Posts

Self portrait....

Self Portrait... Some times our mind plays tricks with our deeper consciousness. For no reason at all it goes crazy. Constantly changes its moods as if you have absolutely no hold on it. For example one day suddenly out of the blue it ordered me to make self portrait…the urge was so much, that, there was a smile on my face. Really it is something which had never flashed me so far, even after reading and viewing critically at Michel Angelo, Vincent Van go or Leonardovinchi and other famous artists of recent centuries and their famous portraits…But now all of a sudden after many years I don’t know where this hell of an idea was hiding in my consciousness. But now it is demanding to paint one of myself... Or is it a way of my inner consciousness craving to analyse my own real self? I really don’t know. But certainly it is uncontrollable urge. Strange! I am not an artist by profession. Only it is my hobby to imitate the work which I like. It may be even simple cartoon drawings or...

ಪ್ರತಿ ಕೃತಿ...

ಪ್ರತಿಕೃತಿ  ಒಮ್ಮೊಮ್ಮೆ ಹುಚ್ಚು ಮನಸ್ಸು ಏನನ್ನೋ ಮಾಡಲು ಪರಿತಪಿಸುತ್ತದೆ. ಕೆಲಸವಿಲ್ಲದಾಗ ಮನಸ್ಸು ಏನೆಲ್ಲಾ ಮಾಡಲು ಅಜ್ಞಾಪಿಸುತ್ತದೆ. ಅಂತಹದೇ ಒಂದು ದಿನ ಅಂತಾ ಕಾಣುತ್ತೆ. ನನ್ನ ಭಾವ ಚಿತ್ರ ನಾನೇ ಬಿಡಿಸಿಕೊಂಡು ನೋಡಬೇಕೆಂಬ ವಿಚಿತ್ರ ತೆವಲು ಪ್ರಾರಂಭ ವಾಯಿತು. ಹಾಗೆಂದು ನಾನೊಬ್ಬ ವೃತ್ತಿ ಪರ ಕಲಾವಿದನಲ್ಲ. ಹವ್ಯಾಸಕ್ಕಾಗಿ ಯಾವುದಾದರೂ ಪತ್ರಿಕೆಗಳ ಚಿತ್ರ ಗಳನ್ನೂ ಕಾಪಿ ಮಾದಬಲ್ಲಷ್ಟು ರೇಖೆಗಳನ್ನುಎಳೆಯಬಲ್ಲೆ . ಇಷ್ಟ ಬಂದ ರೇಖಾಚಿತ್ರಗಳನ್ನು ಬಿಡಿಸುತ್ತಿದ್ದೆ. ಮತ್ತೆ ಶಾಲೆಯಲ್ಲಿ ಬೋರ್ಡ್ ಮೇಲೆ ನನ್ನ ಕ್ಲಾಸ್ನಲ್ಲಿ ಚಿತ್ರಗಳನ್ನು ಬಿಡಿಸದೆ ವಿಧಿ ಇರಲಿಲ್ಲ. ಹಾಗಾಗಿ ಯಾಕೆ ಪ್ರಯತ್ನ ಪಡಬಾರದು ಅನಿಸಿ ಸಾದಾರಣ ಹಾಳೆಯ ಮೇಲೆ ಪೆನ್ಸಿಲ್ ನಿಂದ ಶುರು ಮಾಡಿದೆ.ನಾನು ಹೇಗಿದ್ದೇನೆ? ನನ್ನ ತಲೆ ಅಥವಾ ಮುಖ ಸೌತೆಕಾಯೋ? ಕುಂಬಳ ಕಾಯಿಯೂ ? ಮೊದಲು ಮುಖದ ವಿನ್ಯಾಸ ನೆನಪಿಸಿಕೊಂಡೆ. ಕನ್ನಡಿಯಲ್ಲಿ ಒಮ್ಮೆ ನನ್ನ ಮುಖ ನೋಡಿಕೊಂಡೆ. ಯಾಕೋ ಏನೋ ನನ್ನ ಮುಖ ನನ್ನ ತಮ್ಮಂದಿರಂತೆ ವ್ರುತ್ತಾಕಾರದಲ್ಲಿಲ್ಲ ಎನಿಸಿತು. ಹಾಗೆಂದು ಮೂಳೆಯ ಕೋಲು ಮುಖವು ಅಲ್ಲ. ಒಂದು ರೀತಿ ಅಂಡಾಕಾರ ಅಥವಾ ಚೌಕಾಕಾರ ಎರಡು ಅಲ್ಲದ ಒಂದು ಮುಖ. ಹಾಗಾದರೆ ನಾನು ನನ್ನ ರೂಪ ರೇಖೆ ಯನ್ನು ಎಲ್ಲಿಂದ ಆರಂಭಿಸಲಿ. ಸ್ವಲ್ಪ ಯೋಚಿಸಿ ಹೊರಗೆರೆಗಳನ್ನು ಎಳೆದೆ. ಉದ್ದನೆಯ ಕೂದಲು, ಎದುರು ಸುಳಿಯ ಎಡಕ್ಕೆ ವಾಲಿರುವ ಬೈತಲೆ, ವಯಸ್ಸಿಗೆ ಮೀರಿ ಕಾಣುವ ದಪ್ಪ ದಪ್ಪ ಸುಕ್ಕುಗಳು...

