Posts

ವಿಶಿಷ್ಟ.. ವಾಕರಿಸಿ, ಕ್ಯಾಕರಿಸಿ, ಧಿಕ್ಕರಿಸು, ಉಗುಳಿ, ಹಾಕು ಹಿಡಿ ಶಾಪ, ಛೀಮಾರಿ ಹಾಕಿ, ಹೇರು ಬಹಿಶ್ಕಾರ ಪ್ರತಿಕ್ರಿಯಸದ ನಿರ್ಲಿಪ್ತ, ಈ ನಿರ್ಲಜ್ಜ ಸ್ನೇಹಿತನೋ, ಶತ್ರುವೋ, ಸಂಭಂದಿಯೋ? ಅದೇಕೋ ಸಹಿಸಲಾರ ಎಂದಿಗೂ ಯಾರ ಸಹವಾಸ ನಿಯಂತ್ರಣದ ಗುಲಾಮಿಗಡಿಯಲ್ಲಿ ಬಂದಿಯಾಗದ ಭಕ್ತ ಅವಿಧೇಯ ಪ್ರಾಣಿ, ಗುಡಿಯಿಂದ ಮುಕ್ತ ನ್ಯೂಟನ್ ನ ಗುರುತ್ವ, ಐನ್ಶ್ಟಿನ್ ಕಾಲಪ್ರಜ್ಞೆ ಫತ್ವಾ ಪರಿಗಣಿಸದ ಪ್ರಭೇದ ಚಡಪಡಿಕೆಯೇ ಅಸ್ತಿತ್ವ ಆಕಾಶದ ವಿಸ್ತಾರದಲ್ಲಿ ಹಗುರತೇಲುವ ಮನಸು ಕಾಯದ ಕಾಯಕದ ಹಂಗಿಲ್ಲದ ವಿರಕ್ತ ಕಲ್ಪನಾತೀತ ಹಿಡಿತಕ್ಕೆ ಸಿಗದ ಅನೂಹ್ಯ ವಿಕಾಸ ಇತಿಹಾಸಕಾರ ವಿಷಯಾಸಕ್ತ ಕುಗ್ಗದ ಹಿಗ್ಗು ಸ್ಥಿತಿಸ್ಥಾಪಕತ್ವದಲ್ಲಿ ವಿಸ್ತೀರ್ಣ ಅಳೆಯುವ ಹಂಬಲ, ಖಾಲಿತನದ ನಿಹಾರಿಕೆಯಲಿ ಕಲ್ಪನಾವಿಹಾರಿ, ಎಲ್ಲರ, ಎಲ್ಲದರ ಬೆಸುಗೆ ಅನಿವಾರ್ಯ, ಸಹಜ ಬದುಕಿನ ಬೆಲೆ, ವಾಸ್ತವದ ಬಲೆ ಆಹಾರ ಜಾಲದಲಿ ಜೀವಸಂಕುಲ ಬೆಸದ ಮಾಯಾಜಾಲ ಜೀವಿ ಸಂತುಲನದಲ್ಲಿ ನಿರ್ಜೀವಿ ಪರಕೀಯನಲ್ಲ ವಿಶೇಷನೂ ಅಲ್ಲ, ವಿಶಿಷ್ಟನೂ ಅಲ್ಲ, ಆದರೆ ಬಲ್ಲ ನಿಶ್ಯೇಷವಾಗುವ ಈತನೂ ಸಹಾ ನಿಮ್ಮೊಂದಿಗೆ ಇರಬೇಕು, ಇರುವು ರಹಸ್ಯ, ಒಗಟಿನಂತೆ ಪ್ರವಾದಿಯೂ ಇವನೇ, ಧರ್ಮಪರಿಪಾಲಕ ಭಕ್ತನೂ ತಾನೇ, ಪ್ರಚಾರಕರಿಲ್ಲ,ಹಿಂಬಾಲಕ ತಾನೊಬ್ಬಮಾತ್ರ ಯಾರರನ್ನೂ ತಲುಪಲಾರದ ಸಂತ, ಸಮಾಧಿಯಲಿ ಏಕಾಂತ, ಮಹಾ ಭ್ರಾಂತ ತನ್ನೊಂದಿಗೆ ತಾನು, ತನ್ನದೇ ನಿಶ್ಯಭ್ದ ಸಿದ್ಧಾಂತ ಬೆರಗಾಗಿ, ನೋಡಿ ಚಕಿತಗೊಳ್ಳುವ ಮಗುವಿನ ರಾದ್ಧಾಂತ ...
