ಬೆಳಗು. ... 01-07-17 ವಾಯುವಿಹಾರಿಗಳ ಲೆಕ್ಕಾಚಾರದ ನಡಿಗೆಯನ್ನು ನಿರ್ಲಿಪ್ತ ಖುಷಿಯಿಂದ ಅಳೆಯುವ ಖಾಲಿ ರಸ್ತೆಗಳ ಆರಾಮದಾಯಕ ಮುಂಜಾವು. 30-6-17 ಯಾವ ಗುರುತು ಚೀಟಿ ಕೇಳದೇ, ವಿಳಾಸ ವಿಚಾರಿಸಿ ಧೃಡಪಡಿಸಿಕೊಳ್ಳದೆ, ಬೆಳಕನ್ನು ನನಗೂ ಧಾರಾಳ ಹಂಚುವ ಜೀವವಾಹಕ, ಉದಾರಿ ಸೂರ್ಯನ ಚೇತೋಹಾರಿ ಬೆಳಗು.
Posts
Showing posts from June, 2017
- Get link
- X
- Other Apps
ಯಥಾಸ್ಥಿತಿ. ಕಾಲವೇ.... ಕರೆದೆನೆಂದು ಬೇಸರಿಸಬೇಡ, ನಿನ್ನ ಗಮನಕ್ಕೆ ಯಾರು ಬರಲಾರರು ಇರುವು ನೀನೇ, ಇಲ್ಲದಿರುವ ಶೂನ್ಯವೇ ಎಲ್ಲವನು, ಎಲ್ಲರನು ತಿರಿಸ್ಕರಿಸುವ ನಿರುತ್ತರ ಶೇಷಪ್ರಶ್ನೆಯೇ ಗೊತ್ತು, ನೀನೆಂದೂ ತಿರುಗಿನೋಡುವುದಿಲ್ಲ... ಅನುಮಾನ, ಅಜ್ಞಾನ ನನ್ನಲ್ಲೇ ಇರಲಿ. ನಿನ್ನ ಕೆಲಸ ನೀನು ಮಾಡು, ನೀನು ಕಾವಲುಗಾರ ಕಾಳಜಿಬೇಡ, ಯಾವುದುನಿಂತಿಲ್ಲ, ಎಲ್ಲಾ ಯಥಾಪ್ರಕಾರ, ಜಗತ್ತು ಕ್ರಿಯಾಶೀಲ, ನಿಲ್ಲುವುದಿಲ್ಲ ತಟಸ್ಥವಾಗಿ ನಿಲ್ಲದ ಜೀವದ ಚಲನೆ, ಶಾಶ್ವತ ಚಟುವಟಿಕೆಯ ಚಿಲುಮೆ ಸದಾ ಸ್ತಿರ ತನ್ನದೇ ಗುಂಗಿನಲಿ,ವೇಗದಪರಿವಿಲ್ಲದೆ,ಗಮನಿಸಲಾರದ ಘಟನೆಗಳಲ್ಲಿ ಅದೃಶ್ಯ ನೋಟ, ಮರೆಯಲ್ಲೇ ಕೂಟ, ಸರಿಯುತ್ತಿದೆ ಎಂದಿನಂತೆ ಕಾಲ ನಿನ್ನ ಸುಪರ್ದಿಯಲ್ಲೇ. ಗಡಿಯಾರದ ಮುಳ್ಳಾಗಲಿ, ಡಿಜಿಟಲ್ ಫಲಕವಾಗಲಿ, ಎಲ್ಇಡಿ ಪಂಚಾಂಗವಾಗಲಿ ಮಾಡಲಾರವು ಎಂದಿಗೂ ಕರ್ತವ್ಯಲೋಪ. ಉದಾರತೆಯ ಅಮಲಲ್ಲಿ,ನಮ್ಮ ಸಣ್ಣತನಗಳ ಪರಿವಿಲ್ಲದೆ ಖುಷಿಯಾಗಿದ್ದೇವೆ ಎಲ್ಲರು. ಇಲ್ಲಿ ಎಲ್ಲರೂ ಕ್ಷೇಮ.. ಆಗಾಗ್ಗೆ ಬೇಸರ ವಿವರಿಸಲು ಎದ್ದು ಗುದ್ದಾಡುತ್ತಾರೆ ತಮ್ಮೆದುರಿಲ್ಲದ ಅದೃಷ್ಯ ಜನಗಳ ಕೆಣಕುತ್ತಾರೆ ನೆನಪಾದಾಗ, ಸೂಕ್ತಸನ್ನಿವೇಶದಲ್ಲಿ,ತಮ್ಮ ಗರುಡಿಯಲ್ಲಿ ಲುಪ್ತಆಸೆಯ ಒಡೆತನಕೆ ಬಡತನದ ಹಸಿವಿನ ಭಾಷಣ, ಬರೆಯುತ್ತಾರೆ, ಬೇಕಾದರೆ ಒಂದು ಲೇಖನ... ಪ್ರಪಂಚದ ಅಂಕುಡೊಂಕುಗಳೆಲ್ಲಾ ...
