ಕಾಡ ಗೀತೆ... ಪ್ರವಾಸಿಗರು ಇವರು ಅಲೆಮಾರಿ ಬದುಕು ಇದ್ದಾಗ ಎಲ್ಲರಿಗೂ ಹಂಚುವರು ಸರಕು ಭೋರ್ಗರೆವ ಜಲಪಾತಗಳು ಎಣಿಸಿಲಿಕೆ ನೂರಾರು ಛಳಿಗಾಲಕ್ಕೆ ಇವಕ್ಕೆ ದೊರಕುವ ಶಿಕ್ಷೆ ಗಡಿ ಪಾರು ಗುರುತ್ವಪ್ರೇಮಿಗೆ ಆಳದ ಅಳುಕಿಲ್ಲ ಎತ್ತರದ ಭಯವಿಲ್ಲ ತಳ ಸೇರುವ ಮುನ್ನವೇ ತೇಲುವನು ಹಗುರಾಗಿ ಮೇಲ್ಮುಖಿ ತಳ ದಡಗಳ ಮೋಹಕೆ ಸಿಲುಕದ ಹಟಮಾರಿ ಮಾಯಾವಿ ಶಟ್ಟಿ ಬಿಟ್ಟಲ್ಲೇ ಪಟ್ಟಣ. ಭಯಂಕರ ತತ್ವಜ್ಞಾನಿ ನೀರಿನಂತೆ ಆಕಾಶಕ್ಕೆ ಭಿತ್ತಿಯಾಗುವ ಪೋಷಕರ ವಿಸ್ತಾರ ಪರದೆ ಅಂಬರದ ತುಂಬ ಒಟ್ಟಿರುವ ಬಿಳಿಹತ್ತಿಯ ಅಗಾಧ ಗಂಟು ಘಾಡ ಬೂದಿ,ಒಮ್ಮೊಮ್ಮೆ ಕಪ್ಪಾದ ಕರಿ ನೆರಳಗೆ ನಂಟು ಅಳೆಯುತ್ತದೆ ಆಕಾಶ ನೆಲವನ್ನು ಹನಿಗುಂಡುಗಳಿಂದ, ಆಕಾಶ ಹೊಳೆದು ಘರ್ಜಿಸುತ್ತದೆ ಒಮ್ಮೊಮ್ಮೆ ವಿದ್ಯುತ ಛಾಪ ಕಾಡು ಆವಾಸಿಗಳಲ್ಲಿ ನಿರ್ಭಯ ಮೌನ ಸೀಳುವ ಝೇಂಕಾರ ಕೊಂಬೆರೆಂಬೆಗಳಿಂದ ಹನಿಸಿ ನಿನಾದ, ವನರಾಗಕ್ಕೆ ಜಲಪಾತಗಳ ತಾಳ ತೊರೆ,ಹಳ್ಳಗಳ ಆಲಾಪನೆಯಲಿ ಮೂಡುವ ವನಸ್ವರಗಳ ಮೇಳ
Posts
- Get link
- X
- Other Apps
ಮೌನಿ.... ಮಣ್ಣ ತುಂಬಿ, ನೀರ ಬೆರೆಸಿ, ಬೆಳಕ ಚುಂಬಿಸಿ ಆಕಾರ ತುಂಬಿಸುವ ಪ್ರಕೃತಿಯ ಅಕ್ಷಯಪಾತ್ರೆ ಸಕಲ ಜೀವಿಗಳಿಗೆ, ರಾಡಿ ಹರಿಸಿ, ಹಸಿರು ಕಲಸಿ, ಮೆತ್ತಿ ಕೆಸರ, ಬೆರೆಸಿ ಲವಣ, ಹೀರಿ ಕಿರಣ, ಪೋಣಿಸಿ ಕಟ್ಟುವ ಆಹಾರ ತೋರಣ ಭೂವಿಸ್ತಾರದಲಿ ವಿಸರಿಸಿ, ಹರಿದು ನೀರಲ್ಲಿ ನೀರಾಗುವ ಪಾಚಿ ಬೆಳಕಿನ ಬೆರಣಿಯಲ್ಲಿ ಹದಮಾಡುವ ಕಲೆಗಾರ ಸಂಸ್ಲೇಷಕನಾದರೂ, ಗಾಳಿ ಬೀಸುವ ವಿಶ್ಲೇಷಕ ಜೀವಶಕ್ತಿ ಹಂಚಿಕೆದಾರ. ಶಾಶ್ವತ ಮೌನಿ, ತುಂಬಾ ಸರಳ ಹೀಗೆ ನಮ್ಮಲ್ಲಿ ಅತಿ ವಿರಳ ದೇಹಕ್ಕೆ ಅಂಟಿರುವ ಉಸಿರಿನಂತೆ, ನೆಲಮರೆಯದ ನಿಶ್ಚಲ ಯೋಗಿ ಗುರುತ್ವ ಗುರುವರ್ಯರಲ್ಲಿ, ಭಕ್ತಿ ಅಪಾರ ಗುರು ಇದ್ದಲ್ಲೇ ನೆಲೆ, ಪ್ರಶ್ನಾತೀತ ವಿಧೇಯತೆ ಸೆಲೆ ಕದಲುವುದಿಲ್ಲ ಅಚಲ, ಕಿತ್ತಿ ಅಡ್ಡ ಮಲಗಿಸಿ, ತಲೆಕೆಳಗೆ ಮಾಡಿ ವ್ಯಾಮೋಹದ ನೀರುಣಿಸಿದರೂ ಮತ್ತೇ ಹುಡುಕಿಕೊಂಡು ಬರುವ ಅತಿವಿನಯ ಶಿಷ್ಯಭಕ್ತ ಒಣಮರದ ಬೇರಿಗೆ ಜರಡಿಯ ಪಾತ್ರೆಯ ಜಲಸಿಂಚನ ಕೃಷ್ಣ ಮರೆಯಲಿಲ್ಲ ಕರುಣಿಸಲು