ಫುಟ್ ಬಾಲ್ 28-10-18 ವಿಶ್ವ ಫುಟ್ಬಾಲ್ ಪಂದ್ಯ ನಡೆಯುತ್ತಿದೆ ಕ್ರೀಡಾಂಗಣದಲ್ಲಿ.ಕಿಕ್ಕಿರದ ಜನ, ಕಿವಿಗಡಚುವಂತಹ ಸದ್ದು....ಹುಚ್ಚೆದ್ದ ಅಂತರಾಷ್ರ್ಟೀಯ ಪ್ರೇಕ್ಷಕರ ಕಿರುಚಾಟ,ಸದ್ದು, ಪದವಾಗದ ಅರ್ಥಹೀನ ಧ್ವನಿ,ತಿಳಿಯುತ್ತಿಲ್ಲ,ಯಾರಿಗೂ.ಯಾರಿಗೆ,ಯಾರಿಂದ,ಪ್ರೋತ್ಸಾಹನಿರುತ್ತೇಜನ?ಹುರಿದುಂಬಿಸುವ ಜಯಕಾರ ಸಮರವೀರರಿಗೆ, ಮೊಳಗಿದ ಯುದ್ಧಘೋಷಣೆ, ಏನೂ ಕೇಳುತ್ತಿಲ್ಲ. ವಿಶಾಲ ಹಸಿರು ಹಾಸಿಗೆಯ ಮೈದಾನದಲ್ಲಿ,ಎರಡು ಗೋಲು ಪೋಸ್ಟ್ಗಳಿವೆ ವಿರುದ್ಧದಿಕ್ಕಿನಲ್ಲಿ.ಅವೆರಡರ ನಡುವೆಯೇ ನಡೆದಿರುವ ಆಟ,ಹೇಗೆ ತಲುಪಿದರೂ ಎರಡು ಗುರಿಕಂಬಗಳ ನಡುವಿನ, ಖಾಲಿತನವನ್ನ ತಲುಪಲೇ ಬೇಕು.ಗೋಲುಬಲೆ, ಗೋಲುರಕ್ಷಕನಿಗೆ ಮಾತ್ರ.ಜಾಗಕದಲದ ದಿಗ್ಭಂದನ.ಬಲೆಯಲ್ಲಿ ಚೆಂಡು ಹಾಕುವುದೇ ಗೆಲುವು,ಚೆಂಡು ತಡೆಯದಿರುವುದೇ ಸೋಲು.ಇದು ಕ್ರೀಡಾನಿಯಮ, ಪೈಪೋಟಿ, ಅದಕ್ಕಾಗಿಯೇ ಇಲ್ಲಿ ಈಗ ನಡೆದಿರುವ ಮಹಾಸಮರ, ಖಾಲಿ, ಬರಿಗೈಲಿ ತಲುಪವಂತಿಲ್ಲ, ತಾವೂ ಹೋಗುವಹಾಗಿಲ್ಲ. ಹೋದರೂ ನಗಣ್ಯ, ಅದು ಗೋಲಲ್ಲ.ಆ ಬಲೆಯೊಳಗೆ, ಕೇವಲ ಚೆಂಡುಮಾತ್ರ ಕಳಿಸಬೇಕು.ಔಟಾದರೂ ಪರವಾಗಿಲ್ಲ, ಗಡಿರೇಖೆ ಬಿಟ್ಟು. ಕ್ಷೇತ್ರ ಗೋಲ್ ಹೊಡೆಯಬಹುದು ಎಲ್ಲಿಂದಾದರೂ ಮೈದಾನದಲ್ಲಿ, ದಿಕ್ಕುಮಾತ್ರ ಪರಸ್ಪರ ವಿರುದ್ಧವಿರಬೇಕು ಅಷ್ಟೇ! ಅಥವಾ ಒಬ್ಬರಿಂದ ಒಬ್ಬರಿಗೆ ಪಾಸ್ ಕೊಟ್ಟು ಇನ್ನೊಂದು ಪಕ್ಕಕ್ಕೆ ತಂದು,ಗೋಲ್ ಸಮೀಪ ಸಮಯಸಾಧಿಸಿ, ಕೋಟೆ ಭೇದಿಸಿ ಚೆಂಡನ್ನು ನುಗ್ಗಿಸಬೇಕು.ಇವೆಲ್ಲವೂ, ಆದರೆ ಕಾಲಿಂದ ಮಾತ್ರ.ಕೈ,ಮ...
