Posts

  Beat the Sun.   Good morning… To all? Good! For whom? Is it to? Or of, the morning? Or Is it wishing you good ….?   A wish of luck to keep you livid, in good state of life! From the restless thermal king of radiation Unconquered and left untamed Has driven everyone helter-skelter   Well, look out, if you are still left with your guts But dare not at the sky as naked and bare As treeless tundra where green is so scare He is too cruel to spare in its flare   It is time for the eyelids to rescue from his glare You cannot call it as night mare No… it is a fuming splendour at its best Better hurry up and go to the nearest nest And take rest.   Let the life around you be a blanket black Meditate with the yogic breath till the sun set…. At least to avoid super thermal shock Be...
GOOD MORNING…. Good morning… To all?   Good! For whom? Is it to?   Or of, the morning?   Or Is it wishing you good ….? Only for your good being in the ugly morning? Well look out, if you can..? at the sun?   But dare not,   The sky is blue and bare Without a shred of cloud of shade For us,   A day of blinding night mare,   But all should share A thermal splendor so rare A fuming twister with its top gear   Strikes the hills, fields, land with all its valour   Mocks at us with a terrible terror Without a murmur go for a summer ware The super-heated air may not care Eyes unprotected cannot glare It needs a special goggle wear Don’t disobey my advice Step out, with head bowed to the shining Seer
        ಮಳೆಯಿಂದ ಬೇಸಿಗೆಯವರೆಗೂ.... ಸಾರಿಸಿ,ಗುಡಿಸಿ, ರಂಗೋಲಿ ಬಿಟ್ಟ ಮಳೆ.ವರ್ಣಮಯ ದರೆಗೆ ಇನ್ನಿಲ್ಲದ ಖಳೆ, ಮನಸೋತ ಶಕುಂತಲೆಗೆ ಭಾಷೆಕೊಟ್ಟಮೇಘರಾಜ   ಮತ್ತೆ ಮರಳುವ ವಚನವಿತ್ತು.ಶಾಪಗ್ರಸ್ತ ಮಹಿಳೆ ವಸುಂಧರೆ. ಸಮಯಸಾದಕ ಇಂದ್ರನಂತೆ ಕದ್ದು ಬರುವ ಚಂದಿರ,ಹೊಳೆವ ಬಯಲು ಮಂದಿರ ನಿರಂಬಳ ಆಕಾಶ, ಸಿದ್ಧವಾಗಿದೆ ಸಿಂಗರಿಸಿಕೊಂಡು ಶೀತಾಲಿಂಗನ ಮಿಲನಕೆ, ಬೆಚ್ಚನೆಯ ಮುದ ಸ್ಪರ್ಷಕೆ ತಾರೆಗಳ ತೂಗುಉಯ್ಯಾಲೆಯಲ್ಲಿ. ತಾಪತಗ್ಗಿಸಿ, ಹೆಪ್ಪು ಗಟ್ಟಿಸುವ ಪ್ರಿಯತಮನ ಆಗಮನಕೆ, ಈ ಛಳಿ... ಕೊಬ್ಬಿರುವ ಗೂಳಿ. ಚುಚ್ಚಿತ ನ್ನ ಕೊರೆಯುವ ಕೊಂಬುಗಳಿಂದ,ಇಳಿಯುತ್ತದೆ ಕೋಶ,ಕೋಶದ ಅಣುಕಣಗಳಲ್ಲಿ, ಇಳಿದು ಆಳಕೆ ಅಲಂಕಿರುಸುವ ಅಧಿಕಾರ ಪ್ರದರ್ಶನ, ಮರಗಿಡಗಳೆಲ್ಲಾ ಮಾಡಬೇಕಿದೆ ನಮನ.   ತಲೆತಗ್ಗಿಸಿ ಭಯದಲ್ಲಿ ನಿಂತ, ಜೋತುಬಿದ್ದ ಎಲೆ,ರೆಂಬೆಗಳಿಂದ, ಬಲವಂತ ಸಲಾಮ ಗಿಟ್ಟಿಸುವ ಸರ್ವಾಧಿಕಾರಿ. ತೂಗಿ ಮಲಗಿಸುತ್ತಾನೆ ಹಂಸಗೀತೆಯ ಜೋಗುಳದಲ್ಲಿ.