ಆಭಾರಿ...

ಅಭಾರಿ  ಆಗಿರಬೇಕು ಅಭಾರಿ ಸದಾ ಇಲ್ಲಿಯವರೆಗೂ ಬದುಕಿ ಉಳಿದಿರುವುದಕ್ಕೆ. ಹೇಳಲೇಬೇಕು ಖಂಡಿತ ಯಾರಿಗಾದರೂ ಥ್ಯಾಂಕ್ಸ್. ಏಕೋಪಾಧ್ಯಾಯ ಸರಕಾರೀ ಶಾಲೆಗಳಲ್ಲಿ ಸಾಣೆ ಹಿಡಿದ ಮನಸು, ಬುದ್ಧಿ, ಹಳ್ಳಿ ಗಮಾರನಿಗೆ, ದಡ್ಡತನ ಸರಳತೆ, ನಗೆಪಾಟಲಿನ ಮುಘ್ದತೆಗೆ, ಅನ್ವೇಷಕ ಪ್ರಾಣಿ, ಅಂಡೆಲೆದು ಓಡಿ, ಕಾಡು ಬಂಡೆಗಳ ಮೇಲೆ ಆಡಿ, ಕುಂಟಿ, ಕುಪ್ಪಳಿಸಿ,ಎದ್ದು ಬಿದ್ದ ವಡ್ಡ ದೇಹಕ್ಕೆ, ಅಳದೆ, ತೊಳೆಯದೇ, ಅರಿಶಿನಹಚ್ಚಿ, ಗಾಯ ಮುಚ್ಚಿ ಮೆರೆದ , ಕನಸಾದ ಆ ದೇಹಕ್ಕೆ ಶರಣು, ಅನ್ವೇಷಿಸಲು ಕಳಿಸಿದ ಅ ಮರಳು ಹಳ್ಳಿಗೆ, ಆಹ್ವಾನವಿಲ್ಲದ ಅಥಿತಿ, ನನ್ನನ್ನು ಸಹಿಸಿದ ಮಹಾ ನಗರದ ನಾಗರಿಕರಿಗೆ, ಮನೆ ಭಾಷೆ ಕೀಳರಿಮೆ ಮೂಡಿಸಿ, ಲೋಕಭಾಷೆ ಕೇಳಿ, ನಗೆಯಾಡಿ, ಬದುಕನ್ನೇ ಭಾಷೆಯಾಗಿಸಿದ ಸ್ನೇಹಿತರಿಗೆ, ಅಮಾನವೀಯ ಪೈಪೋಟಿಯ ಬಿತ್ತಿದ ಬದುಕಿಗೆ 'ಬದುಕು ಅಂದರೆ ಹೊಂದಾಣಿಕೆ' ಒಪ್ಪಂದದ ಬಾಯಿಪಾಠ ಮಾಡಿಸಿದ ಗುರುಗಳಿಗೆ ವಂದನೆ, ಆತ್ಮವನ್ನೇ ಶಾಶ್ವತ ಮುಚ್ಚಿದ ಸನ್ನಿವೇಶಗಳಿಗೆ, ಆಸೆಪಟ್ಟು, ನಿರಾಸೆಗೊಂಡ ಮನಸಿಗೆ, ದುರಾಸೆ ಹೆಚ್ಚಿಸಿ, ಪಡೆದು,ಗೆದ್ದ ಕ್ಷಣಗಳಿಗೆ, ಮೇಲೇರಿದ ಸ್ನೇಹಿತರ ಕಂಡು ಕರುಬಿದ ಸಣ್ಣತನಕ್ಕೆ, ಚಾಡಿ ಹೇಳಿದ್ದಕ್ಕೆ, ವಂಚಿಸಿ ಹೀರೋ ಆಗಿದ್ದಕ್ಕೆ, ನನ್ನವರ ಕೆಳನೂಕಲು ಪಟ್ಟ ಗುಪ್ತ ಪ್ರಯತ್ನಕ್ಕೆ, ಅಮಲೇರಿದ ಕುಡುಕನ ನಶೆ ಇಳಿದಾಗ ಪಟ್ಟ ವ್ಯಥೆಗೆ, ಪೊಗರಿಳಿದ ದೇಹದ ನಿರಾಕರಣೆಗೆ ಸ...

