Life.... vague?...absurd?, or? call it, cry out, shout at... by whatever name you know of, hollow, meaningless, like a perched stream. life.... yet is too elusive to be lived but lives are rare as bare as scare! lines scripted in a perplexed mood. honestly...a riddle, but not a psam with greed... but be as patient as an idiot, take a lethargic look at it please...decode.... the cryptographic script a puzzle or a riddle you may like the the disconnected lyrics like disconnected gruntings of baby in the cradle or orphaned scattered bricks of the ruined fort, oh.. a precious monument indeed. yes.. it is a trick.. trickles from the endless oblivion sounds a note of notation hapazardly arranged to give a sense satisfaction of hollowness, or nothingness a confused stress or to sound more musical mess may never be as an aesthetic...
Posts
- Get link
- X
- Other Apps
ಅಮ್ಮ ಎಲ್ಲ ದಿಕ್ಕಿಗೂ ಹಾಸಿದ ಮಡಿಲು, ಸಡಿಲವಾಗದ ಬಾಚಿ ತಬ್ಬಿದ ತೋಳು ಅಪ್ಪಿಕೊಂಡಿದೆ ಪೀಳಿಗೆಯ ಎಲ್ಲರನ್ನೂ ತನ್ನ ಸುಕ್ಕು ಗಟ್ಟಿದ ಚರ್ಮದಲಿ ಪೋಣಿಸಿ ಕೈ... ತೇಪೆ ಹಾಕಿ ಹೊಲಿದಿದೆ ಜೋತುಬಿದ್ದ ಮಾಂಸಲ ತೋಳಿನಲ್ಲಿ.... ಕಾಯುತ್ತಿದೆ ಕಣ್ಣಿಗೆ ಹಚ್ಚಿ ಎಣ್ಣೆ , ಮುಚ್ಚಿ ಗರ್ಭದಲಿ ಭದ್ರ ಪಡಿಸಿ ಕರಗುವ ಬೆಣ್ಣೆ ಅಮ್ಮ ನಾವೆಲ್ಲಾ ಕ್ಷೇಮ ಆಲದ ಅಸಂಖ್ಯಾತ ಬಿಳಲು ಕಂಭಗಳು ಭದ್ರ, ಹಸಿರು ಚಾವಣಿಹೊತ್ತ ಈ ವೂರುಗೋಲು ಕಾಂಡವೋ? ಬೇರೊ? ಅವಲಂಬಿತ,ಅವಲಂಬನದ ಈ ದ್ವಿಪಾತ್ರಗಳಲ್ಲಿ ಗುರುತು ಹಿಡಿಯುವ ಹುಚ್ಚು ನಿನಗ್ಯಾಕೆ? ಆಲದ ಮರದಲ್ಲಿ ಲೆಕ್ಕವಿಲ್ಲದಷ್ಟು ಪುಟ್ಟ ಹತ್ತಿ ಹಣ್ಣು. ಬಣ್ಣ ಮಾತ್ರ ಒಂದೇ,ಗಾತ್ರ ಸ್ವಲ್ಪ ಅದಲು ಬದಲು ಒಳಗೆ ಹುಳುವೆಂದು ಭ್ರಮಿಸಿದ ಅದೇ ಸಗಣಿ ಸೊಳ್ಳೆಗಳು ತಿಪ್ಪೆಯಲ್ಲಿ ಅದೇ ಪ್ರಭೇದದ ಬೀಜಗಳಂತೆ! ಗೊತ್ತೇ ಇರಲಿಲ್ಲ ನನಗೆ ತಿಳಿದಾಗ ಸೋಜಿಗಕ್ಕಿಂತ ಹೆಚ್ಚು ಹೇಸಿಗೆ ಆಯ್ತು ಅನ್ನಿ, ನಿಜ.. ಆದರೂ ಒಪ್ಪಲೇ ಬೇಕು ವಿಧಿಯಿಲ್ಲ ನಾನೂ ಅದೇ ಬೀಜಗಳ ಮೊಳಕೆಯೆಂದು ಅಳಕ್ಕಿಳಿದ ಆ ತಾಯಿ ಬೇರು ಇಳಿದಿದೆ ಪ್ರಪಾತದಲ್ಲಿನ ವಂಶವೃಕ್ಷ ಕವಲಾದ ನನ್ನವರು ಶಾಕೆಗಳಲ್ಲಿನ ಬಿಳಲು ಬೇರು ಚದುರಿ,ಚೆಲ್ಲಾಪಿಲ್ಲಿ, ಸೋರಿ ಹೊಗಿದ್ದಾರೆ ದಿಕ್ಕು,ದಿಕ್ಕು ನೆಲಸಿದ್ದಾರೆ ಭದ್ರವಾಗಿ ಟಿಸಿಲೊಡೆದು ಅಲ್ಲಲ್ಲಿ ಹುದುಗಿ ಹೋಗಿವೆ ಆಳದಲ್ಲಿ, ಮೂಲ ರಚನಾತ್ಮಕ ಅಣುವಿನಲ್ಲಿ ಅನುಮಾನ!! ಹತ್ತಿಯೂ? ಅಂಜೂರವೋ ? ಜ್ಞಾನದಲ್ಲಿ ಎರಡೂ ಒಂದೇ ಅಷ್ಟೇ ಏಕೇ ಈ ನಿಜದಲ್ಲಿ ಸರ...