ನಡುಕದಲಿ ನಗ್ನವಾದ ಹಸಿರು, ಮುನುಗುತ್ತಿದೆ ಬಡಕಲು ಅಸ್ತಿಪಂಜರ,ತನ್ನ ರೂಪ ಕಳೆದುಕೊಂಡ ಶಾಪಗ್ರಸ್ತ ನೀರು ಕಲ್ಲಾಗಿ ಕಾಯುವ ಅಹಲ್ಯೆ, ನೀರಿಗೂ ಕ್ಷಮೆಇಲ್ಲ, ಕಾಯಲೇಬೇಕಿದೆ ವಿಮೋಚನೆಗೆ, ನೆಲತಳಕ್ಕೆ ಅಂಟಿಕೊಂಡ ಬಿಲವಾಸಿಗಳ ಪ್ರಾರ್ಥನೆ ದೇವರ ತಲುಪುವ ವರೆಗೂ ಶರಣಾದ ಜೀವಿದಂಡು, ತಾಪರಹಿತ ಧಾಳಿಗೆ ಬೆದರಿ, ನಡೆಸಿದೆ ಪಥಸಂಚಲನ ಬಿಳಿಯ ಬಾವುಟ ಹಿಡಿದು,ಹರಿವ ನೀರು ಘನಿಸಿ, ಬಿಚ್ಚಿಕೊ...
The Pool...   The life pool is filled to the brim with countless drops of your deeds. Agonies and ecstasies are rippling to the shore tirelessly since your birth The miseries are heavier than joys that are miser than a fashionable tailor, Sinks to the bottom at an accelerated pace and rests there for ever.   Neither do I know nor you can predict the time of the whirlpool spiralling   Dragging like a magnetic force to the depth of the bottomless pit A black hole of illusionary feast that often comforts your luxuries And misleads to a lost state where you are declared dead but clinically alive.   Cheering moments are volatile and rare to bubble out of the evaporation pool The solidified sorrows with no melting point to measure, settles down heavily The restless soul without any remorse holds a stable stalk for fading floret The fragrance is odourless with a diminishing colour as unattractive as ever   The clou...
An ode to my students.... May be,   The tender and soft buds have bloomed   into a youthful inflorescence   Million dreams to be pollinated, Yet to different habitats but to same species with love. But, No… Not that I have over ripened fruit inedible and old... But, yes… Only… for the dispersion to fly far and wild They are in the perfect diffused clouded mould,   Precipitation, yet to shower as it is too cold be drawn by Gravity not yet demagnetized, So still I remain unsold for tomorrow’s reduction sale. It is their dreams that my heart beats And share the zeal with a true deal Life of feel of the time scale yet to ascertain, As real as a welcome gale in the attic shop Ever ready to go for the hammer in auction   In ever obedience of fate. But craves to remain in the living museum As long as the god’s particle is broken further May be at least in abstract and unseen form….