Posts
- Get link
- X
- Other Apps
October 5, 2013, · ಆದಿಪುರಾಣ. ಜಲಜ ಶಿಲಾ ಸುಪ್ಪತ್ತಿಗೆಯ ಚರಟದ ಚಾದರ ಹೊದ್ದು, ಮಲಗಿರುವ ಕುಂಭಕರ್ಣ. ಧರೆಗೆ ಹಿಡಿದಿತ್ತು ಗ್ರಹಣ, ಚಿರಂಜೀವಿ, ಭ್ರೂಣ ಬೆಳೆಯಲಿಲ್ಲ ಪೂರ್ಣ, ವಿಕಾಸದ ಅನಂತ ಪುರಾಣ ಆದಿ,ಅಂತ್ಯವಿಲ್ಲದ ನಿರಂತರ ಪಯಣ ಆ ಕಾಲ ಒಂದಿತ್ತು ಧರೆ ಬೆಂಕಿ ಉಗುಳಿತ್ತು ನಿರ್ಜೀವ ಹೊಗೆ ಹೊರಹಾಕಿತ್ತು, ಪ್ರಕ್ಷುಬ್ದ ವಾಗಿತ್ತು, ಭೂತಾಯ ನಿರ್ಜಲ ಬಸಿರು ಮೈ ಮರೆತು ಹರಿಯುತಲಿತ್ತು ಜಲ, ಜ್ವಾಲಾ ತೊರೆ, ಅಂದೇ ಮೈನೆರೆತ ಆ ವಸುಂಧರೆ, ತೊಟ್ಟಿದ್ದ ಆ ಅಂದಿನ ಹಸಿರು ಫ್ಯಾಶನ್ ಸೀರೆ ಅಂಚಿಗೆ ವರ್ಣಮಯ ವಿನ್ಯಾಸ ಬೇರೆ, ಜ್ವಾಲಾಮುಖಿಗಳ ಅಂಚು, ಸಾಗರದ ಸೆರಗು ಸಪೂರ ಪಾರದರ್ಶಕ ತೆಳುವಾದ ಪೊರೆ, ನೀಲಹಸಿರು, ಬೂದಿ ಕೆಂಪು, ಅಪರೂಪದ ಸುಧೀರ್ಘ ವರ್ಷಧಾರೆ ಮೆರಗು ಏನೆಲ್ಲಾ ಕುಸುರಿ ಕಲೆ ಅದರ ಮೇಲೆ? ಹೊರೆ, ಚಿತ್ತಾರದ ಬರೆಯಲ್ಲಿ ಗೆರೆ, ಕೇಳುವುದಿಲ್ಲ ಯಾರ ಮೊರೆ, ಜೀವಜಾಲದ ಬಹುವಿದ ಶಾಶ್ವತ ಸೆರೆ, ಗಡಿಪಾರು ಕಾರಾಗೃಹದಲ್ಲಿ ಎಗ್ಗಿಲ್ಲದ ಕೊಲೆ, ಸೃಷ್ಟಿ, ಲಯ ಸಹಜ ವಿನಿಮಯ ಲೀಲೆ...!!!