ಗಾಂಧಿಬಜಾರ್. ನಾಲ್ಕು ದಶಕಗಳ ದಿನನಿತ್ಯ ಆತ್ಮೀಯ ಒಡನಾಟ ಕದಲಿಲ್ಲ ಇಲ್ಲಿಂದ ವಲಸೆ ಬಂದ ದಿನದಿಂದ,  ಆವಾಸ ದಾನಕ್ಕೆ  ತೀರಿಸಲಾಗದ ಋಣದಹೊರೆ ಹೊತ್ತು ಮುಲಾಜಿಗೆ ಇರಬೇಕು, ಬಿಡಲಾರದ ಈ ಅಪರೂಪದ ಸಂಭಂದ  ಈ ಗಾಂಧಿಬಜಾರ್ ರಸ್ತೆಯ ಜೊತೆಯ ಅನುಭಂದ,  ಗಾಂಭೀರ್ಯದ ಈದಾರಿ ಕಾಯ್ಕುಕೊಂಡಿದೆ ವ್ಯವಹಾರಿಕ ದೂರ ತನ್ನವನಾಗಿ ಮಾಡಿಕೊಳ್ಳದೆ ಇಂದಿಗೂ,  ಭೂರಿ ಬೋಜನ ಬಡಿಸದಿದ್ದರೂ  ಖಾಲಿಹೊಟ್ಟೆಗೆ ಎಂದೂ ಹಾಡಿಲ್ಲ ಒಂದು ಲಾಲಿ  ತನ್ನರಸ್ತೆಯ ಸಾಮಾನ್ಯ ಪಂಕ್ತಿಯಲ್ಲೇ ಇಡ್ಲಿಕೊಟ್ಟು ತಲೆ ತಟ್ಟಿ ಜೋಗುಳದಲ್ಲಿ, ಬಸವನಗುಡಿ ಬಂಡೆಗಳ ಮೇಲೆ ಕನಸು ಕೆತ್ತಿಸಿದೆ. ಅನ್ನವೇ ಕನಸಾದ ಕಾಲ, ಚಿತ್ರಾನ್ನದಲೇ ತಣ್ಣಗಾಗುತ್ತಿದ್ದ ಹಸಿವು ಕೃತಜ್ಞನಾಗಿರಬೇಕೇ ಹೊರತು, ಸಮಾನರಾಗುವುದಿಲ್ಲ ಧೀರ್ಘ ಸ್ನೇಹದ ಸಲಿಗೆಗೆ ಅವಕಾಶವಿಲ್ಲ.  ಯಾರಿಗೂ, ಎಂದೂ, ತನ್ನ ಪರಕೀಯತೆ ಬಿಟ್ಟುಕೊಟ್ಟಿಲ್ಲ.  ದೂರ ತಳ್ಳುವುದಿಲ್ಲ, ಹತ್ತಿರ ಸೇರಿಸುವುದಿಲ್ಲ ಯಾರನ್ನೂ ಸಹಾ, ಆಗರ್ಭ ಶ್ರೀಮಂತರಹಾಗೆ,  ಗೌರವಾನ್ವಿತ ಗಾಂಭೀರ್ಯದ ಅಂತರ ಅನಿವಾರ್ಯ.  ಇರಬಹುದು ಇದರ ಘನತೆ  ಅನ್ಯತೆಯ ಧನ್ಯತೆಯಲ್ಲಿ   ಬರುವವರೆಲ್ಲಾ ಇಲ್ಲೇ ನಿಲ್ಲುವರಲ್ಲ ಎಂಬ ಕಟುಸತ್ಯ  ಅರಿವಾಗಿ ಇಳಿದಿದೆ ಆಳದಲಿ ಅನುಭವದ ಪಾಠ, ತನ್ನಿರುವಿನಿಂದಲೇ ಹರಸಿ, ಆಶೀರ್ವದಿಸುವ ಸಂತ, ಮಠಾದೀಶ  ಸಾಮಾನ್ಯ ಯಾತ್ರ...
