Posts

Pursuit.

                                                                                                                                                                                                                                                                                            ...
27-03-18 The Laboratory. Somebody asked me who am I? I did reply with pride my name. The questions on my great family tree  when investigated unstopped and uninterrupted… further and farther like a detective                                                                                                                      solving a murder mystery   I did answer my father’s name and his father’s…. grand fathers name… With sir name attached in great fancy I did not forget to detail out the place of migration from where it branched and extended in its exploration An unavoidable adventure of an escape of desperation. The questions seem to be unending…. the names and ident...
ಕೈ ಮುಗಿದು ಒಳಗೆ ಬಾ ಇದು ಸಸ್ಯಕಾಶಿ....... ಚುಮು,ಚಿಮು ಬೆಳಕು ಚಿಗುರುವ ಮುನ್ನ, ಚಿಲಿಪಿಲಿ ಹಕ್ಕಿಗಳು ಗೂಡುಬಿಡುವ ಮುನ್ನ ನಡೆಯುತ್ತಾರೆ, ನಡಿಗೆಪ್ರಿಯ ನಾಗರೀಕರು  ತಮ್ಮ ನಗರದ ಶ್ವಾಸಕೇಂದ್ರಗಳಲ್ಲಿ ಕತ್ತಲ, ಸದ್ದಡಗಿದ ಮುಸುಕಿನ ಮಂಪರ ಮುಂಜಾವಿನಲ್ಲಿ ಬಡಾವಣೆಯ ನಡು ಮಧ್ಯದ ಹೆಮ್ಮೆಯ ತಮ್ಮ ಕಾಡಲ್ಲಿ ವಾಯುವಿಹಾರ, ಚಲನಾಸಕ್ತರು ಕಾವಲುಗೋಪುರದ ಸುತ್ತುತ್ತಾ  ಮೂರು ಪ್ರದಕ್ಷಣೆ ಮುಗಿಸಿ,ತೀರ ಸುಸ್ತು ಆರಾಮದಾಯಕ ಆಯಾಸದಲ್ಲಿ ಅಸೀನರು ನಡಿಗೆಗೆಂದೇ ಸಮವಸ್ತ್ರ, ಕಿವಿಗೆ ಅಂಟಿದ ಗಾಯನ ನಿಶ್ಯಭ್ದ ಗಾನಾಲಾಪ ಕಿವುಡರ ಸಾದನ  ಹಿಡಿತಕ್ಕೆ ತಕ್ಕ ಪಾದರಕ್ಷೆಗಳು, ತೋರಿಕೆಗೆ ಬೂಟು  ಅತ್ಯಾಕರ್ಷಕ ನವೀನ ಟ್ರ್ಯಾಕ್ ಸೂಟು ನಿಂತಲ್ಲೇ ನಡೆಯುವ, ಓಡುತ್ತ ನಡೆಯುವ,  ನಡೆಯುತ್ತ ಓಡುವ, ಗತಿಯಲ್ಲೇ ಪಡೆವ ಕರ್ಣಾನಂದ ಗುಂಪಲ್ಲಿ ಗದ್ದಲವೆಬ್ಬಿಸುವ ಉತ್ಸಾಹಿ   ಹವ್ಯಾಸಿಗಳು ವಿಶ್ವ ವರ್ತಮಾನ, ಗಹನ ಚರ್ಚಾ ವ್ಯಸನಿಗಳು ಉದ್ಯಾನ ತಜ್ಞನ ಅಭಿರುಚಿಯ ಅಭಿವ್ಯಕ್ತಿ  ಗಿಡ ಮರಗಳ ಇರುವಿನ ಆಯ್ಕೆ ತನ್ನಿಚ್ಛೆಗನುಸಾರ ಪುಷ್ಪ ಸಿಂಗಾರ  ಕಂಡ ಕಂಡಲ್ಲಿ ಕತ್ತರಿಸಿ ಕಾಂಡ, ಮುಂಡಾಯಿಸಿ ರುಂಡ  ಕುಂಡದಲಿ ನೀರುಣಿಸಿ, ಗುಲಾಮಗಿರಿ ಗಿಡ ಕೃಷಿ ಸಿಕ್ಕು, ಸಿಕ್ಕಾದ ತಂತಿಗಳ ಬಲೆಯಲ್ಲಿ ಬಿಗಿದ ನೇಣುಗಳಲ್ಲಿ  ಎಲೆಗಳ ಚೀತ್ಕಾರ ನರಳುವ ಕಾಂಡ ಕಂಬಗಳಮೇಲೆ ಅಸಹಾಯಕ ಟೊಂಗೆಗಳು, ಅತೃಪ...