ಸಾಕ್ಷಾತ್ಕರ ಕಂಡಾಗ ಭೀಮನ ಹೆಣಹೊತ್ತ ಧರ್ಮರಾಯನ ವ್ಯಾಮೋಹ, ಸ್ವರ್ಗದಹಾದಿಯಲ್ಲಿ ಕವಲು,ಕವಲಾಗಿ ಕರಗಿ,ಮಾಯವಾಗುತ್ತಾ ಸ್ಥಿತಿಸ್ಥಾಪಕದಲ್ಲೇ ಇಳಿಯುವ, ಆಳ ಹುಡುಕುವ ವೇಷಧಾರಿ ಯಾರಿಗೂ ಕಾಣದ ಗುಹೆಯಲ್ಲಿ ಜಪಿಸುವ ಋಷಿ ತನ್ನೆಲ್ಲಾ ಜೀವಕವಲುಗಳ ಜೀವಜಲ ಉಣಿಸುವ ಜವಾಬ್ದಾರಿ ಯಜಮಾನ, ಗುರುತ್ವಕ್ಕೆ ಪ್ರಶ್ನೆಯಾಗುವ ಬೆಳಕಿಗೆ ವಿಮುಖನಾದ ಬಲಿ ಪಾತಾಳ ಹೊಕ್ಕು, ಕಣಕಣದಲ್ಲಿ ಅಭಿಸರಿಸಿ ಎತ್ತರಕ್ಕೆ ನೂಕಿ, ಗುರಿತಲು...
- Get link
- X
- Other Apps
The Western ghats and the monsoon... Yes... I am a seasonal and seasoned vagabond...roaming and loafing in the wilderness, squandering the pent up zeal for the needed hour for the monsoon rain that is as special as it is with its punctual regularity..... the clouds in the sky like light worms are attracted to the gigantic mountain range of Western Ghats...The dense mass of black cotton mass that is stuffed haphazardly to the brim of the hiding sky...that sometimes cracks open with thunderous sound with a prelude of linear light mark against the back drop of the blocked out pavilion...A glorious rainy life creator’s concert has begun....The basic notation is the rustling of the leaves and the regular rhythmic drum beat of the dripping drops from the gigantic trees... A sight to fill your inner eyes and the sound ever reverberates in your immortal soul.... Though physically alone in the wild you feel.....the life flows in every capillary that carries sap to the branches, twigs,...
