Posts

Showing posts from April, 2011
ಅಮ್ಮ ಎಲ್ಲ ದಿಕ್ಕಿಗೂ ಹಾಸಿದ ಮಡಿಲು, ಸಡಿಲವಾಗದ ಬಾಚಿ ತಬ್ಬಿದ ತೋಳು ಅಪ್ಪಿಕೊಂಡಿದೆ ಪೀಳಿಗೆಯ ಎಲ್ಲರನ್ನೂ ತನ್ನ ಸುಕ್ಕು ಗಟ್ಟಿದ ಚರ್ಮದಲಿ ಪೋಣಿಸಿ ಕೈ... ತೇಪೆ ಹಾಕಿ ಹೊಲಿದಿದೆ ಜೋತುಬಿದ್ದ ಮಾಂಸಲ ತೋಳಿನಲ್ಲಿ.... ಕಾಯುತ್ತಿದೆ ಕಣ್ಣಿಗೆ ಹಚ್ಚಿ ಎಣ್ಣೆ , ಮುಚ್ಚಿ ಗರ್ಭದಲಿ ಭದ್ರ ಪಡಿಸಿ ಕರಗುವ ಬೆಣ್ಣೆ ಅಮ್ಮ ನಾವೆಲ್ಲಾ ಕ್ಷೇಮ ಆಲದ ಅಸಂಖ್ಯಾತ ಬಿಳಲು ಕಂಭಗಳು ಭದ್ರ, ಹಸಿರು ಚಾವಣಿಹೊತ್ತ ಈ ವೂರುಗೋಲು ಕಾಂಡವೋ? ಬೇರೊ? ಅವಲಂಬಿತ,ಅವಲಂಬನದ ಈ ದ್ವಿಪಾತ್ರಗಳಲ್ಲಿ ಗುರುತು ಹಿಡಿಯುವ ಹುಚ್ಚು ನಿನಗ್ಯಾಕೆ? ಆಲದ ಮರದಲ್ಲಿ ಲೆಕ್ಕವಿಲ್ಲದಷ್ಟು ಪುಟ್ಟ ಹತ್ತಿ ಹಣ್ಣು. ಬಣ್ಣ ಮಾತ್ರ ಒಂದೇ,ಗಾತ್ರ ಸ್ವಲ್ಪ ಅದಲು ಬದಲು ಒಳಗೆ ಹುಳುವೆಂದು ಭ್ರಮಿಸಿದ ಅದೇ ಸಗಣಿ ಸೊಳ್ಳೆಗಳು ತಿಪ್ಪೆಯಲ್ಲಿ ಅದೇ ಪ್ರಭೇದದ ಬೀಜಗಳಂತೆ! ಗೊತ್ತೇ ಇರಲಿಲ್ಲ ನನಗೆ ತಿಳಿದಾಗ ಸೋಜಿಗಕ್ಕಿಂತ ಹೆಚ್ಚು ಹೇಸಿಗೆ ಆಯ್ತು ಅನ್ನಿ, ನಿಜ.. ಆದರೂ ಒಪ್ಪಲೇ ಬೇಕು ವಿಧಿಯಿಲ್ಲ ನಾನೂ ಅದೇ ಬೀಜಗಳ ಮೊಳಕೆಯೆಂದು ಅಳಕ್ಕಿಳಿದ ಆ ತಾಯಿ ಬೇರು ಇಳಿದಿದೆ ಪ್ರಪಾತದಲ್ಲಿನ ವಂಶವೃಕ್ಷ ಕವಲಾದ ನನ್ನವರು ಶಾಕೆಗಳಲ್ಲಿನ ಬಿಳಲು ಬೇರು ಚದುರಿ,ಚೆಲ್ಲಾಪಿಲ್ಲಿ, ಸೋರಿ ಹೊಗಿದ್ದಾರೆ ದಿಕ್ಕು,ದಿಕ್ಕು ನೆಲಸಿದ್ದಾರೆ ಭದ್ರವಾಗಿ ಟಿಸಿಲೊಡೆದು ಅಲ್ಲಲ್ಲಿ ಹುದುಗಿ ಹೋಗಿವೆ ಆಳದಲ್ಲಿ, ಮೂಲ ರಚನಾತ್ಮಕ ಅಣುವಿನಲ್ಲಿ ಅನುಮಾನ!! ಹತ್ತಿಯೂ? ಅಂಜೂರವೋ ? ಜ್ಞಾನದಲ್ಲಿ ಎರಡೂ ಒಂದೇ ಅಷ್ಟೇ ಏಕೇ ಈ ನಿಜದಲ್ಲಿ ಸರ...