ಪಾಚಿಕಟ್ಟಿದ ಮಿದುಳು. ನಿಂತ ನೀರಲ್ಲಿ, ಕೊರೆದ ಬಾವಿಗಳಲ್ಲಿ, ಕಟ್ಟಿದ ಅಣೆಕಟ್ಟು ಕೆರೆ, ಕೋಡಿಗಳಲ್ಲಿ ಆವಿರ್ಭವಿಸಿದ ರೂಪ, ಪಡೆವ ಜೊಂಡು ರಚನೆ ಹಳ್ಳಗಳ ಹರಿವಲ್ಲಿ, ಕೊಳ್ಳಗಳ ಕೊಲ್ಲಿಯಲಿ ಭೋರ್ಗರೆದು ಧುಮುಕುವ ಜಲಪಾತ ಜಾರುಬಂಡೆಗೆ ಅಂಟಿ ಪ್ರವಾಹಕ್ಕೆ ಕೊಚ್ಚಿಹೋಗದೇ ತಳಕಚ್ಚಿ ಗಟ್ಟಿ ಹಸಿರು ರೇಶಿಮೆಯ ನಯದ ನಾರಿನ ಕುಚ್ಚು ಆವಾಸಕ್ಕೆ ಬಿಗಿ ಹೆಣಿಕೆಯೆ ಕುಣಿಕೆಯಲಿ ಕೆಚ್ಚಿನ ಸ್ಥಿತಪ್ರಜ್ಞ ಪಾಚಿಯೇ. ಚಿರಂಜೀವಿ ನೀನು, ಗಗನಚುಂಬಿ ಕಟ್ಟಡಗಳ ಎತ್ತರಕೆ ಎದೆಗುಂದದೆ ಗೋಡೆಗಳಿಗೆ ಹಸಿರು ಬಣ್ಣಬಳೆಯುವ ಕಲಾವಿದ ಕೂಲಿ, ಅಪಾಯಲೆಕ್ಕಿಸದ ಗಂಡೆದೆಯ ಗುಂಡಿಗೆ ಮಳೆಗಾಲದ ಅಗೋಚರ ನಿರ್ಲಿಪ್ತ ಗುತ್ತಿಗೆದಾರ ಪಾರುಪತ್ಯದಲಿ, ಹುಲುಸು ಹಾಸಿನ ಹಸಿರ ಹೊದಿಸುವ ಮಳೆಗಾಗಿ ಕಾಯುವ ಹಾವಸೆಯೇ ಹಸಿರುಲೋಕದ ಶೈವಲ ಧೃವತಾರೆ ನೀನು ಆದರೂ ನೀನಿಂದು ಆವಾಸವಂಚಿತ ಆಗಂತುಕ ಪಾರದರ್ಶಕ ಗಾಜುಗಳ ತಡಿಕೆಯ ಕೃತಕ ಗೋಡೆ ನಯವಾದ ನಾಗರೀಕತೆಯಲ್ಲಿ ಬುಡ ವಿಲ್ಲದೆ ಅಭದ್ರ. ಕಾಡುಬಂಡೆಯ ಚರ್ಮ ಕಪ್ಪಿಟ್ಟ ಹಸಿರು, ಒರಟು, ಹೊರಪದರವೇ ತಬ್ಬಿ, ಬಿಗಿಯಾಲಿಂಗನದಲಿ ತನ್ನನ್ನೇ ಮರೆತ ಶಿಲಾಕಲೆಗಳ ಹೆಕ್ಕಳ ದಲ್ಲೇ ಲೀನ, ಬಿದ್ದು,ಕೊಳೆತು ಕೊರಡು ದಿಮ್ಮಿಗಳ ಆಶ್ರಯ ಪಡೆದು, ಕೀಟ, ಕ್ರಿಮಿಗಳಿಗಾವಾಸವಾಗಿ, ಯಾರ ಹಂಗಿಲ್ಲದೆ ಮಳೆಗಾಲದಲಿ ಬಂದು, ಬಿಸಿಲಗೆ ಕಾಲುಕಿತ್ತುವ ಕಲ್ಲು ಹೂ ಶಿಲಾವಲ್ಕಗಳೇ, ಧಿಡಿರನೇ ಅವತರಿಸುವ ಗಂಧರ್ವರ ಜೋಡಿ ನೀವು ಜಲಧಾರೆಯ ವಯ್ಯಾರ ನರ್ತನದಲಿ, ಬಳುಕಿ ...

