ಬಸವನ ಹುಳು. ನಾಚಿ, ಮುದುಡುವ,ಮೂಳೆರಹಿತ ಮೃದು ದೇಹ, ಮಣಭಾರದ ತೂಕ ಕಿರೀಟ ಬೆನ್ನಲ್ಲಿ! ಸುರಳಿ ಚಿಪ್ಪಲ್ಲಿ ತಲೆಮರೆಸಿಕೊಂಡು ಮೀಸೆ ಸ್ಪರ್ಶದ ದೃಷ್ಟಿಯಲ್ಲಿ ಗುರುತರ ಬವಣೆಯ ಗಡಸು ಬಣವೆಯ ಹೊತ್ತು ಸಾಗಿದೆ ಸಾವಾಕಾಶದಲ್ಲಿ, ಅನೂಹ್ಯ ಕಾಲದಿಂದ ಕೀಟಗಳ ಹಿಂದೆ ಹಾಕಿ, ಕಾಲದಲ್ಲಿ ಇವನೊಬ್ಬನೇ ಬಾಕಿ. ಒಂಟಿ ನೆಲವಾಸಿ, ನೆರಳ ಪ್ರಿಯ ದ್ವಿಲಿಂಗಿ ಮಣ್ಣುತಿಂದರೂ ಮಣ್ಣುಹುಳ ದಾಯಾದಿ ಅಲ್ಲ ಸ್ಪರ್ಶಕದ ನೇತ್ರಸೀಮಿತ ದೃಷ್ಟಿ, ನಿಜ ಕಣ್ಣು, ಮೂಗಿಲ್ಲದ ಆಘ್ರಾಣ ಗ್ರಾಹಕ ಪೂರ್ವಜರು ಕಡಲಬಿಡದಿದ್ದರೂ ಕಡಲತೀರ ಸೇರಿದ ಮಹಾವಲಸಿಗ ಅಂಜಿಕೆ, ಅತಿನಾಚಿಕೆಯ ಅಸ್ತಿತ್ವ, ಚತುಷ್ಪಾದಿ ಆಮೆಗೆ ಹೊಂದದ ಗೋತ್ರ ಎರಡು ಜೊತೆ ಸ್ಪರ್ಶಕ, ಸರ್ವ ಗ್ರಾಹಕ ಹೋರಾಟ ಅಪ್ರಿಯ, ಮಹಾ ಶಾಂತಿದೂತ ಧಾಳಿಕೋರರ ಯಾಮಾರಿಸಿ ಚಿಪ್ಪೊಳಗೆ ಶರಣು ಕಟ್ಟುನಿಟ್ಟಿನ ಪಥ್ಯಾಹಾರಿ, ಮಿತಭಕ್ಷಕ ಕೊಳೆತಿನಿ, ವಿಘಟಕ,ಮಣ್ಣರುಚಿ ಮೆಚ್ಚುವ ಪರಿಸರ ಪ್ರೇಮಿ ಈ ಬಸವ, ಹುಳುವಲ್ಲ, ಅಂತರಾತ್ಮ ಕೆಣಕುವ ಸದಾ ಪ್ರತಿಧ್ವನಿಸುವ ಮಾದರಿ ನಿಯಮಪಾಲಕ, ನೆನ್ನೆ ಕೇಳಿದ ಪ್ರಶ್ನೆ ಸ್ವಚ್ಚತಾ ಅಭಿಯಾನದಲ್ಲಿ ನಾನೇಕೆ ಇಲ್ಲ?