- Get link
- X
- Other Apps
ಈ ಭೂಮಿ ಕೇವಲ ಸ್ವತ್ತಲ್ಲ ಆಸ್ತಿಯಲ್ಲ ... ಆಹಾರ, ಆವಾಸ, ನಿರು, ಗಾಳಿ ಇತ್ಯಾದಿ ಜೀವಿಗಳಿಗೆ ಬೇಕಾದ ಮೂಲಭೂತ ಅವಶ್ಯಕತೆಗಳ ಕೊರತೆ( ಹಸಿವು,ಬಡತನ ಮತ್ತು ಆವಾಸ ) ಕೇವಲ ಮನುಷ್ಯನಿಗೆ ಮಾತ್ರ ಸೀಮಿತವಾಗಿಲ್ಲ. ಈತ ಬದುಕುವ ಸುತ್ತ ಮುತ್ತಲಿನ ಎಲ್ಲಾ ಜೀವಿಗಳಿಗೂ ಅನ್ವಯಿಸುತ್ತದೆ (ಸಸ್ಯಗಳನ್ನು ಸೇರಿ-ಅವು ನಿಶ್ಚಲ ಮೌನಿಗಳು..ಅಷ್ಟೇ). ಅಧಿಕಾರಶಾಹಿಗಳು, ಶ್ರೀಮಂತರ ಇತ್ಯಾದಿ ಸಾಮಾಜಿಕ ಆಗುಹೋಗುಗಳನ್ನು ನಿಯಂತ್ರಿಸುವ ವ್ಯಕ್ತಿಗಳ ಕಪಿಮುಷ್ಟಿಯಲ್ಲಿಸಿಕ್ಕಿರುವ ಅಸಹಾಯಕ, ಅಶಕ್ತ ಬಡಮಾನವನಂತೆ ಪ್ರಾಣಿ, ಸಸ್ಯಗಳು ಸಹಾ ಮಾನವನ ರಕ್ಕಸತನಕ್ಕೆ ಹೆದರಿ ಮೌನವಾಗಿವೆ. ಅವು ನಮ್ಮೊಡನೆ ಹೋರಾಡಲಾರವು....ಯಾರ ಅರಿವುಗೂ ಬರದಂತೆ ಪರಿಸರದಿಂದಲೇ ನಿಶ್ಯಭ್ದವ ಾಗಿ ಅಳಿದುಹೋಗುತ್ತಿವೆ. ಇವುಗಳ ಅನಿವಾರ್ಯ ಇರುವಿಕೆಯ ಬಗ್ಗೆ ಪ್ರಜ್ಞೆಯೇ ಇಲ್ಲದೆ ನರಪ್ರಾಣಿ ಶೋಷಿಸುತ್ತಿದ್ದಾನೆ ಮಾನವಕುಲ ದ ಏಳಿಗೆ ಎಂಬ ನಾಮಕರಣ ಮಾಡಿ. ಹಸಿವು, ಬಡತನ, ಕಷ್ಟಕಾರ್ಪಣ್ಯ ಗಳನ್ನು ನಿರ್ಮೂಲನ ಮಾಡಿ ಎಲ್ಲಾ ಮಾನವರಿಗೂ ಸಮಾನ ಮೂಲಭೂತ ಅವಶ್ಯಕತೆ, ಕಲ್ಪಿಸುವ,ನಾಗರೀಕತೆ ವೇಷದಲ್ಲಿ ಸಮಾಜದ ಕ್ರೂರ ಅನ್ಯಾಯ ಮುಂದುವರಿಯುತ್ತಿದೆ. ಈವಿಧದ ಪ್ರಗತಿಗೆ ದೇವರು, ಧರ್ಮ,ಜಾತಿ, ಭಾಷೆ ಇತ್ಯಾದಿಗಳನ್ನು ಸೃಷ್ಟಿಸಿ ತನ್ನ ವಿನಾಶಕಾರಿ ಚಟುವಟಿಕೆಗಳನ್ನು ಮುಂದುವರಿಸಿದ್ದಾನೆ....ಪ್ರಗತಿಯ ಹೆಸರಲ್ಲಿ. ಸಮಾನತೆಯ ಸೋಗಿನಲ್ಲಿ.ಎಗ್ಗಿಲ್ಲದೆ ಪರಿಸರದ ಕಗ್ಗೊಲೆ, ನಡೆಯುತ್...