- Get link
- X
- Other Apps
ಮೊಳಕೆ ಒಡೆಯದ ಬೀಜ ಮಾನವ,..ಮೂಳೆಮಾಂಸದ ತಡಿಕೆ...ದೇಹವೂ.... ಅಸ್ಥಿಯಲ್ಲೂ ನೀರು ಮಾಂಸದಲ್ಲಿಯೂ ಅಪಾರ ಜಲಸಂಪತ್ತು ಜೀವಿಗಳ ಅಸ್ತಿತ್ವವೆಲ್ಲವೂ ಮೂಲದಲಿ ಸಂತೃಪ್ತ ದ್ರಾವಣ.. ರಕ್ತವಾದರೂ ಜೀವದಾತುವಿನ ಜೀವ ನೀರು ಅಸಂತೃಪ್ತವಾಗುವುದು ಅಸಂಗತ ಜಲತಪ್ತ ದ್ರಾವಣ ಜೀವದಾತುವಿನ ಈ ಅತೃಪ್ತ ಕಾಯದಲ್ಲಿ ,ಜೈವಿಕಗೊಬ್ಬರಕ್ಕೆ ಬರವಿಲ್ಲ ಶಂಕು ರಕ್ತ ಸೀಸೆಯಲ್ಲಿ ಬೆಳಕೇ ಕಾಣದ ಮನಿಪ್ಲಾಂಟ್ ಗಿಡ ಮನೆಯಲ್ಲೇ ಬೆಳೆಯುತ್ತದೆ, ಚಿಗುರುತ್ತದೆ......ಹಸಿರಾಗಿಸಿ ಉಸಿರಾದರೂ ನಮ್ಮ ಎದೆಯ ನೆಲದಲ್ಲೇಕೇ ಕರುಣೆಯ ಜಲ ಕ್ಷಾಮ? ಯಾವುದರ ಕೊರತೆ,? ನೀರಿದೆ ಕೋಶರಸ ದ್ರವೀಕರಿಸಲು. ರಕ್ತಬಿಸಿಯಾಗಿ ಉಷ್ಣತೆ ಗೆ ಬರವಿಲ್ಲ ಕಿಣ್ವ ಪ್ರಚೋದಿಸಲು,ನಾವು ಬಿಸಿರಕ್ತ ಪ್ರಾಣಿಗಳು ಪೋಷಕಾಂಶಗಳು ಹೇರಳ...ಬೆಳದದ್ದು ಅಸಹನೆ,ಅಹಂ ಕೋಪ,ದ್ವೇಷ ಭಿತ್ತಿ ಬಿರಿದು,ಸ್ರವಿಸಬಾರದೇ ಹೃದಯರಸ? ಎಲ್ಲರ ಒಂದೊಂದೂ ಕೋಶಗಳಲ್ಲಿ? ನಮ್ಮೆದೆಯಲ್ಲಿ ಹಸಿರು ರಾಶಿಯ ಚೌಕಾಶಿ, ಇಲ್ಲಿ ಎಲ್ಲರೂ ಪರದೇಶಿ ಆದರೂ ಏಕೆ ಕೊಂಕು, ಕೊರತೆಯ ತಳಮಳ ಎದೆಯಾಕೆ ಬಂಜರು? ಸದಾಪರ್ಣಿ ಆವಾಸದಲ್ಲಿ ಪ್ರಶ್ನೆ ಮಾತ್ರ ತೀರಾ ಸರಳ, ನಿರುತ್ತರದ ಕಳವಳ ಪ್ರೀತಿಯ ಸಿಂಚನ, ಮಮತೆಯ ಖನಿ, ಹೃದಯದ ತಾಪ ಎಲ್ಲಾ ಸೂಕ್ತ ಸಾಮರಸ್ಯದಲಿ ಲಭ್ಯ. ಈ ಫಲವತ್ತಾದ ಮಣ್ಣಲ್ಲಿ, ಈದೇಹ ಆವಾಸದಲ್ಲಿ ಸುಗ್ಗಿಯ ಮಾತಿಲ್ಲ, ವ್ಯವಸಾಯವಿಲ್ಲದ ಬರಡು ಗೂಡಿಗೆ ಯಾರದೋ ಶಾಪ ಅಜ್ಞಾನದಲ್ಲಿ ಪ್ರತಿ ಋತುವಿನಲ್ಲಿ ಪ್ರೀತಿ...
- Get link
- X
- Other Apps
With due apology from the poets…. Can you buy the benevolence from the bard? A symbol of indifferent, uncared lock of hair With a barbed and bristle haired grey beard, Like the reed on the banks of a river jade Haunted by a folk of maids rooted like a weed Never tilled and sowed the seed for the greed A skilful player of words, ‘My lord’ Letters are knit in a riddle of kaleidoscopic web The delicate balanced line in a rarest of beads, Arrest your of emotions in this great asylum And joined to link the soul with the wire of the meter rhyme Connected with the unbroken string of song Continues to pile up the stanzas in the music rung That reverberates eternally uninterrupted but never heard! In the air, the waves that never cares, Drift ceaselessly into the oblivion Symphonic balled sung in the countryside Never a discarded note from the urban mind Yes... it is an overcrowded, Unmanageable concert, A confused chorus, A challenge and a nightmare In a sense, no...