ನಿರೀಕ್ಷೆ,

ಕಾಯುತ್ತಿದ್ದೇನೆ ಹೌದು, ನಡುಹಗಲಿನ ನಿದ್ರೆ ಮಂಪರು ಬರಹವಾಗುವ ಮುನ್ನ ಮರೆತು ಹೋಗುವ ಕನಸು, ಬಿಚ್ಚಿಟ್ಟ ನೆನಪು ಕರಗಿ ಹೋಗಿದೆ ಬಳಲಿಕೆಯ ಬೆವರಿನಲಿ, ಆವಿಯಾಗಿ, ಅಸ್ಪಷ್ಟ ಕದಡಿದ ಮನಸು, ರಾಡಿ ಆಗಿದೆ, ಸಂಪೂರ್ಣವಾಗಿ, ಪರ್ಯಾಪ್ತ ದ್ರಾವಣ, ಪ್ರನಾಳದಷ್ಟೇ ಪಾರದರ್ಶಕ, ಕಾರಣ, ಆಕರ್ಷಕ ಭಾವ ಸ್ವಭಾವ, ಭಾಷೆ ಅಭಾವ ಎಲ್ಲದರಲ್ಲೂ ಆಗಿದೆ ರಹಸ್ಯ ಒಪ್ಪಂದ, ನಿಜ, ಯಾವುದಕ್ಕೂ ತಾಳೆಯಾಗದ ಯಾವ ಸಂಭಂದ.. ಹೂವಲ್ಲಿ, ಇರದ ಮಕರಂದ, ದುಂಬಿ ಮರೆತಿದೆ ತನ್ನ ಹಾರಾಟದಾನಂದ ಬೇಕಿಲ್ಲ ಪರಾಗ ತೇಲಿದೆ ಆವರಣದಲ್ಲಿ ಸರಾಗ, ಸ್ನೇಹಿತನ ಮಗಳು ಸ್ರಜನ, ಬರೆಯುತ್ತಾಳೆ ಕವನ, ಅಲ್ಲಿ... ಗೋಕರ್ಣದಲ್ಲಿ, ಮೀನ ವಾಸನೆಗೆ ನಾಯಿಯ ಹಸಿವು, ಹಸಿದ ಹೊಟ್ಟೆಗೆ ತಳಮಳ ಮಿಡಿಯುತ್ತಾಳೆ ಅಂತಃಕರಣದಲ್ಲಿ ಮಗಳು ಸಹನಾ, ಎದುರು ಆವಿಯಾಗುವ ಕಡಲ ಝಳ ಉಹಿಸ ಬಹುದೇ? ಹವಳ ಹಂಚುವ ಅದರ ತಳ, ಕಾಯುತ್ತಿದ್ದೇನೆ ಬೀಸಿ ನನ್ನ ಗಾಳ,

ಯಾತ್ರೆ...