ವಿಶಿಷ್ಟ.. ವಾಕರಿಸಿ, ಕ್ಯಾಕರಿಸಿ, ಧಿಕ್ಕರಿಸು, ಉಗುಳಿ, ಹಾಕು ಹಿಡಿ ಶಾಪ, ಛೀಮಾರಿ ಹಾಕಿ, ಹೇರು ಬಹಿಶ್ಕಾರ ಪ್ರತಿಕ್ರಿಯಸದ ನಿರ್ಲಿಪ್ತ, ಈ ನಿರ್ಲಜ್ಜ ಸ್ನೇಹಿತನೋ, ಶತ್ರುವೋ, ಸಂಭಂದಿಯೋ? ಅದೇಕೋ ಸಹಿಸಲಾರ ಎಂದಿಗೂ ಯಾರ ಸಹವಾಸ ನಿಯಂತ್ರಣದ ಗುಲಾಮಿಗಡಿಯಲ್ಲಿ ಬಂದಿಯಾಗದ ಭಕ್ತ ಅವಿಧೇಯ ಪ್ರಾಣಿ, ಗುಡಿಯಿಂದ ಮುಕ್ತ ನ್ಯೂಟನ್ ನ ಗುರುತ್ವ, ಐನ್ಶ್ಟಿನ್ ಕಾಲಪ್ರಜ್ಞೆ ಫತ್ವಾ ಪರಿಗಣಿಸದ ಪ್ರಭೇದ ಚಡಪಡಿಕೆಯೇ ಅಸ್ತಿತ್ವ ಆಕಾಶದ ವಿಸ್ತಾರದಲ್ಲಿ ಹಗುರತೇಲುವ ಮನಸು ಕಾಯದ ಕಾಯಕದ ಹಂಗಿಲ್ಲದ ವಿರಕ್ತ ಕಲ್ಪನಾತೀತ ಹಿಡಿತಕ್ಕೆ ಸಿಗದ ಅನೂಹ್ಯ ವಿಕಾಸ ಇತಿಹಾಸಕಾರ ವಿಷಯಾಸಕ್ತ ಕುಗ್ಗದ ಹಿಗ್ಗು ಸ್ಥಿತಿಸ್ಥಾಪಕತ್ವದಲ್ಲಿ ವಿಸ್ತೀರ್ಣ ಅಳೆಯುವ ಹಂಬಲ, ಖಾಲಿತನದ ನಿಹಾರಿಕೆಯಲಿ ಕಲ್ಪನಾವಿಹಾರಿ, ಎಲ್ಲರ, ಎಲ್ಲದರ ಬೆಸುಗೆ ಅನಿವಾರ್ಯ, ಸಹಜ ಬದುಕಿನ ಬೆಲೆ, ವಾಸ್ತವದ ಬಲೆ ಆಹಾರ ಜಾಲದಲಿ ಜೀವಸಂಕುಲ ಬೆಸದ ಮಾಯಾಜಾಲ ಜೀವಿ ಸಂತುಲನದಲ್ಲಿ ನಿರ್ಜೀವಿ ಪರಕೀಯನಲ್ಲ ವಿಶೇಷನೂ ಅಲ್ಲ, ವಿಶಿಷ್ಟನೂ ಅಲ್ಲ, ಆದರೆ ಬಲ್ಲ ನಿಶ್ಯೇಷವಾಗುವ ಈತನೂ ಸಹಾ ನಿಮ್ಮೊಂದಿಗೆ ಇರಬೇಕು, ಇರುವು ರಹಸ್ಯ, ಒಗಟಿನಂತೆ ಪ್ರವಾದಿಯೂ ಇವನೇ, ಧರ್ಮಪರಿಪಾಲಕ ಭಕ್ತನೂ ತಾನೇ, ಪ್ರಚಾರಕರಿಲ್ಲ,ಹಿಂಬಾಲಕ ತಾನೊಬ್ಬಮಾತ್ರ ಯಾರರನ್ನೂ ತಲುಪಲಾರದ ಸಂತ, ಸಮಾಧಿಯಲಿ ಏಕಾಂತ, ಮಹಾ ಭ್ರಾಂತ ತನ್ನೊಂದಿಗೆ ತಾನು, ತನ್ನದೇ ನಿಶ್ಯಭ್ದ ಸಿದ್ಧಾಂತ ಬೆರಗಾಗಿ, ನೋಡಿ ಚಕಿತಗೊಳ್ಳುವ ಮಗುವಿನ ರಾದ್ಧಾಂತ ...
