Posts

6-7 poems

Sheshagiri Jodidar November 23, 2018  ·  ಅಭಿವ್ಯಕ್ತಿ ವೃತ್ತಿಯಾದಾಗ, ತೀವ್ರತೆ ಹಾಗು ಪ್ರಾಮಾಣಿಕ ಸೃಜನಶೀಲತೆ ದಾರಿತಪ್ಪಿ ಕೇವಲ ಸುದ್ಧಿಯಾಗುತ್ತದೆ. ಗ್ರಹಿಕೆ, ಸ್ಪಂದನೆಗಳ ನಡುವಿನ ಅಂತರ ಸಾಮಾಜಿಕ ಸ್ವಾಸ್ಟ್ಯಕ್ಕೆ ಹಿತಕರ. ___________________________________________________________________________________ Sheshagiri Jodidar November 26, 2018  ·  ಗೋಡೆ. ಸಮಯಕ್ಕೆ ತಕ್ಕಂತೆ, ಅನುಕೂಲಕ್ಕನುಗುಣವಾಗಿ ಕಟ್ಟಿನಿಲ್ಲಿಸಬಹುದು ಗೋಡೆಗಳನ್ನು ಎಲ್ಲದರ ವಿಭಜನೆಯಲ್ಲಿ ಎಲ್ಲ ಕಡೆಯಲ್ಲೂ. ನಿರ್ಮಾಣ ಸಾಮಗ್ರಿಗಳ ಹೇರಳ ಲಭ್ಯತೆಯಲ್ಲಿ ಎತ್ತರಕ್ಕೆ ಮಿತಿ ಇಲ್ಲ, ವಿವಿದತೆಗೆ ಕೊರತೆಇಲ್ಲ ತಂತ್ರಜ್ಞಾನ ನವೀನ ಕಲಾಪ್ರಜ್ಞೆಯನ್ನು ಕೆಣುಕಿದಾಗ ಅಗಲ, ಆಳ,ವರ್ಣಮಯ ವಿನ್ಯಾಸಗಳು ದೃಶ್ಯಗ್ರಹಿಕೆಗೆ ಎಟುಕದೆ ದೃಷ್ಟಿದೋಶ . ಎಷ್ಟೋ ಸುತ್ತಿನ ಕೋಟೆಯಲಿ ಒಳ ಕೇಂದ್ರ ಪದರ ಪಾರದರ್ಶಕ ಭಿತ್ತಿ ಗೋಚರಿಸುವುದಿಲ್ಲ ಸಾಮಾನ್ಯದೃಷ್ಟಿಗೆ ಯಾವ ಯಂತ್ರಕ್ಕೂ ಎಟುಕುವುದಿಲ್ಲ, ಯಾವ ಮಂತ್ರಕ್ಕೂ ಮುಕ್ಕಾಗುವುದಿಲ್ಲ ಪುರಾತನ, ಪೌರಾಣಿಕ, ಐತಿಹಾಸಿಕ ಗೋಡೆ ಮಜಬೂತಾಗಿದೆ ಪ್ರಾಚೀನ ಗಾರೆಯ ತೇಪೆಯಿಂದ ಧೂಳೆಬ್ಬಿಸದೆ, ಬೀಳಿಸಿ,ನಿರ್ಣಾಮ ಮಾಡುವುದು ನಿಶ್ಯಭ್ದದಲಿ ಅಸಾಧ್ಯ, ಸುಲಭವೂ ಅಲ್ಲ ತಮ್ಮ ಕೋಶದಲಿ ಅಧಿಕಾರನಡೆಸುವ ಸಾಮ್ರಾಜ್ಯಶಾಹಿಗಳು...