Posts
Showing posts from November, 2017
- Get link
- X
- Other Apps
ದ್ವಂದ್ವ-೨ ವಿವಿಧತೆಯಲ್ಲಿ ಏಕತೆ? ಏಕತೆಯಲ್ಲೇ ವಿವಿದತೆ? ಸಮಾರ್ಥ! ಸುಂದರ ಭಾವಾನಾತ್ಮಕ ಸಾಲುಗಳು ಘೋಷಣೆಗಳಿಗೆ ಮಾತ್ರ ಸೀಮಿತ ಭಾಷೆಗೂ, ನಿಜಬದುಕಿಗೂ ಧೃವಗಳ ಅಂತರ ಅನ್ವಯ ಅನುಕರಣೆ ಅಸಾಧ್ಯ, ತಾಳೆಯಾಗದ ಅವಾಂತರ ಎಂದೆಂದಿಗೂ ಸಮನಾಂತರ ಅನುಷ್ಟಾನದ ಭ್ರಮೆಯಲ್ಲಿಮಾಯವಾಗುವ ವಿಶೇಷತೆ ಜಿಗುಪ್ಸೆಯ ಏಕತೆಯ ಯಾಂತ್ರಿಕ ಪುನರಾವರ್ತನೆ ಭಾಷೆ ಬೇಕಿಲ್ಲ, ಅಸಂಖ್ಯ ಬದುಕಿನ ವಿಶಿಷ್ಟ ಭವ್ಯತೆಗೆ ರೀತಿ ರಿವಾಜುಗಳ ಅನಿವಾರ್ಯತೆ ಕಣ್ಣ ಕೋರೈಸುವುದು ಕ್ರೂರ ಸತ್ಯ ವಲಸೆಯ ಮೋಜಲ್ಲಿ ಬರೆಯುವ ವಿಚಿತ್ರ ಮರಣ ಪತ್ರಗಳು ವಲಸಿಗರಿಗೆ ಪಾಸ್ ಪೋರ್ಟ್ ಬೇರೆ. ಇನ್ನು ಗಡಿಗಳ ಮಾತೇಕೆ? ಗ್ರಹಾಂತರದಲ್ಲಿಅಂತಃರಾಷ್ಟ್ರೀಯ ಗುರುತುಚೀಟಿ ಕಡ್ಡಾಯ! ಭರ್ಜರಿ ಭಾವೋನ್ಮಾದ ವಿಶ್ವ ಮಾನವ, ಭೂಆವಾಸವೇ ಸಿಡಿದು ಛಿಧ್ರವಾಗಿ ಹೊಸ ದೇಶಗಳ ಅಸ್ತಿತ್ವ ಜಲ ಆವಾಸದ ಆಳಗಳನ್ನೇ ಆಳ ಹೊರಟ ಐಲುದೊರೆಗಳ ಸಾಮ್ರಾಜ್ಯ ಗಾಳಿಯಲಿ ಹಾರುವ ಹಕ್ಕಿಗಳಿಗೆ ಗುರುತುಚೀಟಿ ಅಂಟಿಸುವ ನೀವು ಸೀಮೋಲಂಘನೆ ಕಾಯಿದೆ ಅಡಿನಿಮ್ಮ ದೇಶದ ಗಡಿಗಳಲ್ಲೇ ಗಾಳಿಯನು ತಡೆದು ಭಂದಿಸುವ ಬೇಲಿ ಹಾಕುವಿರಾ? ನದಿಯ ಹರಿವಿಗೆ ತಡೆಗೋಡೆ ಕಟ್ಟಿ ಕಾಡುಮುಳುಗಿಸಬಹುದು, ಅಸಂಖ್ಯ ಜೀವಸಂಹಾರದಲ್ಲಿ ಮಣ್ಣುಸಾಗಿಸಿ, ಮೋಡಕ್ಕೆ ಒಡ್ಡುಹಾಕಿ, ಸಿಂಪಡಿಸಬಲ್ಲಿರಾ ಹನಿಗಳನ್ನು ಮರಳುಗಾಡಿನಲ್ಲಿ? ಗಡಿಪಾರು ಮಾಡಬಲ್ಲಿರಾ ನಿಮ್ಮ ಮನಸನ್ನು.?
