Posts

Showing posts from August, 2015
ಬಿನ್ನಹ... ದಯಮಾಡಿ ನನ್ನ ಕುಲ ಗೋತ್ರ ಕೇಳಬೇಡ... ನನ್ನ ಹೆಸರು ನಿನಗೆ ಬೇಕಿಲ್ಲ.. ಹೆಸರಿನಿಂದಲೇ ನನ್ನ ಅಸ್ತಿತ್ವವನ್ನು ಅಳಿಯುವ ಜನ  ನನ್ನವರು... ಜಾತಿವಾದಿ,ಮತಾಂಧ,ಬುದ್ಧಿಜೀವಿ ಬಿರುದು ಕರುಣಿಸುತ್ತಾರೆ ನಾನು....ನಾನೇ... ನಾನು ಅಷ್ಟೆ.... ನಾನೊಬ್ಬ ಮನುಷ್ಯನಂತೆ ನಿನಗೆ ಕಂಡರೆ ನಾನು ಧನ್ಯ.. ಅದೇ ನನ್ನ ಆಸ್ತಿತ್ವ...ನಿನ್ನ ಹೆಸರು ಬೇಡ ನನಗೆ... ನೀನು ನನ್ನಂತೆ ಕಾಣುತ್ತೀಯಾ... ಸ್ವಪ್ರಭೇದ..ಅಷ್ಷು ಸಾಕು....ನಮ್ಮ ಸಂಭಂದ.... ಈ ಮಹಾಯಾತ್ರೆಗೆ.
ಕಡಲ ಸಂವಾದ.... ನಾನು... ಸಾಗರವೇ, ನೀನೊಬ್ಬನೆ ಹೀಗೆ....ಏಕೆ? ಅವಿಶ್ರಾಂತ ಕ್ರಿಯಾಶೀಲ, ನಿನ್ನ ಮೌನವ ಕೇಳಿದವರಿಲ್ಲ. ನಿನ್ನ ಕದನವಿರಾಮ ಕೇಳಿಲ್ಲ ಯಾರು.ಆ ನಿಶ್ಚಲ ಜಡದೇಹವನ್ನು ಚುಚ್ಚಿ,ಕೊರೆದು, ಕೊರೆದು,ಬೀಸಿ,ರುಬ್ಬಿ,ಅಗೆದು,ಬಗೆದು ಮಾಡಿದ್ದೀಯ ಮಣ್ಣುಪಾಲು ಈಗಲೂ ಬಿಟ್ಟಿಲ್ಲ ಆ ಮೌನಶಿಲೆಯನ್ನು ಕೊರೆಯುತ್ತಲೇ ಇದ್ದಾರೆ ನಿರಂತರ ನಿನ್ನ ನಿರ್ದಯ ತುಕಡಿ ಮಂದಿ., ಓ ಅವಿಶ್ರಾಂತನೇ, ಶಾಂತನಾಗು, ಒಂದು ಕ್ಷಣಕ್ಕಾದರೂ...ಅನೂಹ್ಯ ಕಾಲದಿಂದ ನನ್ನ ದೃಷ್ಟಿಯ ಮುಂದೆ ಬಡಿಯುತ್ತಲೇ ಇದ್ದೀಯ ನಿನ್ನ ಅಂಚನ್ನೇ..ಸವೆಸಿರುವೆ,ಕೊರೆದಿರುವೆ, ಬೀಸಿ ರುಬ್ಬಿರುವೆ..ಇನ್ನೂ ಮುಗಿದಿಲ್ಲ ನಿನ್ನ ಕಾರ್ಯ. ಶತ್ರುರಹಿತ ಯುದ್ಧ, ನಿನ್ನ ಅಲೆಗಳ ಸೇನೆಗೆ ಅಜ್ಞಾಪಿಸು, ಸ್ವಲ್ಪ ವಿರಮಿಸಲಿ.ಬಳಲಿರಬಹುದು ಮಿಲಿಯಾಂತರ ಕಲ್ಪಗಳ ನಿಲ್ಲದ ಚಲನೆಯಲ್ಲಿ....ಮಹಾದಂಡನಾಯಕ ,ಅನಿಲರಾಜ...ನಿನ್ನಮಾತು ಕೇಳುವುದಿಲ್ಲವೇ? ಅವನ ಆದೇಶವೇ ಅಂತಿಮ ಆಜ್ಞೆ ನಿನ್ನ ಅಗಣಿತ ಸೇನೆಗೆ,ನಿನ್ನ ಅನುಮತಿ ಬೇಕಷ್ಟೇ ಕದನವಿರಾಮಕ್ಕೆ,ಚಂದ್ರನ ಮಧು ಮತ್ತೇರಿಸದಿರಲಿ, ನಶೆಯಲ್ಲಿ ಹಾರದಿರಲಿ ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ, ಬೇಕೆ? ನಾವು ನೆಲವಾಸಿ, ಭೂಮಿಯೇ ಮರಳಾಗಿ ಶರಣಾದ ಮಣ್ಣು ಆಶ್ರಯವಾಯಿತು, ನಿ ಬಿತ್ತಿದ ಬದುಕಿಗೆ, ಆ ನಿನ್ನ ಪ್ರತಿನಿಧಿಗಳು...., ನಿನ್ನ ಮೊಳಕೆಯೇ ಚಿಗುರೊಡೆದು, ಹರಡಿ, ದೂರಸರಿದು ಸಹಸ್ರಾರು ವಿವಿದತೆಯಲಿ ಕವಲು...ನಿನ್ನ ಸಂತಾನ.....ನಿನ್ನವರು, ನಿನ್ನ ಮೂಲದವರು,...