- Get link
- X
- Other Apps
ಹೃದಯ ಸಂಭಾಷಣೆ. 17 September. 2018. Edited Poem...of a retro.. ರೈತ ಅಕಾಲಿಕ, ಕೆಲಸಕ್ಕೆಬಾರದ ಅನಿಶ್ಚಿತ ಮಳೆ, ಹೆಸರಿಗೆ ಮಾತ್ರ ಛಳಿ, ಪಂಚಾಂಗ ಪದಗಳು ಎಂದೂ ಕೈ ಕೊಡದ ನನ್ನೂರ ರಣ ಬಿಸಿಲು ನೆಲದ ಒಡಲಲ್ಲಿ ಶಾಶ್ವತ ನಿರ್ಜಲ ಬಿರುಕು ಹೊಗೆಯಾಡುವ ಜಾಲಿ, ಒಣ ಹೊಂಗೆಯ ನೆರಳಲ್ಲಿ, ನೀರಿಲ್ಲದ ಹಳ್ಳದ ಉಸುಕಲ್ಲೇ ಜಲಯಾನದ ಬದುಕು ಧಗೆಯ ಪಥ್ಯಾಹಾರ ಉಂಡ, ಹಟತಪಸ್ವಿ, ರೈತಋಷಿ ಮುಕ್ತಿ ಮಾರ್ಗಕೆ ದೇಹದಂಡನೆ ಸಹಜ ,ಹಸಿವೇಕೆ? ಭೈರಾಗಿ! ...
- Get link
- X
- Other Apps
.. Sheshagiri Jodidar September 9 at 9:22 AM · Greedy inventions and unwise exploitation of natural resources by human prove that we are genetically loaded with the suicidal tendency. It may be a mechanism of natural evolution to balance the nature with a total destruction by its own highly evolved species called Homo sapiens... The “HUMAN” with an advanced brain and a modified and suitable bipedal body of a vast vision and foldable fingers with useful wrist grips...The closely packed neurons that give him the advantage o f thinking, reasoning, imagination, emotions and memory etc have made him a unique and the most powerful but idiotic species who.......unfortunately, this evolutionary gained strength is being misused by him in a most ignorant way in killing not only himself but the entire habitants of this planet...and thereby destroying the present ecological system. The present unpredictable, violent and extreme climatic changes...
- Get link
- X
- Other Apps
Sheshagiri Jodidar August 25 at 11:36 AM · The Trailer of the Natures mood... The entire nature is created by Unseen God And it is only for the humans and for their ever growing greed. A dangerous and unnatural perception of all faiths But the notion, need to be destroyed like a dangerous weed It is sown and nurtured by their own selfish seed. Nature is too impartially unbiased and too politely strict Never remain neither cruel nor neutral but forever just. Be it Dinosaurs of Mesozoic reptile age Or of present Cenozoic human sage Milk age of current restless and imbalance stage The earth was forever a justified judge The judgement was forever legally and naturally fair. The mountain may mourn for the floating hill The green may grumble in their uprooting The forest may weep for the drifting vegetation The peak may pity the sinking heights The earth may sigh in its helplessness for the monstrous burden called the ma...