ಯಾತ್ರೆ  ಎಂದೋ ಆರಂಬಿಸಿದ ಯಾತ್ರೆ, ಮುಗಿಯದ ಅಕ್ಷಯ ಪಾತ್ರೆ ಹೊರಡುತ್ತಲೆ ಇದೆ ಅನಿಯಮಿತ, ಅನೀರಿಕ್ಷಿತ ಹೊಸ ತಳಿಗಳು, ಅಳಿಯುತ್ತಲೇ ಇದೆ ಅಯೋಗ್ಯ ಪೀಳಿಗೆ ಕಾಲನ ಜೋಳಿಗೆಯಲ್ಲಿ. ಚಿರಚಾಲಿತ ಬದಲಾಗುವ ಈ ಗೂಡಿನಲ್ಲಿ, ಮರೆಯಾಗುತ್ತಿವೆ ಹಾಡಿ, ಹಳ್ಳಿಗಳು ನಿಲ್ದಾಣಗಳ ಹಿಂದೆ ಒಂದರ ಹಿಂದೆ ಒಂದು, ರಾಷ್ಟ್ರೀಯ ಹೆದ್ದಾರಿಯ ಮಾಯವಾಗುವ ಮಲಿಗಲ್ಲು, ಅಂಕಿ ಸಂಖ್ಯೆಗಳು ಅಸ್ಪಷ್ಟ, ಒಮ್ಮೊಮ್ಮೆ ಅದೃಶ್ಯ, ವೇಗದ ಗತಿಯಲ್ಲಿ, ಗುರಿ ಗೊಂದಲಮಯ, ಗ್ರಹಿಸಲಾರದ ದೂರ, ತಲುಪಲಾರದ ಊರ. ಅಲ್ಲಲ್ಲಿ ಸಡಗರ, ಉತ್ಸವ, ತೇರು ಸ್ವಾಗತ ಸಂಭ್ರಮ ನಿರ್ಜನ ಮೆರವಣಿಗೆ, ಜನರು ತಿದ್ದದ ಪುರಾತನ ಬರವಣಿಗೆ ಶಿಲಾಶಾಸನ ಹಾಳುಬಿದ್ದ ಕೋಟೆಯೊಳಗೆ ಕಳೆದು ಹೋದ ಭಾವ ವಿಚಿತ್ರ ಸ್ವಭಾವ ಹಗಲು ರಾತ್ರಿ ಅರಿವಾಗದ ಅಸಂಗತ ಥಟ್ಟನೆ ಎದುರಾದ ಮಿಣಕು ಜ್ಯೋತಿ ಎರಗಿ ಬಂತು ಬೆಟ್ಟದಂತೆ, ಬೆಳಕ ಬಯಲು ಕತ್ತಲಾದ ಆ ಕ್ಷಣ, ಅನಿರೀಕ್ಷಿತ ನಿಂತ ಗಾಡಿ, ಎಲ್ಲೆಲ್ಲೂ ನಿರ್ವಾತ ಮೋಡಿ ತಲೆಯೆಲ್ಲ ಹಾರಿದೆ ಗುಂಗಾಡಿ, ದಾಟಿ ಹೋಗಿದೆ ಕಾಲದ ಗಡಿ.... ಎಲ್ಲೆಲ್ಲೂ ಈಗ ಗೊಂದಲದ ಗಡಿಬಿಡಿ,

ಪ್ರಾಯ.....

ಆಕಸ್ಮಿಕ... ಕುಡಿವ ಮಜ್ಜಿಗೆಯಲಿ ನೆರೆತ ಗಡ್ಡದ ಮುದಿ ಕೂದಲು, ಮತ್ತೇರಿ ಕುಣಿದಾಗ ನಲಿದಾಡಿತು, ಸಜ್ಜಿಗೆಯ ಪರಾತದಲಿ ಕಳಚಿ ಬಿದ್ದ ಕಟ್ಟಿಸಿದ ಹಲ್ಲು, ಬಿಟ್ಟ ಬಾಯಿ ಸುರಿಸುವ ಜೊಲ್ಲು, ಕಂಡಾಗ.... ಕೋಶ, ಜೀವಕೋಶಗಳ ಚಿತ್ಕಾರ, ಭಾರ, ಅರ್ಥವಿಲ್ಲದ ವ್ಯವಹಾರ ಜಿಗುಪ್ಸೆ ಅಪಾರ ಯಾವ ಮಮಕಾರ? ಯಾರ ಸಹಕಾರ? ಶ್ವಾಸವೇ ಬಲು ಭಾರ, ಮುಕ್ತ ಗಾಳಿಗೂ ಬಂದಿದೆ ಸಂಚಕಾರ....