The Leech... A timid, lone wanderer moves strangely in the rain forest uncared  Clinging and clutching to the gushing current in the green vastness, Where the horizon of the green canopy diffuse into grey sky like a spy Countless streams floods by minute source in the turbulent monsoon The untamed, mass of water thunders down with an explosive sound   With a body flattened and highly elastic pipe....the rare species drifts  Then swipes and signs the card of the rivulets in the season of rainy fair A pluviophile by instinct, enjoys breathing through the skin in moist soil A semi aquatic inhabitant.....invisible to many in a life of deception Loops and.... Moves steadily on the slopes ...as a humble executioner With primitive and simple being, carries an extra big and large heart.... The entire body is a multi-chambered pipette of blood...a wet pot, A curious existence lacks all other normal metabolic organs Even the stomach is reduced ...
ಜಿಗಣೆ ಮಳೆಕಾಡವಾಸಿ ಮಳೆಗಾಲದಲಿ ಮಾತ್ರ, ಪಡೆಯುವ ಅಸ್ತಿತ್ವಕ್ಕೆ ಮಹತ್ವದ ಪಾತ್ರ ಅರೆನೀರ ಆವಾಸಿ, ರಕ್ತ ಪಿಪಾಸಿ.  ಆದರೂ ಬಹು ಹೃದಯ ಶ್ರೀಮಂತ ನಿರಾಹಾರಿ ಸಾಮಂತ, ಸಂತ ಚಲಿಸುತ್ತಾನೆ ವಂಕಿಯಾಗಿ ಉರುಳುತ್ತಾ, ಸರಾಗ ತೇಲುತ್ತಾ, ತೆವಳುತ್ತ, ಒಮ್ಮೊಮ್ಮೆ ಮುಳುಗುತ್ತ ಪರಾರಿ ಹರಿಯುವ ಹಳ್ಳಗಳಲ್ಲಿ ಕುಡಿದು, ಹೀರುತ್ತಾನೆ, ಹೊಟ್ಟೆ ಮಟ್ಟ, ಮಿತಿಅರಿತ ಸುಸಂಕೃತ ಅಥಿತೇಯ ಪ್ರಾಣಕ್ಕೇ ಕೈ ಹಾಕದ ಸಾಧು, ಬಿಡುವುದಿಲ್ಲ ತನ್ನ ಹಿಡಿತ,ಅರಿವಳಿಕೆಯ ಕಡಿತ, ಅಹಿಂಸೆಯ ಹಿಂಬಾಲಕ,ನಾಯಕ ಶಾಂತ ಪಂಡಿತ ಕೊಳವೆಯಾಕಾರದ ಕಾಯಕ್ಕೆ ರಕ್ತಖಣದಲಿ ಸುಗ್ಗಿ, ಚಪ್ಪಟೆಯ ಸಂಚಿ, ಉಬ್ಬಿ,ಹಿಗ್ಗಿ ದುಂಡಾಗಿ ಚೆಂಡಾಗುವ ವರೆಗೂ ಅಂಟಿಕೊಂಡಿರುವ ಅಭಿಮಾನಿ... ನಿರಕ್ತ....ಕರಿ ಪಿಂಡವಾಗಿ, ಮೆತ್ತನೆಯ ಸ್ಪರ್ಷ ಕಳಚಿಕೊಳ್ಳುತ್ತಾನೆ ತಾನೇತಾನಾಗಿ, ತೃಪ್ತ ಹೆಪ್ಪು ಗಟ್ಟಿಸಿ ರಕ್ತ ಗಾಯಮುಚ್ಚಿ ಮಂಗಮಾಯ ನಾಳೆಯ ಹಂಗಿಲ್ಲದ ಸಾಧು, ದ್ರವಾಹಾರ ವ್ರತನಿಷ್ಟ ಆ ಕ್ಷಣಕ್ಕೆ ಬದುಕುವ ತತ್ವಜ್ಞಾನಿ ಸಂತೃಪ್ತ ಅಲ್ಪಾಯುಷಿ, ಹೊರೆಯಾಗಲಾರ, ಬದುಕಿನ ಹಂಗಿಗೆ ಹಾಗಾಗಿ ಅರ್ಧ ಬದುಕು ಉಪವಾಸ,ಉಳಿದಂತೆ ಪಥ್ಯ ಅಜ್ಞಾತದಲ್ಲಿ....ದ್ವಿಲಿಂಗಿ, ಮುಂದುವರೆಸುವ ಪೀಳಿಗೆ ಗುಪ್ತ ನೆಲವಾಸಿ ಮಾಯವಾಗುತ್ತಾನೆ ನೇಪಥ್ಯದಲ್ಲಿ ವಾಮನನ ಕಾಲ್ತುಳಿತಕ್ಕೆ ಪಾತಾಳಸೇರಿದ ಬಲಿ ಮತ್ತೆ ಪ್ರತ್ಯಕ್ಷ ಮೋಡಗಳೊಂದಿಗೆ ತಾತ್ಕಾಲಿಕ ಶಿಬಿರಗಳಲ್ಲಿ ಕಾಡಿನ ತೊರೆಗಳ ದಂಡೆಯ ಮೇಲೆ ಡೇರೆ ಜಡಿಯ...