- Get link
- X
- Other Apps
ಕವನ ಅಸ್ಪಷ್ಟವಿರಬಹುದು, ನನ್ನ ಕವನ ದಯಮಾಡಿ ಕನ್ನೋಡಿಸಿ ಮತ್ತೊಮ್ಮೆ ಪೋಣಿಸಿದ ಪದಗಳು ಹಾರವಾಗದಿರಬಹುದು ಕಾಗದದ ಮೇಲೆ ಜೋಡಿಸಿದ ರಾಶಿ ಪದಗಳೇ ಹೂ ಗುಚ್ಛ ಹಾವೆಂದು ಹೆದರದಿರಿ ಭಾವನೆಯೇ ನಿರ್ಮಾಲ್ಯ ಅನಿಸಿದಾಗ ವಿಸರ್ಜನೆಯ ಭಾರ ನಿಮ್ಮದಾಗಿರಲಿ. ಅಸಂಗತ ಸಂಗೀತ, ಕಿವಿಗಡರುವ ಕಲಸುಮೇಲೋಗರ ಶಬ್ದದಲ್ಲೂ ಮಧುರ ಗೀತೆ ಪ್ರತಿಧ್ವನಿಸಬಹುದು ತಾಳೆಯಾಗಬಹುದು ನಿಮ್ಮ ಅಭಿರುಚಿಗೆ ನಿಮ್ಮ ಯಾವುದೋ ಒಂದು ಅನುಭಾವಕೆ ಮುಕ್ತ ಕಿವಿ ನಿಮ್ಮದಾಗಲಿ, ಕಪ್ಪು ಹಾಳೆಯಲ್ಲೂ ಚೆಲ್ಲಬಹುದು ಕಾಮನ ಬಿಲ್ಲಿನ ಬಣ್ಣಗಳ ಸಾಮರಸ್ಯದ ಸರಸ ಮೂಡಿ ಮರೆಯಾಗಬಹುದು ಕುಂಚದಲ್ಲೇ ಸೃಷ್ಟಿ ಕಲಾ ಪ್ರಪಂಚ ಆಗಬಹುದೇನೋ ಆತ್ಮಾನುಭೂತಿ ಪ್ರೀತಿಸುವ ಹೃದಯ ನಿಮ್ಮಲ್ಲೇ ಇರಲಿ,
ಚಿಟ್ಟೆ
- Get link
- X
- Other Apps
ಪೂರ್ವಜರು ಎಂದೋ ಬಿಟ್ಟುಹೋದ ಗಸೆ,ಗಸೆ ಕಾಳುಗಳು ಅಡುಗೆ ಕೋಣೆಯ ಹಸಿರ ಚಪ್ಪರದ ಮೇಲೆ ಮೊಟ್ಟೆಒಡೆಯುವ ಬ್ರೂಣದಲಿ ಪ್ರತ್ಯಕ್ಷ . ಮೈಎಲ್ಲಾ ಬಳಕುವ ಉಂಗುರದ ಬಳೆಗಳು ತೆವಳಿ ನಿಧಾನ ಸರಿಯುತ್ತಿದೆ ಸಾವಕಾಶದಲ್ಲಿ ಮೈಯೆಲ್ಲಾ ಕಾಲುಗಳು ಮೃದುವಾದ ಅಂಗಿಗೆ ಮರುಜನ್ಮ ಪಡೆಯುತ್ತಾನೆ ಬಕಾಸುರನಾಗಿ ಘಟೋತ್ಕಜ ಭೋಜನಪ್ರಿಯ ಮೇಯುತ್ತಲೇ ಇರುತ್ತಾನೆ ವ್ರತ ಹಿಡಿದ ಮಡಿವಂತ ತಿಂದದ್ದೇ ತಿನ್ನುತ್ತಾನೆ ಮತ್ತೆ ಮತ್ತೆ ಪ್ರತಿನಿತ್ಯ ಇದೇ ಅವನ ಪಥ್ಯ ಬಳುಕಿ ಬೆಂಡಾಗಿ ಕುಸಿದು ಬಿದ್ದ ನಿರ್ಲಿಪ್ತ ಊಟ ಬಡಿಸಿದ ಎಲೆಯೇ ಮಾಯ ಅರಿವಿಲ್ಲದೇ ಅಳಿದು ಹೋದ ಹಸಿವು ಮಾಂತ್ರಿಕನ ಮೋಡಿಗೆ ಎದೆ,ಹೊಟ್ಟೆಯೇ ಮಾಯ ಕೂಪ ಮಂಡೂಕ,ಕಪ್ಪೆ ಕಬಳಿಸಿದ ಹಾವು ಅಂಗಾತ ಬಿದ್ದು ನಿದ್ರಿಸಿದ ಕುಂಭಕರ್ಣ ಮರೆತುಹೋದ ತನ್ನ ಪೂರ್ವ ಪರಾಪರ ಅಚಲ ಶಾಂತಮೂರ್ತಿ ಮೆಚ್ಚಿಕೊಂಡ ಪರಿಸರ ಇವನಿಗಿಲ್ಲ ಅವಸರ ಹಿಂದೆ ಸರಿದ ಕಾಲ ಕರಗಿಲ್ಲ ಇನ್ನೂ ರೂಪ ಮಾಸಿಲ್ಲ, ಉಳಿದ ಕಲೆ ಅಲ್ಲೇ ಶಾಶ್ವತ ಗಳಿಸಲಿದ್ದಾನೆ...