- Get link
- X
- Other Apps
೨೧-೦೮-೧೯೧೮ ಜೀವ ಪ್ರಭೇದ ಉಪವಾಸ ಅಲೆದಾಟ,ಆವಾಸ ಹುಡುಕಾಟ, ನೀರಡಿಕೆಯ ಪರದಾಟ ಪ್ರಭೇದ ಸಮುದಾಯ ನಿಶ್ಯಬ್ಧ ಹೋರಾಟ ನಿಲ್ಲದ ಪೀಕಲಾಟ, ಶಾಶ್ವತ ತೊಳಲಾಟ ಪರಿಸರದಾಲಯದಲ್ಲಿ ಪ್ರತಿನಿತ್ಯದ ಪಾಠ, ದೂರಿಲ್ಲ ಯಾರನ್ನೂ, ಕೂರಿಸಿಲ್ಲ ಗೂಬೆ, ಮೌನದಲಿ ಜಪಿಸದ ಸಂತ ವಿನಾಶದಲ್ಲೂ ಹಗೆ ಸಾಧಿಸದ ಶಾಂತಜೀವಿ ಸಹಜ ಬದುಕಿನ ಕಲೆ, ನಿಗಧಿಯಾದ ಪ್ರಕೃತಿಯ ಬೆಲೆ ಅನೂಹ್ಯ ಅವಲಂಬನದ ಜೀವಬಲೆ. ಬದುಕುಳಿಯುವ ಕೊಲೆಗಾರ ಅಪರಾಧಿಯಲ್ಲ ನ್ಯಾಯದೀಶನೂ ಅಲ್ಲ, ಕೇವಲ ಕಕ್ಷಿದಾರ ತನ್ನಿರುವಿಗೆ ತಾನೇಜವಾಬ್ದಾರ, ಹಕ್ಕುಪತ್ರದಾರ ನಿಭಾಯಿಸುವ ಶಿಸ್ತಿನ ನಿಸ್ವಾರ್ಥ ಪಾತ್ರಧಾರ, ಕಾಣದ ಪಾಳೇಗಾರನ ಶಿಸ್ತಿನ ಸರದಾರ. ಹುಟ್ಟ ಕಾಮಿ, ಸಂತತಿಯ ಮುನ್ನಡೆಗೆ ಸಂತನಾಗ ಬೇಕಿಲ್ಲ,ಸಂತಾನ ರಕ್ಷಣೆಗೆ ವ್ಯಭಿಚಾರಿಯಲ್ಲ ಪೀಳಿಗೆಯ ವರ್ಗಾವಣೆಗೆ ಲೈಂಗಿಕಾಸಕ್ತ....ವಿಕೃತನಲ್ಲ,ಬ್ರಹ್ಮಚಾರಿ ತಪಸ್ವಿ. ಸಾಯದಿರುವುದೇ ಗೆಲವು, ಅದು ಜೈವಿಕ ಹಕ್ಕು, ಜೀವನ್ಮರಣದ ಪೈಪೋಟಿಯಲಿ ಸೋಲು ಸಹಜ ನಿರ್ಮೋಹಿ ನಿಯಮಪಾಲಕ ಅಚಲತೆಯಲಿ ಅಸಹಜ ಜೀವಸಂಖ್ಯಾ ಸ್ಪೋಟ ಸರ್ವಕಾಲಿಕ ಪ್ರದರ್ಶನ ಸ್ವಪ್ರಭೇಧ ಪ್ರತಿನಿಧಿಯ ಆಯ್ಕೆಯಲಿ ಭೂಭಾರ ಅಪಾಯಕಾರಿ ಅಸಮತೋಲನ.. ಅಶಕ್ತ ನಿರ್ವಂಶದಲ್ಲಿ ಮುಕ್ತಾಯ, ಪ್ರಕೃತಿ ಆಜ್ಞೆ ಪಡೆದ ಸಾಲ ಹಿಂದಿರುಗಿಸುವ ಮರಣ ದುರಂತವಲ್ಲ ಬದುಕಿನ ತಟಸ್ಥಬಾಗಿದಾರ ಮಹಾತ್ಮ ಈ ಕಥೆಯ ಎಲ್ಲ ಪಾತ್ರಗಳು ಜೀವಂತ, ವಿನಯಸಂಪನ್ನ ಮಹಾಬಲರು ಖಳನಾಯಕ ಯಾರೆಂದು ನೀವೇ ತಿಳಿಸಿ. ...
