Posts

ರಚನೆ. ನಿಗದಿತ ಸಹಜ, ನಿದ್ರೆ ಮುಗಿಸಿ, ಕತ್ತಲ ಬಾವಿಯಿಂದ ಈಜಿ ಹೊರಬಂದು ಸೂಕ್ತ ಧಾಕಲಾತಿಗಳೊಟ್ಟಿಗೆ ಅಧಿಕೃತ ಪ್ರವೇಶ ತಪ್ಪದೇ ಪಡೆಯುತಿದೆ ಹಾಜರಿ ಮುಕ್ತ ತರಗತಿಯಲ್ಲಿ,ದಿನನಿತ್ಯ ಪರೀಕ್ಷೆಗಳಿಗೆ ಸಾಮಾನ್ಯ ಪ್ರಭೇಧದ ಉಳಿವಲ್ಲಿ ಬೆಳಕಿಗೆ ಮೈಒಡ್ಡಿ ಬಿಸಿಲಕಾಯಿಸಿ, ಭಿತ್ತಿರಹಿತ ಮೈದಾನದ ಸ್ಪರ್ಧೆಯಲಿ ವೀಕ್ಷಕ ಪಾತ್ರ. ಪೈಪೋಟಿ,ಫಲಿತಾಂಶಗಳಿಂದ ದೂರ ಅಳತೆಗೆ ಬಾರದಷ್ಟು ಋತುಗಳನ್ನು ಕಂಡ ಕಾಲ ಕಂಕಾಲದಲ್ಲೇ ನರಳುತಿದೆ ಇಂದಿಗೂ... ನಡಿಗೆ ನಿಂತಿಲ್ಲ, ನಡುಕಮಾತ್ರ ಅವಕ್ಕಾಗಿ, ತೆರೆದ ಆ ಆಕ್ಷಣದ ಆ ಮೂಕ ಬಾಯಿ, ಎಂದೂ ಕಲಿಯದ ಭಾಷೆ, ಶಬ್ಧಗಳ ಅರಣ್ಯರೋಧನ ಮುಚ್ಚಿಲ್ಲ ಇಂದೂ, ಬೆರಗಾಗಿ ಆ ಬೆದರು ಕಣ್ಣು ಮಿಟುಕಿಸದೆ ರೆಪ್ಪೆ ಶೂನ್ಯ ನೋಟದಲಿ ಸ್ಥಬ್ದ ಬೆಳಕಿಗೆ ಹೆದರಿದ ಆ ಮೊದಲ ದೃಷ್ಟಿ, ನಿಜವೇನೋ ಅಪರೂಪದ ಸೃಷ್ಟಿ ಸುತ್ತಿರುವ ತೊಗಲಲ್ಲಿ ಕಟ್ಟಿಟ್ಟ ರಕ್ತ,ಮಾಂಸಲ ಪಾರ್ಸೆಲ್ ಪೊಟ್ಟಣ ಡೆಲಿವಿರಿಗೆ ರಡಿ ಇದೆ ಸೂಕ್ಷಾಣುಗಳ ದಂಡಯಾತ್ರೆಗೆ ಬಲಿಯಾಗಿ ಹಳಸುವ ಮುನ್ನ, ಬದುಕಿನ ಬಣ್ಣದ ಹುಣ್ಣು ಸೇರಲಿದೆ ಮಣ್ಣು... ತೀರಿಸಲು ಅನುಭವದ ಋಣ ನಿಗೂಢ ಶಾಶ್ವತ ಮಹಾ ಪಯಣ, ಪುನರಾಗಮನ ಮತ್ತೆ,ಮತ್ತೆ.... Like Like Love Haha Wow Sad Angry Comment