- Get link
- X
- Other Apps
ಕಳೆ. ವಿನಾಶಕಾರಿ ಕಳೆ ಹರಡುತ್ತಿದೆ ಅತಿವೇಗದಲ್ಲಿ ವಿವಿದತೆ ಮಾಯ, ಅಯೋಮಯ ಜೀವಿಸಂಕುಲ ಕೊಂಬೆ,ರೆಂಬೆಗಳಲ್ಲೂ ಹೆಮ್ಮಾರಿ ನಿರ್ಲಿಂಗ ಜಾತಿ ಪ್ರತಿಮೆ ಅರಾದ್ಯ ಬೊಂಬೆ ಅಸಹಾಕಾರಿ ಪಳೆಯುಳಿಕೆಯ ಮೂರ್ತಿ ಅಲಂಕರಿಸಿದ ಗರ್ಭಗುಡಿ ಅಮೂರ್ತವೇ ಆಕಾರವಾಗಿದೆ ಮಸೀದಿ ಮಿನಾರ್ ಗಳಲ್ಲಿ ಪ್ರಾರ್ಥಿಸುತ್ತಿದೆ ಶಿಲುಬೆಯಾಗಿ ಅನಾಥ ಚರ್ಚಿನಲ್ಲಿ, ಚರ್ಚೆಯಾಗಿವೆ ಅವರವರ ಅಹಂ, ಅರಿವಿನಂತೆ... ಗಿರವಿ ಇಡಲಾಗಿದೆ ಎಲ್ಲರ ಆತ್ಮ ಅವರವರ ಬೆಲೆಗೆ ತಕ್ಕಂತೆ ಸರ್ವವ್ಯಾಪಿ ಆದರೂ ಗುಪ್ತ ವಿಸ್ತಾರ ಶಸ್ತ್ರಾಗಾರ ಗುಮ್ಮಟಗಳಲ್ಲಿ ಅಪಾರ, ಪ್ರಳಯ ಭಂಡಾರ ಜೀವ ಭಿಕ್ಷೆ ಬೇಡುವ ಭಕ್ತ ಸಾಗರ, ಹೀರಿದೆ ರಕ್ತ ಮಂದಾರ ಸಕಲ ವಿಲಾಸಿ,ಅಮಾನವೀಯ ದೈತ್ಯ ಭ್ರಮರ ಅಸಮರ್ಥರ ಮೇಲೆ ಸಾರಲಾಗಿದೆ ಸಮರ ಕ್ರಿಯಾಶೀಲ ಮುಳುಗಿದ್ದಾನೆ ಪರಾಗ ಸ್ಪರ್ಷದಲ್ಲಿ ಕೇಳುವವರು ಯಾರು? ಈ ಮಾನವ ವಿಕೃತ ತೋಪಿನಲ್ಲಿ ಪುಷ್ಪಾರ್ಚಾನಾಸಕ್ತ, ಸೌಂದರ್ಯೋಪಾಸಕ ಭಕ್ತ ಎಲ್ಲದರ ಆಹುತಿ ಆಗಲೇ ಬೇಕು, ಈ ಅತಿಬುಧ್ದಿಜೀವಿಗೆ, ಹರಿಕೆಯಿಂದಲೇ ಗರ್ಭಕಟ್ಟಿದ ತತ್ತಿ, ಭ್ರೂಣವಾಗಿದೆ ಹೊಸದೊಂದು,ಅನಾಮಿಕ ಸಂಕರ ಚಿಗುರುತ್ತಲೇ ಇದೆ ವಿಸ್ಮಯ, ವಿನಾಶದ ವೇಗದಲ್ಲಿ,ನಿರ್ಭಯ ಒಂಟಿ ಸಲಗ ಸ್ವಜಾತಿ ಭಕ್ಷಕ,ಭಕ್ಷಕ ಭಯಾನಕ, ವಿಕಾಸವೇ ಕೇಳುವ ಪ್ರಶ್ನೆ ಆಕಸ್ಮಿಕದಲಿ ಅವತರಿಸಿದ ಈ ಪ್ರಾಣಿ! ಈ ಹೈಬ್ರಿಡ್, ಕುಲಾಂತರಿ ವಿಶ್ವಕರ್ಮನೋ? ಸಂರಕ್ಷಕನೋ? ...