- Get link
- X
- Other Apps
ಬಾವುಲಿ. ನೆಲಹಂಗು ಧಿಕ್ಕರಿಸಿದ ಊರ್ಧ್ವಮುಖಿ ಶಾಶ್ವತ ಗುರುತ್ವವಿರೋಧಿ ವಾಯುಸಂಚಾರಿ, ಮರಆವಾಸಿ ಕತ್ತಲ ವಿಸ್ತಾರದಲಿ ಲೀನವಾಗಿ ಅದೃಷ್ಯದಲಿ ಚಲಿಸಿ ತೇಲುತ್ತಾನೆ ಕೈ ಬೆರಳೇ ಕೊಡೆಯಾಗಿಸುವ ಪವಾಡ ಭುಜ, ತೋಳು, ಕೈ, ಮೂಳೆಗಳು ನೀಳ ಅಸಹಜದಲ್ಲಿ, ಮಡಚಿದ ಸಂಚಿಯಾಗುವ ಬೆರಗು ಅಪಾರದರ್ಶಕ ತೆಳು ಮಾಂಸಲ ಪದರ ಬಿಚ್ಚುತ್ತಾನೆ ತನ್ನ ವಂಶಜರ ಬಳುವಳಿಯ ಛತ್ರಿ ತೆರೆದು, ತೆಳುವಾಗಿ, ರೆಕ್ಕೆಯಾಗಿಸಿ ತೇಲುತ್ತಾನೆ ಸರಾಗ, ಹಗುರವಾಗಿ ಋಣಮುಕ್ತ ಭುವಿಗೆ, ಪರಕೀಯ ಆತ್ಮ, ನೆಲ ಮುಟ್ಟದ ಛಲವಾದಿ ಅತಿ ಸೋಜಿಗ ಕುರುಡನಲ್ಲ, ಆದರೂ ದೃತರಾಷ್ಟ್ರನ ಪಟ್ಟ ಶಬ್ದ ಸಂವೇದಿಯ ಕಿವಿ ಅತಿ ಚುರುಕು ಏಕಲವ್ಯನ ಶಬ್ದಬೇಧಿ ಕಲೆಯ ದೃಷ್ಟಿ ಯಾರಿಗೂ ಅಪ್ಪಳಿಸಿದ ಕತ್ತಲಸಂಚಾರಿ ಭಯಂಕರ ಬೇಟೆಗಾರ ಹೂಡುತ್ತಾನೆ ನಿರ್ಜನ ಗುಹೆಗಳ ಛಾವಣಿಯಲ್ಲೂ ಸಂಸಾರ ನೆಲ ಮೆಟ್ಟದ ವೀರ,ಹಾರಲಾರ ಹಕ್ಕಿಗಳಂತೆ, ಬೆರಳುಗಳೇ ತೆಳು ವಾಯು ಹಾಯಿ ತೇಲುತ್ತಾನೆ,ಮಣ್ಸೆಳತ ಗೆದ್ದ ಖುಷಿ ಜಾರುತ್ತಾನೆ ಸಾವಕಾಶದಲ್ಲಿ ಶಬ್ದ ನೇತ್ರ ತಲುಪದ ಎತ್ತರದಲಿ, ಛಲ ತಪಸ್ವಿಯ ಪ್ರಾಣಾಯಾಮ ನಿರ್ವಾಣದಲಿ ಹಟಯೋಗಿ, ಶೀರ್ಷಾಸನದಲೇ ವಿಶ್ರಾಂತಿಪಡೆಯುವ ಭೋಗಿ ಹವಾನಿಯಂತ್ರಿತ, ಸುಸಜ್ಜಿತ ಅಗೋಚರ ಮಾಯಹಾಸಿಗೆ ಕುಂಠಿತ ಹಿಂಗಾಲು, ಕೊಕ್ಕೆ ಉಗುರು ದಿಂಬಿಗೆ, ಗಟ್ಟಿಹಿಡಿತ, ಜೋತುಬಿದ್ದೇ ಗೊರಕೆಹೊಡೆಯುವ ಭೂಪ ಎಲ್ಲೋ ಜೋಗಪ್ಪ ನಿನ್ನ ಅರಮನೆ? ಎಲ್ಲೋ ಜೋಗಪ್ಪ ನಿನ್ನ ತಳಮನೆ? ಎತ್ತರಕೆ ನೇತುಬೀಳುವ ಗಗನಚುಂಬಿ ಆವಾಸಿ ಕಳ...