ಇದು ಗದ್ಯವೇ ಅಥವಾ ಪದ್ಯವೇ.... ನೀವೆ ನಿರ್ಧರಿಸಿ. ಅನಿವಾರ್ಯ ಸೂರ್ಯ ಅಸಹನೀಯವಾದರೂ ಕಠೋರ ಸತ್ಯ ಒಪ್ಪಲೇ ಬೇಕು, ನಮ್ಮ ಇರುವು ಆತನ ಕೃಪೆ. ಹಾಗೆಂದ ಮಾತ್ರಕ್ಕೆ ಶರತ್ತು,ಒಪ್ಪಿಗೆ. ಹೊಂದಾಣಿಕೆಯ ಯಾವ ವಿಧದಲ್ಲೂ ಪ್ರೀತಿಸಲಾರೆ ಆತನನ್ನು ಹೃದಯಪೂರ್ವಕವಾಗಿ. ಈ ಜೀವಜನಕ ನಿಯಾಮಕ ಮತ್ತು ನನ್ನ ಸಂಭಂದ ಒಂದುರೀತಿಯಲ್ಲಿ ಮಾಲಿಕ ಸೇವಕರ ಅನುಭಂದ ಎಂದರೆ ತಪ್ಪಾಗಲಾರದು. ಜೀತದಾಳಿಗಿಂತ ಕೆಟ್ಟದಾಗಿ ಕೆಲಸ ಹಚ್ಚಿಸಿ, ಬೆವರಿಸಿ ಆವಿಯಾಗಿಸುವುದೇ ಈತನ ತೆವಲು, ಸಹಿಸಲೇಬೇಕು ಸೌರ್ಯವ್ಯೂಹದ ಚಕ್ರವರ್ತಿಯ ಪೊಗರು. ನಿಸ್ಸಾಹಯಕರು, ಒಪ್ಪಿಕೊಂಡಿದ್ದೇವೆ ನಾವೆಲ್ಲಾ, ಈತನ ಸಾರ್ವಭೌಮತ್ವ, ಪಾರುಪತ್ಯ ಎರಡನ್ನು ತುಟಿಕ್ ಪಿಟಿಕ್ ಎನ್ನದೆ.ನಿರ್ಜೀವಿ, ಜೀವಿಗಳ ಮುಲಾಜಿಲ್ಲದೇ ಎಲ್ಲರಿಗೂ ಕೆಲಸ ಹಚ್ಚಿರುವ ಈ ಹುಚ್ಚಿಗೆ, ನನ್ನಲ್ಲಿಲ್ಲ ಮೆಚ್ಚುಗೆ. ಅನ್ನಬಹುದಲ್ಲವೆ ಈತ ಒಬ್ಬ ಭಯಂಕರ ಸ್ಯಾಡಿಸ್ಟ್?. ದುರ್ವಾಸನ ರಕ್ತ ಕೆಂಗಣ್ಣು ಕೋಪಕ್ಕೆ ಗಿಡಮರಗಳ ಎಲೆಗಳೆಲ್ಲಾ ತಲೆತಗ್ಗಿಸಿ ನಿಂತಿವೆ ಮೌನದಲ್ಲಿ. ಜೀರುಂಡೆಗಳ ಝೇಂಕಾರದ ಹಿಮ್ಮೇಳದಲ್ಲಿ ಗಾಳಿಯೂ ಅಲುಗಾಡದ ಮೂಕ ಪ್ರೇಕ್ಷಕ. ಕೆಂಗಾವಲು ಕಾವಲುಗಾರನಿಗೆ ಮೈಎಲ್ಲ ಕಣ್ಣು. ತಪ್ಪಿಸಿಕೊಳ್ಳಲಾರರು ಯಾರುಇಲ್ಲಿ ಜೀತದಿಂದ, ಕೆಲವೊಮ್ಮಕಣ್ಣು ತಪ್ಪಿಸಿ ಸರಿಯುತ್ತವೆ ನೆರಳಿನ ಬದಿಗೆ ಬದುಕು. ಹಾವುಹಲ್ಲಿಗಳು ಮೊರೆಹೋಗುವ ಬಿಲದಲ್ಲೂ ತಲುಪುವ ಕಿರಣದ ಶಾಖ, ಕಂಗಾಲು ಮಾಡಿ ಜೋಲು ಬಿದ್ದ, ಜೊಲ್ಲುಸುರಿಸುವ ನಾಲಿಗೆ...