ಡಾರ್ವಿನ್ ಮತ್ತು ನಾನು.

೨೯-೦೧-೨೦೧೮·  ಡಾರ್ವಿನ್ ಮತ್ತು ನಾನು. (ಇತ್ತೀಚೆಗೆ ನಮ್ಮಲ್ಲಿ ಚರ್ಚೆಯಲ್ಲಿರುವ ಡಾರ್ವಿನ್ ಬಗ್ಗೆ ನನಗೆ ಅನುಕಂಪ, ಅಪಾರ ಅಭಿಮಾನ...ಆತನ ಸಿದ್ಧಾಂತವನ್ನು ನನ್ನ ಕೋಶದ ಡಿ.ಎನ್. ಎ. ಸ್ಥರದಿಂದ ಅನುಭವಿಸುತ್ತೇನೆ. ಸಾವಿನಲ್ಲೂ ಎಡಬಿಡಂಗಿಯಾಗಿ ತನ್ನ ಧಾರ್ಮಿಕ ರುದ್ರಭೂಮಿಯಿಂದಲೇ ವಂಚಿತನಾದ ಡಾರ್ವಿನ್ ನೆನಪಿಗೆ ನನ್ನದೇ ರೀತಿಯ ಅಭಿವ್ಯಕ್ತಿ) ಹೌದು ಲಮಾರ್ಕ್ ಮಂಡಿಸಿದ ಪ್ರತಿಪಾದನೆ  ಜೀವವಿಕಾಸ, ಪ್ರಭೇದಗಳ ಪ್ರಯತ್ನ, ಉಳಿವಿಗಾಗಿ ಸರಳ ಜೀವಿಗಳು ಪ್ರಕೃತಿಗನುಗುಣವಾಗಿ ಕ್ರಮೇಣ, ಹೊಂದಾಣಿಕೆಯ ಹೋರಾಟದಲ್ಲಿ ಹೊಸ ಅಸ್ತಿತ್ವ ಪಡೆಯುವುದು ಜೈವಿಕ ವಿಕಾಸೀಯ ಪರಂಪರೆ ಸತತ ಕ್ಲಿಷ್ಟ ರೂಪಪಡೆದು ಪ್ರತ್ಯೇಕ ಪ್ರಭೇದ ಅಸ್ತಿತ್ವ ಜೀವ ವಿವಿದತೆ ಪ್ರತ್ಯಕ್ಷ ಪರಿಸರ ಪರಕಾಷ್ಟೆಯಲ್ಲಿ ಪಡೆದ ಹೊಸ ಲಕ್ಷಣ ಬದುಕುಳಿಯುವ ಪ್ರಯತ್ನದ ಕುರುಹು ಆವಾಸಕ್ಕೆ ತಕ್ಕಂತೆ ಪರಿಸರಪೂರಕ ಮಾರ್ಪಾಡು ಸಹಜ ಜೀವಿಲಕ್ಷಣ ಹೊಂದಾಣಿಕೆ, ಪರಿಸರದ ಏರುಪೇರುಗಳಿಗೆ, ವಿದ್ವಾಂಸ, ವಿಜ್ಞಾನಿಗಳ ರಸಪ್ರಶ್ನೆಗಳಿಗೆ ತತ್ತರಿಸಿದ ನೀಳ ಕತ್ತಿನ ಜಿರಾಫೆ ಉಲ್ಲೇಖ ಮಂಡನೆ ತಿರಸ್ಕೃತ ಅನುವವಂಶೀಯವಾಗುವುದು ಹೇಗೆ, ಏಕೆ, ಎಲ್ಲಿ? ನಿಲ್ಲದ ಪ್ರಶ್ನೆಗಳ ನಿರುತ್ತರದಲ್ಲೇ ನೆನೆಗುದಿಗೆ ಬಿದ್ದ ನಿಯಮ ಎಬ್ಬಿಸಿತು ಮಲಗಿದ್ದ ಪ್ರಕೃತಿ ವಿಜ್ಞಾನಿಯನ್ನು ಬ್ಯೂಗಲ್ ನಾವೆಯ ವಿಶ್ವಪರ್ಯಟನೆಯಲ್ಲಿ ಡಾರ್ವಿನ್ ಒಪ್ಪಿದ, ವ್ಯತ್ಯಾಸಗಳು ಜೀವ...