ವಿವೇಕಿ...

ವಿವೇಕಿ  ಮಾಯಾವಿ, ಸೂಕ್ಷ್ಮಾಣುಗಳಂತೆ, ಆದರೂ ಸರ್ವಂತರ್ಯಾಮಿ ಪರಮಾಣುವಿನಂತೆ. ಕ್ಷಣ ಕ್ಷಣದಲ್ಲೂ ಅನುಭವ, ಆದರೂ ಅರಿವು ಅಸಂಭವ ತ್ರಿಕಾಲ ಜ್ಞಾನಿಗಳಿಗೆ. ಹಾಕಿರುವ ಬಣ್ಣದ ಚಾಳೀಸು ಬದಲಿಸಿ ನೋಡು, ಆಗಬಹುದು ಪರಕಾಯ ಪ್ರವೇಶ. ಕೊಡು...ಕಣ್ಣನ್ನು ಸೂಕ್ಷ್ಮದರ್ಶಕ ಮಸೂರಕ್ಕೆ, ತೆಗೆ ಮುಚ್ಚಳ... ನೋಡು... ಒಳಗೆ, ಹೊರಗೆ, ಅವತರಿಸಬಹುದು ಕಾಣದ ಆ ದೃಶ್ಯ ಇಣುಕ ಬಹುದು ಮನುಕುಲದ ಆದರ್ಶ, ದೃಷ್ಟಿ ದೋಷವೇ? ವಿಸ್ತರಿಸಿ ಗೋಚರಿಸಿದ ವೈರಾಣು, ಸೃಷ್ಟಿ ರೋಷವೆ? ಪರಿಸರ ಹೈರಾಣು! ಸೋಂಕು ಪ್ರಗತಿ, ಸಾಂಸ್ಕೃತಿಕ ರೋಗಾಣು ಹೊರಗೆ ಕಾಣದ ಹುಣ್ಣು ಆತ್ಮಕ್ಕೆ ಹಿಡಿದಿದೆ ಮಣ್ಣು. ವಾಸಿಸಲು ಆಗಿದೆ ಪರಿಸರ ಅಯೋಗ್ಯ ಪ್ರಗತಿ ಜ್ಞಾನ ತಂದ ಭಾಗ್ಯ ತಾಯಿ ಹಿಡಿದಳು ಹಾಸಿಗೆ, ನಮ್ಮ ಏಳಿಗೆ. ಅರಿವಿದೆ ನಮಗೆ, ದೃತರಾಷ್ಟ್ರ ಪ್ರೇಮ ಕಾಣದೆ ತಮಗೆ? ಕುಳಿತಿರುವಿರಿ ಯಾಕೆ? ತೆಪ್ಪಗೆ. ನಿಜ.... ಎಂದೋ ಬಿತ್ತಿದ ಬೀಜ ಮೊಳೆತು, ನಿರಂಕುಶ ರಾಜ ಸಾಗಿದೆ ನಿರಂತರ, ನಿಲ್ಲದ ಪೈಪೋಟಿ, ಯಾರಿದರ ಮೇಟಿ? ಕಲಿಸಿಕೊಟ್ಟಿದೆ ಸುಳಿವು ಸಮರ್ಥರ ಉಳಿವು, ಅಸಮರ್ಥರ ಅಳಿವು, "ದುಷ್ಟ ಶಿಕ್ಷಿಕ ಶಿಷ್ಟ ರಕ್ಷಕ" ಚೆನ್ನಾಗಿದೆ ಈ ಶ್ಲೋಕ! ಯಾರಿದರ ನಿರ್ಧಾರಕ? ಹಾಡುತ್ತಲೇ ಇದ್ದಾನೆ ಮೈ ಮರೆತು ಗಾಯಕ! ಯಾರು ಖಳನಾಯಕ? ನಂಬಿದ್ದಾನೆ, ಅಸಲು ವಾರಸುದಾರ ತಾನೆ, ಆ ವಿವೇಕಿ ಮಾನವ, ಯಜಮಾನ ಯಾರಿವನ ಸಮಾನ? ಹರಡಿ ವಿನಾಶದಂಟು ಬೇನೆ, ...