ಗಾಂಧಿಬಜಾರ್. ನಾಲ್ಕು ದಶಕಗಳ ದಿನನಿತ್ಯ ಆತ್ಮೀಯ ಒಡನಾಟ ಕದಲಿಲ್ಲ ಇಲ್ಲಿಂದ ವಲಸೆ ಬಂದ ದಿನದಿಂದ,  ಆವಾಸ ದಾನಕ್ಕೆ  ತೀರಿಸಲಾಗದ ಋಣದಹೊರೆ ಹೊತ್ತು ಮುಲಾಜಿಗೆ ಇರಬೇಕು, ಬಿಡಲಾರದ ಈ ಅಪರೂಪದ ಸಂಭಂದ  ಈ ಗಾಂಧಿಬಜಾರ್ ರಸ್ತೆಯ ಜೊತೆಯ ಅನುಭಂದ,  ಗಾಂಭೀರ್ಯದ ಈದಾರಿ ಕಾಯ್ಕುಕೊಂಡಿದೆ ವ್ಯವಹಾರಿಕ ದೂರ ತನ್ನವನಾಗಿ ಮಾಡಿಕೊಳ್ಳದೆ ಇಂದಿಗೂ,  ಭೂರಿ ಬೋಜನ ಬಡಿಸದಿದ್ದರೂ  ಖಾಲಿಹೊಟ್ಟೆಗೆ ಎಂದೂ ಹಾಡಿಲ್ಲ ಒಂದು ಲಾಲಿ  ತನ್ನರಸ್ತೆಯ ಸಾಮಾನ್ಯ ಪಂಕ್ತಿಯಲ್ಲೇ ಇಡ್ಲಿಕೊಟ್ಟು ತಲೆ ತಟ್ಟಿ ಜೋಗುಳದಲ್ಲಿ, ಬಸವನಗುಡಿ ಬಂಡೆಗಳ ಮೇಲೆ ಕನಸು ಕೆತ್ತಿಸಿದೆ. ಅನ್ನವೇ ಕನಸಾದ ಕಾಲ, ಚಿತ್ರಾನ್ನದಲೇ ತಣ್ಣಗಾಗುತ್ತಿದ್ದ ಹಸಿವು ಕೃತಜ್ಞನಾಗಿರಬೇಕೇ ಹೊರತು, ಸಮಾನರಾಗುವುದಿಲ್ಲ ಧೀರ್ಘ ಸ್ನೇಹದ ಸಲಿಗೆಗೆ ಅವಕಾಶವಿಲ್ಲ.  ಯಾರಿಗೂ, ಎಂದೂ, ತನ್ನ ಪರಕೀಯತೆ ಬಿಟ್ಟುಕೊಟ್ಟಿಲ್ಲ.  ದೂರ ತಳ್ಳುವುದಿಲ್ಲ, ಹತ್ತಿರ ಸೇರಿಸುವುದಿಲ್ಲ ಯಾರನ್ನೂ ಸಹಾ, ಆಗರ್ಭ ಶ್ರೀಮಂತರಹಾಗೆ,  ಗೌರವಾನ್ವಿತ ಗಾಂಭೀರ್ಯದ ಅಂತರ ಅನಿವಾರ್ಯ.  ಇರಬಹುದು ಇದರ ಘನತೆ  ಅನ್ಯತೆಯ ಧನ್ಯತೆಯಲ್ಲಿ   ಬರುವವರೆಲ್ಲಾ ಇಲ್ಲೇ ನಿಲ್ಲುವರಲ್ಲ ಎಂಬ ಕಟುಸತ್ಯ  ಅರಿವಾಗಿ ಇಳಿದಿದೆ ಆಳದಲಿ ಅನುಭವದ ಪಾಠ, ತನ್ನಿರುವಿನಿಂದಲೇ ಹರಸಿ, ಆಶೀರ್ವದಿಸುವ ಸಂತ, ಮಠಾದೀಶ  ಸಾಮಾನ್ಯ ಯಾತ್ರ...