ಕೊಡಚಾದ್ರಿ.... . ಬೆಟ್ಟದ ಹುಟ್ಟು ಹುಡುಕಿದರೂ ನಿಶ್ಯಬ್ಧ ಮೌನ ವಿಸ್ತಾರ ಉತ್ತರ ಶಿಖರ ಚಿಗುರುವುದಿಲ್ಲ, ಸೈಂಧವ ಎತ್ತರ  ತಳದಲ್ಲೇ ಕವಲಾದ ಬಿಳಲು ಶಿಖರಗಳು ವಿವಿಧ ಮಜಲುಗಳ ಮನಸಿನ ಕಣಿವೆಯಲ್ಲಿ ಊಹೆಗೆ ನಿಲುಕದಷ್ಟು ಪುರಾತನ ಹಸಿರು ಅಡಗಿರುವ ಕಾಮನ ಬಿಲ್ಲು, ಕಡಿದಾದ ಕಾರ್ಗಲ್ಲು ನೋಟ ಸೀಳಿದಷ್ಟೂ ನೀಟಾದ ಜೋಡಣೆ ನಾಟಕದ ಪರದೆಗಳು ಒಂದರ ಹಿಂದೆ ಒಂದು ಎಂದೋ ಚಿಮ್ಮಿ ಘನೀಕರಿಸಿ ನಯವಾದ ಶಿಲೆ ಕರಗಿ ಮಣ್ಣಾದ ಅವಕಾಶದಲಿ ಜೀವಜಾಲ ಹಿಗ್ಗಲಾರದ ಬೆಟ್ಟ ಸವೆಯುವುದಿಲ್ಲ, ನೋಡಿದಷ್ಟೂ ಮನತಣಿಯದ ತಾಣ ಹಿನ್ನೋಟಕೆ ಸಿಕ್ಕ ಅದೇ ಗಂಭೀರ ನಿಲುವು ಇನ್ಯಾವುದೋ ಆಯಾಮದಲಿ, ಅದೃಶ್ಯ ಕ್ಷಣ,ಕ್ಷಣಕೆ ಬದಲಾಯಿಸುವ ಶೃಂಗಾರ ಪರಿಪಾಠ ಇಂಚು,ಇಂಚಿಗೂ ಸಂಚಿನಲಿ ವೈವಿದ್ಯ ವರ್ಣ ಪ್ರಶಾಂತ ನಿಶ್ಚಲ ಸೌಂದರ್ಯ ಚಂಚಲ ಹಕ್ಕಿ ಹಾರಟದಲಿ ಹಗುರ ಮನಸು ಕೋಶ,ಕೋಶಗಳಲಿ ಎದ್ದ ಆತ್ಮಪ್ರತಿಧ್ವನಿ ಜಡದೇಹದಲಿ ಸಂಚಾರ ಶಾಂತೋನ್ಮಾದ ತರಂಗ ಆನಂದಲಿ ಅವರ್ಣನೀಯ ಚೇತನ ಅನಪೇಕ್ಷಿತ ತಾತ್ಕಾಲಿಕ ಇರುವಲ್ಲಿ ಶಾಶ್ವತ ಹುಡುಕಾಟ ಅಪೇಕ್ಷಿತನಾದಲ್ಲಿ! ಯಾರು? ನಾನೆಲ್ಲಿ? ಆಕಾಶ ಕನ್ನಡಿಯ ನಿರ್ವಾತದಲ್ಲಿ, ಪ್ರತಿಬಿಂಬಿಸಲಾರದ ಇರುವಿಕೆ ಕಾಡು, ಮರ ಹಕ್ಕಿ ನದಿ, ತೊರೆಗಳಲ್ಲಿ ಪ್ರತಿಫಲನ ತಡಕಾಡಿ, ಹುಡುಕಿದರೂ ಶೂನ್ಯತೆಗೆಲ್ಲಿಯ ಎಲ್ಲೆ? ಅನಂತದಲ್ಲೇ ಕರಗಿಮಾಯವಾಗುವ ಜೀವದ ಕುರುಹಾದರೂ ಎಲ್ಲಿ? ದಿಗಂತ, ಕಣಿವೆಯ ಕಂದರದಲ್ಲಿ ನಿರ್ಮೋಹ ಅನ್ಯತೆಯಲಿ ಪರಮಾಣು,ಬ್ರಹ್ಮಾಂಡ ಮಾಯಾಲೋಕದಲ್ಲಿ ಸತ...