ಜೇಡ.. ನಾಲ್ಕು ಜೋಡಿ ಕೀಲು ಕಾಲುಗಳ ಅಷ್ಟಪದಿ, ಅಪರೂಪ ಸೃಷ್ಟಿ, ಬೆಳಕಿಲ್ಲದ ದೃಷ್ಟಿ ಮಯ್ಯೆಲ್ಲಾ ಕಣ್ಣು, ಸಹಸ್ರಾರು ಪ್ರತಿಬಿಂಬಗಳು ಜಿಗಿ ಹಲಗೆಯ ಹಗುರ ದೇಹ, ಕಾಲುಗಳು ಕಡ್ಡಿ ಬುದ್ದಿಯ ಬರ. ಒಮ್ಮೊಮ್ಮೆ ಬಹು ಭಾರ ವರ್ಣಾಂಧತೆಯ ಅಂಟು ಜಾಡ್ಯ, ಬದುಕು ನಿರ್ವರ್ಣ ಆದರ್ಶಪ್ರಿಯೆ, ಸದಾ ಏಕಾಂಗಿ, ಸಂಪರ್ಕ ನಿಷಿದ್ಧ ಆದರೂ ಹೊಂಚುಹಾಕುವ ಹುಟ್ಟುಗುಣ ಯಾರಿಗಾಗಿ? ಕಾದಿರುವ ಶಬರಿ? ತಾನೇ ನೇಯ್ದ ಸುಂದರ ಭವನದಲಿ ಹೆಣೆದ ನಿಶ್ಯಭ್ದ ಸಂಚು ಕದ್ದು,ಮುಚ್ಚಿ ಯಾವುದೋ ತನ್ನ ತೆವಲಿನ ಋತುವಿನಲ್ಲಿ ಕೂತಲ್ಲೇ ಬೀಸುತ್ತಾಳೆ ಮಾಯಾವಿ ಕಲೆಯ ಬಲೆ, ಸ್ವಜಾತಿ ಭಕ್ಷಕಿ ಮಳ್ಳಿ ಹೊಂಚುಹಾಕುವ ಮಸಲತ್ತು ಪ್ರಿಯತಮನ ಬರುವಿಕೆಗೆ ಏನೆಲ್ಲ ಕಸರತ್ತು.. ಮನಮೋಹಕ ಮೋಹದ ನುಣುಪಾದ ರೇಶಿಮೆಯ ಜಾಲ, ಬಿನ್ನಹದ ಸಂದೇಶ,ಸುವಾಸಿತ ತಂತಿಗಳ ಸ್ವಾಗತ ಕರೆ ರಾಸಲೇಲೆಯ ಕೂಟದ ಕಾಲ, ವಿರಹದಲಿ ಚಡಪಡಿಕೆ, ಗಿರಕಿಹೊಡೆಯುತ್ತಾನೆ ಭಾವೋದ್ವೇಗಿ ರೋಮಿಯೋ ಅಪಾಯ ಲೆಕ್ಕಿಸದೆ,ಕಾಮದ ಮಾರಕ ಕೋಟೆಯ ಸುತ್ತ. ಹೆದರಿ, ಹೈರಾಣು ವಿರಹಿ ವಿಹ್ವಲ ಅದರೂ ದಾಟಬೇಕಿದೆ ಕೂಟ ಸೇತುವೆಯನ್ನು ಅಪರೂಪದಲಿ ಘೋಷಣೆಯಾದ ಕದನ ವಿರಾಮ ಮೋಹದಲಿ ಹಾತೊರೆದ ಯೋಧ, ರಾಣಿಶಾಂತ, ನಿರ್ಲಿಪ್ತ ಒಪ್ಪಿಕೊಂಡಾಗಿದೆ ಆಹ್ವಾನ, ಆತ್ಮಾಹುತಿಗೆ ಹೋಗಲೇ ಬೇಕು ಪ್ರಿಯತಮೆಯ ಚುಂಬನಕೆ ಅನಿವಾರ್ಯ ಆಲಿಂಗನ, ಮರಣಾಂತಿಕ ಸಂಭೋಗ ಅನುಸರಿಸಬೇಕಿದೆ ವಂಶಪಾರಂಪರೆ, ಅಳಿಯಬಾರದು ಸಂತತಿ, ಆಗಲೇ ಬೇಕಿದೆ ಆಹುತಿ, ಕಾಮದ ಹವನದಲ್ಲಿ ಬಲಿಯಾಗಲ...
