ಚಿಯರ್ಸ್ ಹೇಳುವ.....ರಾತ್ರಿ,ಹಗಲು. ಬೆಳಕು ಹೊರಡುವ ಮುನ್ನ ಕತ್ತಲಿಗೆ ಹೇಳಿಹೋಗಿದ್ದು ಹೀಗೆ... "ಈಗ ಹೋಗುತ್ತೇನೆ.... ನಾಳೆ ಮತ್ತೆ ಬರುತ್ತೇನೆ, ನೀನು ಇಂದು ಉನ್ಮತ್ತಗೊಳಿಸಿದ ಕನಸಿನ ನಶೆಯನ್ನು ಇಳಿಸಿ ಎಬ್ಬಿಸಬೇಕಿದೆ..... ಅವರುಗಳನ್ನು ನಿನ್ನದು ತಪ್ಪಿಲ್ಲ...ನಿಜ ನೀನು ಎಂದಿನಂತೆ ಕಾರ್ಯನಿರತ ನೀನಿದ್ದ ಕಡೆ,ಮಂಪರು, ಕಲ್ಪನೆ,ಕನಸುಗಳು ಸಹಜ ಬದುಕಿನ ಬೆವರಿಂದ ಪರಾರಿ, ಆಕರ್ಷಿತ, ಇದು ನಿಜ ಸ್ವಾಭಾವಿಕ, ಲೌಕಿಕ ಕಾರಣ ವಾಸ್ತವ ಎಲ್ಲರದೂ ಝರ್ಜರಿತ, ನಾನೇನು ಮಾಡಲಿ ಹೇಳು...ಮೊದಲು ಬೆಳಕಿಗೆ ನಾನೊಬ್ಬನೇ ಅಗಿದ್ದೆ ವಾರಸುದಾರ ಆಗ ನೀನೇ ಆಗಿದ್ದೆ ಅಂಧಕಾರ ಸಾಮ್ರಾಜ್ಯದ ಸರದಾರ ಆದರೆ....ನಿಶೆ.... ನಿನ್ನನ್ನೇ ಅಣಕಿಸಿ, ಮೂಲೆ ಗುಂಪು ಮಾಡಿ, ನನ್ನ ವಿಶ್ರಾಂತ ಸ್ಥಿತಿಗೆ ಹೊಂಚುಹಾಕಿ ಕಾದುಕೊಂಡು.... ಚಂದ್ರನನ್ನೂ ಕೇರ್ ಮಾಡದೇ. ಹೊನಲು ಬೆಳಕುಗಳ ಪ್ರತಿಫಲನದಲ್ಲಿ ನಿನ್ನ ನೋಡಿ ನಗುವ, ನನ್ನನ್ನೇ ಹಂಗಿಸಿ, ಕುರುಡುಮಾಡುವ ಈ ಜನ ಯಾರಿಗೂ ಕಾಣಿಸದಂತೆ ಆನಂದಿಸುತ್ತಾರೆ. ತಮ್ಮದೇ ಬೆಳಕಿನ ಸೃಷ್ಟಿಯಲ್ಲಿ....... ನಮ್ಮ ಅಸ್ತಿತ್ವವನ್ನೇ ಮರೆತ....ಅಮಲು ಸದ್ಯಕ್ಕೆ ನಾವು ನಿಸ್ಸಾಹಯಕರು ಚಿಯರ್ಸ್ ಹೇಳಿ ಹೋಗುವುದೇ ಒಳ್ಳೆಯದು. ನಮ್ಮ ಒಗ್ಗಟ್ಟು ಹೀಗೆ ಇರಲಿ ಬಾ...ಕತ್ತಲೇ....ನಮ್ಮ ಕರ್ತ್ಯವ್ಯಕ್ಕೆ ಮರಳೋಣ ನಾಳೆ ನನ್ನ ಶಿಫ್ಟಿಗೆ ತಡಮಾಡದೆ, ಸಮಯಕ್ಕೆ ಸರಿಯಾಗಿ ಬಂದೇ ಬರು...