- Get link
- X
- Other Apps
Sheshagiri Jodidar 4 mins · ಇದೀಗ ಬಂದ ಸುದ್ಧಿ. 7-11-17 ಭೂಗ್ರಹದ ಉಚ್ಛ ಪರಿಸರ ನ್ಯಾಯಲಯದಲ್ಲಿ ನಡೆಯುತ್ತಿದ್ದ ಧೀರ್ಘಕಾಲದ ಕುತೂಹಲಕಾರಿ ಮೊಕದ್ದಮೆ ಇಂದು ಮುಕ್ತಾಯಗೊಂಡಿದೆ ಎಂದು ಈಗಷ್ಟೇ ವರದಿಯಾಗಿದೆ. ವಿವರಗಳು ವಿರಳ. ಸ್ಪಷ್ಟರೂಪ ಪಡೆದು ಅಧಿಕೃತವಾಗಿ ಸುದ್ದಿ ಹೊರಬರಲು ಕೆಲಕಾಲ ಬೇಕಾಗಬಹುದು ಎಂದು ನಂಬಲಾಗಿದೆ. ಸುಮಾರು ದಶಕಗಳಿಂದ ಆರಂಭಗೊಂಡ ಈ ಮೊಕದ್ದಮೆ ಶೀಘ್ರ ಕುಲಾಸೆಗೊಂಡಿರುವುದು ಅನೇಕರಿಗೆ ಖುಷಿ ಇನ್ನು ಕೆಲವರಿಗೆ ಈ ತೀರ್ಪಿನಿಂದಾಗುವ ಪರಿಣಾಮದ ಹೆದರಿಕೆ ಎಂಬುದು ಕೆಲವರ ಅಭಿಪ್ರಾಯ. ಆರೋಪಿತನ ಮೇಲೆ ಲೂಟಿ, ಕೊಲೆ, ಸುಲಿಗೆ, ಮೋಸ, ವಂಚನೆ, ಕ್ರೌರ್ಯ, ಮಾರಣಹೋಮ ಇತ್ಯಾದಿ ಜೀವವಿರೋಧಿ ಶೋಷಣೆಗಳ ಎಲ್ಲಾ ಆರೋಪಗಳನ್ನು ಹ ೊರಿಸಲಾಗಿದ್ದು, ಆತ ಯಾವ ಆರೋಪವನ್ನು ತಳ್ಳಿಹಾಕದೆ, ನಿರ್ಭೀತಿಯಿಂದಿರುವುದು ಸಾಕಷ್ಟು ಕುತೂಹಲ ಮೂಡಿಸಿತ್ತು. ಆತ ಅಮಾನವೀಯವಾಗಿ ತನ್ನಸುತ್ತಮುತ್ತಲಿನ ಎಲ್ಲರನ್ನು ಮತ್ತು ಅವರಿಗೆ ಬೇಕಾದ ಎಲ್ಲವನ್ನು ತನ್ನದೇ ಉಪಯೋಗಕ್ಕೆಮಾತ್ರ ಎಗ್ಗಿಲ್ಲದೆ ಕೇವಲ ತನ್ನಬಲದ ತುರಿಕೆ ಮತ್ತು ತೋರಿಕೆಗಾಗಿ ಬಳಸಿಕೊಳ್ಳುತ್ತಿದ್ದುದು ಮೇಲ್ನೋಟಕ್ಕೆ ಕಂಡುಬಂದು ಸಾಬೀತಾಗಿರುವುದು ತಿಳಿದುಬಂದಿದೆ. ಈ ತಪ್ಪಿತಸ್ತನ ನಡವಳಿಕೆಯಿಂದ ಜೀವ ಸಮಾಜದಲ್ಲಿ ಹಾಗೂ ಎಲ್ಲಾ ಸಮುದಾಯಗಳಲ್ಲಿ ಯಾವುದೇ ವ್ಯವಸ್ಥೆ, ನಿಯಮ, ಕಾನೂನು ಎಲ್ಲವೂ ಏರುಪೇರಾಗಿ ಧೂಳಿಪಟವಾಗಿದೆ. ಯಾರನ್...