ಅತಂತ್ರರು... ನಾನು ನಾನಾಗಿ ಬದುಕುವುದು ತುಂಬಾ ಕಷ್ಟ.... ಬದುಕು ಸಾಧ್ಯವಾಗದಿದ್ದರೂ ಸಾವಲ್ಲಿ ಅಸ್ತಿತ್ವ ಅಸಾಧ್ಯ ಹುಟ್ಟಿನಂದಲೇ ಆರಂಭವಾಗುವ ಗೊಂದಲ  ಸತ್ತಮೇಲೂ ಸ್ಮಶಾನದವರೆಗೆ ಹಿಂಬಾಲಿಸುವ ದೇವರು, ಬಿಡುವುದಿಲ್ಲ ನಿನ್ನನ್ನು ನೀನಾಗಿ, ಉಳಿದು ಅಳಿಯಲು. ಸ್ಮಶಾನವೇ ಕೇಳುತ್ತದೆ ನಿನ್ನ ನಿಶ್ಚಲತೆಯನ್ನು ಶಾಶ್ವತ ಮೌನಿ ನೀನಾದರೂ......... ಹೇಳದಿದ್ದರೂ, ಉಯಿಲು ಬರೆದಿಟ್ಟರೂ ನಿನ್ನ ಸಹಿ, ಹೆಸರಿನಿಂದಲೇ ಕುಲ ಕರುಣಿಸಿ ಪರಲೋಕದ ಸ್ವರ್ಗಕ್ಕೆ ಪಾರ್ಸೆಲ್ ಮಾಡುವ ಜನ...... ಬದುಕು, ಸಾವು ಎರಡರಲ್ಲೂ ಪರತಂತ್ರರು...
Faces.... I opened my Timeline.... The immortal question blinks tauntingly at me...and dares to enquire..... "What is on your mind..."?  "Tell me what should I say...?. "I am fine..O.K..thank you... " Will that be an honest reply....?  No...I don't think so... On my mind there are countless allegations heaped on my very existence The whirlpool of interrogations is being held, The case is going on, everyday is hearing day The problem is I cannot defend myself against myself... In the court hall The Judge is deaf, the Lawyer is dumb The blind onlookers are watching curiously So... the case is not adjourned... I am Optimistic and I feel I should get a fair trail What do you say? Will I ? Or... Should I? what is on your mind...? My dear book of faces....
chaos ... There is a huge difference between natural Biodiversity and social and cultural diversities (scientific and technological progress)....natural is gradual and ever lasting but man made social diversity is fast and and fast fading...and with a diminished diversity....and often destructive ...We are at the cross roads of ignorance of our own creations....which is reflected in the degradation of environment which is irreversible......A terrifying realisation a few people would comprehend but could do nothing and hence remain like mute spectators...for the present most explosive, volatile time ticking situation, no ideologies from the history could give simple solution for the present chaotic conditions of the society of egocentric approaches is indulged in and world at large........ The greatest ideologies of humanity are as hallow as air bubbles, if the followers are prejudiced and preoccupied with hate and unkind to any biotic factors of creation in the environment.....
Live as what you are.....!!!! The vibrations waving over the laryngeal muscular layers can produce only an absurd and croaked sound which are just waves that journey through the space......but never floats in the planet to give a specific meaningful thought or a feeling...words that are scattered carelessly and loosely cannot be a viable bridge to connect the two silent strangers end. conversation disappears into oblivion if the talk is only scientifically acoustical. Even the wordless talk is heard everywhere and echoes in our heart..... A poet's lyrics is never heard nor adored when his lines are not decorated with the musical melody of rhyming words.... The beautiful hand written manuscript may be worth only for packing if not read or sung aloud....humming may be very soft and melodious but the beauty of words and emotions are mislead and lost. The ever flowing blood that rushes and crisscross the capillaries to reach the nuke and corner of the body cells which nou...