Posts
Showing posts from December, 2014
- Get link
- X
- Other Apps
ಅಮೀಬಾ..... ಪಾಪಿ....ಚಿರಾಯು..... ಅಂತ ಕೇಳಿದ್ದೆ....ಆದರೆ... ಅವಯವರಹಿತ ಅದೃಷ್ಯ ಅಸ್ತಿತ್ವಅಗೋಚರ... ಸರ್ವಂತರ್ಯಾಮಿ, ನಿರ್ವಿಕಾರದಲ್ಲಿ, ಪ್ರತ್ಯಕ್ಷ ... ಮೃತ್ಯುಂಜಯನಿಗೇಕೆ ಬೇಕು ಮೋಕ್ಷ? ಕನಿಕರದ ಭಿಕ್ಷೆ ಸೂಕ್ಷಮಸೂರದ ಕೆಳಗೆ...ನೋಡುವವರ ಭಾವನೆಗಳಂತೆ ತನ್ನದೇ ಕ್ರಿಯಗಳಿಗೆ ತಕ್ಕಂತೆ, ಬದಲಿಸುವ ಬಹುರೂಪಿ ಮಿಥ್ಯಾಪಾದ ಇರಬಹುದು, ಹುಡುಕಿದರೆ ಸಿಗಬಹುದು ಜಠರ, ಹಸಿವಿನ ಅರಿವಾದಾಗ ಚಲನೆ ಆರಂಭ....ಹುಡುಕಲು ಆಹಾರ, ಕ್ಲಿಷ್ಟ ಕ್ರಿಯಗಳ ಕ್ಷಿಪ್ರ ದೇಹದ ಅತಿ ನೇರ ಸರಳಜೀವಿ, ಚೇಷ್ಟೆಗಳು ಮಾತ್ರ ನಿಮ್ಮಂತೆ, ದೆಸೆಯಿಲ್ಲದ ಪರದೇಸಿ ದಿಕ್ಕನ್ನೇ ಸವರಿ ದಾರಿಯಾಗಿಸುವ ಮಹಾ ಸಾಹಸಿ ಕಾಯವೇ ಬಾಯಾಗಿಸುವ ವಿಚಿತ್ರ ಮೋಹ,ಸದಾ ದಾಹ ಕಡಿದು ತುಂಡುಮಾಡಿದರೂ...ಅಖಂಡ ಉಳಿಯುವ ಅಮರ ಕತ್ತಿ ಅಲಗಿನ ಮೊನಚಲ್ಲೇ ನುಸುಳಿ ತೆವಳಿ ಪರಾರಿ ಸರ,ಸರ ಮುಕ್ತನ ಕಣ್ಣಾ ಮುಚ್ಚಾಲೆಯಲಿ ಮಾಯವಿ ದೇವತೆ ಮಾನವನ ಭಯವಿಲ್ಲ, ದೇವರೇ ಗೊತ್ತಿಲ್ಲ, ತನ್ನ ಸಹಜೀವಿಗಳಂತೆ ಪ್ರೇಮದ ಕಾಮಕೇಳಿಯಲಿ ನಿರ್ಮೋಹಿ ನಿರ್ಲಿಂಗಿ ಮುಂದುವರಿಯುವ ವಿದಳನದ ಮೊತ್ತ ಕಲ್ಪನಾತೀತ ಸಮಲಿಂಗಿ ಕಾಲಚಕ್ರದಲ್ಲಿ ಚಿರಂಜೀವಿ ಪಟ್ಟ ಮನಬಂದಂತೆ ರೂಪ ಬದಲಿಸಬಲ್ಲ ಭಿನ್ನ ಲಿಂಗಿ ಭೀಕರ ಬರಗಾಲದಲ್ಲೇ ಗುಣಿಸುತ್ತಾನೆ ತನ್ನ ಸಂತತಿ ಲೆಖ್ಕ ವಿಚಿತ್ರ...ಕೇವಲ ಹೆಚ್ಚಳ, ಬದುಕು ಭಾಗಲಭ್ದವಾಗದೇ ಉಳಿಯುವ ಶೇಷ ಮಾತ್ರ ಶೂನ್ಯದಿಂದ ದೂರ ಬದುಕೇ ಅಧುನಿ...
- Get link
- X
- Other Apps
All Animals are Embryo ciders... There was an argument that egg eaters are vegetarians. The egg eater declared.. and they are non vegetarians argued. A non vegetarian.....But a proud Vegetarian declared that as egg contains embryo of the chick... which in fact a future being and the yolk blood drop...and it is almost killing an animal....bla..bla......etc.... I was silent...for a while... normally I don't take part in this type of senseless ignorant discussion... But I decided to put my hat in the ring.... All vegetarians or non vegetarians or egg consumers but claimed to be vegetarians...are all embryo eaters....!!! vegetarians were shocked and shot back what nonsense....? fruits, vegetables, grains and pulses are all plant origin... but I said.....what about Milk and its product... ???? No...that is a different issue and all primates which give birth directly to young ones and hence....that is the food for its calves prepared by mother....!!! argued...the Vege...
