಾ ಇಲ್ಲಿಯವರೆಗೂ ಬದುಕಿ ಉಳಿದಿರುವುದಕ್ಕೆ. ಹೇಳಲೇಬೇಕು ಖಂಡಿತ ಯಾರಿಗಾದರೂ ಥ್ಯಾಂಕ್ಸ್. ಏಕೋಪಾಧ್ಯಾಯ ಸರಕಾರೀ ಶಾಲೆಗಳಲ್ಲಿ ಸಾಣೆ ಹಿಡಿದ ಮನಸು, ಬುದ್ಧಿ, ಹಳ್ಳಿ ಗಮಾರನಿಗೆ, ದಡ್ಡತನ ಸರಳತೆ, ನಗೆಪಾಟಲಿನ ಮುಘ್ದತೆಗೆ, ಅನ್ವೇಷಕ ಪ್ರಾಣಿ, ಅಂಡೆಲೆದು ಓಡಿ, ಕಾಡು ಬಂಡೆಗಳ ಮೇಲೆ ಆಡಿ, ಕುಂಟಿ, ಕುಪ್ಪಳಿಸಿ,ಎದ್ದು ಬಿದ್ದ ವಡ್ಡ ದೇಹಕ್ಕೆ, ಅಳದೆ, ತೊಳೆಯದೇ, ಅರಿಶಿನಹಚ್ಚಿ, ಗಾಯ ಮುಚ್ಚಿ ಮೆರೆದ , ಕನಸಾದ ಆ ದೇಹಕ್ಕೆ ಶರಣು, ಅನ್ವೇಷಿಸಲು ಕಳಿಸಿದ ಅ ಮರಳು ಹಳ್ಳಿಗೆ, ಆಹ್ವಾನವಿಲ್ಲದ ಅಥಿತಿ, ನನ್ನನ್ನು ಸಹಿಸಿದ ಮಹಾ ನಗರದ ನಾಗರಿಕರಿಗೆ, ಮನೆ ಭಾಷೆ ಕೀಳರಿಮೆ ಮೂಡಿಸಿ, ಲೋಕಭಾಷೆ ಕೇಳಿ, ನಗೆಯಾಡಿ, ಬದುಕನ್ನೇ ಭಾಷೆಯಾಗಿಸಿದ ಸ್ನೇಹಿತರಿಗೆ, ಅಮಾನವೀಯ ಪೈಪೋಟಿಯ ಬಿತ್ತಿದ ಬದುಕಿಗೆ 'ಬದುಕು ಅಂದರೆ ಹೊಂದಾಣಿಕೆ' ಒಪ್ಪಂದದ ಬಾಯಿಪಾಠ ಮಾಡಿಸಿದ ಗುರುಗಳಿಗೆ ವಂದನೆ, ಆತ್ಮವನ್ನೇ ಶಾಶ್ವತ ಮುಚ್ಚಿದ ಸನ್ನಿವೇಶಗಳಿಗೆ, ಆಸೆಪಟ್ಟು, ನಿರಾಸೆಗೊಂಡ ಮನಸಿಗೆ, ದುರಾಸೆ ಹೆಚ್ಚಿಸಿ, ಪಡೆದು,ಗೆದ್ದ ಕ್ಷಣಗಳಿಗೆ, ಮೇಲೇರಿದ ಸ್ನೇಹಿತರ ಕಂಡು ಕರುಬಿದ ಸಣ್ಣತನಕ್ಕೆ, ಚಾಡಿ ಹೇಳಿದ್ದಕ್ಕೆ, ವಂಚಿಸಿ ಹೀರೋ ಆಗಿದ್ದಕ್ಕೆ, ನನ್ನವರ ಕೆಳನೂಕಲು ಪಟ್ಟ ಗುಪ್ತ ಪ್ರಯತ್ನಕ್ಕೆ, ಅಮಲೇರಿದ ಕುಡುಕನ ನಶೆ ಇಳಿದಾಗ ಪಟ್ಟ ವ್ಯಥೆಗೆ, ಪೊಗರಿಳಿದ ದೇಹದ ನಿರಾಕರಣೆಗೆ ಸ...