ಒಂದಾನೊಂದು ಕಾಲದಲ್ಲಿ. ಮಾನವ ಮಾತೆಯ ಮಮತೆಯ  ಕುಡಿಯಾದರೂ...ಹುಟ್ಟಿದ್ದು ಊರಲ್ಲ,  ಊದು ಕುಲುಮೆಯ ಗರ್ಭದಲ್ಲಿ,  ಜ್ವಾಲೆಯಲೇ ಕಳೆದ ಬಾಲ್ಯ ಕಾಡುಬಂಡೆಗಳಮೇಲೆ  ಇವ ನಿಜಕೂ ಅಗ್ನಿಪುತ್ರನಲ್ಲ, ಜೂಟಾಟ, ಕಣ್ಣುಮುಚ್ಚಾಲೆ ಕೊರಕಲು ಪ್ರಪಾತಗಳಲ್ಲಿ ತಳರಹಿತ  ಗವಿಯ ಸಂದು, ಗೊಂದುಗಳ ನೆರಳಲ್ಲೂತೀವ್ರ ತಾಪ ಬಯಲುದರ್ಶಿನಿಯಲಿ ನೇರಲೆ,   ಕಾರೆ,ಕವಳೆ,ಲೇಬೆ, ಬೋರೆ, ಉಪಹಾರಕ್ಕೆ,   ಶಿಲಾದರ್ಶಿನಿ ಚಾರಣದ ಕ್ಯಾಂಟೀನಲ್ಲಿ ಸಿತಾಫಲ ಅನ್ ಲಿಮಿಟೆಡ್ ಬಹಿರ್ದೆಸೆಯ ದಿನಚರಿಯಲಿ ನುರಿತ ಪರ್ವತಾರೋಹಿ  ನಿರ್ಜನ ಕಣಿವೆಯಲಿ ಸ್ವಗತ, ಶಾಶ್ವತ ಸಂಭಾಷಣೆ ಕೂಗೋಗುಡ್ಡದ ಪ್ರತಿಧ್ವನಿಯ ಕಂಪನ  ರಾಕ್ಷಸ ಇಳಿಜಾರು ಬಂಡೆ ಬೈಗಳ ಪ್ರತಿಧ್ವನಿಯ ರೋಮಾಂಚನ ನೇಕಾರರ ಮಗ್ಗಗಳ ನಿಲ್ಲದ ನಡಿಗೆಯ ರೇಶಿಮೆಯ ಹೆಜ್ಜೆ ಶಿಸ್ತಿನ ಸಾರೋಟು ಚಲನೆಯಲಿ ಲಾಳಗಳ ಓಟ ನಿರಂತರ ಧ್ವನಿಸುವ ಚಟಾ ಪಟಾ ಊರಿಗೊಂದು ಭಾಷೆ ಅದರ ಸಾಮಾನ್ಯದ ಅಸ್ತಿತ್ವ ಕರಡಿ ಗಂಗಣ್ಣನ ಘಮ,ಘಮ ಮಂಡಾಳ್ ಒಗ್ಗರಣಿ ಅತ್ತಿಕಾಯಿ, ಜೊತೆಗೆ ಮೆಣ್ಸಿನ್ಕಾಯ್ ಉಳ್ಳಾಗಡ್ಡಿ ಈಜಾಟ ಮನೋರಂಜನೆ ಆಟ, ನೀರಿದ್ದ ಆ ದೊಡ್ಡಬಾವಿ ಬಾನಿ ಎಳೆಯುವ ಹಗ್ಗದ ಮೇಲೆ ಜೋಕಾಲಿ ಶುಶ್ಕತೆಗೆ ಬಡಕಲಾಗಿ ಒಣಕಲಾಗಿ ನಿಂತ ಸೈಂಧವ ತಾಳೆಮರವಲ್ಲ ಈಚಲಿನ ವಿರಳದಲಿ ತೆಂಗು, ಆದರೂ ಹೆಸರು ಬಾಳೆತೋಪು ಮೇಕೆ,ದನಗಳ ಜಾಡೇ ಜಾರೋಬಂಡಿ ಹಟ್ಟಿಯಲಿ ಕತ್ತರಿಸಿ ಹಸಿರು...