ಫುಟ್ ಬಾಲ್ 28-10-18 ವಿಶ್ವ ಫುಟ್ಬಾಲ್ ಪಂದ್ಯ ನಡೆಯುತ್ತಿದೆ ಕ್ರೀಡಾಂಗಣದಲ್ಲಿ.ಕಿಕ್ಕಿರದ ಜನ, ಕಿವಿಗಡಚುವಂತಹ ಸದ್ದು....ಹುಚ್ಚೆದ್ದ ಅಂತರಾಷ್ರ್ಟೀಯ ಪ್ರೇಕ್ಷಕರ ಕಿರುಚಾಟ,ಸದ್ದು, ಪದವಾಗದ ಅರ್ಥಹೀನ ಧ್ವನಿ,ತಿಳಿಯುತ್ತಿಲ್ಲ,ಯಾರಿಗೂ.ಯಾರಿಗೆ,ಯಾರಿಂದ,ಪ್ರೋತ್ಸಾಹನಿರುತ್ತೇಜನ?ಹುರಿದುಂಬಿಸುವ ಜಯಕಾರ ಸಮರವೀರರಿಗೆ, ಮೊಳಗಿದ ಯುದ್ಧಘೋಷಣೆ, ಏನೂ ಕೇಳುತ್ತಿಲ್ಲ. ವಿಶಾಲ ಹಸಿರು ಹಾಸಿಗೆಯ ಮೈದಾನದಲ್ಲಿ,ಎರಡು ಗೋಲು ಪೋಸ್ಟ್ಗಳಿವೆ ವಿರುದ್ಧದಿಕ್ಕಿನಲ್ಲಿ.ಅವೆರಡರ ನಡುವೆಯೇ ನಡೆದಿರುವ ಆಟ,ಹೇಗೆ ತಲುಪಿದರೂ ಎರಡು ಗುರಿಕಂಬಗಳ ನಡುವಿನ, ಖಾಲಿತನವನ್ನ ತಲುಪಲೇ ಬೇಕು.ಗೋಲುಬಲೆ, ಗೋಲುರಕ್ಷಕನಿಗೆ ಮಾತ್ರ.ಜಾಗಕದಲದ ದಿಗ್ಭಂದನ.ಬಲೆಯಲ್ಲಿ ಚೆಂಡು ಹಾಕುವುದೇ ಗೆಲುವು,ಚೆಂಡು ತಡೆಯದಿರುವುದೇ ಸೋಲು.ಇದು ಕ್ರೀಡಾನಿಯಮ, ಪೈಪೋಟಿ, ಅದಕ್ಕಾಗಿಯೇ ಇಲ್ಲಿ ಈಗ ನಡೆದಿರುವ ಮಹಾಸಮರ, ಖಾಲಿ, ಬರಿಗೈಲಿ ತಲುಪವಂತಿಲ್ಲ, ತಾವೂ ಹೋಗುವಹಾಗಿಲ್ಲ. ಹೋದರೂ ನಗಣ್ಯ, ಅದು ಗೋಲಲ್ಲ.ಆ ಬಲೆಯೊಳಗೆ, ಕೇವಲ ಚೆಂಡುಮಾತ್ರ ಕಳಿಸಬೇಕು.ಔಟಾದರೂ ಪರವಾಗಿಲ್ಲ, ಗಡಿರೇಖೆ ಬಿಟ್ಟು. ಕ್ಷೇತ್ರ ಗೋಲ್ ಹೊಡೆಯಬಹುದು ಎಲ್ಲಿಂದಾದರೂ ಮೈದಾನದಲ್ಲಿ, ದಿಕ್ಕುಮಾತ್ರ ಪರಸ್ಪರ ವಿರುದ್ಧವಿರಬೇಕು ಅಷ್ಟೇ! ಅಥವಾ ಒಬ್ಬರಿಂದ ಒಬ್ಬರಿಗೆ ಪಾಸ್ ಕೊಟ್ಟು ಇನ್ನೊಂದು ಪಕ್ಕಕ್ಕೆ ತಂದು,ಗೋಲ್ ಸಮೀಪ ಸಮಯಸಾಧಿಸಿ, ಕೋಟೆ ಭೇದಿಸಿ ಚೆಂಡನ್ನು ನುಗ್ಗಿಸಬೇಕು.ಇವೆಲ್ಲವೂ, ಆದರೆ ಕಾಲಿಂದ ಮಾತ್ರ.ಕೈ,ಮ...