ಬದುಕು ನೀನೇ ನೀನಾಗಿ...... ಕೇವಲ ಧ್ವನಿಪೆಟ್ಟಿಗೆಯಿಂದ ಹೊರಡುವ ಯಾಂತ್ರಿಕ ಕಂಪನಗಳು ಪದಗಳಾಗಲಿ ಅಥವಾ ಭಾಷೆ ಆಗಲಾರದು, ಯಾವುದೋ ಶಭ್ದ,ಭಾಷೆ ಆಗಲೂ ಬಹುದು, ಆದರೆ ಅರ್ಥವಾಗಲಾರದು ಕಾಳಜಿರಹಿತ ಶುಷ್ಕ ಧ್ವನಿತರಂಗಗಳು ಸಂಭಾಷಣೆಯಾಗಲಾರದು.......ಪದಗಳು ಅಡ್ಡಾದಿಡ್ಡಿ ಜಾಗಬದಲಿಸಿದರೆ ವಾಕ್ಯವಾಗುವುದೇ ಅಭಿವ್ಯಕ್ತಿಯಲ್ಲಿ....?ನೀಟಾದ,ಸುಂದರ ಅಕ್ಷರಗಳ ಸಾಲುಗಳು ಮಧುರ ಗೀತೆಯಾಗಲಾರದು ನೀನು ಹಾಡದಿದ್ದರೆ.... ಧಮನಿಗಳಿಂದ ಸತತ ಹರಿಯುವ ನಿನ್ನ ಯೋಚನೆಯನ್ನೂ ಪೋಷಿಸುವ ಮಿದುಳಿನ ಅಭಿವ್ಯಕ್ತಿ ಯಾಗಬೇಕು ನಿನ್ನ ಮಾತು....ಬಾಹ್ಯ ಮತ್ತು ಆಂತರಿಕ ಭೌತಿಕ, ಮಾನಸಿಕ ಸಂವಾದದಲ್ಲಿ ನಿನ್ನ ಸಮಾಜಿಕ ಪ್ರಜ್ಞ ೆ ಮಿಳಿತವಾಗಬೇಕು ನಿಜ ಅರ್ಥದಲ್ಲಿ.....ಇದು ಇಂದಿನ ಮಾತಲ್ಲ. ಮಿಲಿಯಾನು ವರ್ಷಗಳ ಸತತ ಆಂತರಿಕ ಸೆಣಸಾಟದಲ್ಲಿ ಹೊರಬಂದ ಪರಿಸರಾತ್ಮಕ ಜೀವ,ನಿರ್ಜೀವ ಅಂಶಗಳ ನಡುವಿನ ಪರಸ್ಪರ ಅಂತರ, ಪ್ರತಿಕ್ರಿಯಗಳ ವಾಸ್ತವ. ಇರಬಹುದು ಇದೇ ಪರಮಸತ್ಯ. ಭಾವನೆಗಳು ವಿಕಸಿಸುವ ಮಿದುಳಿನಕೇಂದ್ರ ಕೇವಲ ಜೈವಿಕ ಮಾಂಸಲ ಮುದ್ದೆಯಲ್ಲ. ವಿವೇಕ ಕೇವಲ ನರಕೋಶಗಳ ವಿದ್ಯುತ್ ಛಾಪವಲ್ಲ....ಪ್ರತಿಯೊಂದು ಸಜೀವ ಕ್ರಿಯೆ ಕೇವಲ ಬುದ್ದಿಯ ಪ್ರತಿಕ್ರಿಯೆಯಲ್ಲ...ಪ್ರೇಮದ ಸಂಕೇತ ನಾಲ್ಕು ಕೋಣೆಗಳ, ಅಸಂಖ್ಯಾತ ರಕ್ತನಾಳಗಳ, ಲೋಮನಾಳಗಳಲ್ಲಿ ಹರಿದು ಕೋಶಸೇರುವ ರಕ್ತ, ಕೇವಲ ಜಿಗುಟಾದ ಪ್ಲಾಸ್ಮ ಜೀವರಸವಲ್ಲ....ಅನುಕಂಪ,ಕರುಣೆ ಕರಗಿರುವ ಅನಂತ ಅನುಭೂತಿಯ ಆಗರ.....ಅಸಂಗತ...