- Get link
- X
- Other Apps
Sheshagiri Jodidar October 30 at 12:45pm · ನಿನ್ನಿರುವು, ಅನುಭವಕೆ ಬಾರದ ಅಸಂಗತ, ಎಲ್ಲೆಡೆ ಅವಿರ್ಭವಿಸುವ ನಿರಾಕಾರ ನೀನು, ಸುಪ್ತ ಚಲನೆಯ ಅನುಭವದ ಕ್ಷಣದಲ್ಲಿ ಆಗಂತುಕ ನಾನು ನನಗೆ, ವಿವರಿಸಲು ನಿನ್ನ ಏನೆಂದು, ಹೇಗೆಂದು ಏಕೆಂದು, ಯಾರೆಂದು, ಯಾರಲ್ಲಿ ಕೇಳುವುದು? ನಿನ್ನ ಅನೂಹ್ಯ ಭವಿಷ್ಯದ ಆದ್ಭುತ ವಿಶಾಲ ಚಾಚು ದಿಕ್ಕುಗಳಿಲ್ಲದ ಈ ಗುರುತ್ವರಹಿತ ಖಾಲಿತನದಲ್ಲಿ ತೂಗಿ, ಜೋಕಾಲಿ ಆಡುವ ಜೀವಿಗಳ ಸಂತೆಯಲ್ಲಿ ನೆಲದಮೇಲೆ ತೇಲುವ ಭ್ರಮೆ ಎಲ್ಲರಿಗೆ ಸಿಕ್ಕಷ್ಟೇ ಅನುಭವ, ಕಂಡಷ್ಟೇ ಕನಸು ಒಮ್ಮೊಮ್ಮೆ ನನಸಾಗುವ ಮನಸು ಅದೇ ಆ ಬೆರಗಾಗುವ ನಿಜ ವಯಸು. Sheshagiri Jodidar Yesterday at 8:41am · ಗೊಂದಲದ ಹುಟ್ಟಲ್ಲಿ ಅಮ್ಮ ತ್ಯಜಿಸಿದ ಕುಡಿ ತತ್ತಿ ಅಪ್ಪ ಅವಸರದಲಿ ತುಂಬಿದ ಜೀವ, ಜಲಚಲನೆ ಒಂಟಿ ಪಿಂಡ ಚೆಂಡಾದ ರೂಪ ಮೀನಾಗಿ ಕಿವಿರಲ್ಲೇ ಉಸಿರಾಡಿ ಬದುಕು ಬಾಲವೂ ಮಂಗಮಾಯ, ಹೊಸ ಅವಯವಗಳ ಹುರುಪಲ್ಲಿ ಕುಪ್ಪಳಿಸಿ, ಕುಣಿದ ಭೂ,ಜಲವಾಸಿ ಸದಾ ಅಪರಚಿತ, ನೆಲವನ್ನೇ ನೆಚ್ಚದೆ, ಬಾಡಿಗೆ ಮನೆ ಹಿಡಿದು ಜಲಸಮಾದಿಯಲ್ಲಿ, ರಾಸ ಕ್ರೀಡೆಯ ಗೂಡು ಕಟ್ಟಿ ಪೀಳಿಗೆಗೆ ಪೀಠಿಕೆ ಬರೆಯುವ ಮುನ್ನುಡಿಕಾರ ಉಸಿರು ಕಟ್ಟುವ ತರಬೇತಿಗೆ ನೀರಿನ ಹಂಗೆಲ್ಲಿ? ಗಾಳಿಜೊತೆಗೂಡಿ,ನಡೆದಾಡುವ ಪ್ರಭೇದ, ಪ್ರಾಣಾಯಾಮ ಅನಿವಾರ್ಯ ಪ್ರಭೇದಸಂತನಿಗೆ.