October 5, 2013,  ·  ಆದಿಪುರಾಣ. ಜಲಜ ಶಿಲಾ ಸುಪ್ಪತ್ತಿಗೆಯ ಚರಟದ ಚಾದರ ಹೊದ್ದು, ಮಲಗಿರುವ ಕುಂಭಕರ್ಣ. ಧರೆಗೆ ಹಿಡಿದಿತ್ತು ಗ್ರಹಣ, ಚಿರಂಜೀವಿ, ಭ್ರೂಣ ಬೆಳೆಯಲಿಲ್ಲ ಪೂರ್ಣ, ವಿಕಾಸದ ಅನಂತ ಪುರಾಣ ಆದಿ,ಅಂತ್ಯವಿಲ್ಲದ ನಿರಂತರ ಪಯಣ ಆ ಕಾಲ ಒಂದಿತ್ತು ಧರೆ ಬೆಂಕಿ ಉಗುಳಿತ್ತು ನಿರ್ಜೀವ ಹೊಗೆ ಹೊರಹಾಕಿತ್ತು, ಪ್ರಕ್ಷುಬ್ದ ವಾಗಿತ್ತು, ಭೂತಾಯ ನಿರ್ಜಲ ಬಸಿರು ಮೈ ಮರೆತು ಹರಿಯುತಲಿತ್ತು ಜಲ, ಜ್ವಾಲಾ ತೊರೆ, ಅಂದೇ ಮೈನೆರೆತ ಆ ವಸುಂಧರೆ, ತೊಟ್ಟಿದ್ದ ಆ ಅಂದಿನ ಹಸಿರು ಫ್ಯಾಶನ್ ಸೀರೆ ಅಂಚಿಗೆ ವರ್ಣಮಯ ವಿನ್ಯಾಸ ಬೇರೆ, ಜ್ವಾಲಾಮುಖಿಗಳ ಅಂಚು, ಸಾಗರದ ಸೆರಗು ಸಪೂರ ಪಾರದರ್ಶಕ ತೆಳುವಾದ ಪೊರೆ, ನೀಲಹಸಿರು, ಬೂದಿ ಕೆಂಪು, ಅಪರೂಪದ ಸುಧೀರ್ಘ ವರ್ಷಧಾರೆ ಮೆರಗು ಏನೆಲ್ಲಾ ಕುಸುರಿ ಕಲೆ ಅದರ ಮೇಲೆ? ಹೊರೆ, ಚಿತ್ತಾರದ ಬರೆಯಲ್ಲಿ ಗೆರೆ, ಕೇಳುವುದಿಲ್ಲ ಯಾರ ಮೊರೆ, ಜೀವಜಾಲದ ಬಹುವಿದ ಶಾಶ್ವತ ಸೆರೆ, ಗಡಿಪಾರು ಕಾರಾಗೃಹದಲ್ಲಿ ಎಗ್ಗಿಲ್ಲದ ಕೊಲೆ, ಸೃಷ್ಟಿ, ಲಯ ಸಹಜ ವಿನಿಮಯ ಲೀಲೆ...!!!
Image
                        ಹೃದಯ ಸಂಭಾಷಣೆ.                          17 September. 2018. Edited Poem...of a retro..            ರೈತ             ಅಕಾಲಿಕ, ಕೆಲಸಕ್ಕೆಬಾರದ ಅನಿಶ್ಚಿತ ಮಳೆ,               ಹೆಸರಿಗೆ ಮಾತ್ರ ಛಳಿ, ಪಂಚಾಂಗ ಪದಗಳು              ಎಂದೂ ಕೈ ಕೊಡದ ನನ್ನೂರ ರಣ ಬಿಸಿಲು             ನೆಲದ ಒಡಲಲ್ಲಿ ಶಾಶ್ವತ ನಿರ್ಜಲ ಬಿರುಕು              ಹೊಗೆಯಾಡುವ ಜಾಲಿ, ಒಣ ಹೊಂಗೆಯ ನೆರಳಲ್ಲಿ,             ನೀರಿಲ್ಲದ ಹಳ್ಳದ ಉಸುಕಲ್ಲೇ ಜಲಯಾನದ ಬದುಕು            ಧಗೆಯ ಪಥ್ಯಾಹಾರ ಉಂಡ, ಹಟತಪಸ್ವಿ, ರೈತಋಷಿ            ಮುಕ್ತಿ ಮಾರ್ಗಕೆ ದೇಹದಂಡನೆ ಸಹಜ ,ಹಸಿವೇಕೆ? ಭೈರಾಗಿ!     ...
.. Sheshagiri Jodidar September 9 at 9:22 AM  ·  Greedy inventions and unwise exploitation of natural resources by human prove that we are genetically loaded with the suicidal tendency. It may be a mechanism of natural evolution to balance the nature with a total destruction by its own highly evolved species called Homo sapiens... The “HUMAN” with an advanced brain and a modified and suitable bipedal body of a vast vision and foldable fingers with useful wrist grips...The closely packed neurons that give him the advantage o f thinking, reasoning, imagination, emotions and memory etc have made him a unique and the most powerful but idiotic species who.......unfortunately, this evolutionary gained strength is being misused by him in a most ignorant way in killing not only himself but the entire habitants of this planet...and thereby destroying the present ecological system. The present unpredictable, violent and extreme climatic changes...