ಕವನ ಅಸ್ಪಷ್ಟವಿರಬಹುದು, ನನ್ನ ಕವನ ದಯಮಾಡಿ ಕನ್ನೋಡಿಸಿ ಮತ್ತೊಮ್ಮೆ ಪೋಣಿಸಿದ ಪದಗಳು ಹಾರವಾಗದಿರಬಹುದು ಕಾಗದದ ಮೇಲೆ ಜೋಡಿಸಿದ ರಾಶಿ ಪದಗಳೇ ಹೂ ಗುಚ್ಛ ಹಾವೆಂದು ಹೆದರದಿರಿ ಭಾವನೆಯೇ ನಿರ್ಮಾಲ್ಯ ಅನಿಸಿದಾಗ ವಿಸರ್ಜನೆಯ ಭಾರ ನಿಮ್ಮದಾಗಿರಲಿ.   ಅಸಂಗತ ಸಂಗೀತ, ಕಿವಿಗಡರುವ ಕಲಸುಮೇಲೋಗರ ಶಬ್ದದಲ್ಲೂ  ಮಧುರ ಗೀತೆ ಪ್ರತಿಧ್ವನಿಸಬಹುದು  ತಾಳೆಯಾಗಬಹುದು ನಿಮ್ಮ ಅಭಿರುಚಿಗೆ  ನಿಮ್ಮ ಯಾವುದೋ ಒಂದು ಅನುಭಾವಕೆ  ಮುಕ್ತ ಕಿವಿ ನಿಮ್ಮದಾಗಲಿ,   ಕಪ್ಪು ಹಾಳೆಯಲ್ಲೂ ಚೆಲ್ಲಬಹುದು ಕಾಮನ ಬಿಲ್ಲಿನ ಬಣ್ಣಗಳ ಸಾಮರಸ್ಯದ ಸರಸ  ಮೂಡಿ ಮರೆಯಾಗಬಹುದು ಕುಂಚದಲ್ಲೇ  ಸೃಷ್ಟಿ ಕಲಾ ಪ್ರಪಂಚ  ಆಗಬಹುದೇನೋ ಆತ್ಮಾನುಭೂತಿ  ಪ್ರೀತಿಸುವ ಹೃದಯ ನಿಮ್ಮಲ್ಲೇ ಇರಲಿ,  
ಅಪ್ಪ   ಕಾಡಿನ ಗುರುತರ ಕರ್ಮಗಳ ಹೊತ್ತು ತೂಕಡಿಸಿ,ಆಕಳಿಸಿ,ಜೀವಜಾಲ ಅನಿವಾರ್ಯ ತಾನೇ ಎಂದು ಗ್ರಹಿಸಿ ಪ್ರಜಾರಹಿತ ಸಾಮ್ರಾಜ್ಯವಾಳಿದ ಸಿಂಹ, ಅಘೋಷಿತ ಅನಭಿಶಕ್ತ ಚಕ್ರವರ್ತಿ  ಮರೆಯುತ್ತಾನೆ ಪೋಷಕ ಪ್ರವೃತ್ತಿಯಲ್ಲಿ  ತನ್ನ ಪೀಳಿಗೆಯನ್ನೇ ಗುತ್ತಿಗೆಕೊಡುವ ಟಿಪ್ಪೂಸುಲ್ತಾನ್  ನಿಜಕೂ ನನ್ನಪ್ಪ ಮಹಾನ್.   