ನಿರ್ಲಿಪ್ತರು. ನಮ್ಮೂರಿನ ಜಾಲಿಮರದ ಕೊರಡು ಬಿಸಿಲ ಕುಲುಮೆಯ ತಿದಿಯು ಏರಿಳಿತದ ಶ್ವಾಸಕೆ ಸಿಡಿವ ಕೆಂಡವಾಗಬೇಕಿದ್ದ ಕ್ರಾಂತಿ ಕವನ  ಕಿಡಿ ಕಾರಬೇಕಿದ್ದ ಹಾಡು, ಯಾಕೋ....ಕರ್ಶಕದಲ್ಲಿಇದ್ದಿಲಾಗಿದೆ ದಹನಕ್ರಿಯೆ ಇನ್ನೂ ಅಪೂರ್ಣ, ಸ್ವರತಪ್ಪಿದ ಜಾಡು, ಕನಿಕರದ ಪಾಡು ಬೂದಿಯಾಗಿದೆಯೆಂದು ಸಂಭ್ರಮಿಸ ಬೇಡಿ ಕಿಡಿ ಒಂದು ತಾಕಿದರೆ ಸಾಕು, ಬಣಿವೆಯೇ ಆಹುತಿ ಸಿವುಡುಪೇರಿಸಿದ ಕಣದಲ್ಲಿ ಕಾಂಡವದಹನ ಬಿಸಿಲ ಜ್ವಾಲೆಯ ತಾಂಡವ ನೃತ್ಯ ಶಿವನ ಜಟೆಯಲ್ಲಿ ನಿಂತ ಗಂಗೆಯ ಹರಿವು ನಿರ್ನಾಮವಾಗುವರು ಯಾರೆಂದು ತಿಳಿದಿಲ್ಲ ನರ್ತಕ, ನೃತ್ಯದಲ್ಲಿ ತಲ್ಲೀನ ಸದ್ಯಕೆ ರೆಪ್ಪೆಗಳು ಬೇರ್ಪುಡುವ ಮುನ್ನ, ಮುಕ್ಕಣ್ಣ ಮೌನಿ ಧ್ಯಾನಿ, ಬೂದಿಮಣ್ಣಾಗುವ ಮೊದಲು ದೃಷ್ಟಿಮಂಜಾಗಿ, ನಂಜಾಗುವ ಮೊದಲು ಗ್ರಾಮದೇವತೆಯ ಬೇಡಿರಿ, ಕಳೆದವರ್ಷ ಹೂತಹೆಣ ತೆಗೆಯಿರಿ, ಮಳೆಯಾಗಬಹುದು. ಕಾಳು ಹಸನಾಗಿಸುವ ಮುನ್ನ ಬಡಿಯಲೇ ಬೇಕು ಸಿವುಡು, ರಾಶಿಮಾಡುವ ಮುನ್ನ, ಹಂಚಿಕೆ ಹಸನಿರಬೇಕು ಎಲ್ಲರಿಗೂ ಸಮಪಾಲು, ಚಮ್ಮಾರ, ಕಮ್ಮಾರ, ಕುಂಬಾರ, ಅಗಸ, ಮಡಿವಾಳ,ತೋಟಿ, ಪೂಜಾರಿ ಉಳಿಸಿಕೊಳ್ಳಿ ನಿಮ್ಮ, ನಿಮ್ಮೆಲ್ಲರ ಪಾಲು ಮಿಕ್ಕ ಸಿಂಹಪಾಲಲ್ಲೂ ಸದಾ ಕಾಂಗಾಲು ಕೊರಡು ಹೊಗೆಯಾಡುತಿದೆ ಹೊಂಗೆಯ ನೆರಳಲ್ಲಿ, ನೀರಿಲ್ಲದ ಹಳ್ಳದಲಿ, ಉರಿಯನೇ ಉಂಡ ಕೃಷಿಕ ನರಳುತ್ತಾನೆ ಶಾಶ್ವತ ಮೌನದಲ್ಲಿ ಅಸಹಾಯಕ ಖುಷಿಯಾಗಿದ್ದಾನೆ ಧನಿಕ, ಬದುಕಿದ್ದಾನೆ ಶ್ರಮಿಕ ನಗರದಲ್ಲಿ ನಿರ್ಲಿಪ್ತ ನಾಗರೀಕ.