ಪಾಚಿಕಟ್ಟಿದ ಮಿದುಳು. ನಿಂತ ನೀರಲ್ಲಿ, ಕೊರೆದ ಬಾವಿಗಳಲ್ಲಿ, ಕಟ್ಟಿದ ಅಣೆಕಟ್ಟು ಕೆರೆ, ಕೋಡಿಗಳಲ್ಲಿ ಆವಿರ್ಭವಿಸಿದ ರೂಪ, ಪಡೆವ ಜೊಂಡು ರಚನೆ ಹಳ್ಳಗಳ ಹರಿವಲ್ಲಿ, ಕೊಳ್ಳಗಳ ಕೊಲ್ಲಿಯಲಿ ಭೋರ್ಗರೆದು ಧುಮುಕುವ ಜಲಪಾತ ಜಾರುಬಂಡೆಗೆ ಅಂಟಿ ಪ್ರವಾಹಕ್ಕೆ ಕೊಚ್ಚಿಹೋಗದೇ ತಳಕಚ್ಚಿ ಗಟ್ಟಿ ಹಸಿರು ರೇಶಿಮೆಯ ನಯದ ನಾರಿನ ಕುಚ್ಚು ಆವಾಸಕ್ಕೆ ಬಿಗಿ ಹೆಣಿಕೆಯೆ ಕುಣಿಕೆಯಲಿ ಕೆಚ್ಚಿನ ಸ್ಥಿತಪ್ರಜ್ಞ ಪಾಚಿಯೇ. ಚಿರಂಜೀವಿ ನೀನು, ಗಗನಚುಂಬಿ ಕಟ್ಟಡಗಳ ಎತ್ತರಕೆ ಎದೆಗುಂದದೆ ಗೋಡೆಗಳಿಗೆ ಹಸಿರು ಬಣ್ಣಬಳೆಯುವ ಕಲಾವಿದ ಕೂಲಿ, ಅಪಾಯಲೆಕ್ಕಿಸದ ಗಂಡೆದೆಯ ಗುಂಡಿಗೆ ಮಳೆಗಾಲದ ಅಗೋಚರ ನಿರ್ಲಿಪ್ತ ಗುತ್ತಿಗೆದಾರ ಪಾರುಪತ್ಯದಲಿ, ಹುಲುಸು ಹಾಸಿನ ಹಸಿರ ಹೊದಿಸುವ ಮಳೆಗಾಗಿ ಕಾಯುವ ಹಾವಸೆಯೇ ಹಸಿರುಲೋಕದ ಶೈವಲ ಧೃವತಾರೆ ನೀನು ಆದರೂ ನೀನಿಂದು ಆವಾಸವಂಚಿತ ಆಗಂತುಕ ಪಾರದರ್ಶಕ ಗಾಜುಗಳ ತಡಿಕೆಯ ಕೃತಕ ಗೋಡೆ ನಯವಾದ ನಾಗರೀಕತೆಯಲ್ಲಿ ಬುಡ ವಿಲ್ಲದೆ ಅಭದ್ರ. ಕಾಡುಬಂಡೆಯ ಚರ್ಮ ಕಪ್ಪಿಟ್ಟ ಹಸಿರು, ಒರಟು, ಹೊರಪದರವೇ ತಬ್ಬಿ, ಬಿಗಿಯಾಲಿಂಗನದಲಿ ತನ್ನನ್ನೇ ಮರೆತ ಶಿಲಾಕಲೆಗಳ ಹೆಕ್ಕಳ ದಲ್ಲೇ ಲೀನ, ಬಿದ್ದು,ಕೊಳೆತು ಕೊರಡು ದಿಮ್ಮಿಗಳ ಆಶ್ರಯ ಪಡೆದು, ಕೀಟ, ಕ್ರಿಮಿಗಳಿಗಾವಾಸವಾಗಿ, ಯಾರ ಹಂಗಿಲ್ಲದೆ ಮಳೆಗಾಲದಲಿ ಬಂದು, ಬಿಸಿಲಗೆ ಕಾಲುಕಿತ್ತುವ ಕಲ್ಲು ಹೂ ಶಿಲಾವಲ್ಕಗಳೇ, ಧಿಡಿರನೇ ಅವತರಿಸುವ ಗಂಧರ್ವರ ಜೋಡಿ ನೀವು ಜಲಧಾರೆಯ ವಯ್ಯಾರ ನರ್ತನದಲಿ, ಬಳುಕಿ ...