- Get link
- X
- Other Apps
ಖಾಲಿ ಗೊತ್ತಿಲ್ಲ....ಯಾಕೋ.... ತಲೆ ಪೂರಾ.... ಖಾಲಿ......... ಮನಸ್ಸು, ಟೋಟಲ್ ವ್ಯಾಕ್ಯೂಮ್.... ಅಂತರಿಕ್ಷನೌಕೆಯ ಒಳಒತ್ತಡದಂತೆ... ಅನಿಲರಹಿತ ಸರಳ ಖಾಲಿ ಅವಕಾಶ.... ಆದರೂ ಪರಮಾಣುಮೊತ್ತ ಸರಳ ಆದರೆ ಸಂಕೀರ್ಣ..... ಅಲ್ಲೂ ಬಿಡಲಿಲ್ಲ ಈ ಮಾನವ ರೂಪ ಘನದಲ್ಲಿಯೂ ಅಸ್ತಿತ್ವ ಕಳೆದುಕೊಂಡ ಹಗುರ, ತೇಲುವ ಪರಿಸರ.... ಆದರೆ ಓಜೋನ್ ರಹಿತ ಪದರದಲ್ಲೂ..... ಕೃತಕ ಉಸಿರಾಟ.... ದೇವಕಣ,ಕಣ,ಕಣದಲ್ಲಿ.....
- Get link
- X
- Other Apps
ಅರವತ್ತೈದಕ್ಕೆ ಕಾಲಿಟ್ಟ ವರ್ಷ . ಇಂದಿಗೆ ಈ ಭೂಮಿಗೆ ೬೫ ವರ್ಷವಾಯಿತು ನನ್ನ ಪ್ರಕಾರ. ತುಂಬಾ ಬದಲಾವಣೆ, ಸುಧಾರಣೆ ಕಂಡಿರುವ ಈ ಬದುಕ ಹೊತ್ತ ಭೂಮಿಗೆ ಆಯಾಸವಾಗಿಲ್ಲ.... ಆದರೆ ಪ್ರವಾಹ, ಬಿರುಗಾಳಿ, ಚಂಡಮಾರುತ,ಜ್ವಾಲಾಮುಖಿ, ಭೂಕಂಪ ಇತ್ಯಾದಿ ವಿಕೋಪಗಳನ್ನು ಎದುರಿಸಿದರೂ ಶಿತಲಗೊಂಡು, ಕೃಶವಾಗಿದೆಯೇ ವಿನಾಃ ಸೋಲೊಪ್ಪಿಕೊಂಡಿಲ್ಲ..... ತಾನೇ ಆಸರೆ ನೀಡಿದ ಆವಾಸಿಗಳ ಹರಿದು ತಿನ್ನುವ ಅಸಹ್ಯ ಪೈಪೋಟಿಯಿಂದ, ಹೊದ್ದಿರುವ ಹೊದಿಕೆ ಹಳೆಯದಾಗಿ ಚಿಂದಿಯಾಗಿದ್ದರೂ, ಕಾಮನಬಿಲ್ಲಿನ ಬಣ್ಣದ ತೇಪೆಗಳನ್ನು ಹೊತ್ತುತನ್ನತನ ಉಳಿಸಿಕೊಂಡಿದೆ. ಆದರೆ ಬಳಲಿದೆ..... ನಘ್ನವಾಗಿಲ್ಲ...ವಿನಾಶದನಂತರ ವಿಕಾಸ...... ಒಂದು ಆಶಾಕಿರಣ ಹೊತ್ತು ಉಸಿರುತ್ತಿದೆ..... ಮೌನವಾಗಿ ಬದುಕು,ಅರ್ಥವಾಗದ ಒಪ್ಪಂದಗಳೊಂದಿಗೆ..... ಮಡುಗಟ್ಟಿದ ಮೌನದ ಹಿಂದೆ ಕೋಪದ ಲಾವ ಜಮಾಯಿಸುತ್ತಿದೆ...... ಸ್ಫೋಠಗೊಳ್ಳುವುದೋ, ಅಥವಾ ಒತ್ತಡಕ್ಕೆ ಭೂಮಿಯೇ ನಡುಗಿ ಛಿದ್ರವಾಗುವುದೋ ತಿಳಿದಿಲ್ಲ.... ಈ ಅನಪೇಕ್ಷಿತ ಬದಲಾವಣೆಗಳು ಅರ್ಥವಾಗದ ನನಗೆ ಕಾಲವೇ ಘನೀಕರಿಸಬೇಕಿತ್ತು ಎನ್ನುವ ಬಾಲಿಶ ಆಸೆ..... ವಿಕಾಸದ ಈ ಮುಖ ಭಯಂಕರ..... ಆದರೆ....ಭೂಮಿ ನಿನೇಕೆ ಇನ್ನೂ ಇಷ್ಟು ಸುಂದರ? .