ಚಿಟ್ಟೆ

ಪೂರ್ವಜರು ಎಂದೋ ಬಿಟ್ಟುಹೋದ ಗಸೆ,ಗಸೆ ಕಾಳುಗಳು ಅಡುಗೆ ಕೋಣೆಯ ಹಸಿರ ಚಪ್ಪರದ ಮೇಲೆ ಮೊಟ್ಟೆಒಡೆಯುವ ಬ್ರೂಣದಲಿ ಪ್ರತ್ಯಕ್ಷ . ಮೈಎಲ್ಲಾ  ಬಳಕುವ ಉಂಗುರದ ಬಳೆಗಳು ತೆವಳಿ ನಿಧಾನ ಸರಿಯುತ್ತಿದೆ ಸಾವಕಾಶದಲ್ಲಿ ಮೈಯೆಲ್ಲಾ ಕಾಲುಗಳು ಮೃದುವಾದ ಅಂಗಿಗೆ ಮರುಜನ್ಮ ಪಡೆಯುತ್ತಾನೆ ಬಕಾಸುರನಾಗಿ ಘಟೋತ್ಕಜ  ಭೋಜನಪ್ರಿಯ ಮೇಯುತ್ತಲೇ ಇರುತ್ತಾನೆ ವ್ರತ ಹಿಡಿದ ಮಡಿವಂತ ತಿಂದದ್ದೇ ತಿನ್ನುತ್ತಾನೆ ಮತ್ತೆ ಮತ್ತೆ ಪ್ರತಿನಿತ್ಯ ಇದೇ ಅವನ ಪಥ್ಯ ಬಳುಕಿ ಬೆಂಡಾಗಿ ಕುಸಿದು ಬಿದ್ದ ನಿರ್ಲಿಪ್ತ ಊಟ ಬಡಿಸಿದ ಎಲೆಯೇ ಮಾಯ  ಅರಿವಿಲ್ಲದೇ ಅಳಿದು ಹೋದ ಹಸಿವು ಮಾಂತ್ರಿಕನ ಮೋಡಿಗೆ ಎದೆ,ಹೊಟ್ಟೆಯೇ ಮಾಯ ಕೂಪ ಮಂಡೂಕ,ಕಪ್ಪೆ ಕಬಳಿಸಿದ ಹಾವು ಅಂಗಾತ ಬಿದ್ದು ನಿದ್ರಿಸಿದ ಕುಂಭಕರ್ಣ  ಮರೆತುಹೋದ ತನ್ನ ಪೂರ್ವ ಪರಾಪರ  ಅಚಲ ಶಾಂತಮೂರ್ತಿ ಮೆಚ್ಚಿಕೊಂಡ ಪರಿಸರ  ಇವನಿಗಿಲ್ಲ ಅವಸರ  ಹಿಂದೆ ಸರಿದ ಕಾಲ ಕರಗಿಲ್ಲ ಇನ್ನೂ  ರೂಪ ಮಾಸಿಲ್ಲ, ಉಳಿದ ಕಲೆ ಅಲ್ಲೇ ಶಾಶ್ವತ  ಗಳಿಸಲಿದ್ದಾನೆ...