ಡಾರ್ವಿನ್ ಮತ್ತು ನಾನು.

೨೯-೦೧-೨೦೧೮·  ಡಾರ್ವಿನ್ ಮತ್ತು ನಾನು. (ಇತ್ತೀಚೆಗೆ ನಮ್ಮಲ್ಲಿ ಚರ್ಚೆಯಲ್ಲಿರುವ ಡಾರ್ವಿನ್ ಬಗ್ಗೆ ನನಗೆ ಅನುಕಂಪ, ಅಪಾರ ಅಭಿಮಾನ...ಆತನ ಸಿದ್ಧಾಂತವನ್ನು ನನ್ನ ಕೋಶದ ಡಿ.ಎನ್. ಎ. ಸ್ಥರದಿಂದ ಅನುಭವಿಸುತ್ತೇನೆ. ಸಾವಿನಲ್ಲೂ ಎಡಬಿಡಂಗಿಯಾಗಿ ತನ್ನ ಧಾರ್ಮಿಕ ರುದ್ರಭೂಮಿಯಿಂದಲೇ ವಂಚಿತನಾದ ಡಾರ್ವಿನ್ ನೆನಪಿಗೆ ನನ್ನದೇ ರೀತಿಯ ಅಭಿವ್ಯಕ್ತಿ) ಹೌದು ಲಮಾರ್ಕ್ ಮಂಡಿಸಿದ ಪ್ರತಿಪಾದನೆ  ಜೀವವಿಕಾಸ, ಪ್ರಭೇದಗಳ ಪ್ರಯತ್ನ, ಉಳಿವಿಗಾಗಿ ಸರಳ ಜೀವಿಗಳು ಪ್ರಕೃತಿಗನುಗುಣವಾಗಿ ಕ್ರಮೇಣ, ಹೊಂದಾಣಿಕೆಯ ಹೋರಾಟದಲ್ಲಿ ಹೊಸ ಅಸ್ತಿತ್ವ ಪಡೆಯುವುದು ಜೈವಿಕ ವಿಕಾಸೀಯ ಪರಂಪರೆ ಸತತ ಕ್ಲಿಷ್ಟ ರೂಪಪಡೆದು ಪ್ರತ್ಯೇಕ ಪ್ರಭೇದ ಅಸ್ತಿತ್ವ ಜೀವ ವಿವಿದತೆ ಪ್ರತ್ಯಕ್ಷ ಪರಿಸರ ಪರಕಾಷ್ಟೆಯಲ್ಲಿ ಪಡೆದ ಹೊಸ ಲಕ್ಷಣ ಬದುಕುಳಿಯುವ ಪ್ರಯತ್ನದ ಕುರುಹು ಆವಾಸಕ್ಕೆ ತಕ್ಕಂತೆ ಪರಿಸರಪೂರಕ ಮಾರ್ಪಾಡು ಸಹಜ ಜೀವಿಲಕ್ಷಣ ಹೊಂದಾಣಿಕೆ, ಪರಿಸರದ ಏರುಪೇರುಗಳಿಗೆ, ವಿದ್ವಾಂಸ, ವಿಜ್ಞಾನಿಗಳ ರಸಪ್ರಶ್ನೆಗಳಿಗೆ ತತ್ತರಿಸಿದ ನೀಳ ಕತ್ತಿನ ಜಿರಾಫೆ ಉಲ್ಲೇಖ ಮಂಡನೆ ತಿರಸ್ಕೃತ ಅನುವವಂಶೀಯವಾಗುವುದು ಹೇಗೆ, ಏಕೆ, ಎಲ್ಲಿ? ನಿಲ್ಲದ ಪ್ರಶ್ನೆಗಳ ನಿರುತ್ತರದಲ್ಲೇ ನೆನೆಗುದಿಗೆ ಬಿದ್ದ ನಿಯಮ ಎಬ್ಬಿಸಿತು ಮಲಗಿದ್ದ ಪ್ರಕೃತಿ ವಿಜ್ಞಾನಿಯನ್ನು ಬ್ಯೂಗಲ್ ನಾವೆಯ ವಿಶ್ವಪರ್ಯಟನೆಯಲ್ಲಿ ಡಾರ್ವಿನ್ ಒಪ್ಪಿದ, ವ್ಯತ್ಯಾಸಗಳು ಜೀವ...