ಹೀಗೊಂದು ಸಾವು. ಸಾವಿಗೂ ಒಂದು ಘನತೆ ಅವಿರೋಧವಾಗಿ ಗಳಿಸಿದ ಗೌರವ, ಹಿರಿಮೆ ಆಳಲಿ ಬಿಡಿ ತನ್ನದೇ ಏಕಾಂತತೆ ಈ ಮಹಾಜಾತ್ರೆಯಲ್ಲಿ. ಅನುಭವಿಸಲಿ ಕೊಡಿ ಮರಣ ತನ್ಮಯತೆ. ಸಾವೊಂದು ಹರಡುವ ಕಾಡ್ಗಿಚ್ಚು ಬೆಚ್ಚನೆಯ ಜನಪ್ರಿಯತೆಯ ಕಿಡಿತಾಕಿ ಬಿಡುವಿಲ್ಲದ ಸುದ್ದಿಬಿತ್ತರಿಸಲಿದೆ ದಿನಪೂರ ಸುದ್ದಿ ನನಗೆ, ನಿಮಗೆ ಇರಬಹುದು ಸಂತಾಪ ಸುದ್ದಿ ಬದುಕುಳಿದವರಿಗೆ ಆಗಬೇಕಿದೆ ಶುಧ್ದಿ. ಅಶ್ರುತರ್ಪಣ ಪ್ರದರ್ಶನ ಸಂದರ್ಶಕನ ಕೋರಿಕೆ. ಮೇಕ್ ಅಪ್ ಹುಡುಗನ ಯಾಂತ್ರಿಕ ತಯಾರಿ ನಿರ್ಲಿಪ್ತ ಛಾಯಗ್ರಾಹಕ ಕೋನ, ಬೆಳಕುಗಳ ಅಳೆಯುತ್ತಾನೆ ಸಾವಿನ ಗೇಲಿಮಾಡಲು, ದುಖತಪ್ತ ಜನ ನೋಡುತ್ತಾರೆ ಗಡಿಯಾರದ ಮುಳ್ಳು ಪದೇ ಪದೇ.. ಜಪಿಸಿ ನಮಗೆ ಗೊತ್ತಿರದ ಮಂತ್ರ ಜಡತೆಯ ಎಳೆದಾಡುವ ಧಾರ್ಮಿಕ ತಂತ್ರ. ಉಯಿಲು ಬರೆದಿರಲಿಲ್ಲ "ತನ್ನ ಚಿತಾಭಸ್ಮಕ್ಕೆ ವೃಂದಾವನ ಬೇಡ" ಮರೆತಿದ್ದ ಚಿರಂಜೀವಿ ತನ್ನ ವಂಶವಾಹಿ ಶಾಪ ಸಾಮಾನ್ಯ ಬದುಕನ್ನು ಅಸಮಾನ್ಯ ಮಾಡಿದ ಭೂಪ ಈಗ ಸಿಕ್ಕಿದೆ ಮಾಫಿ ಮನೆಹೊರಗೆ ಪ್ರಕಟ ಕುರುಳು ಕಟ್ಟಿಗೆ ಧೂಪ ಆಗಲಿದ್ದಾನೆ ಸಧ್ಯದಲ್ಲೇ ಗೋಡೆಯಮೇಲೆ ತೂಗಾಡುವ ಸ್ಥಬ್ಧ ಭಾವಚಿತ್ರ ನೆನ್ನತಾನೆ ಚೈತನ್ಯದ ಚಿಲುಮೆ ಕಾಯುತ್ತಿದೆ ಹತ್ತಿರದಲ್ಲೇ ಚಿತೆಯ ಕುಲುಮೆ ನಗ್ನತೆಯ ನೆನಸಿ, ಬಲವಂತ ಪುಣ್ಯಪ್ರಾಶನ ಮುಚ್ಚಿದ ಬಾಯಿಗೆ ಸ್ಥಿತಪ್ರಜ್ಞ ನಿಶ್ಚಲವಾದ ಕಲ್ಲುಬಂಡೆ ಋಷಿಮಲಗಿರುವ ಬಿದಿರಿನಹಾಸಿಗೆ ಆದರೆ ಬೀಷ್ಮ ಅಗಿರಲ್ಲಿಲ್ಲ ಆ ಶರಶೈಯೆ ಯಲ್ಲಿ. ಬಂತು ಸಾವಿನ ಬಂಡಿ ಸಕಲ ಸಿದ್ದತೆಯಲ್...