- Get link
- X
- Other Apps
ಅತೃಪ್ತರು... ಮಳೆ ಅನಿರೀಕ್ಷಿತವಾದರೂ ಅನಪೇಕ್ಷಿತವಲ್ಲ ಯಾರಿಗೂ.. ಎಂದಾದಾರೂ.. ಅಂತ ಹೇಳುವುದು,ನಗೆಪಾಟಲು, ಕೇವಲ ಶ್ರೀಮಂತಿಕೆಯ ಮೋಜುಬಾಕ ಪ್ರಚೋದಕ, ಹಗಲುಗನಸಿಗನಿಗೆ ಹದವಾದ ಪಾಕ ಕಲ್ಪನೆಯ,ಕನಸುಗಳ ಉದ್ವೇಗಿ ಕನಸುಗಾರ ಕವಿ ನಗರದ ಝಗಮಗದಲ್ಲಿ ಕೊರಗುತ್ತಾನೆ ಅನ್ನದಾತ ತಗ್ಗು ಪ್ರದೇಶದ ಕುಗ್ಗಿದ ಜನಗಳ ಆವಾಸಕ್ಕೆ ಮಳೆಯ ಅಮವಾಸ್ಯೆ, ಅರಿವಿಲ್ಲ ದೊರೆಗಳಿಗೆ ಈ ಸಮಸ್ಯೆ ಎಗ್ಗಿಲ್ಲದೆ ಲಗ್ಗೆ ಹಾಕಿ ಒಕ್ಕಲೆಬ್ಬಿಸುವ ವರ್ಷ.... ತರಬಲ್ಲದೇ ನಮ್ಮ, ನಿಮ್ಮಂತೆವರಿಗೆ ಹರುಷ ಜಡ್ಡುಹಿಡಿದ ಪಟ್ಟಭದ್ರತೆಗೆ ತಾಗದ ನಿಸ್ಪರ್ಷ ಅಸಹಾಯಕತೆಯ ತಾಳ್ಮೆಯಲ್ಲಿ ಸ್ಪಂಧನ ರಾಡಿಯಾಗುವ ಬದುಕಿನ ಆಕ್ರಂದನ ನಿಶ್ಯಭ್ದ ಕಲ್ಲು, ಗಾಜುಗಳ ಸೌದದಲ್ಲಿ ಹಂಸ ಧ್ವನಿಗೆ ಆಲಾಪನೆ ಆದರೂ ಮಳೆ ಸುರಿಯುತ್ತದೆ ತನ್ನಿಷ್ಟ ಬಂದಂತೆ ಸ್ವೇಚ್ಛೆಯಿಂದ, ಯಾರ ಹಂಗಿಲ್ಲದ ನಿಜಮುಕ್ತ ಪ್ರಜಾತಂತ್ರದಲಿ ಅತಂತ್ರವಾದ ಅಗಣಿತ ನಿಶ್ಚಲ ಅಸಹಾಯನಿಗೆ ಅನೀರೀಕ್ಷಿತ ಶಾಪ ಪ್ರಕೃತಿಯ ಧೋರಣೆ, ಪ್ರಶ್ನಾತೀತ ನಿಯಮಪಾಲಕ ನಿಷ್ಕರುಣಿ ಬಯಲಲ್ಲಿ ಸುರಿಯಲಿ ಮಳೆ, ಹರಿಯಲಿ ಹೊಳೆ ಹಳ್ಳಿಗಳಲ್ಲಿ, ಹದವಾಗಿ, ಹಾರೈಕೆ, ಪೂರಯ್ಕೆ ಸಮವಾಗಲೆಂಬ ಪ್ರತಿಫಲದ ಪ್ರಾರ್ಥನೆ...ಯಾರಿಗೆ? ಕೇವಲ ಬಯಕೆ ಆದರೂ.... ಬಂಧುಗಳೇ ಸುಳ್ಳು ಹೇಳುವುದಿಲ್ಲ ಮಳೆ ನಿಜಕ್ಕೂ ನನಗೆ ತುಂಬಾ ಇಷ್ಟ ಕ್ಷಮಿಸಿ ಅರಿವಿದೆ ನಿಮಗಾಗುವ ಕಷ್ಟ ನಿಮ್ಮ ಕ್ಷಮಾಪ್ಪಣೆಗೆ ಪಡೆದು ಮಾತ್ರ ಕುರುಡು ಸಾಲು ಆಗದು ನಿಮ್ಮ ಬದುಕಿನ ಸೂತ್ರ ಅವ್ಯಕ್ತ ...