ನಾಳೆ. ಗಣಿತದ ಆರೋಹಣ ಲೆಕ್ಖದಲಿ ಹದಿನೆಂಟು ಬರುವುದು ಹದಿನೇಳರ ನಂತರೆವೇ. ಗೊತ್ತು ಮೂರು ನೂರಕ್ಕಿಂತಲೂ ಹೆಚ್ಚು ದಿನಗಳ ಲೆಕ್ಕ ಹಾಕಿ ಕ್ಷಣಗಳ ಎಣಿಕೆಯಲ್ಲಿ ಬದುಕಿ, ಅದೇ ಸ್ಥಿರ ಭೂ ಭ್ರಮಣ, ಸೂರ್ಯನ ಸುತ್ತಲೂ, ವೇಗ ಅದೇ ಸರಾಗ ಗತಿಯಲ್ಲಿ ಗತಿಸಿ ಮೂಡಲಿದ್ದಾನೆ ಮತ್ತೆ ಮತ್ತೆ ಅದೇ ಸೂರ್ಯ, ಅದೇ ಪ್ರಭಾವಳಿಯೊಂದಿಗೆ ನೀಲಿ ಬಾನಿನಲ್ಲಿ ತಿಂಗಳುಗಳ ಹಿಂದೆ ನೂಕಿ ಬರುವ ಹೊಸ ದಿನ, ಕಲ್ಪನೆ ನಶೆ, ಮತ್ತೊಂದು ವರುಷದ ಹರುಷ ಅಂಕಿಬದಲಾಗುವ ಲೆಕ್ಖದ ಕಳೆದ ವರ್ಷದಲ್ಲಿ ಅಷ್ಟೇ ದಿನಗಳು, ಕ್ಷಣ,ಗಂಟೆಗಳೂ ಅಷ್ಟೇ,   ಉರುಳಲೆಂದೇ ಆಗಮಿಸುವ ನಾಳಿನ ಮತ್ತೊಂದು ಹೊಸವರುಷದಲ್ಲಿ ಅದೇ ನಿರಾಸೆಗಳ ಸಮೀಕ್ಷೆ,   ಅದೇ ಕಾಡು, ಮರಳುಗಾಡು, ಅಭೇದ್ಯ ಕಾಂಕ್ರೀಟ್ ಸುಡುಗಾಡು,ಅದೇ ಮರಿಚೀಕೆಯ ಪರೀಕ್ಷೆ. ಛಲಬಿಡದ ತ್ರಿವಿಕ್ರಮರ ವಿಕೃತ ಪ್ರಭೇದ ಆಳ್ವಿಕೆಯಲ್ಲಿ, ಕನಸುಕಾಣಲು ಯಾರ ಅಪ್ಪಣೆ ಏಕೆ? ಬರಲೇ ಬೇಕು, ಮತ್ತೊಂದು ಹೊಸವರ್ಷ, ಹಳಸಿ ಯಾಂತ್ರಿಕವಾಗಿ ಜಡವಾಗಿ ಹುದುಗಲು ಕನಸು ಕರಗುವುದಿಲ್ಲ, ಬೆವರು ಬತ್ತುವುದಿಲ್ಲ, ಉಸಿರಾಟದ ಪೈಪೋಟಿಯ ಹೋರಾಟದಲ್ಲಿ   ನಿರ್ಲಕ್ಷ್ಯ, ಸ್ವಾರ್ಥ ಮೆರೆಯುವ ವಿಕೃತ ಕ್ರೂರ ಡೊಂಬರಾಟದ ಇನ್ನೊಂದು ಹೊಸದಿನ, ನಾಳೆ. ಯಾರಿಗೆ ಹೊಸವರುಷದ ಹಸಿದ ಮೊದಲದಿನ? ಯಾವ ಮದಿರಾಲಯದಲ್ಲಿ? ಅರ್ಧರಾತ್ರಿಯ ಬೆಳಗು!   ಹೆಂಡ ಹೊಡೆದು, ಶೀಶೆ ಒಡೆದು ಗಾಜು ಚೆಲ್ಲಿ, ಬ...