ನೆಲ ನುಂಗಿದ ಕಡಲು..... 2011, ಮಾರ್ಚ್, ಹನ್ನೊಂದು ಮಧ್ಯಾನ್ಹ 2.46 ಕ್ಕೆ ಜಪಾನಿನ ಸನ್ಡಾಯ್ ನಗರದ ಉತ್ತರ ಪೂರ್ವ ಕಡಲತೀರದಲ್ಲಿ ಸಂಭವಿಸಿದ ಭೂಕಂಪ ಪ್ರಪಂಚದಲ್ಲಿನ ಅತ್ಯಂತ ಶಕ್ತಿಶಾಲಿ ಹಾಗು ವಿಧ್ವಂಸಕ ಭೂಕಂಪವೆಂದು ಅಮೇರಿಕಾದ ಭೂವಿಜ್ಞಾನ ಸಮೀಕ್ಷಣ ಸಂಸ್ತೆ ತಿಳಿಸಿದೆ.ಸನ್ಡಾಯ್ ನಗರದಿಂದ ಸುಮಾರು 134,ಕಿ.ಮಿ ದೂರದಲ್ಲಿ ಪೆಸಿಫಿಕ್ ಸಾಗರದ ಗರ್ಭದಲ್ಲಿ ಉಂಟಾದ ಈ ಭೂಕಂಪದ ತೀವ್ರತೆ ರಿಟರ್ ಮಾಪಕದಲ್ಲಿ 9 ಆಗಿತ್ತು. ಕೆಲವೇ ಕ್ಷಣಗಳಲ್ಲಿ ಈ ಭೂಕಂಪದ ಪರಿಣಾಮದಿಂದ ಕಡಲ ಆಳದಲ್ಲಿ ಎದ್ದ ಪ್ರಚಂಡ ಸುನಾಮಿ 30ಅಡಿ ನೀರಿನ ಗೋಡೆ ಅಲೆಗಳು,ಹಲವು ಕಿ.ಮಿ.ಗಳು ಒಳನಾಡಿಗೆ ನುಗ್ಗಿ ಪೂರ್ವ ಕರಾವಳಿಯಲ್ಲಿ ಅಲ್ಲೋಲ ಕಲ್ಲೋಲ ಉಂಟುಮಾಡಿದೆ. ಇದರಿಂದಾದ ಪ್ರಾಣ ಹಾನಿಯ ಅಂದಾಜು ಇನ್ನು ನಿಖರ ವಾಗಿತಿಳಿದು ಬಂದಿಲ್ಲ. ಇನ್ನು ಇದರಿಂದ ಜಪಾನ್ ದೇಶಕ್ಕೆ ಉಂಟಾಗಿರುವ ಆರ್ಥಿಕ ಹಾನಿಯನ್ನು ಸುಮಾರು 235 - 300 ಬಿಲಿಯನ್ ಅಮೇರಿಕನ್ ಡಾಲರ್ ಗಳು ಎಂದು ಅಂದಾಜು. ಅಷ್ಟೇ. ಈ ಭೂಕಂಪದ ಪರಿಣಾಮದಿಂದಾದ ಸುನಾಮಿಯ ಪ್ರಭಾವ ಕೇವಲ ಜಪಾನಿಗಷ್ಟೇ ಸೀಮಿತವಾಗಿರುವುದಿಲ್ಲ.ಪರೋಕ್ಷವಾಗಿ ಇದರ ನೇರ ಪರಿಣಾಮ ಜಪಾನಿನ ಆಸುಪಾಸಿನ ನೆರೆ ರಾಷ್ಟ್ರಗಳಲ್ಲಿ ಕಂಡು ಬಂದಿಲ್ಲ.ಆದರೆ ಈ ಸುನಾಮಿ ಅಲೆಗಳಿಂದ ಫುಕುಶಿಮ ಅಣುಸ್ತಾವರದ ಮೇಲೆ ಉಂಟಾದ ಅನೀರಿಕ್ಷಿತ ಹಾನಿ ಕೇವಲ ಜಪಾನಿಗಷ್ಟೇ ವಿನಾಶಕಾರಿ ಯಲ್ಲ,ಇಡಿ ಜಗತ್ತಿನ ಆರ್ಥಿಕ ವಲಯದಲ್ಲಿ ಏರುಪೇರು ಮಾಡಲಿದೆ.ಇನ್ನು ಈ ಅಣುಸ್ಥಾವರ...