- Get link
- X
- Other Apps
ಎರೆಹುಳು....... ಹೊರಳುತಿದೆ ಕೆರಳಿ,ಮನಸು.ತೆವಳಿ ಜಾರುತಿದೆ, ಸಾಗುತಿದೆ ದೂರ ಸಾವಕಾಶವಾಗಿ, ಸಮನಾಂತರವಾಗಿ ಆಮೆ,ಎರೆ ಹುಳು ನಡುವೆ ಹಿಂದೇ ಉಳಿದು ಗೆಲ್ಲುವ ಓಟದ ಪೈಪೋಟಿ. ನೆಲಕೆಳಗಣ ವಿಶಾಲ ಮೈದಾನ ಕಗ್ಗತ್ತಲು ಹೊನಲು ಬೆಳಕಿನ ಸಿದ್ದತೆ ಆಗಿಲ್ಲ ನೇತ್ರಹೀನ, ದಿಕ್ಕಿಲ್ಲದ ನೋಟದ ಸಮಕೋನದಲ್ಲಿ ಕೊರೆಯುವ ಸುರಂಗ, ಮರೆತೇ ಹೋಗಿದೆ ಸ್ಪರ್ಧಿ ಮಣ್ಣುಕಣಗಳ ಮಬ್ಬಲ್ಲೇ ನೂಕಿ ಮುನ್ನುಗ್ಗಿ ಕೆದರಿ, ಬಿರುಗೂದಲು ಚಾಚಿ ಸಾಧಿಸಿ ಹಿಡಿತ ಮೇಲೇರುವ ತವಕ, ಬತ್ತಿಲ್ಲ ಇನ್ನೂ ಉತ್ಸಾಹದ ಒರೆತ ಬೆಳಕ ಹಿಡಿಯಲು ಬೊಗಸೆಯೊಳಗೆ, ಉಳಿಯುವುದಿಲ್ಲ ಖಚಿತ ಸರಾಗ ಸಾಗುತಿದೆ.....ಭ್ರಮೆ.ನಿರಸನದಿಂದ ದೂರ. ದೂರ,ಕತ್ತಲ ಸಾಮ್ರಾಜ್ಯದಲಿ ಅಧಿಪತಿಯ ಗಸ್ತು, ಎಲ್ಲವು ಶಾಂತ ಬಿರುಗಾಳಿಯ ಮುನ್ನ, ಗುಡುಗಿಲ್ಲ, ಸಿಡಿಲಿಲ್ಲ,ಮೋಡವಿನ್ನು ಬಿರಿದಿಲ್ಲ. ಭಯವಿಲ್ಲ, ಮಳೆಸುರಿದು,ಪ್ರವಾಹ ಉಕ್ಕುವುದಿಲ್ಲ ನಾನು ಮುಳುಗುವುದಿಲ್ಲ, ಕೊಚ್ಚಿಹೋಗುವುದಿಲ್ಲ, ಉಸಿರುನಿಲ್ಲುವುದಿಲ್ಲ, ಚರ್ಮಹಸಿ ಇರುವತನಕ. ಮಣ್ಣ ನುಂಗಿದ ಗತಕಾಲದ ಅನಾದಿ ಅಸ್ತಿ ಅಸ್ತಿತ್ವ ಪಿಸುಗುಡುವ ಸದಾ ಗೊಡ್ಡು ತತ್ವ ಯಾರೋ ಕರುಣಿಸಿದ ಫತ್ವಾ. ಅಂದೇರಿ ನಗರದ ರಂಧ್ರಮಯ ರಾಜ ಬೀದಿಗಳಲ್ಲಿ, ಮೌನ ಸಂಗೀತದಲಿ ಸಂಭ್ರಮದ ನಾಟ್ಯ ಹೆಜ್ಜೆ ಓಲಗದ ಸಂಗೀತದಲಿ,ಮಣ್ಣ ವಾಸನೆಯ ಘಮ, ಬಲೆಯ ಸಂಕೀರ್ಣ ದಾರಿಗಳಲ್ಲಿ, ಕತ್ತಲ ಪಲ್ಲಕ್ಕಿ ಗಿರಕಿ ಹೊಡೆಯುತಿದೆ ಸಿಕ್ಕಾಗಿರುವ ರಸ್ತೆ ಬಲೆ ಉಂಗುರ ಕಾಯದ ಮೆರವಣಿಗೆ ನೆಲಮಾಳಿಗೆ...